Saturday, August 30, 2014

Daily Crime Reports 30-08-2014

ದೈನಂದಿನ ಅಪರಾದ ವರದಿ.

ದಿನಾಂಕ 30.08.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0.

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-08-2014 ರಂದು ಪಿರ್ಯಾದಿದಾರರಾದ ಶ್ರೀ ಪ್ರಸನ್ನ ರವರು ಅವರ ಮೋಟಾರು ಸೈಕಲ್ನಂಬ್ರ ಕೆ.-19-.-2651ನೇದರಲ್ಲಿ ಸಣ್ಣ ಮಗುವನ್ನು ಕೈಯಲ್ಲಿ ಹಿಡಿದುಕೊಂಡ ಹೆಂಡತಿ ಶ್ರೀಮತಿ ಪವಿತ್ರ ಮಲ್ಯರವರನ್ನು ಹಿಂದುಗಡೆ ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಬೊಕ್ಕಪಟ್ಣದಲ್ಲಿರಿಸಿದ ಗಣಪತಿ ಉತ್ಸವಕ್ಕೆ ಹೋಗುತ್ತಾ, ಸಮಯ ರಾತ್ರಿ 7:30 ಗಂಟೆಗೆ ಮಠದಕಣಿಯಲ್ಲಿರುವ ಸಿಂಡಿಕೇಟ್ಬ್ಯಾಂಕ್ನಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ, ಅವರ ಎದುರುಗಡೆಯಿಂದ ಕಾರು ನಂಬ್ರ ಕೆ.-19-ಎಂ.-426 ನೇದನ್ನು  ಅದರ ಚಾಲಕ ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಭುಜಕ್ಕೆ ಗುದ್ದಿದ ನೋವು ಹಾಗೂ ಅವರ ಹೆಂಡತಿಯ ಬಲಕಾಲಿಗೆ ತರಚಿದ ಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ  ನಗರದ ಉಳ್ಳಾಲ ನರ್ಸಿಂಗ್ಹೋಂಗೆ ದಾಖಲಾಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ವೆಲೆನ್ಸಿಯಾ .ಸಿ..ಸಿ. ಬ್ಯಾಂಕ್ ಎದುರು ದಿನಾಂಕ: 28-08-2014 ರಂದು ಸುಮಾರು 19-15 ಗಂಟೆ ಸಮಯಕ್ಕೆ ಕೆಎ-19-ಬಿ-2893 ನಂಬ್ರದ ಬಸ್ಸನ್ನು ಅದರ ಚಾಲಕ ರಂಜಿತ್ ಕುಮಾರ್ ಎಂಬಾತನು ವೆಲೆನ್ಸಿಯಾ ಕಡೆಯಿಂದ ಕಂಕನಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಪಿರ್ಯಾದುದಾರರಾದ ಶ್ರೀ ಹಂಝಾ ಎಂ.ಪಿ. ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ-19-ಎಂ.ಸಿ-1222 ನಂಬ್ರದ ಕಾರಿಗೆ ಹಿಂದಿನಿಂದ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರ ಕಾರಿನ ಹಿಂಬದಿಗೆ ಜಖಂ ಆಗಿರುದಲ್ಲದೇ ಕಾರು ಮುಂದಕ್ಕೆ ಚಲಿಸಿ ಎದುರಿನಿಂದ ಹೋಗುತ್ತಿದ್ದ ಇನ್ನೊಂದಿಗೆ ಕಾರಿನ ಹಿಂಬದಿಗೆ ಢಿಕ್ಕಿಯಾದ ಪರಿಣಾಮ ಪಿರ್ಯಾದುದಾರರ ಕಾರಿನ ಮುಂಭಾಗ ಕೂಡ ಜಖಂ ಆಗಿರುತ್ತದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-08-2014 ರಂದು ಸುಮಾರು 12-30 ಗಂಟೆಗೆ ಮಂಗಳೂರು ನಗರದ ಜ್ಯೋತಿ ಸರ್ಕಲ್ ಬಳಿ ತನಷ್ಕ್ ಜ್ಯುವೆಲ್ಲರ್ಸ್ ಎದುರು ಸಾರ್ವಜನಿಕ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ  ಕೆಎಲ್-58 ಡಿ-3358 ನಂಬ್ರದ ಯಮಹಾ ಎಫ್‌.