Thursday, August 28, 2014

Daily Crime Reports 28-08-2014

ದೈನಂದಿನ ಅಪರಾದ ವರದಿ.

ದಿನಾಂಕ 28.08.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

1

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಎಂ.ಡಿ. ಮದಪ್ಪಾ  ರವರ ಮಗನಾದ ಸುಮಾರು 19 ವರ್ಷ ಪ್ರಾಯದ ಶ್ರೀ ನಿತೀನ್ಎಮ್ಎಮ್ಎಂಬಾತನು ಮೂಡಬಿದ್ರೆ ಆಳ್ವಾಸ್ಕಾಲೇಜಿನಲ್ಲಿ ದ್ವಿತಿಯ ಬಿ.ಕಾಂನಲ್ಲಿ ವ್ಯಾಸಾಂಗ ಮಾಡುತ್ತಾ ಕಾಲೇಜಿನ ಹಾಸ್ಟೇಲ್ನಲ್ಲಿ ವಾಸವಾಗಿದ್ದವನು ದಿನಾಂಕ: 25-08-2014 ರಂದು ಸಂಜೆ ಸುಮಾರು 6-30 ಗಂಟೆಯ ಸಮಯಕ್ಕೆ ಪಿರ್ಯಾದಾರರಿಗೆ ಕರೆಯನ್ನು ಮಾಡಿ ತನಗೆ ಜ್ವರ ಬರುತ್ತಿದ್ದ ಕಾರಣ ತಾನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಸ್ವತ್ರೆಗೆ ಹೊಗುತ್ತಿದ್ದು ವಿಚಾರವನ್ನು ಹಾಸ್ಟೇಲ್ವಾರ್ಡನ್ಶ್ರೀ ಸುದರ್ಶನ್ಎಂಬವರಿಗೆ ತಿಳಿಸಿ ಎಂದು ಹೇಳಿದಂತೆ ಪಿರ್ಯಾದುದಾರರು ಸದ್ರಿಯವರಿಗೆ ಕರೆಯನ್ನು ಮಾಡಿ ವಿಚಾರ ತಿಳಿಸಿ ಬಳಿಕ ವಿಚಾರಿಸಿಕೊಂಡಲ್ಲಿ  ತನ್ನ ಮಗನು ಹಾಸ್ಟೇಲ್ಗೆ ಹೋಗದೇ ತರಗತಿಗೂ ಹಾಜರಾಗದೇ ತನ್ನ ಮನೆಗೂ ಬಾರದೇ ಇದ್ದು ಅದರಂತೆ ಪಿರ್ಯಾದುದಾರರು ಮೂಬಿದ್ರೆಗೆ ಬಂದು ಹಾಸ್ಟೇಲ್ನಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಪತ್ತೆ ಯಾಗದೇ ಇದ್ದು ತನ್ನ ಮಗನು ಯಾವುದೋ ವೈಯುಕ್ತಿಕ ಕಾರಣದಿಂದ ಮನನೊಂದು ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾನೆ.

 

2.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.08.2014 ರಂದು ಪಿರ್ಯಾದಿದಾರರಾದ ಶ್ರೀ ಕರುಣಾಕರ ರವರು ಬೋಂದೆಲ್‌‌ ಪದವಿನಂಗಡಿ ಹೋಗಿ ವಾಪಾಸು ಬರುತ್ತಿರುವಾಗ ರಾತ್ರಿ ಸುಮಾರು 9.00 ಗಂಟೆಗೆ  ಮೇರಿಹಿಲ್‌‌ ಗುರುನಗರಕ್ಕೆ  ಹೋಗುವ ಜಂಕ್ಷನ್‌‌ ಬಳಿ ಇರುವ ಪೆಟ್ರೋಲ್‌‌‌ ಬಂಕ್ ಮುಂಭಾಗ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದಿನಿಂದ ಬಿಜೈ ಕೆ.ಪಿ.ಟಿ ಕಡೆಗೆ ಹೋಗುವ ಮೋಟಾರ್‌‌ ಬೈಕ್‌‌ ಒಂದು ರಸ್ತೆಯ ಮಧ್ಯಭಾಗದ ಡಿವೈಡರ್ಗೆ ಡಿಕ್ಕಿಹೊಡೆಯಿತು, ಇದರಿಂದ  ಮೋಟಾರ್‌‌‌ ಬೈಕ್‌‌ ಸಮೇತ ಸವಾರರು  ರಸ್ತೆಯಲ್ಲಿ ಬಿದ್ದುದನ್ನು ನೋಡಿ ಪಿರ್ಯಾದಿದಾರರು ತನ್ನ ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೋಟಾರ್‌‌ ಬೈಕ್‌‌ಸವಾರರನ್ನು ಎಬ್ಬಿಸಿ ನೋಡಿದಾಗ  ಸದ್ರಿಯವರು ಪಿರ್ಯಾಧಿದಾರರ ಪರಿಚಯದ  ವಾಸುದೇವ ಎಂಬವರಾಗಿದ್ದು ಸದ್ರಿಯವರ ಎರಡೂ ಕೈಗಳಿಗೆ ಮತ್ತು ಬಲಕಣ್ಣಿನ ಬಳಿ ರಕ್ತಬರುವ ಗಾಯ ಉಂಟಾಗಿದ್ದು ಅವರ ಮೋಟಾರ್‌‌‌ ಬೈಕ್‌‌ ನಂಬ್ರ: ಕೆಎ-19-ಇಜೆ-4827 ಆಗಿರುತ್ತದೆ. ಸದ್ರಿ ವಾಸುದೇವ ರವರು ತನ್ನ ಮೋಟಾರ್ಬೈಕನ್ನು ಸಾರ್ವಜನಿಕ ರಸ್ತೆಯಲ್ಲಿ ಅತಿಯಾದ ರಭಸದಿಂದ ಸವಾರಿ ಮಾಡಿರುವುದರಿಂದ ಅಪಘಾತ ಸಂಭವಿಸಿದ್ದಾಗಿದೆ.

 

3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.08.2014 ರಂದು ಮಧ್ಯಾಹ್ನ 3.10 ಗಂಟೆ ವೇಳೆಗೆ ಪಿರ್ಯಾದಿದಾರರಾದ ಶ್ರೀಮತಿ ಮಾಲತಿ ರವರು ನಾಗೂರಿ ಮುಖ್ಯ ರಸ್ತೆಯಿಂದ ಎಸ್‌‌.ಎನ್‌‌ ಟೆಂಪಲ್‌‌‌ ಕಡೆಗಿನ ಒಳ ರಸ್ತೆಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಬರುತ್ತಾ ನಾಗೂರಿಯ ಏಂಜಲೂರ್‌‌ ಚರ್ಚ್ಸಮೀಪ ತಲುಪಿದಾಗ ನಾಗೂರಿ ಮುಖ್ಯ ರಸ್ತೆ ಕಡೆಯಿಂದ ಎಸ್‌‌‌.ಎನ್‌‌‌ ಟೆಂಪಲ್‌‌ ಕಡೆಗೆ ಇಬ್ಬರು ಯುವಕರು ಬೈಕ್‌‌ನಲ್ಲಿ ಬಂದು ಪಿರ್ಯಾದಿದಾರರನ್ನು ಸಹ ದಾಟಿ ಸ್ವಲ್ಪ ಮುಂದಕ್ಕೆ ಹೋಗಿ ವಾಪಾಸು ಬೈಕನ್ನು ತಿರುಗಿಸಿ ಪಿರ್ಯಾದಿದಾರರ ಬಳಿಗೆ ಬಂದು ಬೈಕ್‌‌ ಸವಾರನು ಪಿರ್ಯಾದಿದಾರರ ಕುತ್ತಿಗೆ ಹಿಡಿದಾಗ ಪಿರ್ಯಾದಿದಾರರು ಭಯದಿಂದ ಬೊಬ್ಬೆ ಹಾಕಿದ್ದು ವೇಳೆ ಹಿಂಬದಿ ಸವಾರನು ಪಿರ್ಯಾದಿದಾರರು ಕುತ್ತಿಗೆಯಲ್ಲಿ ಧರಿಸಿದ್ದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಐದುವರೆ ಪವನ್‌‌ ತೂಕದ ಚಿನ್ನದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಕಸಿದುಕೊಂಡು ಇಬ್ಬರು ಆರೋಪಿಗಳು ಪರಾರಿಯಾಗಿರುತ್ತಾರೆ.

No comments:

Post a Comment