Thursday, August 28, 2014

Daily Crime Reports 27-08-2014

ದೈನಂದಿನ ಅಪರಾದ ವರದಿ.

ದಿನಾಂಕ 27.08.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.08.2014 ರಂದು ಬೆಳಿಗ್ಗೆ 10.45 ಗಂಟೆಗೆ KSRTC ಬಸ್ ಸ್ಟಾಂಡ್ ಹತ್ತಿರದ  ಬಿಜೈ ರಸ್ತೆಯಲ್ಲಿ  ಮೆಸ್ಕಾಂ ಅಂಡರ್ ಗ್ರೌಂಡ್ ಕೇಬಲ್ ಹಾಕುವ ಕೆಲಸ ಮಾಡುತ್ತಿದ್ದ  ಗೋವಿಂದಪ್ಪ  ಎಂಬುವರು ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಲಾರಿಯೊಂದರಿಂದ ಟೂಲ್ಸ್ ತರಲು ರಸ್ತೆ ದಾಟುತ್ತಿದ್ದಾಗ,  ಟಾಟಾ ಏಸ್ ನಂಬ್ರ KA29-A-6437 ಚಾಲಕ ಆಂಜನೇಯ ಎಂಬುವರು ಬಿಜೈ ಕಡೆಯಿಂದ KSRTC ಕಡೆಗೆ  ಸಾರ್ವಜನಿಕ ಚತುಷ್ಪದ ಕಾಂಕ್ರೀಟು ರಸ್ತೆಯಲ್ಲಿ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಾಲಾಯಿಸಿಕೊಂಡು ಬಂದು ಗೋವಿಂದಪ್ಪರವರಿಗೆ ಡಿಕ್ಕಿ ಮಾಡಿದ ಪರಿಣಾಮ ಬಲಕೈ ಭುಜಕ್ಕೆ,ಮತ್ತು ಸೊಂಟಕ್ಕೆ ಗುದ್ದಿದ ಗಾಯ,ಹಣೆಗೆ ,ಮುಖದ ಎಡಬದಿಗೆ ಮತ್ತು  ಎಡಕಿವಿಗೆ ತರಚಿದ ರಕ್ತಗಾಯವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮನೋಜ್ಇವರ ತಂದೆ ರಾಘವ ಇವರ ಬಾಡಿಗೆ ಮನೆಯಾದ ಮಂಗಳೂರು ಸುರತ್ಕಲ್ ಇಡ್ಯಾ ಗ್ರಾಮದ ಕಲ್ಯಾಣಪದವು ಡೋರ್ ನಂಬ್ರ 3-71/ಎ, ಸರೀತಾ ನಿವಾಸ ನೇದರಲ್ಲಿ ವಾಸವಿದ್ದ ಆಲ್ವಿನ್ಎಂಬಾತನು ಪ್ರತಿ ದಿನ ಆತನ ತಾಯಿಯಲ್ಲಿ ಜಗಳ ಮಾಡುತ್ತಿದ್ದು, ಇದರಿಂದ ರಾಘವ ಇವರು ಅನೇಕ ಬಾರಿ ಮನೆ ಖಾಲಿ ಮಾಡಲು ತಿಳಿಸಿದ್ದು, ಆಲ್ವಿನ್‌‌ನು ಮನೆ ಖಾಲಿ ಮಾಡದ ಕಾರಣ ದಿನಾಂಕ: 26-8-2014 ರಂದು ಬೆಳಿಗ್ಗೆ ರಾಘವ ಇವರು ಆಲ್ವಿನ್ನಲ್ಲಿ 10 ದಿನದೊಳಗೆ ಮನೆ ಖಾಲಿ ಮಾಡಬೇಕು ಎಂದು  ಹೇಳಿದ ಕಾರಣಕ್ಕೆ ಅಲ್ವಿನ್‌‌ನು ದ್ವೇಷಗೊಂಡು ದಿನಾಂಕ: 26-8-2014 ರಂದು ರಾತ್ರಿ 10-30 ಗಂಟೆಗೆ ರಾಘವ  ಇವರ ಮನೆಗೆ ಬಂದು ಬಾಗಿಲನ್ನು ಜೋರಾಗಿ ಬಡಿದು ರಾಘವರವರನ್ನು ಹೊರಗೆ ಬಾ ಎಂದು ಕೂಗಿ ಕರೆದಾಗ ರಾಘವ ರವರು ಬಾಗಿಲನ್ನು ತೆಗೆದ ಸಮಯ ಅಲ್ವಿನ್ನು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಮನೆಯೊಳಗೆ ಹೋಗಿ  ಆತನ ಕೈಯಲ್ಲಿದ್ದ ಚೂರಿಯಿಂದ ರಾಘವರವರನ್ನು ಕೊಲ್ಲುವ ಉದ್ದೇಶದಿಂದ ಅವರ ಹೊಟ್ಟೆಗೆ ತಿವಿದಿದ್ದು, ಆಗ ಬಿಡಿಸಲು ಬಂದ ರಾಘವರವರ ಹೆಂಡತಿ ಶ್ರೀಮತಿ ಮಿನಾಕ್ಷಿ ಇವರಿಗೆ ಕೂಡ ಬೈದು ಆತನಲ್ಲಿದ್ದ ಚೂರಿಯಿಂದ ಶ್ರೀಮತಿ ಮೀನಾಕ್ಷಿರವರ ಹೊಟ್ಟೆಗೆ  ತಿವಿದಿದ್ದು, ಇದರಿಂದ ಗಾಯಗೊಂಡ ರಾಘವ ಮತ್ತು ಶ್ರೀಮತಿ ಮೀನಾಕ್ಷಿ ಇವರನ್ನು ಚಿಕಿತ್ಸೆ ಬಗ್ಗೆ ಸುರತ್ಕಲ್‌‌ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು .ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಗಾಯಗೊಂಡ ರಾಘವ ಕೆ ಮತ್ತು ಶ್ರೀಮತಿ  ಮೀನಾಕ್ಷಿ ಇವರು ಗಂಬೀರ ಸ್ಥೀತಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-08-2014 ರಂದು 21-00 ಗಂಟೆಯಿಂದ 21-30 ಗಂಟೆಯ ಮಧ್ಯೆ ಫಿರ್ಯಾದಿದಾರರಾದ ಶ್ರೀ ಅಜೀತ್ ರವರು ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ತೊಕ್ಕೋಟು ಜಂಕ್ಷನ್‌‌ ಬಳಿ ಇರುವ ವೃಂದಾವನ ಹೋಟೆಲ್‌‌ ಬಳಿ ಪಾರ್ಕ ಮಾಡಿದ್ದ ಕೆಎ 19 ಇಎಫ್‌‌ 2496 ಹೀರೋ ಹೊಂಡಾ ಸ್ಪ್ಲೆಂಡರ್‌‌ ಫ್ಲಸ್‌‌ ಬೈಕನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಅದರ ಅಂದಾಜು ಮೌಲ್ಯ 30,000/- ರೂ ಆಗಿರುತ್ತದೆ. ಸದ್ರಿ ಮೋಟಾರ್‌‌ ಬೈಕ್ ಚೆಸಿಸ್‌‌ ನಂಬ್ರ MBLHA10EZCHC-32088 ಹಾಗೂ ಇಂಜಿನ್‌‌ ನಂಬ್ರ   HA10EFCHC-30151 ಆಗಿರುತ್ತದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:26.08.2014 ಬೆಳಿಗ್ಗೆ 4.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಕಲಾವತಿ ರವರ ತಮ್ಮ ತುಕಾರಾಂ ಸನಾಲ್‌‌‌ ರವರು ಗರೋಡಿಯಲ್ಲಿರುವ ಯೋಗಾ ಕ್ಲಾಸ್‌‌ ಹೋಗುತ್ತಾ ನಾಗೂರಿ ಬಸ್‌‌‌ ನಿಲ್ದಾಣದಿಂದ ಗರೋಡಿ ಬಸ್‌‌‌ ನಿಲ್ದಾಣದ ಮಧ್ಯೆ ಪ್ರಮೋದ್‌‌ ನರ್ಸರಿ ಬಳಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುವಾಗ 3 ಮೋಟಾರ್‌‌ ಸೈಕಲ್‌‌ನಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಯಾವುದೋ ಹರಿತವಾದ  ಕತ್ತಿಯಿಂದ  ತುಕಾರಾಂ ಸನಾಲ್‌‌  ರವರ ತಲೆಯ ಬಲಬಾಗದ ಕಣ್ಣಿನ ರೆಪ್ಪೆ ಬಳಿ ಹಾಗೂ ಎಡಕೈಯ ಬೆರಳು ಹಾಗೂ ತಟ್ಟಿಗೆ, ಬಲಕಾಲಿನ ಕೋಲು ಕಾಲಿಗೆ  ಯದ್ವಾ ತದ್ವಾ ಖಡಿದು ಹಲ್ಲೆ ಮಾಡಿ  ಪರಾರಿಯಾಗಿದ್ದು ಸದ್ರಿಯವರನ್ನು ಚಿಕಿತ್ಸೆ ಬಗ್ಗೆ ಫಾಧರ್‌‌ ಮುಲ್ಲರ್ಸ್ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

No comments:

Post a Comment