ದೈನಂದಿನ ಅಪರಾದ ವರದಿ.
ದಿನಾಂಕ 01.08.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಫಾತಿಮಾತುಲ್ಲಾ ಥಶ್ರೀಯಾ ರವರು ಆರೋಪಿ ಅಬ್ದುಲ್ ರೆಹಮಾನ್ ಜಾವಿದ್ ಎಂಬುವರೊಂದಿಗೆ ದಿನಾಂಕ 05-01-2013 ರಂದು ಮಂಗಳೂರಿನ ಯುನಿಟಿ ಹಾಲ್ ನಲ್ಲಿ ಮದುವೆಯಾಗಿದ್ದು, ಆ ಸಮಯ ಪಿರ್ಯಾದಿದಾರರ ಮನೆಯಿಂದ 20 ಪವನ್ ಚಿನ್ನ ಹಾಕಿರುತ್ತಾರೆ. ಮದುವೆಯ ಬಳಿಕ ಗಂಡನ ಮನೆಯಲ್ಲಿ ವಾಸವಾಗಿದ್ದಾಗ ಆರೋಪಿಯು ಇದ್ದ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ಮಾರಿರುತ್ತಾರೆ. ಒಂದು ತಿಂಗಳ ನಂತರ ಆರೋಪಿಯು ದಿನಾಲೂ ರಾತ್ರಿ ಕುಡಿದು ಬಂದು ಬೆಲ್ಟ್ ಹಾಗೂ ಸಿಕ್ಕಿದ ವಸ್ತುಗಳಿಂದ ಪಿರ್ಯಾದಿದಾರರಿಗೆ ಹೊಡೆಯುತ್ತಿದ್ದರು. ದಿನಾಂಕ : 27-07-2014 ರಂದು ಬೆಳಿಗ್ಗೆ 10.30 ಗಂಟೆಗೆ ಆರೋಪಿಯು ಅವರ ತಾಯಿಯ ತಂಗಿಯ ಮನೆಗೆ ಕರೆದುಕೊಂಡು ಹೋಗಿ, ಪಿರ್ಯಾದಿದಾರರ ಕಾಲಿನಲ್ಲಿದ್ದ ಗೆಜ್ಜೆಯನ್ನು ಕೊಡುವಂತೆ ಕೇಳಿದ್ದು, ಪಿರ್ಯಾದಿದಾರರು ಕೊಡಲು ನಿರಾಕರಿಸಿದಾಗ ಆರೋಪಿ ಹೆಲ್ಮೆಟ್ ನಿಂದ ಪಿರ್ಯಾದಿದಾರರಿಗೆ ತಲೆಗೆ ಹೊಡೆದು, ಚಿನ್ನದ ಗೆಜ್ಜೆಯನ್ನು ತೆಗದುಕೊಂಡು ಹೋಗಿದ್ದು, ನಿನ್ನನ್ನು 24 ಗಂಟೆಯೊಳಗೆ ಹೊಡೆದು ಸಾಯಿಸುತ್ತೆನೆಂದು ಬೆದರಿಕೆ ಹಾಕಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿದೆ.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಎಂ. ಬಾಲಕೃಷ್ಣ ಪೈ ರವರ ಮಗಳು ಸುಷ್ಮಾ ನಾಯಕ ಎಂಬಾಕೆ ಎಪ್ರಿಲ್ 2014 ರಿಂದ 28-07-2014ರ ತನಕ ಅಂತರ್ಜಾಲದ ಮುಖಾಂತರ ಜೇರಿ ಪ್ರಾಂಕ್ಲಿನ ಎಂಬಾತನ ಜೋತೆ ಸಂಭಾಷಿಸುತಿದ್ದು ವಿಧವೆಯಾದ ಆಕೆಯನ್ನು ವಿವಾಹವಾಗುವುದಾಗಿ ವಾಗ್ದಾನ ಮಾಡಿ ತಾನು ಓರ್ವ ಪ್ರಮುಖ ವ್ಯಾಪಾರಸ್ಥ ಲಂಡನ್ ಹಾಗೂ ಯು,ಎಸ್ .