ದಿನಾಂಕ 26.08.2014 ರ 17:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 4 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 2 |
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-08-2013 ರಂದು ಪಿರ್ಯಾದಿದಾರರಾದ ಶ್ರೀಮತಿ ಅನ್ಬಿಯಾ ಬಾನು ರವರು ನಬಿಯಲ್ ಅಮೀರ್ ಎಂಬವರನ್ನು ಕಲ್ಲಾಪಿನ ಯುನಿಟಿ ಹಾಲಿನಲ್ಲಿ ಮದುವೆಯಾಗಿದ್ದು, ಆ ಸಮಯ 50 ಪವನ್ ಚಿನ್ನ ಹಾಗೂ 5 ಲಕ್ಷ ಖರ್ಚು ಭರಿಸಿ, ಪಿರ್ಯಾದಿಯ ಮನೆಯವರು ಮದುವೆ ಮಾಡಿರುತ್ತಾರೆ. ಅಂದಿನಿಂದ ಆರೋಪಿ ನಬಿಯಲ್ ಅಮೀರ್ ಹಾಗೂ ಆರೋಪಿಯ ಮನೆಯವರೆಲ್ಲ ಸೇರಿ ಇನ್ನೂ ಹೆಚ್ಚಿನ 10 ಲಕ್ಷ ವರದಕ್ಷಿಣೆ ತರುವಂತೆ ಒತ್ತಾಯಿಸಿ ಪಿರ್ಯಾದಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ನಿನ್ನಂತಹ ಗರೀಬಳನ್ನು ಮದುವೆಯಾಗಲು ನನಗೆ ನಾಚಿಕೆ ಎಂದು ಮೂದಲಿಸಿ ಪಿರ್ಯಾದಿದಾರರನ್ನು ಆರೋಪಿಗಳ ಮನೆ ಕೆಲಸಕ್ಕೆ ಹಚ್ಚಿದ್ದು, ದಿನಾಂಕ 08-04-2014 ರಂದು 1 ನೇ ಆರೋಪಿ ನಬಿಯಲ್ ಅಮೀರ್ ನು ಪಿರ್ಯಾದಿಗೆ ಮಾರಣಾಂತಿಕವಾಗಿ ದೈಹಿಕ ಹಲ್ಲೆ ನಡೆಸಿ, ಆರೋಪಿಯ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅಲ್ಲದೇ ಪಿರ್ಯಾದಿಗೆ ಜೀವಬೆದರಿಕೆ ಒಡ್ಡಿರುತ್ತಾನೆ.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-08-2014 ರಂದು 13-00 ಗಂಟೆಗೆ ಬೆಂಗಳೂರಿನಿಂದ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಹೊರಟ ಪಿರ್ಯಾದಿದಾರರಾದ ಸಾವಿತ್ರಿ ರವರು ಪ್ರಯಾಣಿಸುತ್ತಾ ರಾತ್ರಿ ಸುಮಾರು 08-30 ಗಂಟೆಗೆ ಪುತ್ತೂರು ತಾಲೂಕಿನ ನೆಲ್ಯಾಡಿಗೆ ತಲುಪಿದಾಗ ಪಿರ್ಯಾದಿದಾರರ ಎಡ ಕೆನ್ನೆಯನ್ನು ಯಾರೋ ಹಿಂಬದಿಯಿಂದ ಸವರಿದಂತಾಗಿ ಇದರಿಂದ ಪಿರ್ಯಾದಿದಾರರು ಪ್ರಜ್ಞಾ ಶೂನ್ಯರಾಗಿದ್ದು ಉಪ್ಪಿನಂಗಡಿ ಬಳಿ ಎಚ್ಚರಗೊಂಡು ತನ್ನ ವ್ಯಾನಿಟಿ ಬ್ಯಾಗನ್ನು ನೋಡಿದಾಗ ವ್ಯಾನಿಟಿ ಬ್ಯಾಗ್ನಲ್ಲಿರಿಸಿದ ನಗದು ರೂಪಾಯಿ 1,20,000/- ಇಲ್ಲದೇ ಇದ್ದು ತನ್ನ ಕಿವಿಯಲ್ಲಿದ್ದ ಚಿನ್ನದ ಕಿವಿಯೋಲೆ ಸಹ ಇಲ್ಲದೇ ಇದ್ದು ಪುನ: ಪ್ರಜ್ಞಾಶೂನ್ಯಳಾದ ಪಿರ್ಯಾದಿದಾರಳು ಮಂಗಳೂರು ಬಸ್ಸ್ನಿಲ್ದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದಾಕೆಯನ್ನು ಆಕೆಯ ಸಂಬಂಧಿಕರು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಆಕೆಯು ಪ್ರಯಾಣಿಸಿದ ಬಸ್ಸಿನಲ್ಲಿ ಕುಳಿತ ಸೀಟಿನ ಹಿಂಬದಿ ಸೀಟಿನಲ್ಲಿ ಮೂರು ಮಂದಿ ಹಿಂದಿ ಮಾತಾನಾಡುವ ಸುಮಾರು 23 ರಿಂದ 24 ವರ್ಷ ಪ್ರಾಯದ ಹುಡುಗರು ಕುಳಿತಿದ್ದು ಅವರುಗಳೇ ಈ ರೀತಿ ಪಿರ್ಯಾದಿದಾರರಿಗೆ ಯಾವುದೋ ದ್ರಾವಣವನ್ನು ಮುಖಕ್ಕೆ ಒರಸಿ ಪ್ರಜ್ಞಾ ಶೂನ್ಯ ಗೊಳಿಸಿ ಪಿರ್ಯಾದಿದಾರರ ಬಾಬ್ತು ನಗದು ಹಾಗೂ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುತ್ತಾರೆ.
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-08-2014 ರಂದು ರಾತ್ರಿ 10-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ.ಎಸ್. ರಮೇಶ್ ರಾವ್ ರವರು ಹೆಂಡತಿಯೊಂದಿಗೆ ಬೆಂಗಳೂರಿಗೆ ಹೋಗಿದ್ದು ದಿನಾಂಕ 25-08-2014 ರಂದು ಬೆಳಿಗ್ಗೆ 05-30 ಗಂಟೆಗೆ ಮನೆಗೆ ಬಂದು ಕೀ ಬಳಸಿ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಮನೆಯು ಒಳಗಿನಿಂದ ಚಿಲಕ ಕಾಕಿದಂತೆ ಕಂಡುಬಂದಿದ್ದರಿಂದ ಹಿಂಬದಿಗೆ ಹೋಗಿ ನೋಡಿದಾಗ ಗ್ರಿಲ್ಸ್ ಬಾಗಿಲು ಹಾಗೂ ಹಿಂಬದಿಯ ಬಾಗಿಲು ತೆರೆದುಕೊಂಡಿದ್ದು ಅದರ ಪಕ್ಕದಲ್ಲಿದ್ದ ಟಾಯ್ಲೇಟಿನ ವೆಂಟಿಲೇಟರ್‌ನ ರಾಡ್ ಮುರಿದು ಕಳ್ಳರು ಒಳಪ್ರವೇಶಿಸಿರುವುದು ಕಂಡು ಬಂದಿದ್ದು ಮನೆಯ ಒಳಗೆ ನೋಡಿದಾಗ ಬೆಡ್ರೂಮಿಗೆ ಹಾಕಿದ್ದ ಬೀಗ ಕೂಡ ಮುರಿದು ಒಳಪ್ರವೇಶಿಸಿ ಕಬ್ಬಿಣದ ಕಪಾಟಿನ ಬಾಗಿಲನ್ನು ಯಾವುದೋ ಬಲವಾದ ಆಯುಧದಿಂದ ಮೀಟಿ ತೆರೆದು ಅದರ ಒಳಗೆ ಇದ್ದು ಚಿನ್ನದ ಆಭರಣ, ಬೆಳ್ಳಿಯ ವಸ್ತುಗಳು ಮತ್ತು ಹಳೆ ಚಿನ್ನದ ನಾಣ್ಯ ಕಳವಾಗಿರುವುದು ಕಂಡು ಬಂದಿರತ್ತದೆ. ಇನ್ನೊಂದು ಬೆಡ್ರೂಮಿಗೆ ಹೋಗಿ ನೋಡಿದಾಗ ಮರದ ಕಪಾಟು ತೆರೆದುಕೊಂಡಿದ್ದು ಅದರಲ್ಲಿದ್ದ ಲ್ಯಾಪ್‌ಟಾಪ್, ಟ್ಯಾಬ್ ಮತ್ತು ಡಿಜಿಟಲ್ ಕ್ಯಾಮೆರಾ ಕೂಡ ಕಳವಾಗಿರುವುದು ಕಂಡು ಬಂದಿರುತ್ತದೆ. ಇವುಗಳ ಅಂದಾಜು ಮೌಲ್ಯ ರೂ 3,21,000/- ಆಗಬಹುದು.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24.08.2014 ರಂದು ಸಮಯ ಸುಮಾರು ಸಂಜೆ 06.15 ಗಂಟೆಗೆ KA19-MD-1721 ನಂಬ್ರದ ಕಾರನ್ನು ಅದರ ಚಾಲಕ ಮಂಗಳಾದೇವಿ ಕಡೆಯಿಂಧ ಕಂಕನಾಡಿ ಕಡೆಗೆ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಂಗಳೂರು ನಗರದ ಜೆಪ್ಪು ಸಮಿನರಿ ಚರ್ಚ್ ಗೇಟ್ ಬಳಿ ಎದುರಿನಿಂದ ಫಿರ್ಯಾದುದಾರರಾದ ಶ್ರೀ ಅಲೋಶಿಯಸ್ ಕ್ರಾಸ್ತಾ ರವರು ಸವಾರಿ ಮಾಡುತ್ತಿದ್ದ ಸ್ಕೂಟರ್ ನಂಬ್ರ KA19-Y-4155 ಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ,ಫಿರ್ಯಾದುದಾರರ ಬಲಕೈ ಭುಜಕ್ಕೆ ಮೂಳೆ ಮುರಿತದ ಗಂಭೀರ ಗಾಯ ಹಾಗೂ ಬೆನ್ನಿಗೆ ಗುದ್ದಿದ ನೋವು ಉಂಟಾಗಿದ್ದು , ಗಾಯಾಳು ಮಂಗಳೂರು ಪಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ. ಅಪಘಾತದ ಬಳಿಕ ಆರೋಫಿಯು ಕಾರನ್ನು ಚಲಾಯಿಸಿಕೊಂಡು ಅಪಫಾತ ಸ್ಥಳದಿಂದ ಪರಾರಿಯಾಗಿರುತ್ತಾನೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12-08-2014 ರ 22-30 ಗಂಟೆಯಿಂದ 13-08-2014ರ ಬೆಳಿಗ್ಗೆ 06-30 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಅಶೋಕ ರವರು ವಾಚ್ ಮೆನ್ ಕೆಲಸ ಮಾಡಿಕೊಂಡಿರುವ ಮಂಗಳೂರು ನಗರದ ಪಿ.ವಿ.ಎಸ್ ಬಳಿ ಇರುವ ಮಹೇಂದ್ರ ಕೊಟಕ್ ಬ್ಯಾಂಕ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರ ಬಾಬ್ತು ಚಾಸೀಸ್ ನಂಬ್ರ: MD2A11CZ7DCK91824, ಇಂಜಿನ್ ನಂಬ್ರ: DHZCDK84574ರ KA 19 EG 9174ನೇ ನೋಂದಣಿ ಸಂಖ್ಯೆಯ 2013ನೇ ಮೊಡೆಲಿನ ಕಪ್ಪು ಬಣ್ಣದ ಅಂದಾಜು ಮೌಲ್ಯ ರೂ.45,000/- ಬೆಲೆ ಬಾಳುವ ಬಜಾಜ್ ಪಲ್ಸರ್ 150 ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ದ್ವಿ-ಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25-08-2014ರ 00-00 ಗಂಟೆಯಿಂದ ದಿನಾಂಕ: 26-08-2014ರ ಬೆಳಿಗ್ಗೆ 06-00 ಗಂಟೆಯ ಮಧ್ಯೆ, ಮಂಗಳೂರು ನಗರದ ಕುಲಶೇಖರ ಚರ್ಚ್ ಗೇಟ್ ಬಳಿಯಿರುವ ಪಿರ್ಯಾದಿದಾರರಾದ ಶ್ರೀ ಕಿರಣ್ ಜೆ. ಕ್ಯಾಸ್ಟಲಿನೋ ರವರ ಬಾಬ್ತು ಕಿರಣ್ ಎಂಟರ್ ಪ್ರೈಸಸ್ ಎಂಬ ಅಂಗಡಿಯ ಶಟರ್ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರದು ಆ ಮೂಲಕ ಒಳಪ್ರವೇಶಿಸಿ ಅಂಗಡಿಯ ಕ್ಯಾಶ್ ಡ್ರಾವರ್ ನಲ್ಲಿದ್ದ ನಗದು ಹಣ ಅಂದಾಜು 5,400/- ರೂ. ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18-08-2014ರಂದು ಸಮಯ ಸುಮಾರು 21-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರವಿಚಂದ್ರ ರವರು ತನ್ನ ಬಾಬ್ತು ಚಾಸೀಸ್ ನಂಬ್ರ: MD634KE4X72N47874, ಇಂಜಿನ್ ನಂಬ್ರ:OE4972048320ರ KA 19 X 2807ನೇ ನೊಂದಣಿ ಸಂಖ್ಯೆಯ 2007ನೇ ಮೊಡೆಲಿನ ಹಳದಿ ಬಣ್ಣದ TVS Apache ದ್ವಿ-ಚಕ್ರ ವಾಹನವನ್ನು ಕೀ ಸಮೇತ ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿರುವ ತಂದೂರು ಬಾರ್ ಅಂಡ್ ರೆಸ್ಟೋರೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟು ಊಟಕ್ಕೆ ತೆರಳಿದ್ದು, ಸಮಯ ಸುಮಾರು 22-00 ಗಂಟೆಗೆ ವಾಪಾಸು ಬಂದು ನೋಡಲಾಗಿ ಸದ್ರಿ ದ್ವಿ-ಚಕ್ರ ವಾಹನ ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಸದ್ರಿ ದ್ವಿ-ಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ದಿನಾಂಕ 26-08-2014 ರಂದು ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಸದ್ರಿ ಕಳವಾದ ದ್ವಿ-ಚಕ್ರ ವಾಹನದ ಅಂದಾಜು ಮೌಲ್ಯ ಸುಮಾರು 25,000/- ರೂ ಆಗಬಹುದು.
8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23.08.2014 ರಂದು ಸಂಜೆ ಸುಮಾರು 3.30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಡಾಲ್ಫಿ ಗೋವಿಯಸ್ ಎಂಬವರು ಮೂಡಬಿದ್ರೆ ಠಾಣಾ ಸರಹದ್ದಿನ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೊಳಪಟ್ಟ ಹೊಸಬೆಟ್ಟು ಗ್ರಾಮದ ಕರಿಂಗಾಣ ಮನೆ ಎಂಬಲ್ಲಿರುವ ತನ್ನ ವಾಸದ ಮನೆಯ ಗೋಡಾನ್ ಬಳಿಯಿರುವಾಗ , ಅರೋಪಿ ಪಿರ್ಯಾದುದಾರರ ಆಣ್ಣ ಶ್ರೀ ಸ್ಟಾನೀ ಎಂಬವರು ಕತ್ತಿಯ ವಿಚಾರದ ಬಗ್ಗೆ ತಕರಾರನ್ನು ಮಾಡಿ ವಿನಾ: ಕಾರಣ ಅವ್ಯಾಚ್ಚ ಶಬ್ದಗಳಿಂದ ಬೈದು ಅವಮಾನ ಪಡಿಸಿ ಕೈಯಿಂದ ಕೆನ್ನೆಗೆ ಥಳಿಸಿ, ಹೊಟ್ಟೆಗೆ ತುಳಿದು ಹಲ್ಲೆಯನ್ನು ಮಾಡಿರುತ್ತಾರೆ.
9.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25.08.2014 ರಂದು ಮೂಡಬಿದ್ರೆ ನಗರದ ನಿಶ್ಮಿತಾ ಟವರ್ಸ್ ಎಂಬ ಹೊಟೇಲ್‌ನ ಮೆಲೆ ತೆರೆದ ಟೆರೇಸ್ ಮೇಲೆ 18:25ಗಂಟೆ ಸಮಯಕ್ಕೆ ಇಸ್ವೀಟ್ ಕಾರ್ಡ್‌ಗಳ ಮುಖಾಂತರ ಹಣವನ್ನು ಪಣವಾಗಿಟ್ಟು ಉಳಾಯಿ ಪಿದಾಯಿ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದ ಆರೋಪಿಗಳಾದ ಮಂಜುನಾಥ್ ರೈ, ಮೋಹನ, ದಿಲಿಪ್, ಪುರುಷೋತ್ತಮ್, ಸೀತಾರಾಮ ಶೆಟ್ಟಿ, ಸೋಮನಾಥ ಪೂಜಾರಿ, ವಸಂತ ಎಂಬವರನ್ನು ಪತ್ತೆ ಮಾಡಿ ದಾಳಿ ನಡೆಸಿ . ಜುಗಾರಿ ಆಟ ಆಡುತ್ತಿದ್ದ 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರು ಆಟಕ್ಕ ಉಪಯೋಗಿಸಿದ 52 ಇಸ್ಪೀಟ್ ಎಲೆ, 4700/ ನಗದು, ಹಾಗೂ 2 ಪಾಲೀಥೀನ್ ಚೀಲಗಳನ್ನು ಪಂಚನಾಮೆಯ ಮುಖಾಂತರ ಸ್ವಾದೀನಪಡಿಕೊಂಡಿರುವುದಾಗಿದೆ.
