ದೈನಂದಿನ ಅಪರಾದ ವರದಿ.
ದಿನಾಂಕ 11.08.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/08/2014 ರಂದು ಅಪರಾಹ್ನ 2-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಂ. ಗುಲಾಂ ಮೊದಿನ್ ರವರು ತನ್ನ ಬಾಬ್ತು ಕೆಎ-51-ಎಮ್-6101 ನೇ ಕಾರಿನಲ್ಲಿ ತನ್ನ ಮಗಳಾದ ಫೌಜಿಯಾ ರವರ ಮನೆಗೆ ಊಟಕ್ಕೆಂದು ಹಳೆಯಂಗಡಿಯಿಂದ ಹೊರಟು ಲೈಟ್ ಹೌಸ್ ತಲಪಿದಾಗ, ಪಕ್ಷಿಕೆರೆ ಕಡೆಯಿಂದ ಕೆಎ-20-ಸಿ-5693 ನೇ ಕಾಂಕ್ರಿಟ್ ಮಿಕ್ಸಿಂಗ್ ವಾಹನವನ್ನು ಅದರ ಚಾಲಕ ಮಂಜುನಾಥ ಎಂಬವರು ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಪಡಿಸಿದ್ದು, ಈ ಅಪಘಾತದಿಂದ ಪಿರ್ಯಾದಿದಾರರ ಬಲಕೈ, ಬಲಕಾಲು, ಹಾಗೂ ಸೊಂಟಕ್ಕೆ ರಕ್ತ ಗಾಯವಾಗಿದ್ದು, ಹಾಗೂ ಕಾರು ಜಖಂಗೊಂಡಿದ್ದು, ಈ ಅಪಘಾತಕ್ಕೆ ಆರೋಪಿ ಚಾಲಕ ಮಂಜುನಾಥ ರವರ ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ಚಾಲನೇಯ ಕಾರಣವಾಗಿರುತ್ತೆದೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಬೊಳಿಯಾರು ಗ್ರಾಮದ ಬೊಳಿಯಾರು ಜಂಕ್ಷನ್ ನಲ್ಲಿರುವ ಪಿರ್ಯಾದಿದಾರರಾದ ಶ್ರೀ ನಾರಾಯಣ ಆಚಾರ್ಯ ರವರ ಬಾಬ್ತು ಶ್ರೀನಿಧಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ದಿನಾಂಕ:09-08-2014 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದಿದಾರರು ಕೆಲಸ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ:10-08-2014ರಂದು ಬೆಳಿಗ್ಗೆ 7-30 ಗಂಟೆಗೆ ರಿಕ್ಷಾ ಚಾಲಕರೊಬ್ಬರು ಪಿರ್ಯಾದಿದಾರರಿಗೆ ಕರೆ ಮಾಡಿ ನಿಮ್ಮ ಚಿನ್ನದ ಅಂಗಡಿಯ ಬಾಗಿಲು ಮುರಿದಿದೆ ಎಂದು ತಿಳಿಸಿದ ಮೇರೆಗೆ, ಪಿರ್ಯಾದಿದಾರರು ಅಂಗಡಿಗೆ ಬಂದು ನೋಡಿದಾಗ, ಅಂಗಡಿಯ ಶಟರನ್ನು ಯಾರೋ ಕಳ್ಳರು ಬಲವಂತದಿಂದ ತೆರೆದು ಒಳ ಪ್ರವೇಶಿಸಿ ಬಾಗಿಲನ್ನು, ಡ್ರಾವರಿನ ಒಳಗಡೆ ಇಟ್ಟಿದ್ದ 13 ಗ್ರಾಂ ತೂಕದ ಚಿನ್ನದ ಕನಕ ಮಾಲೆ-1, 3 ಗ್ರಾಂ ತೂಕದ ಹಳೆಯ ಉಂಗುರ -1 ಮತ್ತು 11 ಗ್ರಾಂ ತೂಕದ ಚಿನ್ನದ ಸಣ್ಣ-ಸಣ್ಣ ತುಂಡುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದ್ದು, ಕಳವಾದ ಚಿನ್ನಾಭಾರಣಗಳ ಒಟ್ಟು ತೂಕ 27 ಗ್ರಾಂ ಆಗಿದ್ದು, ಅಂದಾಜು ಮೌಲ್ಯ 72000 ರೂಪಾಯಿ ಆಗಿರುತ್ತದೆ ಇವುಗಳನ್ನು ದಿನಾಂಕ:09-08-2014ರ ರಾತ್ರಿ 9-00 ಗಂಟೆಯಿಂದ ಈ ದಿನ ದಿನಾಂಕ:10-08-2014ರಂದು ಬೆಳಿಗ್ಗೆ 7-00 ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಶಟರಿನ ಬಾಗಿಲನ್ನು ಬಲವಂತದಿಂದ ಮುರಿದು ಕಳ್ಳತನ ಮಾಡಿರುವುದಾಗಿದೆ.
3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-08-2014 ರಂದು 22-30 ಗಂಟೆಯಿಂದ ದಿನಾಂಕ 10-08-2014 ರಂದು ಬೆಳಿಗ್ಗೆ 08-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಹೊಗೈಬಜಾರ್ ನಲ್ಲಿರುವ ಜ್ಞಾನೋದಯ ಸ್ಕೂಲ್ ಬದಿಯಲ್ಲಿ ಡಾಮಾರು ರಸ್ತೆಯ ಹತ್ತಿರ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರಾದ ಶ್ರೀ ಪ್ರಜ್ವಲ್ ರಾಜ್ ಹೆಚ್. ರವರು ಉಪಯೋಗಿಸುತ್ತಿದ್ದ ಪಿರ್ಯಾದಿದಾರರ ಸಂಬಂಧಿ ಅಣ್ಣ ಶೈಲೇಶ್ ಎಂ. ಇವರ ಆರ್. ಸಿ. ಮಾಲಕತ್ವದ 2005ನೇ ಮೋಡಲ್ ನ, ಸಿಲ್ವರ್ ಬಣ್ಣದ ಅಂದಾಜು ರೂಪಾಯಿ 85000/- ಬೆಲೆ ಬಾಳುವ KA 04 B 2480 ನೊಂದಣಿ ಸಂಖ್ಯೆಯ ಮಾರುತಿ ಕಂಪನಿಯ ಎಸ್ಟೀಮ್ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಕಾರಿನ ಡ್ಯಾಶ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂಧಿಸಿದ ಆರ್. ಸಿ. ಮತ್ತು ಇನ್ಸೂರೆನ್ಸ್ ನ ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ವಾಹನವನ್ನು ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-08-2014 ರಂದು 07-45 ಗಂಟೆಯಿಂದ 07-45 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರ ಕಟ್ಟೆಯ ಬಳಿ ಇರುವ ಪಿರ್ಯಾದಿದಾರರಾದ ಶ್ರೀ ಸತೀಶ್ ಕುಮಾರ್ ರವರ ಬಾಬ್ತು ವಿಘೇಶ್ವರ ಮಿಲ್ಕ್ ಪಾರ್ಲರ್ ಎಂಬ ಹೆಸರಿನ ಅಂಗಡಿಯ ಬಳಿಯಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರ ಆರ್. ಸಿ. ಮಾಲಕತ್ವದ 2012 ನೇ ಮೋಡಲ್ ನ, ಬಿಳಿ ಬಣ್ಣದ ಅಂದಾಜು ರೂಪಾಯಿ 45000/- ಬೆಲೆ ಬಾಳುವ KA 19 EE 4961 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಸೀಟ್ ಕೆಳಭಾಗದಲ್ಲಿರುವ ಟೂಲ್ಸ್ ಬಾಕ್ಸ್ ನಲ್ಲಿ ದ್ಚಿಚಕ್ರ ವಾಹನಕ್ಕೆ ಸಂಬಂಧಿಸಿದ ಆರ್. ಸಿ. ಯ ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ವಾಹನವನ್ನು ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/08/2014 ರಂದು ಪಿರ್ಯಾಧಿದಾರರಾದ ಡಾ. ಮೊಹಮ್ಮದ್ ಅಫ್ರೀನ್ ರವರು ಬಜಪೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಕೆಟ್ ಖರೀದಿಸಲು ಮಂಗಳೂರಿನಿಂದ ಬಜಪೆ ಕಡೆಗೆ ತನ್ನ ಬಾಬ್ತು ಕಾರು ನಂಬ್ರ: ಕೆಎಲ್-01-ಬಿಕೆ-8793 ನೇದರಲ್ಲಿ ಅವರ ಪತ್ನಿಯೊಂದಿಗೆ ಹೋಗುತ್ತಿದ್ದಾಗ ಮಧ್ಯಾಹ್ನ ಸುಮಾರು 3-15 ಗಂಟೆಗೆ ಕೆಂಜಾರು ಗ್ರಾಮದ ಕೆಂಜಾರು-ಬಜಪೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಸಾರ್ವಜನಿಕ ಡಾಮಾರು ರಸ್ತೆಯ ಮದ್ಯದಲ್ಲಿರುವ ಐ ಮಾಸ್ಕ್ ವಿದ್ಯುತ್ ದೀಪ ಇರುವ ವೃತದ ಬಳಿ ಅವರ ಕಾರಿನ ಬಲ ಬದಿ ಇಂಡಿಕೇಟರ್ ಹಾಕಿ ವಿಮಾನ ನಿಲ್ದಾಣ ಕಡೆಗೆ ಹೋಗಲು ಬಲಕ್ಕೆ ತಿರುಗಿಸುತ್ತಿದ್ದಂತೆ ಅವರ ಕಾರಿಗೆ ಹಿಂದಿನಿಂದ ಮಾರುತಿ ಓಮ್ನಿ ಕಾರು ನಂಬ್ರ: ಕೆಎ-19-ಎಂಸಿ-5830 ಕಾರೊಂದರ ಚಾಲಕ ಚಾರ್ಜು ಮಾರ್ಕ್ ಪೆರ್ನಾಂಡಿಸ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾಧಿದಾರರ ಕಾರಿಗೆ ಡಿಕ್ಕಿ ಹೊಡೆದರ ಪರಿಣಾಮ ಪಿರ್ಯಾಧಿದಾರರ ಕಾರಿನ ಮುಂಭಾಗದ ಬಾಗಿಲು, ಮುಂಬಾಗದ ಬಲಬದಿ ಬಂಪರು, ಬಲಭಾಗದ ಡೋರ್ ಬಂಪರ್ ಪೆನಲ್, ಬಲಬದಿ ಮುಂಭಾಗ ಕನ್ನಡಿ ಬಿಡಿ ಭಾಗಗಳು ಜಖಂಗೊಂಡಿರುತ್ತದೆ. ಈ ಅಪಘಾತದಲ್ಲಿ ಯಾರಿಗೋ ಗಾಯಗಳಾಗಿರುವುದಿಲ್ಲ.
No comments:
Post a Comment