ಎ ದಲ್ಲಿ ತಾನು ಹೋಟೆಲ್ ನಡೆಸುತ್ತಿರುವುದಾಗಿ ಆಕೆಯನ್ನು ನಂಬಿಸಿ ಈ ಬಗ್ಗೆ ತಾನು ವಿಧೇಶದಿಂದ ಭಾರತಕ್ಕೆ ಬಂದು ಆಕೆಯ ತಂದೆ - ತಾಯಿ ಯವರೊಡನೆ ಮಾತನಾಡುವುದಾಗಿಯೂ, ಆರ್ಥೀಕ ಸಹಾಯವನ್ನು ನೀಡುವುದಾಗಿಯೂ ನಂಬಿಸಿ ಆಕೆಯಿಂದ ಬೇರೆ ಬೇರೆ ಕಾರಣಗಳನ್ನು ನೀಡಿ ಮೇ 14 2014 ರಿಂದ 28-07-2014 ರ ತನಕ ಹಂತ ಹಂತ ವಾಗಿ ಬೇರೆ ಬೇರೆ ಬ್ಯಾಂಕ ಖಾತೆಗಳ ಮುಖಾಂತರ ಒಟ್ಟು ರೂ 10,50,600/-ಗಳನ್ನು ಸ್ವೀಕರಿಸಿಕೊಂಡು ಮೊಸ ಮಾಡಿರುವುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-07-2014 ರಂದು ಮಂಗಳೂರು ನಗರದ ಕದ್ರಿ ಸ್ಮಶಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ -ಬಾಹರ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಪಿರ್ಯಾದಿದಾರರಾದ ಮಂಗಳೂರು ಪೂರ್ವ ಪೊಲೀಸ್ ಠಾಣಾ ಪಿಎಸ್ಐ ರವಿಶಂಕರ್ ರವರಿಗೆ ದೊರೆತ ಖಚಿತ ಮಾಹಿತಿಯಂತೆ ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಪಿಎಸ್ ಐ ಹಾಗೂ ಸಿಬ್ಬಂದಿಗಳು ಮದ್ಯಾಹ್ನ 12-50 ಗಂಟೆಗೆ ಕದ್ರಿ ಸ್ಮಶಾನದ ಬಳಿ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್- ಬಾಹರ್ ಜುಗಾರಿ ಆಟ ಆಡುತ್ತಿದ್ದ (1) ಪುಷ್ಪರಾಜ್ (2) ವೆಂಕಟೇಶ್ (3) ನಾಗೇಶ್ ಮತ್ತು (4) ರಾಜು ಎಂಬವರುಗಳನ್ನು ವಶಕ್ಕೆ ತೆಗೆದುಕೊಂಡು ಆಟಕ್ಕೆ ಉಪಯೋಗಿಸಿದ ಪ್ಲ್ಯಾಸ್ಟಿಕ್ ಶೀಟ್-1, ಆಟಿನ್, ಡೈಮಂಡ್, ಕ್ಲವರ್, ಇಸ್ಪೀಟ್ ಎಲೆಗಳು- ಒಟ್ಟು 44, ಜುಗಾರಿ ಆಟಕ್ಕೆ ಪಣವಾಗಿಟ್ಟ ರೂ. 4,270/- ನ್ನು ಸ್ವಾಧೀನಪಡಿಸಿಕೊಂಡು ಸದರಿ ಆರೋಪಿಗಳ ಮೇಲೆ ಕ್ರಮ ಕೈಗೊಂಡಿರುವುದಾಗಿದೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-07-2014 ರ ರಾತ್ರಿ 21-30 ಗಂಟೆಯಿಂದ ದಿನಾಂಕ: 27-07-2014ರ ಬೆಳಿಗ್ಗೆ 10-00 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕುಲಶೇಖರ ಚರ್ಚ್ ಗೇಟ್ ಬಳಿ ಇರುವ ಪಿರ್ಯಾದಿದಾರರಾದ ಶ್ರೀ ಯೋಗೀಶ್ ರವರ ಬಾಬ್ತು ಶ್ರೀ ಸಾಯಿ ಮೊಬೈಲ್ಸ್ ಎಂಬ ಮೊಬೈಲ್ ರಿಪೇರಿ ಅಂಗಡಿಯ ಶಟರ್ ಡೋರಿಗೆ ಹಾಕಿದ ಬೀಗಗಳನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಆ ಮೂಲಕ ಒಳಪ್ರವೇಶಿಸಿ ಅಂಗಡಿಯಲ್ಲಿ ರಿಪೇರಿಗೆಂದು ಬಂದಿದ್ದ Samsung ಕಂಪನಿಯ G3850ನೇ ಮೊಡೆಲಿನ IMEI. No. 353139057549221ದ ಅಂದಾಜು ಮೌಲ್ಯ 9,000/- ರೂ ಬೆಲೆ ಬಾಳುವ ಮೊಬೈಲ್ ಫೋನ್-1, ಹಾಗೂ ಸುಮಾರು 14,900/- ರೂ. ಬೆಲೆ ಬಾಳುವ Samsung ಕಂಪನಿಯ Tab-1ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ 23,900/- ರೂ ಆಗಬಹುದು.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಹುಸೈನಬ್ಬಾ ರವರಿಗೆ ಅವರ ಹೆಂಡತಿ ಹಾಗೂ ಅವರ ಅಳಿಯ (ಮಗಳ ಗಂಡ) ರವರು ಪ್ರತಿ ದಿನ ಮನೆ ಬಿಟ್ಟು ತೆರಳುವಂತೆ ಕಿರುಕುಳ ನೀಡುತ್ತಿದ್ದು ದಿನಾಂಕ 30-07-2014 ರಂದು ರಾತ್ರಿ 11-30 ಗಂಟೆಗೆ ಅಳಿಯ ಝಾಕಿರನು ಪಿರ್ಯದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಮರದ ಸೋಂಟೆಯಿಂದ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹೋಗದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುವುದರಿಂದ ಪಿರ್ಯಾದಿಯು ಅವರ ಅಣ್ಣ ಅಬ್ದುಲ್ ಖಾದರ್ರವರ ಮನೆಗೆ ತೆರಳಿ ಅಲ್ಲಿ ಉಳಕೊಂಡು ದಿನಾಂಕ 31-07-2014 ರಂದು ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಅವರಿಗಿರುವ ನೋವಿನ ಬಗ್ಗೆ ಚಿಕಿತ್ಸೆ ಪಡೆದಿರುವುದಾಗಿದೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-07-2014 ರಂದು ಫಿರ್ಯಾದುದಾರರಾದ ಶ್ರೀ ಜಯಂತ್ ರವರು ತನ್ನ ಬಾಬ್ತು ಕೆಎ 19 ಇಕೆ 8021 ನೇ ದ್ವಿಚಕ್ರ ವಾಹನದಲ್ಲಿ ಬಿ ಸಿ ರೋಡ್ ನಿಂದ ತನ್ನ ಮನೆಯಾದ ಅಂಬ್ಲಮೊಗರುಗೆ ಪಂಪ್ವೆಲ್ ನಿಂದಾಗಿ ಪೆರ್ಮನ್ನೂರು ಗ್ರಾಮದ ಪಂಡಿತ್ಹೌಸ್ ತಲುಪುವಾಗ ಹಿಂದಿನಿಂದ ಕೆಎ 19 ಡಿ 4841 ನೇ ಬಸ್ ಚಾಲಕನು ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಫಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಬಲಕಾಲಿನ ಪಾದ ಹಾಗೂ ಗಂಟೆಗೆ ರಕ್ತಗಾಯ ಹಾಗೂ ಸೊಂಟಕ್ಕೆ ಗುದ್ದಿದ ಗಾಯ ಉಂಟಾಗಿರುತ್ತದೆ. ಈ ಘಟನೆ ನಡೆಯುವಾಗ ಸಂಜೆ 5 ಗಂಟೆ ಆಗಿರಬಹುದು. ಈ ಅಪಘಾತಕ್ಕೆ ಬಸ್ ಚಾಲಕನ ಅತೀವೇಗ ಅಜಾಗರೂಕತೆಯೆ ಕಾರಣವಾಗಿರುತ್ತದೆ.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-07-2014 ರಂದು ಫಿರ್ಯಾದಿದಾರರಾದ ಶ್ರೀ ನವಾಜ್ ರವರು ತಮ್ಮ ಮಿತ್ರ ಜಾಫರ್ ಸಾಧಿಕ್ನ ನೊಂದಣಿಯಾಗದ ಹೊಸ ಮೋಟಾರ್ ಸೈಕಲ್ನಲ್ಲಿ ಮಿತ್ರ ಅಹಮ್ಮದ್ ಜಾವಿದ್ನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕುಂಪಲಕ್ಕೆ ಹೋಗಿ ವಾಪಾಸು ರಾತ್ರಿ 7-45 ಗಂಟೆ ವೇಳೆಗೆ ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್‌ನಲ್ಲಿರುವ ಮಸೀದಿ ಬಳಿ ತಲುಪುವಾಗ ಮಂಗಳೂರು ಕಡೆಯಿಂದ ಒಬ್ಬ ಕಾರು ಚಾಲಕನು ತನ್ನು ಬಾಬ್ತು ಕಾರು KL 13 S TEMP 9626 ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಫಿರ್ಯಾದಿದಾರರ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಫಿರ್ಯಾದಿದಾರರಿಗೆ ಮೂಗಿಗೆ, ಬಲಕಾಲಿನ ಕೋಲುಕಾಲಿಗೆ ರಕ್ತಗಾಯ ಹಾಗೂ ಬೆನ್ನಿಗೆ, ಕೈಗೆ ತರಚಿದ ಗಾಯ ಉಂಟಾಗಿರುತ್ತದೆ. ಅಲ್ಲದೆ ಸಹಸವಾರನಿಗೆ ಬಲಕಾಲು ಮುರಿತ ಹಾಗೂ ಬೆರಳಿಗೆ ರಕ್ತಗಾಯವಾಗಿರುತ್ತದೆ. ಈ ಅಪಘಾತಕ್ಕೆ MARUTI ERTIGA ಕಾರು ಚಾಲಕನ ಅತೀವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷತನವೆ ಕಾರಣವಾಗಿರುತ್ತದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅಹಮ್ಮದ್ ಮುಸ್ತಾಫಾ ರವರು ಕೆಎಲ್ 14 ಎಲ್ 5086 ನೇ ರಿಟ್ಜ್ ಕಾರಿನಲ್ಲಿ ಮಿತ್ರರಾದ ಮೊಹಮ್ಮದ್ ಇಕ್ಬಾಲ್ ಮತ್ತು ಮಹಮ್ಮದ್ ಶಾಕೀರ್ನೊಂದಿಗೆ ಮಂಗಳೂರಿಗೆ ಬಂದು ವಾಪಾಸು ಕಾಸರಗೋಡಿನ ಶೆರಿಯಾಕ್ಕೆ ಹೋಗುತ್ತಿರುವಾಗ ರಾಹೆ 66 