10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-08-2014 ರಂದು ರಾತ್ರಿ 10:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮುಕಬುಲ್ ಅಹಮ್ಮದ್ ರವರು ತನ್ನ ಬಾಭ್ತು ಟಿವಿಎಸ್ ವಿಕ್ಟರ್ ಮೋಟಾರ್ ಸೈಕಲ್ ನಂಬ್ರ ಕೆಎ-19-ಕ್ಯೂ-5595 ನೇಯದ್ದನ್ನು ಪ್ರಸ್ತುತ ತಾನು ವಾಸ ಮಾಡುವ ಮಂಗಳೂರು ಬಂದರು ಅಜೀಜುದ್ದೀನ್ 6 ನೇ ಅಡ್ಡ ರಸ್ತೆಯ ಬಾವಾ ಮಂಜಿಲ್ ಕಟ್ಟಡದ ಕೆಳಗೆ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಬೀಗ ಹಾಕಿ ಪಾರ್ಕ್ ಮಾಡಿದ್ದು, ದಿನಾಂಕ 21-08-2014 ರಂದು ಕೆಲಸಕ್ಕೆ ಹೋಗುವರೇ ಬೆಳಿಗ್ಗೆ 07:00 ಗಂಟೆಗೆ ಬಂದು ನೋಡಿದಾಗ ಮೋಟಾರ್ ಸೈಕಲ್ ಸ್ಥಳದಲ್ಲಿ ಇರದೇ ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಪತ್ತೆಯಾಗದೇ ಇದ್ದು, ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಟಿವಿಎಸ್ ವಿಕ್ಟರ್ ಮೋಟಾರ್ ಸೈಕಲ್ ನಂಬ್ರ ಕೆಎ-19-ಕ್ಯೂ-5595 ನೇದರ ಚಾಸೀಸ್ ನಂಬ್ರ N3207F15894, ಇಂಜಿನ್ ನಂಬ್ರ N320TR159553, ಕೆಂಪು ಬಣ್ಣ, ಅಂದಾಜು ಬೆಲೆ ಸುಮಾರು ರೂ. 20,000/- ಆಗಬಹುದು.
11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿತರಾದ 1) ಜೀವರಾಜ್ ಪುರಾಣಿಕ, ಅನ್ನಪೂರ್ಣ ನಿವಾಸ, ಸುತ್ತಾನಬತ್ತೇರಿ, 2) ರೊಶನ್ ಕೊಡಿಕಲ್, 3) ವೇಣುಗೋಪಾಲ ಇವರುಗಳು ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಯುಟುಲಿಟಿ ರೋಯಲ್ ಟವರ್ಸ್ ನ 2 ನೇ ಮಹಡಿಯಲ್ಲಿ ವೃಕ್ಷ ಬಿಸನೆಸ್ ಸೆಲ್ಯೂಶನ್(ಇಂಡಿಯಾ) ಲಿಮಿಟೆಡ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಈ ಸಂಸ್ಥೆಯಲ್ಲಿ ಆರೋಪಿಗಳಾದ 1) ಜೀವರಾಜ್ ಪುರಾಣಿಕ, 2) ರೊಶನ್ ಕೊಡಿಕಲ್, 3) ವೇಣುಗೋಪಾಲ ಎಂಬ ಏಜೆಂಟರುಗಳು ಪಿರ್ಯಾದಿದಾರರಾದ ಶ್ರೀಮತಿ ಪ್ರಮೋದಿನಿ ಜಿ. ಶೆಟ್ಟಿ ಹಗೂ ಇತರೇ ಜನರಿಂದ ಹಣವನ್ನು ಪಡೆದು ಉತ್ತಮ ಲಾಭಾಂಶ ನೀಡುವುದಾಗಿ ಭರವಸೆಯನ್ನು ನೀಡಿದ್ದು, ಸುಮಾರು ತಿಂಗಳಿನಿಂದ ಹಣವನ್ನು ಮರುಪಾವತಿಸದೇ, ಲಾಭಾಂಶವನ್ನು ನೀಡದೇ, ಸುಮಾರು ರೂಪಾಯಿ 8 ಲಕ್ಷಕ್ಕಿಂತಲೂ ಹೆಚ್ಚು ಪಿರ್ಯಾದಿದಾರರಿಗೆ ಮತ್ತು ಇತರೇ ಗ್ರಾಹಕರಿಗೆ ನಂಬಿಕೆ ದ್ರೋಹ ಹಾಗೂ ವಂಚನೆಯನ್ನು ಮಾಡಿರುತ್ತಾರೆ.
