Saturday, August 16, 2014

Daily Crime Reports 16-08-2014

ದೈನಂದಿನ ಅಪರಾದ ವರದಿ.

ದಿನಾಂಕ 16.08.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಕ್ಯಾಸ್ಟಲಿನೋ ಇವೆಟ್ ರವರ ಗಂಡ ಜೆಫ್ರಿ ಕ್ಯಾಸ್ಟಲಿನ್ ಎಂಬವರು ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಅಲ್ಲದೆ ಯಾವುದೇ ಖರ್ಚು ವೆಚ್ಚವನ್ನು ನೋಡದ ಕಾರಣ ಪಿರ್ಯಾದಿದಾರರು ಮಾನ್ಯ ನ್ಯಾಯಾಲಯದಲ್ಲಿ ದಾವೇ ಹೂಡಿದಂತೆ ಮಾಸಿಕ ಪರಿಹಾರ ರೂಪಾಯಿ 10,000/- ನೀಡುವಂತೆ ಹಾಗೂ ಪಿರ್ಯಾದುದಾರರಿಗೆ ಯಾವುದೇ ತೊಂದರೆ ನೀಡದಂತೆ ಮಾನ್ಯ  ನ್ಯಾಯಾಲವು ಆದೇಶಿದ್ದು ಆದರೆ ಜೇಫ್ರಿಯವರು ಇದನ್ನು ಪಾಲಿಸದೇ ಇದ್ದ ಕಾರಣ ಮಾನ್ಯ ನ್ಯಾಯಾಲಯವು ಎಫ್.ಎಲ್. ಡಬ್ಲ್ಯೂ ಆದೇಶ ಮಾಡಿದ ವಿಷಯದಲ್ಲಿ ಸಿಟ್ಟು ಗೊಂಡ ಆರೋಪಿತರು ದಿನಾಂಕ-14-08-2014 ರಂದು ರಾತ್ರಿ 10-30 ರಿಂದ 11-30 ಮದ್ಯೆ ಪಿರ್ಯಾದುದಾರರನ್ನು ಹಾಗೂ ಅವರ ಮಗನನ್ನು ಬಾತ್ ರೂಂ ಒಳಗೆ ಕೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರಿಗೆ ಹೊಡೆದ ಪರಿಣಾಮ ಪಿರ್ಯಾದುದಾರರ ಕಾಲಿಗೆ ರಕ್ತ ಗಾಯವಾಗಿದ್ದು ಅಲ್ಲದೆ ಮುಂದಕ್ಕೆ ಮನೆಗೆ ಬಂದರೆ ಕೊಂದು ಹಾಕುತ್ತೇನೆ ಬೆದರಿಕೆ ಒಡ್ಡಿರುವುದಾಗಿದೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-08-2014ರಂದು ಸಂಜೆ 6: 45 ಗಂಟೆ ಸಮಯ ಪಿರ್ಯಾದಿದಾರರಾದ ಶ್ರೀ ನವೀನ್ ಕುಮಾರ್ ರವರು ದೇವನಂದನೊಂದಿಗೆ ಮುಕ್ಕ ಚೆಕ್ ಪೊಸ್ಟ್ ಬಳಿ ಮಾತನಾಡಿ ಮನೆಯ ಕಡೆಗೆ ಹೋಗಲು ಪಿರ್ಯಾಧಿಯು ರಾ ಹೆ 66 ರನ್ನು ದಾಟಿ ಪಶ್ಚಿಮದ ಬದಿಗೆ ತಲುಪಿದ್ದು ದೇವಾನಂದನು ರಸ್ತೆ ವಿಭಾಜಕ ದಾಟಿ, ರಸ್ತೆ ದಾಟಲು ನಿಂತಿರುವಾಗ ಕಾರ್ ನಂಬ್ರ ಕೆ 01 ಎಮ್ ಬಿ 633 ನ್ನುಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ  ಅದರ  ಚಾಲಕ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ನಿರ್ಲಕ್ಷತನದಿಂದ ಚಲಾಯಿಸಿ ದೇವಾನಂದನಿಗೆ ಡಿಕ್ಕಿ ಹೊಡೆದ ಪರಿಣಾಮ ಹಣೆಗೆ, ತಲೆಗೆ, ಮುಖಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡಿಯುತ್ತಿರುವುದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 014/08/2014 ರಂದು ರಾತ್ರಿ ಸುಮಾರು 9:30 ಗಂಟೆಗೆ ಮಂಗಳೂರು ನಗರದ ಕೆ.ಪಿ.ಟಿ. ಜಂಕ್ಷನ್ ಬಳಿ ಪಿರ್ಯಾದಿದಾರರಾದ ಶ್ರೀ ಉಮೇಶ್ ಪೂಜಾರಿ ರವರು ರಸ್ತೆ ದಾಟುತ್ತಿದ್ದಾಗ ಒಂದು ಕಾರನ್ನು ಅದರ ಚಾಲಕ ಕೆ.ಪಿ.ಟಿ. ಕಡೆಯಿಂದ ನಂತೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಆರೋಪಿಯು ಪರಾರಿಯಾಗಿದ್ದು, ಅಪಘಾತದಿಂದಾಗ ಪಿರ್ಯಾದಿದಾರರ ಹೊಟ್ಟೆಯ ಕೆಳಗೆ ಬಲಬದಿಯಲ್ಲಿ ಚರ್ಮ ಹರಿದ ರಕ್ತಗಾಯ ಹಾಗೂ ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾನೆ.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-08-2014 ರಂದು ಪಿರ್ಯಾದಿದಾರರಾದ ಸಿಸಿಲಿ ಪೀಟರ್ ರವರು ಮಧ್ಯಾಹ್ನ 2-30 ಗಂಟೆಗೆ ತನ್ನ ಬಾಡಿಗೆ ಮನೆಯಾದ ಮಂಗಳೂರು ತಾಲೂಕಿನ ಬಜಪೆ ಗ್ರಾಮದ ಇಮಾಮ್ ಪ್ಲಾಟ್ ನಲ್ಲಿ ಇರುವ ಸಮಯ ರ್ಯಾದಿದಾರರ ತಂದೆ 92 ವರ್ಷದ ಪ್ರಾಯದ ಪಿ.ಎಮ್.ಪತ್ರೋಸ್ ರವರು ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಅವರನ್ನು ದಿನಾಂಕ 15-08-2014 ರವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-08-2014 ರಂದು ಫಿರ್ಯಾದಿದಾರರಾದ ಶ್ರೀ ಹೇಮಂತ್ ರವರು ತಾನು ಕೆಲಸ ಮಾಡಿಕೊಂಡಿದ್ದ ಉಳ್ಳಾಲ ಪೇಟೆಯ ಆರ್‌‌ ಕೆ ಮೊಬೈಲ್ಶಾಪ್ನಿಂದ ಮನೆ ಕಡೆಗೆ ರಾತ್ರಿ ಸುಮಾರು 10-00 ಗಂಟೆಗೆ ಉಳ್ಳಾಲ ಪ್ಯಾರೀಸ್ಜಂಕ್ಷನ್‌‌‌ನಿಂದ ಮೊಗವೀರ್‌‌ ಪಟ್ನ ಕಡೆಗೆ ಹೋಗುವ ರಸ್ತೆ ಬದಿಯಿಂದ ನಡೆದುಕೊಂಡು ಹೋಗುವಾಗ್ಗೆ ಕಾಂತಪ್ಪ ರವರ ಕ್ಯಾಂಟೀನ್‌‌ ಬಳಿ ತಲುಪಿದಾಗ ಇಬ್ಬರು ಮೋಟಾರ್‌‌ ಸೈಕಲ್‌‌ನಲ್ಲಿ ಬಂದು ಫಿರ್ಯಾದಿಯನ್ನು ತಡೆದು ನಿಲ್ಲಸಿ ಅವರ ಪೈಕಿ ಒಬ್ಬಾತ ತನ್ನಲ್ಲಿದ್ದ ಚೂರಿಯಿಂದ ಫಿರ್ಯಾದಿಯ ಹೊಟ್ಟೆಯ ಎಡ ಅಲ್ಲೆಗೆ ತಿವಿದಾಗ ನೋವಿನಿಂದ ಬೊಬ್ಬೆ ಹಾಕುತ್ತಿದ್ದಂತೆ ಬಂದ ವ್ಯಕ್ತಿಗಳು ಮೋಟಾರ್ಸೈಕಲ್‌‌ನಲ್ಲಿಯೇ ಪರಾರಿಯಾಗಿ ಹೋಗುತ್ತಾ ಬದುಕಿದರೂ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದು, ಗಾಯಾಳು ಫಿರ್ಯಾದುದಾರರನ್ನು ಅಲ್ಲಿದ್ದವರು ರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ತೊಕ್ಖೋಟು ನೇತಾಜಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾ// ಮುಲ್ಲರ್‌‌ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-08-2014 ರಂದು ಪಿರ್ಯಾದುದಾರರಾದ ಶ್ರೀಮತಿ ಹೇಮಲತಾ ಯು. ಪ್ರಾಯ 63 ವರ್ಷ ರವರು ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಭಗವತೀ ದೇವಸ್ಥಾನದ ಹತ್ತಿರವಿರುವ ತನ್ನ ಪ್ರೋವಿಷನ್ಸ್ಟೋರ್ನಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಸಂಜೆ 5-15 ಗಂಟೆ ಸಮಯಕ್ಕೆ ಪರಿಚಯದ ಆರೋಪಿತ ಉಮ್ಮರ್ ನವಾಫ್ಮತ್ತು ಇನ್ನೊಬ್ಬ ಅಲ್ಲಿಗೆ ಬಂದಿದ್ದು, ಪೈಕಿ ಉಮ್ಮರ್ನವಾಫ್ರೂಪಾಯಿ ರೂ 1,000/- ಹಣವನ್ನು ಕೋಡುವಂತೆ ಪಿರ್ಯಾದಿಯಲ್ಲಿ ಕೇಳಿದಾಗ ತನ್ನ ಹಣವಿಲ್ಲವೆಂದು ಪಿರ್ಯಾದುದಾರರು ತಿಳಿಸಿರುತ್ತಾರೆ. ಕೂಡಲೇ ಉಮ್ಮರ್ನವಾಫ್ಆತನ ಬೆನ್ನಿನಲ್ಲಿ ಶರ್ಟ್ನೊಳಗೆ ಇದ್ದ ಕತ್ತಿಯನ್ನು ತೆಗೆದು  ಅಂಗಡಿಯ ಮೇಜಿಗೆ ಎರಡು ಬಾರಿ ಹೊಡೆದನು. ನಂತರ ಆತ ಅಂಗಡಿಯ ಒಳಗಡೆ ನುಗ್ಗಿ ಬಂದು ಆತನಲ್ಲಿದ್ದ ಕತ್ತಿಯನ್ನು ಪಿರ್ಯಾದಿಯ ಮುಖದ ಬಳಿಗೆ ಹಿಡಿದು ಹೆದರಿಸಿ ಭಯವನ್ನುಂಟು ಮಾಡಿ ಅಲುಗಾಡದಂತೆ ಹೇಳಿ ಅಂಗಡಿಯ ಕ್ಯಾಷ್ಡ್ರಾವರ್ಎಳೆದನು. ಅದರಲ್ಲಿದ್ದ ಹಣವನ್ನು ಪಿರ್ಯಾದುದಾರರು ನೋಡುತ್ತಿದ್ದಂತೆಯೇ ಕೈ ಹಾಕಿ ಬಲತ್ಕಾರವಾಗಿ ತೆಗೆದುಕೊಂಡು ಅಲ್ಲಿಂದ ಓಡಿ  ಪರಾರಿಯಾಗಿರುತ್ತಾರೆ. ಬಳಿಕ ಪಿರ್ಯಾದುದಾರರು ನೋಡಿದಾಗ ಒಟ್ಟು ರೂ 5,000/- ದಷ್ಟು ನಗದು ಹಣವನ್ನು ಆರೋಪಿಗಳು ಬಲತ್ಕಾರವಾಗಿ ತೆಗೆದುಕೊಂಡು ಹೋಗಿರುತ್ತಾರೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ರಾಜೇಶ್ ರವರು ಆಟೋಚಾಲಕರಾಗಿದ್ದು ದಿನಾಂಕ 15-08-2014 ರಂದು ರಾತ್ರಿ ಸುಮಾರು 11-00 ಗಂಟೆಗೆ ಪ್ರಯಾಣಿಕರ ಕೋರಿಕೆಯ ಮೇರೆಗೆ ಯೆನೆಪೋಯ ಆಸ್ಪತ್ರೆಯಿಂದ ತೊಕ್ಕೋಟು ನೇತಾಜಿ ಆಸ್ಪತ್ರೆ ಬಳಿಯಿರುವ ಮಾಯಾ ಬಾರ್ಆಂಡ್‌‌ ರೆಸ್ಟೊರೆಂಟ್ಗೆ ಪ್ರಯಾಣಿಕರನ್ನು ಕರೆತಂದ ಸಮಯ ಪರಿಚಯದ ಉದಯ್‌‌, ವಿನಯ್‌‌‌, ರಾಬಿನ್ಮತ್ತು ಪುಷ್ಪರಾಜ್ಎಂಬುವವರು ಫಿರ್ಯಾದಿದಾರರ ಪರಿಚಯದ ಆಟೋ ಚಾಲಕ ಯತೀಶ್ಜೊತೆ ಮಾತುಕತೆ ನಡೆಸುತ್ತಿದ್ದದ್ದನ್ನು ನೋಢಿ ರಿಕ್ಷಾದಿಂದ ಕೆಳಗಿಳಿದು ಅವರ ಬಳಿ ಹೋಗುತ್ತಿದ್ದಂತೆ ಉದಯ್‌‌‌ ಎಂಬಾತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಯತೀಶ್‌‌ ಹೊಟ್ಟೆಯ ಎಡಭಾಗಕ್ಕೆ 3-4 ಬಾರಿ ತಿವಿದು ಕೊಲೆ ಮಾಡುತ್ತಿದ್ದನ್ನು ಕಂಡ ಫಿರ್ಯಾದುದಾರರನ್ನು ನೋಡಿದ ಉದಯ್‌‌, ಪುಷ್ಪರಾಜ್‌‌, ವಿನಯ್ಹಾಗೂ ರಾಬಿನ್‌‌ ಓಡಿ ಹೋಗಿದ್ದು ಕೂಡಲೇ ಫಿರ್ಯಾದಿದಾರರು ತಮ್ಮ ಪರಿಚಯದ ನಿತೇಶ್‌‌ ಹಾಗೂ ಕಿಶೋರ್ಜೊತೆಗೂಡಿ ಯತೀಶ್ನನ್ನು ಚಿಕಿತ್ಸಗಾಗಿ ಹತ್ತಿರದ ನೇತಾಜಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಾಗ ಮಂಗಳೂರಿನ ಯೂನಿಟಿ ಆಸ್ಪತ್ರೆಗೆ ಕೊಂಡು ಹೋಗಿದ್ದು ಅಲ್ಲಿನ ವೈಧ್ಯರು ಪರೀಕ್ಷಿಸಿ ಯತೀಶ್‌‌ನು ಮೃತ ಪಟ್ಟಿರುವುದಾಗಿ ತಿಳಿಸಿದ್ದು  ಕೊಲೆಗೆ ಕಾರಣವೇನೆಂದರೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ತೊಕ್ಕೋಟು