ರ ತೊಕ್ಕೋಟು ತಲುಪುವಾಗ ಕಾರಿನ ಡೀಸೆಲ್ ಮುಗಿದು ರಸ್ತೆಯ ಬದಿಯಲ್ಲಿ ನಿಂತಿದ್ದ ಸಮಯ HR 54 AW 4740 ನೆ ಡಸ್ಟರ್ ಸಿಲ್ವರ್ ಕಲರ್ನ ಕಾರು ಫಿರ್ಯಾದಿದಾರರ ಕಾರ್ನ ಎದುರು ನಿಲ್ಲಿಸಿ ಅದರಿಂದ ಇಳಿದ ಇಬ್ಬರು ಫಿರ್ಯಾದಿದಾರರ ಕಾರ್ನ ಎಡಬಲಬದಿಯಲ್ಲಿ ನಿಂತು ಪಿಸ್ತೂಲ್ ಹಾಗೂ ತಲವಾರ್ ತೋರಿಸಿ ಹಿಂದಿ ಭಾಷೆಯಲ್ಲಿ " ಹಮ್ ಲೋಗ್ ಆತಂಕವಾದಿ ಸಬ್ ನಿಕಾಲ್ ದೇದೊ, ಮೊಬೈಲ್, ಪೈಸಾ ದೇದೊ ಸೀದಾ ದೇಗಾ ತೊ ಸೀದಾ ಚೋಡತಾ ಹೂಃ" ಎಂದು ಹೇಳಿ ಅವರ ಕೈಯಲ್ಲಿದ್ದ 10,970 ರೂಪಾಯಿ ಹಾಗೂ ಎರಡು ಸ್ಯಾಮಸಂಗ್ ಕಂಪೆನಿಯ ಮೊಬೈಲ್ನ್ನು ಎಳೆದುಕೊಂಡು ಹೋಗಿರುತ್ತಾರೆ. ಈ ಘಟನೆ ನಡೆಯುವಾಗ ರಾತ್ರಿ 11-45 ಗಂಟೆ ಆಗಬಹುದು.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಾಬು ರವರ ಬಾವನ ಮಗನಾದ ಪರಶುರಾಮ(37) ಎಂಬವನು ಸುಮಾರು 1 ತಿಂಗಳಿನಿಂದ ಮರೋಳಿ ಗ್ರಾಮದ ಬಜ್ಜೋಡಿ ಜಯನಗರ ಎಂಬಲ್ಲಿ N J ಬಿಲ್ಡರ್ಸ್ ಎಂಬವರು ನಿರ್ಮಿಸುತ್ತಿರುವ ಕಟ್ಟಡದ ಕೆಲಸದ ಬಗ್ಗೆ ಹೋಗುತ್ತಿದ್ದು ದಿನಾಂಕ: 30.07.2014 ರಂದು ಸಂಜೆ 5.30 ಗಂಟೆಗೆ ಆತನು ಕೆಲಸ ಮಾಡುತ್ತಿದ್ದ N J ಬಿಲ್ಡರ್ಸ್ ನವರು ನಿರ್ಮಿಸುತ್ತಿರುವ ಕಟ್ಟಡದ 5 ನೇ ಮಹಡಿಯಲ್ಲಿ ಗೋಡೆ ಕಟ್ಟುತ್ತಿರುವಾಗ ಆಯತಪ್ಪಿ ಕೆಳಗಡೆ 2 ಮಹಡಿಯ ನೆಲಕ್ಕೆ ಬಿದ್ದು ಉಂಟಾದ ತೀವ್ರಗಾಯದಿಂದ ಆಸ್ಪತ್ರೆಗೆ ಹೋಗವ ಧಾರಿ ಮಧ್ಯೆ ಮೃತಪಟ್ಟಿರುದಾಗಿಯೂ ಸದ್ರಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವ N J ಬಿಲ್ಡರ್ಸ್ನ ಮಾಲಕರು ಮತ್ತು ಈ ಕಟ್ಟಡದ ಸುಪರ್ವೈಸರ್ ಆಗಿ ಕೆಲಸ ಮಾಡುತ್ತಿರುವ ನಾಗರಾಜ್ ಎಂಬವರು ಯಾವುದೇ ಮುಂಜಾಗ್ರತೆ ವಹಿಸದೆ ಕೆಲಸಗಾರರಿಂದ ಕೆಲಸ ಮಾಡಿಸಿ ಯಾವುದೇ ಸುರಕ್ಷಾ ಕ್ರಮವನ್ನು ಅಳವಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಈ ಅವಘಡ ಸಂಬಂವಿಸಿ ಪರಶುರಾಮನು ಮೃತಪಟ್ಟದ್ದಾಗಿರುತ್ತದೆ.
No comments:
Post a Comment