12.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-08-2014 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅನಿಲ್ ಸಾಲ್ಯಾನ್ ರವರು ಅವರ ಊರಿನವರಾದ ಮನೋಜ್ ಸುವರ್ಣ, ಆನಂದ ಕೋಟ್ಯಾನ್, ತೇಜಪಾಲ್ ಸುವರ್ಣ, ವೆಂಕಟೇಶ ಸುವರ್ಣ, ರಿತೇಶ್ ಸಾಲ್ಯಾನ್, ಚಂದ್ರ ಪೂಜಾರಿ, ಮಧುಕರ ಬಂಗೇರರವರ ಜೊತೆ ಮೀನು ಹಿಡಿಯಲು ಮನೋಜ್ ಸುವರ್ಣ ರವರ ಸದಾಶಿವ ರುದ್ರ ಎಂಬ ಹೆಸರಿನ ಸಾಂಪ್ರದಾಯಿಕ ದೋಣಿಯಲ್ಲಿ ಸಸಿಹಿತ್ಲು ಅಳಿವೆ ಬಾಗಿಲಿನಿಂದ ಹೋಗಿ ಸಂಜೆ ಸುಮಾರು 4-00 ಗಂಟೆಗೆ ಸಸಿಹಿತ್ಲುವಿನ ಅಳಿವೆ ಬಾಗಿಲಿನ ಕಡೆಗೆ ವಾಪಾಸು ಬರುತ್ತಿರುವಾಗ ಸುಮಾರು 300 ಮೀಟರ್ ದೂರದ ಕಡಲಿನಲ್ಲಿ ಗಾಳಿ ಮಳೆಯ ಹೊಡೆತಕ್ಕೆ ಪಿರ್ಯಾದಿದಾರರು ಇದ್ದ ದೋಣಿ ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರು ಮತ್ತು ಇತರರು ದೋಣಿ ಸಮೇತ ನೀರು ಪಾಲಾಗಿದ್ದು ಮಧುಕರ ಬಂಗೇರ(39) ಮತ್ತು ತೇಜಪಾಲ್ ಸುವರ್ಣ(28) ರವರನ್ನು ಹೊರತು ಪಡಿಸಿ ಉಳಿದವರೆಲ್ಲರೂ ಬೇರೆ ದೋಣಿಯವರ ಸಹಾಯದೊಂದಿಗೆ ದಡಕ್ಕೆ ಬಂದಿದ್ದು ಮಧುಕರ ಬಂಗೇರ ಹಾಗೂ ತೇಜಪಾಲ್ ಸುವರ್ಣ ರವರು ಸುಮದ್ರದ ದಡಕ್ಕೆ ಬಾರದೇ ಕಾಣೆಯಾಗಿರುತ್ತಾರೆ.
13.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಹಿತೇಶ್ ಯು. ದಿನಕರ ರವರು ಅವರ ಬಾಬ್ತು ಯಮಹಾ FG ಮೋಟಾರು ಸೈಕಲ್ ನಂಬ್ರ KA 19 EA 4440 ನೇದನ್ನು ದಿನಾಂಕ 09-08-2014 ರಂದು ಸಂಜೆ 6-30 ಗಂಟೆಗೆ ಸುರತ್ಕಲ್ ನ ಎನ್.ಐ.ಟಿ.ಕೆ ಬಸ್ಸು ತಂಗುದಾಣದ ಬಳಿ ನಿಲ್ಲಿಸಿ ಮಂಗಳೂರಿಗೆ ತೆರಳಿ ವಾಪಾಸು ದಿನಾಂಕ 10-08-2014 ರಂದು ಬೆಳಿಗ್ಗೆ 10-00 ಗಂಟೆಗೆ ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲು ಮೋಟಾರು ಸೈಕಲ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು ಈ ಬಗ್ಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು ಸದ್ರಿ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಸದ್ರಿ ಮೋಟಾರು ಸೈಕಲಿನ ಅಂದಾಜು ಈಗಿನ ಬೆಲೆ 45000/- ರೂ ಆಗಿರುವುದಾಗಿದೆ.