ಝಡ್ ಮೋಟಾರು ಸೈಕಲ್ ನ್ನು ಆರೋಪಿಯು ಜ್ಯೋತಿ ಸರ್ಕಲ್ ಕಡೆಯಿಂದ ಹಂಪನಕಟ್ಟಾ ಕಡೆಗೆ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಬದಿಯಲ್ಲಿ ಪಿರ್ಯಾದುದಾರರಾದ ಶ್ರೀ ಎರಿಕ್ ಪಲನ್ನ ರವರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಸೆಬಾಸ್ಟಿಯನ್ (59) ಎಂಬವರಿಗೆ ಢಿಕ್ಕಿ ಪಡಿಸಿದ ಪರಿಣಾಮ ಸೆಬಾಸ್ಟಿಯನ್ ರವರು ಕಾಂಕ್ರೀಟ್ ರಸ್ತೆಯ ಬದಿಯ ಇಂಟರ್ಲಾಕ್ ರಸ್ತೆಗೆ ಬಿದ್ದು, ತಲೆಗೆ ಮತ್ತು ಬಲಕಾಲಿನ ತೊಡೆಗೆ ಗುದ್ದಿದ ತೀವ್ರ ಸ್ವರೂಪದ ಗಾಯವಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲ್ಪಟ್ಟು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಅಥೆನಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-08-2014 ರಂದು ರಾತ್ರಿ 11-15 ಗಂಟೆಗೆ ಫಿರ್ಯಾದುದಾರರಾದ ಶ್ರೀ ಅನಿಲ್.ಎನ್. ರವರ ಮನೆಯ ಅಂಗಳಕ್ಕೆ ಅವರ ಪರಿಚಯದ ಅಜೇಶ್ ಎಂಬಾತನು ಅಕ್ರಮ ಪ್ರವೇಶ ಮಾಡಿ ಫಿರ್ಯಾಧುದಾರರ ಅಣ್ಣನಾದ ಅನೂಪ್ ನನ್ನು ಹೊರಗೆ ಬರುವಂತೆ ಹೇಳಿದಾಗ ಫಿರ್ಯಾಧುದಾರರು ಮತ್ತು ಅವರ ಅತ್ತಿಗೆ ಶ್ರೀಮತಿ ಲಾವಣ್ಯ ರವರು ಮನೆಯಿಂದ ಹೊರಗಡೆ ಬಂದಿದ್ದು, ಆಗ ಅಜೇಶನು ಅವರಲ್ಲಿ ಮಿಥುನ್ ನನ್ನು ಹೊರಗೆ ಕಳುಹಿಸುವಂತೆ ಹೇಳಿದ್ದು, ಅದಕ್ಕೆ ಫಿರ್ಯಾಧುದಾರರು "ಯಾಕೆ ಕಳುಹಿಸಬೇಕು ಈಗ ಕಳುಹಿಸುವುದಿಲ್ಲ, ಏನಿದ್ದರೂ ನಾಳೆ ನೋಡುವ, ನೀನು ಮನೆಗೆ ಹೋಗು" ಎಂದು ತಿಳಿಸಿದ್ದು, ಅದಕ್ಕೆ ಅಜೇಶನು ತನ್ನಲ್ಲಿದ್ದ ಚೂರಿಯನ್ನು ತೋರಿಸಿ ಮಿಥುನ್ ನನ್ನು ಕೊಂದು ಹಾಕುತ್ತೇನೆ ಎಂದು ಬೆದರಿಸಿ, ಫಿರ್ಯಾಧುದಾರರಿಗೆ ಹಾಗೂ ಅವರ ಅತ್ತಿಗೆ ಲಾವಣ್ಯ ರವರಿಗೆ ಚೂರಿ ತೋರಿಸಿ ಹಲ್ಲೆ ಮಾಡಲು ಮುಂದಾಗಿದ್ದು, ಅವರು ಹೆದರಿ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಆರೋಪಿ ಅಜೇಶನು ಫಿರ್ಯಾಧುದಾರರ ಸ್ನೇಹಿತ ಮಿಥುನ್ ಮತ್ತು ಫಿರ್ಯಾಧುದಾರರ ಮನೆಯವರನ್ನು ಕೊಲ್ಲುವ ಉದ್ದೇಶದಿಂದಲೇ ಚೂರಿಯನ್ನು ಹಿಡಿದುಕೊಂಡು ಬಂದು ಕೃತ್ಯ ಎಸಗಿದ್ದಾಗಿದೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-08-2014 ರಂದು ಬೆಳಿಗ್ಗೆ ಪಿರ್ಯಾದುದಾರರಾದ ಶ್ರೀ ಕಿಶಲ್ಶೆಟ್ಟಿ ಎಂಬವರು ತನ್ನ ಬಾಬ್ತು ಕಾರು ನಂಬ್ರ ಕೆಎ-03-ಎಮ್ಟಿ-6005 ನೇಯದರಲ್ಲಿ ತನ್ನ ಗೆಳೆಯ ಶ್ರೀ ಅಬಿತ್ಬಿ ಶೆಟ್ಟಿ ಎಂಬವರ ಜೊತೆಯಲ್ಲಿ ಕಾರ್ಕಳದಿಂದ  ಬಂಟ್ವಾಳ ಕಡೆಗೆ ಪಿರ್ಯಾದಿದಾರರು ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಮಾನ್ಯ ನ್ಯಾಯಾಲಯದ ಅಧಿಕಾರವ್ಯಾಪ್ತಿಗೊಳಪಟ್ಟ ಮೂಡಬಿದ್ರೆ ಪೊಲೀಸ್ಠಾಣಾ ಸರಹದ್ದಿನ ತಾಕೋಡೆ ಗ್ರಾಮದ ಚರ್ಚ್ಸಮೀಪ ತಿರುವಿನಲ್ಲಿಗೆ  ಬೆಳಿಗ್ಗೆ ಸುಮಾರು 7-30 ಗಂಟೆಯ ಸಮಯಕ್ಕೆ ತಲುಪುವಾಗ್ಯೆ ತನ್ನ ಮುಂದುಗಡೆ ಬಂಟ್ವಾಳ ಕಡೆಯಿಂದ ಕೆಎ-.19-ಎಮ್ಬಿ-2294 ನೇಯದ್ದನ್ನು ಅದರ ಚಾಲಕ ಶ್ರೀ ಕೃಷ್ಣಪ್ಪ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಸಿಕೊಂಡು ರಸ್ತೆಯ ತೀರಾ ವಿರುದ್ದ ದಿಕ್ಕಿಗೆ ಬಂದು ಪಿರ್ಯಾದಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತನ್ನುಂಟುಮಾಡಿದ  ಪರಿಣಾಮ ಎರಡೂ ವಾಹನಗಳು ಜಖಂಗೊಂಡಿರುವುದಲ್ಲದೇ ಆಪಾದಿತ ಚಾಲಕರಿಗೆ ತಲೆಗೆ ಸಣ್ಣ ಗಾಯವಾಗಿರುವುದಾಗಿದೆ.

 

6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ನಂದಿನಿ ಎಸ್.ಜಿ. ರವರನ್ನು ಅವರ ಗಂಡ ಶ್ರೀನಿವಾಸ .ಟಿ ರವರು  ಹಿಂದೂ ಸಂಪ್ರದಾಯದಂತೆ ಗುರು ಹಿರಿಯರ ಸಮಕ್ಷಮ ದಿನಾಂಕ 01-08-2012ರಂದು ಕೊಪ್ಪ ತಾಲೂಕು ಹರಿಹರಪುರ ಶ್ರೀ ಮಲ್ಲೇಶಯ್ಯ ನವರ ಛತ್ರದಲ್ಲಿ ವಿವಾಹ ಆಗಿದ್ದು  ನಂತರ ಮೂರು ತಿಂಗಳು ಅಲ್ಲಿಯೇ ಅವರ ಮನೆಯಲ್ಲಿ ಪಿರ್ಯಾದಿಯನ್ನು ನಿಲ್ಲಿಸಿ, ಆರೋಪಿ ಮಂಗಳೂರು ಕಡೆಗೆ ಬಂದಿದ್ದು ತದ ನಂತರ ಪಿರ್ಯಾದಿಯನ್ನು ಕೂಡಾ ಮಂಗಳೂರಿಗೆ ಕರೆತಂದು ಚಿತ್ರಾಪುರದಲ್ಲಿ ಬಾಡಿಗೆ ರೂಂ  ಮಾಡಿ ಅಲ್ಲಿ ಪಿರ್ಯಾದಿಯೊಬ್ಬಳನ್ನೇ ಬಿಟ್ಟು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಐಸ್ ಕ್ರೀಂ ವ್ಯಾಪಾರದಲ್ಲಿ ತಲ್ಲೀನರಾಗಿರುವುದಾಗಿಯೂ ಅಲ್ಲಿಯೇ ರಾತ್ರಿ ಸಮಯ ಮಲಗುವುದಗಿಯೂ ಸುಳ್ಳು ಹೇಳಿಕೊಂಡು ತಿಂಗಳಿಗೆ  ಬಂದು- ಎರಡು ಬಾರಿ ಬಂದು 10-15 ನಿಮಿಷ ವಿದ್ದು ಹೊರಟು ಹೋಗುತ್ತಿದ್ದು ತದ ನಂತರ ಬರುವುದನ್ನೇ ನಿಲ್ಲಿಸಿ ಕಳೆದ 1 ವರ್ಷ 9 ತಿಂಗಳಿನಿಂದ ಸದ್ರಿ ಚಿತ್ರಾಪುರ ರೂಮಿನಲ್ಲಿ ಕೂಡಿ ಹಾಕಿ ಖರ್ಚಿಗೆ ಹಣ ಯಾ ತಿನ್ನಲು ಆಹಾರವನ್ನು ಕೂಡಾ ನೀಡದೇ ಇದ್ದು, ಇತ್ತೀಚೆಗೆ ಆರೋಪಿಯು ರಾತ್ರಿ ಸಮಯ ರೂಮಿಗೆ ಬಂದು "ನೀನು ಬೇರೆ ಮದುವೆ ಆಗು  ಅಥವಾ ನನಗೆ  ವಿಚ್ಚೇದನ ನೀಡು ಎಂದು ಮಾನಸಿಕ  ಹಿಂಸೆ ನೀಡುತ್ತಿದ್ದುದಲ್ಲದೇ ದಿನಾಂಕ 24-08-2014 ರಂದು ರಾತ್ರಿ 9-30 ಸಮಯಕ್ಕೆ  ಬಂದು "ನೀನು ಆತ್ಮಹತ್ಯೆ ಮಾಡಿಕೊಳ್ಳು ನಿನ್ನನ್ನು ಮದುವೆ ಆಗುವ ಮುಂಚೆ ನಾನು ಬೇರೆ ಮದುವೆ ಆಗಿ ಸಂಸಾರ ಮಾಡಿಕೊಂಡಿರುವುದಾಗಿಯೂ ಅಲ್ಲದೇ ಮಕ್ಕಳು ಕೂಡಾ ಇರುವುದಾಗಿಯೂ ತಿಳಿಸಿರುವುದಲ್ಲದೇ  ಇನ್ನೂ 2 ಲಕ್ಷ ರೂ ಹೆಚ್ಚುವರಿಯಾಗಿ  ವರದಕ್ಷಿಣೆ ಹಣ ನೀಡಿದರೆ ಪಿರ್ಯಾದಿಯನ್ನು ಹೆಂಡತಿಯನ್ನಾಗಿ ಸಾಕುವುದಾಗಿ, ಇಲ್ಲದಿದ್ದರೆ ಇದೇ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿದೆ.

