ದೈನಂದಿನ ಅಪರಾದ ವರದಿ.
ದಿನಾಂಕ 10.08.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 2 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-08-2014 ಪಿರ್ಯಾದುದಾರರಾದ ಶ್ರೀ ಉದಯ್ ಕುಮಾರ್ ರವರು ಅವರ ಬಾಬ್ತು KA 01MD- 9110 ನಂಬ್ರದ ಕಾರಿನಲ್ಲಿ ಕುಳಾಯಿ ಯಿಂದ ತನ್ನ ಮನೆಯ ಕಡೆಗೆ NH 66 ರಲ್ಲಿ ಹೊಗುತ್ತಾ ಸಂಜೆ ಸುಮಾರು 4 ಗಂಟೆಗೆ ಪಣಂಬುರಿನ MCF Factory ಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ತನ್ನ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಟ್ಯಾಂಕರ್ ನಂಬ್ರ TN 04F3930 ನೇಯದನ್ನು ಅದರ ಚಾಲಕ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಪಿರ್ಯಾದುದಾರರ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರು ಮುಂದೆ ಹೊಗುತಿದ್ದ KA19D4802 ನೇ ನಂಬ್ರದ ಟ್ಯಾಂಕರಿನ ಮದ್ಯೇ ಸಿಲುಕಿಕೊಂಡು ಪಿರ್ಯಾದಿದಾರರ ಬಲಕೈಗೆ ಸಾಮಾನ್ಯ ಸ್ವರೂಪದ ಗಾಯವಾಗಿರುವುದಲ್ಲದೆ ಮೂರು ವಾಹನಗಳೂ ಜಖಂ ಗೊಂಡಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.08.2014 ರಂದು 07.20 ಗಂಟೆಗೆ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆ ಬಳಿ KA09-B-04 ಕಾರನ್ನು ಅದರ ಚಾಲಕ ಈಶ್ಚರ ಎಂಬಾತನು ಹಂಪನಕಟ್ಟೆ ವೃತ್ತದ ಕಡೆಯಿಂದ ರೈಲ್ವೆ ಸ್ಠೇಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ,ರಸ್ತೆ ಬದಿ ನಡೆದುಕೊಂಡು, ಹೋಗುತ್ತಿದ್ದ ಫಿರ್ಯಾದುದಾರರಾದ ಶ್ರೀ ಜಾನ್ಸನ್ ವರ್ಗಿಸ್ ರವರ ಮಗ ಅಲ್ವಿನ್ ಜಾನ್ಸನ್ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಅಲ್ವಿನ್ ಡಿ'ಸೋಜಾ ರವರ ಎಡಕಾಲಿಗೆ ಮತ್ತು ಎರಡೂ ಕೈ ಗಳಿಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳು ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕೆತ್ಸೆಯಲ್ಲಿರುತ್ತಾರೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ನಡುಪದವು ಪಿ.ಎ ಕಾಲೇಜ್ ಬಳಿ ಇರುವ ಬಿ.ಸಿ.ಎಂ ಹಾಸ್ಟೆಲ್‌ನ ಕಂಪೌಂಡ್ ಹಾಲ್ನಲ್ಲಿ ಪಿರ್ಯಾದಿದಾರರಾದ ಶ್ರೀ ಸಬಾನ್ ರವರ ಬಾಬ್ತು ಬಜಾಜ್ ಡಿಸ್ಕವರಿ ಬೈಕ್ ನಂಬ್ರ ಕೆಎ-19-ಇಎ-4776 ನ್ನು ದಿನಾಂಕ 07-08-2014 ರಂದು ರಾತ್ರಿ 8:00 ಗಂಟೆಗೆ ಪಾರ್ಕ್ ಮಾಡಿ ನಿಲ್ಲಿಸಿದ್ದು, ದಿನಾಂಕ 08-08-2014 ರಂದು ಬೆಳಿಗ್ಗೆ 06:00 ಗಂಟೆಗೆ ಬಂದು ನೋಡಿದಾಗ ಬೈಕ್ ಕಾಣದೇ ಇದ್ದು, ಎಲ್ಲಾ ಕಡೆ ಹುಡುಕಾಡಿ ಪತ್ತೆ ಶ್ರಮಿಸಲಾಗಿದ್ದು, ಪತ್ತೆಯಾಗಿರುವುದಿಲ್ಲ. ಸದ್ರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಕಳವಾದ ಬೈಕ್‌ನ ಅಂದಾಜು ಮೌಲ್ಯ ರೂ 47,000/- ಆಗಬಹುದು.
4.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಮೀತ್ ರವರ ಬಾಬ್ತು ಮೀನುಗಾರಿಕಾ ದೋಣೆಗೆ ಬಳಸುವ ಔಟ್ ಬೋರ್ಡ್ ಯಮಹ 8.ಹೆಚ್ ಪಿ ಇಂಜಿನ್(680 ಕೆ1009776) ಅನ್ನು ಯಾರೋ ಕಳ್ಳರು ದಿನಾಂಕ 31/12/2013 ರಾತ್ರಿ 9.00 ಗಂಟೆಯಿಂದ ತಾರಿಖು 01/01/2014 ರ ಬೆಳಿಗ್ಗೆ 7.00 ಗಂಟೆ ಮಧ್ಯೆ ತೋಟಾ ಬೆಂಗ್ರೆಯ ಪ್ರಗತಿ ಮೈದಾನದ ಬಳಿ ನದಿಯಲ್ಲಿ ಇರಿಸಿರುವ ಮೀನುಗಾರಿಕಾ ದೋಣಿಯಿಂದ ಕಳವು ಮಾಡಿಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ಸುಮಾರು 48.000 ರೂ ಆಗಬಹುದು ಈ ಕಳುವಾದ ಇಂಜಿನ್ ನನ್ನು ಎಲ್ಲಾ ಕಡೆ ಹುಡುಕಾಡಿದಲ್ಲಿ ಈವರೆಗೂ ಸಿಗದೇ ಇದ್ದುದರಿಂದ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆಪಾದಿತನಾದ ಮೈಯ್ಯುದ್ದಿನ್ ಇಮ್ತಿಯಾಜ್ ಹುಸೈನ್ ಎಂಬಾತನು