14.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಾಸು ರವರ ತಾಯಿ ಶ್ರೀಮತಿ ಲಕ್ಷ್ಮೀ 75, ವರ್ಷ ಎಂಬವರು ದಿನಾಂಕ 21-08-2014 ರಂದು 15-00 ಗಂಟೆ ಸಮಯಕ್ಕೆ ಶಿಬರೂರು, ದೇಲಂತ ಬೆಟ್ಟವಿನಲ್ಲಿರುವ ಅವರ ಮನೆಯಿಂದ ಯಾರಲ್ಲೂ ಹೇಳದೇ ಹೊರಟು ಹೋಗಿದ್ದು ಈ ತನಕ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುವುದಾಗಿದೆ. ಚಹರೆಃ ಮೈಕಟ್ಟುಃ ದಪ್ಪ ಶರೀರ, ಉರುಟು ಮುಖ, ಬಿಳಿ ಮಿಶ್ರಿತ ಕಪ್ಪು ತಲೆ ಕೂದಲು, ಬಣ್ಣಃ ಗೋದಿ ಮೈಬಣ್ಣ, ಎತ್ತರಃ 5 ಅಡಿ 4, ಇಂಚು ಎತ್ತರ, ಭಾಷೆಃ ತುಳು ಬಾಷೆ, ಗುರುತುಃ ಎಡ ಕಾಲಿನಲ್ಲಿ ಗಾಯ ಇರುತ್ತದೆ. ಬಟ್ಟೆಃ ಹಸಿರು ಸೀರೆ , ಬಿಳಿ ರವಿಕೆ ಧರಿಸಿರುತ್ತಾರೆ.
15.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-08-2014 ರಂದು ಬೆಳಿಗ್ಗೆ 9-45 ಆರೋಪಿ ಚಂದ್ರಹಾಸ ಪ್ರಾಯ: 55 ತಂದೆ: ದಿ. ಫಕೀರ ಬೆಳ್ಚಾಡ್ ವಾಸ: ಕಲ್ಪನಾ ಹೌಸ್, ತಲಪಾಡಿ ಅಂಚೆ ಗ್ರಾಮ, ಮಂಗಳೂರು ತಾಲೂಕು ಈತನು ಮಂಗಳೂರು ತಾಲೂಕು ತಲಪಾಡಿ ಬಸ್‌ಸ್ಟಾಪ್ ಬಳಿ ಮಟ್ಕಾ ದಂಧೆ ನಡೆಸುತ್ತಿದ್ದವನ್ನು ಪೊಲೀಸ್ ನಿರೀಕ್ಷಕರು ವಿಶೇಷ ಪೊಲೀಸ್ ಠಾಣೆ ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳ ಮಂಗಳೂರು ಇವರು ಸಿಬ್ಬಂದಿಯವರ ಜೊತೆಗೆ ಸದ್ರಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡು ಬಂದು ಠಾಣೆಗೆ ಹಾಜರು ಪಡಿಸಿರುವುದಾಗಿದೆ.
16.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:25.08.2014 ರಂದು ಸಂಜೆ ಸುಮಾರು 6.30 ಗಂಟೆಗೆ ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ. 75 ರಲ್ಲಿ KA-19-F-2461 ನೇ KSRTC ಬಸ್ಸನ್ನು ಅದರ ಚಾಲಕ ನೀಲಪ್ಪ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೋಡೆಕಲ್ ರೈಸ್ ಮಿಲ್ ಎದುರು ರಸ್ತೆ ಬದಿಯಲ್ಲಿ ಪಡೀಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಗಂಗಾಧರ ಎಂಬುವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಯ ಎಡಬಾಗಕ್ಕೆ ರಭಸವಾಗಿ ಬಿದ್ದು ಅವರ ತಲೆಗೆ ತೀವ್ರ ಗಾಯವಾಗಿ ಅಲ್ಲದೇ ಕೈ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ.
No comments:
Post a Comment