 

7.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.08.2014 ರಂದು ಪಿರ್ಯಾದಿದಾರರಾದ ಶ್ರೀಮತಿ ಮಮತಾ ರವರು ತನ್ನ ಮಕ್ಕಳಾದ ಪ್ರಜ್ಞಾ (5 ವರ್ಷ) ಮತ್ತು ಯಜ್ಞಾ(2 ವರ್ಷ) ರವರೊಂದಿಗೆ ತವರು ಮನೆಗೆ ಹೋಗುವರೇ ಸಂಜೆ ಸುಮಾರು 5 ಗಂಟೆ ವೇಳೆಗೆ  ಕಣ್ಣೂರು ನವದುರ್ಗಾ ಗ್ಯಾರೇಜ್‌‌‌ ಬಳಿಯಿರುವ  ಗಣಪತಿ ಮಂಟಪದ ಎದುರುಗಡೆ ಮಂಗಳೂರು ಕಡೆಯಿಂದ ಬಿ,ಸಿ ರೋಡ್‌‌ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ರಸ್ತೆ ದಾಟಲೆಂದು ನಿಂತಿದ್ದಾಗ ಮಂಗಳೂರು ಕಡೆಯಿಂದ ಬಿ.ಸಿ ರೋಡ್‌‌ ಕಡೆಗೆ ಕೆಎ-21-ಆರ್‌‌-1281 ನೇ ಮೋಟಾರ್‌‌ ಸೈಕಲನ್ನು ಅದರ ಸವಾರ ಸಂತೋಷ್‌‌  ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ಬೈಕಿನ ಮೇಲಿನ ಹತೋಟಿಯನ್ನು ಕಳೆದುಕೊಂಡು  ಪಿರ್ಯಾಧಿದಾರರ ಪಕ್ಕದಲ್ಲಿ ರಸ್ತೆ ದಾಟುವರೇ ನಿಂತಿದ್ದ ಪಿರ್ಯಾಧಿದಾರರ ಮಗಳು ಪ್ರಜ್ಞಾಳಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಜ್ಞಾಳು ರಸ್ತೆಗೆ ಬಿದ್ದು  ಆಕೆಯ ತುಟಿಗೆ, ತಲೆಗೆ ಗಾಯವಾಗಿರುತ್ತದೆ.

No comments:

Post a Comment