M/s,G,I IMPEX, NO,55, 1 ನೇ ಮೈನ್ ನೆಹರು ನಗರ ಶೇಷಾದ್ರಿಪುರಂ, ಬೆಂಗಳೂರು ಎಂಬ ಸಂಸ್ಥೆಯ ಮಾಲೀಕನೆಂದು ಪಿರ್ಯಾದಿದಾರರಾದ ಶ್ರೀ ಗುರುರಜ ಕೆ. ರವರ ಬಾಬ್ತು ಕೂಳೂರು ಕೆನರಾ ಬ್ಯಾಂಕಿನ ವ್ಯವಸ್ಥಾಪಕರನ್ನು ಸಂಪರ್ಕಿಸಿ ದಿನಾಂಕ 03/06/2014 ರಂದು 26,865 ರೂ ಮೌಲ್ಯದ ಬ್ಯಾಂಕ್ ಗ್ಯಾರಂಟಿಯನ್ನು ನವ ಮಂಗಳೂರಿನ ಪೋರ್ಟ್ ಟ್ರಸ್ಟ್ ನಲ್ಲಿರುವ ಕಬ್ಬಿಣದ ಅದಿರುಗಳನ್ನು ಬಿಡುಗಡೆ ಮಾಡುವ ಸಲುವಾಗಿ ಎನ್ ಎಮ್ ಪಿ ಟಿ ಮಂಗಳೂರಗೆ ಸಲ್ಲಿಸಲು ಪಡೆದಿದ್ದು ಬ್ಯಾಂಕ್ ಗ್ಯಾರಂಟಿ ನಂಬ್ರ - BG02/2014 ಆಗಿರುತ್ತದೆ. ಹೀಗಿರುತ್ತಾ ಸದ್ರಿ ಆಪಾದಿತನು ತಮ್ಮ ಬ್ಯಾಂಕಿನ ಶೇಷಾದ್ರಿಪುರ ಶಾಖೆಯ 2,68,65,058 ರೂ/- ಮೊತ್ತದ ಬ್ಯಾಂಕ್ ಗ್ಯಾರಂಟಿಯನ್ನು ಬೆಂಗಳೂರಿನಲ್ಲಿರುವ STAR EXPORT AND IMPORT ಎಂಬ ಸಂಸ್ಥೆಗೆ ನಕಲಿ ದಾಖಲೆ ಸೃಷ್ಟಿಸಿ ಎನ್ ಎಮ್ ಪಿ ಟಿ ಯಾರ್ಡ್ ನಲ್ಲಿರುವ ಕಬ್ಬಿಣದ ಅದಿರನ್ನು ಪಡೆಯಲು ಎನ್ ಎಮ್ ಪಿ ಟಿ ಕಛೇರಿಗೆ ನೀಡಿದ್ದು ಅವರು ಸದ್ರಿ ಬ್ಯಾಂಕ್ ಗ್ಯಾಂರಂಟಿಯ ಸಾಚಾತನದ ಬಗ್ಗೆ ವಿಚಾರಿಸಿದಾಗ ಸ್ಟಾರ್ ಎಕ್ಸ್ ಪೋರ್ಟ್ ಎಂಡ್ ಇಮ್ ಪೋರ್ಟ ಸಂಸ್ಥೆಯ ಹೆಸರಲ್ಲಿ ಯಾವುದೆ ಖಾತೆ ಇಲ್ಲವೆಂದು ತಿಳಿದು ಬಂದಿದ್ದು ಇದನ್ನು ತಿಳಿದ ಆರೋಪಿಯು ದಿನಾಂಕ 05/07/2014 ರಂದು ಬೈಕಂಪಾಡಿಯ ಎ ಪಿ ಎಮ್ ಸಿ ಯಾರ್ಡ ನಲ್ಲಿರುವ ಪಿರ್ಯಾದಿದಾರರ ಬಾಬ್ತು ಇನ್ನೊಂದು ಶಾಖೆಗೆ ಬಂದು ರೂಪಾಯಿ 2,74,71,501 ರೂಪಾಯಿಗಳ ಮೊತ್ತಕ್ಕೆ ಡಿಮಾಂಡ್ ಡ್ರಾಪ್ಟ್ ಪಡೆದು ತನ್ನ M/S G, I, IMPEX ಕಂಪನಿಯ ಚೆಕ್ ನ್ನು ಬ್ಯಾಂಕಿಗೆ ಕೊಟ್ಟು ಎನ್ ಎಮ್ ಪಿ ಟಿ ಸಂಸ್ಥೆಗೆ ಕೊಡಲು 3 ಡಿಮಾಂಡ್ ಡ್ರಾಪ್ಟ್ ಪಡೆದು ಅವುಗಳನ್ನು ಎನ್ ಎಮ್ ಪಿ ಟಿ ಗೆ ಕೊಟ್ಟು ಆತನು ಮೊದಲು ಸುಳ್ಳು ದಾಖಲೆ ಸೃಷ್ಟಿಸಿ ನೀಡಿದ 2,68,65,058 ರೂಪಾಯಿ ಮೊತ್ತದ ಬ್ಯಾಂಕ್ ಗ್ಯಾರಂಟಿಯನ್ನು ವಾಪಾಸ್ ಪಡೆದಿರುತ್ತಾನೆ ಆತನು ಕೆನರಾ ಬ್ಯಾಂಕ್ ಬೆಂಗಳೂರು ಶೇಷಾದ್ರಿಪುರ ಶಾಖೆಯ ನಕಲಿ ಸೀಲು ಮತ್ತು ಬ್ಯಾಂಕ್ ಗ್ಯಾರಂಟಿ ಸೃಷ್ಟಿಸಿ ಶಾಖಾಧಿಕಾರಿಯ ನಕಲಿ ಸಹಿಯನ್ನು ಸೃಷ್ಟಿಸಿ ಕೆನರಾ ಬ್ಯಾಂಕ್ ಕೂಳೂರು ಮತ್ತು ಬೈಕಂಪಾಡಿಗೆ ಶಾಖೆಗೆ ವಂಚಿಸಲು ಪ್ರಯತ್ನಿಸಿದ್ದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09-08-2014 ರಂದು ಬೆಳ್ಳಿಗೆ 9.35 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಗ್ರಾಮದ ಕುದ್ರಿಪದವು ಅಂಗಡಿಗೆ ಹೋಗುತ್ತಿರುವಾಗ ಪಿರ್ಯಾಧಿದಾರರಾದ ಶ್ರೀ ಕಾಲಿಸ್ ಸೆರಾವೋ ರವರನ್ನು ಆರೋಪಿ ಜೋಕಿಂ ಸೆರಾವೋ ಎಂಬವರು ತಡೆದು ನಿಲ್ಲಿಸಿ "ನೀನು ಬಾರಿ ನನ್ನ ಮೇಲೆ ಠಾಣೆಯಲ್ಲಿ ದೂರು ನೀಡುತ್ತೀಯ" ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಮರದ ಸೊಂಟೆಯಿಂದ ಪಿರ್ಯಾಧಿದಾರರ ಎಡಕೈಗೆ ಹಾಗೂ ಎದೆಗೆ ಹೊಡೆದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿರುತ್ತಾನೆ. ಈ ಘಟನೆ ಪಿರ್ಯಾದಿದಾರರ ಮತ್ತು ಆರೋಪಿತರ ಒಳಗಿನ ಜಾಗದ ತಕರಾರು ಇದ್ದ ಕಾರಣ ಆಗಿರುತ್ತದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-07-2014 ರಂದು ಮದ್ಯಾಹ್ನ 12-30 ಗಂಟೆಗೆ ಮಾನ್ಯ ದ.ಕ ಜಿಲ್ಲಾಧಿಕಾರಿಯವರ ಕಛೇರಿಯ ಸಭಾಂಗಣದಲ್ಲಿ ಮರಳು ನೀತಿಯ ಬಗ್ಗೆ ನಡೆದ ಸಭೆಯಲ್ಲಿ ನಾಗರಿಕ ಹಿತ ರಂಕ್ಷಣಾ ಸಮಿತಿಯ ಅಧ್ಯಕ್ಷರಾದ ಜಿ ಹನುಮಂತಕಾಮತ್ ರವರು ಸಾರ್ವಜನಿಕ ಹಿತ ದೃಷ್ಠಿಯಿಂದ ಸಭೆಗೆ ಹಾಜರಾಗಿದ್ದು ಸಭೆಯ ಅದ್ಯಕ್ಷತೆಯನ್ನು ಮಾನ್ಯ ಜಿಲ್ಲಾಧಿಕಾರಿಯವರು ವಹಿಸಿದ್ದು ಸಭೆಯಲ್ಲಿ ಸಾರಿಗೆ ಅಧಿಕಾರಿಯವರು, ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಯವರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಮರಳು ತೆಗೆಯುವ ಗುತ್ತಿಗೆದಾರರು, ಕ್ರೇಡೈ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಎಂಬವರು ಹಾಗೂ ಇತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು, ಅಲ್ಲಿ ಗಹನವಾದ ಚರ್ಚೆಗಳು ನಡೆಯುತ್ತಿದ್ದವು ಸಭೆಯಲ್ಲಿ ಮರಳು ದರ ಪರಿಷ್ಕರಣೆ ಮಾಡುವಾಗ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೊಂದರೆಯಾಗದಂತೆ ದರ ಪರಿಷ್ಕರಣೆ ಮಾಡುವಂತೆ ಫಿರ್ಯಾದುದಾರರಾದ ಶ್ರೀ ಜಿ. ಹನುಮಂತ್ ಕಾಮತ್ ರವರು ಸೂಚಿಸಿದಾಗ ಮದ್ಯಾಹ್ನ ಸುಮಾರು 1-00 ಗಂಟೆಗೆ ಪುಷ್ಪರಾಜ್ ಜೈನ್ ರವರು ಸಾರ್ವಜನಿಕರು ಬಿಲ್ಡರ್ ಗಳಿಗೆ ದೌರ್ಜನ್ಯ ಮಾಡುತ್ತಿದ್ದಾರೆ, ಎಂದು ಹೇಳಿದಾಗ ಅದಕ್ಕೆ ಉತ್ತರವಾಗಿ ಫಿರ್ಯಾದುದಾರರು ಅಂತಹ ಸಂದರ್ಭದಲ್ಲಿ ತಾವುಗಳು ಪೊಲೀಸು ಠಾಣೆಗೆ ದೂರು ನೀಡಬೇಕು ವಯಕ್ತಿಕ ವಿಚಾರವನ್ನು ಇಲ್ಲಿ ಚರ್ಚೆ ಮಾಡಿ ಸುಮ್ಮನೆ ಕಾಲ ಹರಣ ಮಾಡಬೇಡಿ ಇದು ಮರಳು ನೀತಿ ರೂಪಿಸಲು ಕರೆದಿರುವ ಸಭೆ ಎಂಬುದಾಗಿ ಸಲಹೆ ನೀಡಿರುತ್ತಾರೆ. ಅಷ್ಟರಲ್ಲಿ ಆರೋಪಿತರಾದ ಪುಷ್ಪರಾಜ್ ಜೈನ್ ರವರು ಫಿರ್ಯಾದುದಾರರ ಮೇಲೆ ವಯ್ಯಕ್ತಿಕ ಹಗೆ ಸಾಧಿಸುವ ಸಲುವಾಗಿ ಹಾಗೂ ಮಾನ ಹಾನಿ ಮಾಡುವುದಕ್ಕಾಗಿ ಫಿರ್ಯಾದುದಾರರನ್ನು ಉದ್ದೇಶಿಸಿ ಏಕವಚನದಲ್ಲಿ "ನೀನು ಕಾರ್ಪೋರೇಶನ್ ಗೆ ಬಾ, ಅಲ್ಲಿಗೆ ನೀನು ಹೇಗೆ ಬರುತ್ತಿ ನಾನು ನೋಡುತ್ತೇನೆ" ಎಂಬುದಾಗಿ ಬೈದು "ಇವನಿಂದ ಬಿಲ್ಡರ್ ಗಳಿಗೆ ತುಂಬಾ ತೊದರೆಯಾಗಿದೆ ಇವನು ಆರ.ಟಿ.ಐ ನಲ್ಲಿ ಮಾಹಿತಿ ತೆಗೆದು ಬ್ಲಾಕ್ ಮೇಲ್ ಮಾಡುತ್ತಾನೆ, ಲಂಚ ಕೇಳುತ್ತಾನೆ, ಜಿಲ್ಲಾಧಿಕಾರಿಗಳೇ ಈತನನ್ನು ದೇವಸ್ಥಾನಕ್ಕೆ ಕರೆದು ತಂದು ಪ್ರಮಾಣ ಮಾಡಿಸಬೇಕು, ಇವನನ್ನು ನಾನು ಬಿಡುವುದಿಲ್ಲ, ನೀನು ಕಾರ್ಪೋರೇಶನ್ ಗೆ ಬಂದಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ" ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ, ದೃಶ್ಯ ಮಾಧ್ಯಮದವರ ಮುಂದೆ ಹಾಗೂ ಸಭೆಗೆ ಹಾಜರಾದ ಸಾರ್ವಜನಿಕರ ಮುಂದೆ ಫಿರ್ಯಾದುದಾರರ ಮಾನ ಹಾನಿ ಮಾಡಿದ್ದು ಫಿರ್ಯಾದುದಾರರಿಗೆ ಮಾನಸಿಕ ನೋವು ಗೊಂದಲ ಉಂಟಾಗಿರುತ್ತದೆ, ಆದುದರಿಂದ ಪ್ರಭಾವ ಶಾಲಿ ವ್ಯಕ್ತಿಯಾದ ಶ್ರೀ ಪುಷ್ಪರಾಜದ್ ಜೈನ್ ರವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಪಿರ್ಯಾದಿ ನೀಡಿರುವುದಾಗಿದೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09/08/2014 ರಂದು 01.25 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಲೂವಿಸ್ ವಿನ್ಸೆಂಟ್ ಪಾಯಸ್ ರವರು ತನ್ನ ಬಾಬ್ತು ಓಮ್ನಿ ಕಾರು ನಂಬ್ರ KA 19 ME 1095 ನೇದ್ದನ್ನು ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಬಜಪೆ ವಿಮಾನ ನಿಲ್ದಾಣದ ಟೋಲ್ ಗೇಟ್ ಹೊರಗಡೆ ನಿಲ್ಲಿಸಿದ್ದು, ಆರೋಪಿ ಕಾರು ಚಾಲಕ ತನ್ನ ಬಾಬ್ತು ಕಾರು ನಂಬ್ರ KA 19 MD 6408 ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಓಮ್ನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.08.2014 ರಂದು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಹನೀಫ್ ರವರು ತನ್ನ ಬಾಬ್ತು ನೀರುಮಾರ್ಗದಲ್ಲಿರುವ ಸುಪರ್ ಟ್ರೇಡರ್ಸ್ ಜಿನಸು ಅಂಗಡಿಯಲ್ಲಿ ಇತರ ಕೆಲಸಗಾರರೊಂದಿಗೆ ವ್ಯಾಪಾರ ವಹಿವಾಟು ಮಾಡಿ ರಾತ್ರಿ ಸುಮಾರು 8.00 ಗಂಟೆ ಮುಚ್ಚಿ ಮನೆಗೆ ಹೋಗಿರುವುದಾಗಿಯೂ ಮರುದಿನ ದಿನಾಂಕ 08.08.2014 ರಂದು ಶುಕ್ರವಾರದ ವಾರದ ರಜೆಯಾಗಿದ್ದರಿಂದ ಅಂಗಡಿಯನ್ನು ತೆರೆಯದೇ ಮನೆಯಲ್ಲಿದ್ದು, ದಿನಾಂಕ 09.08.2014 ರಂದು ಮುಂಜಾನೆ 02.00 ಗಂಟೆಗೆ ಅಂಗಡಿಯ ಕಟ್ಟಡದ ಮಾಲಿಕರು ಪಕ್ಕದ ತರಕಾರಿ ಅಂಗಡಿಯವರಾದ ಅಬೂಬಕ್ಕರ್ ರವರಿಗೆ ಸೂಪರ್ ಟ್ರೇಡರ್ಸ್ ಅಂಗಡಿಯಲ್ಲಿ ಶಟರ್ ತೆಗೆಯುವ ಶಬ್ದ ಕೇಳಿಸುತ್ತಿದೆ ಎಂಬುದಾಗಿ ಮಾಹಿತಿ ಬಂದಂತೆ ಸೂಪರ್ ಟ್ರೇಡರ್ಸ್‌ನ ಅಂಗಡಿಯವರಿಗೆ ಅಬೂಬಕ್ಕರ್ ರವರು ಮಾಹಿತಿ ನೀಡಿದ ನಂತರ ಸೂಪರ್ ಟ್ರೇಡರ್ಸ್ ಅಂಗಡಿಯ ಮಹಮ್ಮದ್ ಹನೀಫ್ ರವರು ಇತರರ ಜೊತೆಯಲ್ಲಿ ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ದಕ್ಷಿಣ ದಿಕ್ಕಿನ ಶಟರ್ ಬಾಗಿಲು ಅರ್ಧ ತೆರೆದಿದ್ದು ಎರಡು ಬೀಗಗಳನ್ನು ತೆಗೆದಿದ್ದು ಅಂಗಡಿಯ ಒಳಗೆ ಹೋಗಿ ನೋಡಿದಾಗ ಕ್ಯಾಶ್ ಡ್ರಾವರ್‌ನಲ್ಲಿದ್ದ ನಗದು ಹಣ ರೂಪಾಯಿ 45,000 ಹಾಗೂ ಅಂಗಡಿಯ ಸೆಲ್ಪ್‌ಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಜೋಡಿಸಿಟ್ಟ ವಿವಿಧ ನಮೂನೆಯ ಸೋಪು, ಶ್ಯಾಂಪು, ಸಿಗರೇಟ್ಗಳು ಎಣ್ಣೆಯ ಪ್ಯಾಕೇಟ್ಗಳು, ಫರ್ಮ್ಯೂಮ್ ಗಳು ಹಾಗೂ ಇನ್ನಿತರ ರೂಪಾಯಿ 78,000/- ಬೆಲೆಬಾಳುವ ವಸ್ತುಗಳು ಕೂಡಾ ಕಳವಾಗಿರುವುದಾಗಿಯೂ ಕಳವಾದ ಸೊತ್ತು ಹಾಗೂ ನಗದು ಹಣದ ಒಟ್ಟು ಮೌಲ್ಯ 1,23,000/- ಆಗಬಹುದು.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂಜಯ್ ಸಾಲಿಯಾನ್ ರವರ ತಂದೆಯವರು ಮಂಗಳೂರು ತಾಲ್ಲೂಕು ಪದವು ಗ್ರಾಮದಲ್ಲಿರುವ ಸರ್ವೇ ನಂಬ್ರ 196-2ಎ ರಲ್ಲಿ 12 ಸೆಂಟ್ಸ್ ಮತ್ತು ಸರ್ವೇ ನಂಬ್ರ 255-2ಎ ರಲ್ಲಿನ 12 ಸೆಂಟ್ಸ್ ಸ್ಥಳದ ಅನುಭೋಗದಾರರಾಗಿದ್ದು, ಸಂಜಯ್ ವಿ. ಕುಂದರ್, ವಾಸುದೇವ್ ಕುಂದರ್, ಯೋಗೀಶ್ ನಾಯ್ಕ್, ಜೀವನದಾಸ್ ಶೆಟ್ಟಿ, ಉಮೇಶ್ ಶೆಟ್ಟಿ, ಹರೀಶ್ ಎಸ್., ಕೆ. ಜಯರಾಮ್ ಶೆಟ್ಟಿ, ಆನಂದ, ಉಮೇಶ್ ಕಲ್ಲೋಟ್ಟಿಗೆ ಎಂಬ 9 ಜನ ಆರೋಪಿಗಳು ಸದ್ರಿ ಸ್ಥಿರಾಸ್ತಿಯನ್ನು ಅಕ್ರಮವಾಗಿ ಲಪಟಾಯಿಸುವ ಸಮಾನ ಉದ್ಧೇಶದಿಂದ ಆರೋಪಿ ಸಂಜಯ್. ವಿ ಕುಂದರ್ ಎಂಬವನು ತನಗೆ ಸದ್ರಿ ಸ್ಥಳದ ಮಾಲಕರಾದ ವಾಸುದೇವರವರು ಜಿ.