ಮಾಯಾ ಬಾರ್ಆಂಢ್‌‌ ರೆಸ್ಟೊರೆಂಟ್‌‌ ನಲ್ಲಿ ಯತೀಶ್‌‌ನು ತನ್ನ ಸ್ನೇಹಿತರಾದ ಕೈಲಾಸ್‌‌ಬಾಬು, ಜೀವನ್‌‌, ಶ್ರೀಜಿತ್ಮತ್ತು ಕಿಶೋರ್‌‌ ರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಅವರ ಪಕ್ಕದ ಟೇಬಲ್‌‌ನಲ್ಲಿದ್ದ ಐದಾರು ಜನ ಯತೀಶ್‌‌ ಜೊತೆ ಕುಳಿತಿದ್ದ ಕೈಲಾಸ್‌‌ಬಾಬು ರವರು ಹಾಡು ಹಾಡುತ್ತಿದ್ದನ್ನು ತಮಾಷೆ ಮಾಡಿದ್ದರಿಂದ ಹಾಗೂ ಯತೀಶ್ ಬಗ್ಗೆ ಆಕ್ಷೇಪಿಸಿದ್ದರಿಂದ ಎದುರು ಟೇಬಲ್‌‌ನಲ್ಲಿದ್ದ ವ್ಯಕ್ತಿ ಘಟನೆ ಬಗ್ಗೆ ಕೋಪಗೊಂಡು ಯತೀಶ್ಹಾಗೂ ಆತನ ಸ್ನೇಹಿತರು ಕೆಳಗೆ ಇಳಿದು ಬರುವುದನ್ನು ಕಂಡು ಉದಯ್ಬಗಂಬಿಲ ಎಂಬುವವರಿಗೆ ದೂರವಾಣಿ ಕರೆ ಮಾಡಿ ಕೃತ್ಯ ನಡೆಸಲು ಪ್ರೆರೆಪಿಸಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ರವೀಂದ್ರ ಮುನ್ನಿಪಾಡಿ ರವರು ಶ್ರೀ ವೀರನಾರಾಯಣ ದೇವಸ್ಥಾನದ ಕಾರ್ಯದರ್ಶಿಯಾಗಿದ್ದು ದಿನಾಂಕ: 14.08.2014 ರಂದು ಎಂದಿನಂತೆ ಸದ್ರಿ ದೇವಸ್ಥಾನದ ಅರ್ಚಕರು ರಾತ್ರಿಯ ಪೂಜೆ ಮುಗಿಸಿ ಎಲ್ಲಾ ಬೀಗಗಳನ್ನು ಹಾಕಿ ಮನೆಗೆ ಹೋಗಿದ್ದು ದಿನಾಂಕ: 15.08.2014 ರಂದು ಬೆಳಿಗ್ಗೆ 5.45 ಗಂಟೆಗೆ ದೇವಸ್ಥಾನದಲ್ಲೆ ಬಂದು ಎಂದಿನಂತೆ  ಹಿಂದಿನ ಬಾಗಿಲನ್ನು ತೆಗೆಯಲು  ಹೋದಾಗ ಬಾಗಿಲಿಗೆ ಹಾಕಿರುವ  ಮುಖ್ಯ ಬೀಗವನ್ನು  ಹೊಡೆದು ಹಾಕಿದ್ದು ಅದೇ ರೀತಿ ಅದೇ ಬಾಗಿಲಿಗೆ ಹಾಕಿದ್ದ ಶೇಟರ್‌‌ ಬಾಗಿಲು ಹೊಡೆದು ಯಾರೋ ಕಳ್ಳರು ದೇವಸ್ಥಾನದ ಒಳಗೆ ಪ್ರವೇಶಿಸಿ ದೇವರ ಮುಂಭಾಗದಲ್ಲಿರುವ  ದೊಡ್ಡ ಕಾಣಿಕೆ ಡಬ್ಬಿಯನ್ನು  ಹೊಡೆದು  ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು ರೂ 1500 ರಿಂದ ರೂ 2000 ರವರೆಗೆ ಕಾಣಿಕೆ ಹಣವನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ.

No comments:

Post a Comment