ಪಿ.ಎ ನೀಡಿದ ಬಗ್ಗೆ ಉಮೇಶ್ ಶೆಟ್ಟಿ ಎಂಬ ನೋಟರಿ ವಕೀಲರಿಂದ ಪೋರ್ಜರಿಯಾಗಿ ಮಾಡಿಸಿದ್ದು ಇದರಲ್ಲಿ ಪಿರ್ಯಾದುದಾರರ ತಂದೆಯನ್ನು ಮತ್ತು ಪಿರ್ಯಾದುದಾರರನ್ನು ಗುರುತಿಸಿರುವುದಾಗಿ ಯೋಗೀಶ ನಾಯ್ಕ, ಕೆ.ಜೀವನ್ದಾಸ್ ಶೆಟ್ಟಿ ಎಂಬವರುಗಳು ಸಹಿ ಮಾಢಿದ್ದು ಇದೇ ರೀತಿ ಸದ್ರಿ ಆಸ್ತಿಯನ್ನು ಆರೋಪಿ ಸಂಜಯ್. ವಿ ಕುಂದರ್ ಎಂಬವನು ತನ್ನ ತಂದೆಯ ಹೆಸರಿನಿಂದ ಆತನ ಹೆಸರಿಗೆ ಮಾಡಿಕೊಂಡ ಡೀಡ್ ಆಫ್ ಸೆಟ್ಲಮೆಂಟ್ ದಸ್ತಾವೇಜು ನಂಬ್ರ ಎಮ್ಜಿಸಿ-1-04739-2013-14 ರಲ್ಲಿ ಕೆ. ಜಯರಾಮ್ ಶೆಟ್ಟಿ ಮತ್ತು ಆನಂದ ಎಂಬವರುಗಳು ಸಾಕ್ಷಿದಾರರೆಂದು ಸಹಿ ಮಾಡಿರುವುದರಿಂದ ಮತ್ತು ಸದ್ರಿ ಡೀಡ್ ಆಫ್ ಸೆಟ್ಲ್ ಮೆಂಟ್ ದಸ್ತಾವೇಜನ್ನು ವಕೀಲರಾದ ಹರೀಶ್ ಎಸ್., ಮಂಗಳೂರು -575001 ರವರು ತಯಾರು ಮಾಡಿ ಸಬ್ ರಿಜಿಸ್ಟ್ರಾರ್ ಆಫೀಸಿಗೆ ದಾಖಲಿಸಿದ ಕಾರಣ ಸದ್ರಿ ಆರೋಪಿಗಳೆಲ್ಲರು ತಮಗೆ ವಂಚನೆ ಮಾಡುವ ಸಮಾನ ಉದ್ಧೇಶದಿಂದ ಪಿರ್ಯಾದಿದಾರರ ತಂದೆಯವರ ಹೆಸರಿನಲ್ಲಿರುವ 24 ಸೆಂಟ್ಸ್ ಸ್ಥಿರಾಸ್ತಿಯನ್ನು ಪಿರ್ಯಾದಿದಾರರ ತಂದೆಯವರು ಪಿರ್ಯಾದಿದಾರರಿಗೆ ಡೀಡ್ ಆಫ್ ಸೆಟ್ಲಮೆಂಟ್ ಮೂಲಕ ನೀಡಿದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ ಪಿರ್ಯಾದಿದಾರರ ತಂದೆಯವ ಏಕೈಕ ಮಗನಾದ ಪಿರ್ಯಾದಿದಾರರ ಸ್ಥಾನದಲ್ಲಿ ಆರೋಪಿ ಸಂಜಯ್.ವಿ ಕುಂದರ್ ಎಂಬವನು ತಾನೇ ಪಿರ್ಯಾದಿದಾರರ ಮಗನೆಂದು ಸದ್ರಿ ಸ್ತಿರಾಸ್ಥಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದು, ಈ ಎಲ್ಲಾ ಆರೋಪಿಗಳು ಸಹಕರಿಸಿರುತ್ತಾರೆ ಅಲ್ಲದೇ ಈ ಸ್ಥಿರಾಸ್ತಿಯಲ್ಲಿ ಸದ್ರಿ ಸ್ಥಳವು ಪಿರ್ಯಾದಿದಾರರ ತಂದೆಯವರಿಗೆ ಸೇರಿದ್ದೆಂದು ಅಳವಡಿಸಿದ ಎರಡು ಸೂಚನಾ ಫಲಕಗಳನ್ನು ಆರೋಪಿಗಳು ನಾಶಪಡಿಸಿರುತ್ತಾರೆ.
No comments:
Post a Comment