ದೈನಂದಿನ ಅಪರಾದ ವರದಿ.
ದಿನಾಂಕ 12.08.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-08-2014 ರಂದು ಆರೋಪಿ ಕೆ.ಎ 19.ಬಿ.3977ನೇ ಕಾರು ಚಾಲಕ ಲಕ್ಷ್ಮೀಶ ಎಂಬವರು ಅವರ ಬಾಬ್ತು ಸದ್ರಿ ಕಾರನ್ನು ಮೂಲ್ಕಿ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ 66 ರಲ್ಲಿ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬೆಳಿಗ್ಗೆ 07-00 ಗಂಟೆ ಸಮಯಕ್ಕೆ ಮೂಲ್ಕಿ ಕೊಲ್ನಾಡ್ ಬಸ್ಸು ತಂಗುದಾಣದ ಬಳಿ ನಿಂತು ಕೊಂಡಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಮಾಡಿ ತೀರ್ವ ತರಹದ ಗಾಯವುಂಟುಮಾಡಿದ್ದು ಗಾಯಗೊಂಡ ವ್ಯಕ್ತಿ ಪ್ರಜ್ಞೆ ತಪ್ಪುವ ಹಂತದಲ್ಲಿ ಆತನ ಹೆಸರು ಅಸ್ಪಷ್ಟವಾಗಿ ಪಾಡುರಂಗ ಎಂಬುದಾಗಿ ತಿಳಿಸಿದ್ದು, ಆತನ ಹೆಸರು ಬೇರೆ ಇರುವ ಸಾದ್ಯತೆ ಇರುವುದಾಗಿಯೂ ನಂತರ ಆತನನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಬೇರೆ ಯಾರೂ ಆತನ ವಾರೇಸುದಾರರು ಬಾರದೇ ಇದ್ದುದರಿಂದ ಆರೋಪಿ ವಿರುದ್ದ ಸೂಕ್ತ ಕ್ರಮಕ್ಕಾಗಿ ಪಿರ್ಯಾದಿ ನೀಡಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/08/2014 ರಂದು ಫಿರ್ಯಾದುದಾರರಾದ ಶ್ರೀ ಅಡಿವೆಪ್ಪಾ ಘಟಗೆ ರವರು KSRTC ಬಸ್ಸು ನಂಬ್ರ KA-19-F-3214 ನೇದರಲ್ಲಿ ಚಾಲಕನಾಗಿದ್ದುಕೊಂಡು ಮಂಗಳೂರಿನ ಬಂಟ್ಸ ಹಾಸ್ಟೆಲ್ ವೃತ್ತದ ಕಡೆಯಿಂದ ಪಿ ವಿ ಎಸ್ ವೃತ್ತದ ಕಡೆಗೆ ತೆರಳುವಾಗ ರಾಧಾ ಮೇಡಿಕಲ್ಸ ಎದುರು ಸಮಯ ಸುಮಾರು 22:15 ಗಂಟೆಗೆ ತಲುಪಿದಾಗ ರಾಧಾ ಮೇಡಿಕಲ್ ಎದುರಿನಿಂದ ಒಂದು ಕಾರು ನಂಬ್ರ KA-19-MA-7165 ನ್ನು ಅದರ ಚಾಲಕ ಯಾವುದೆ ಸೂಚನೆಯನ್ನು ನೀಡದೆ ರಸ್ತೆಯ ಇನ್ನೊಂದು ಬದಿಗೆ ಏಕಾಏಕಿಯಾಗಿ PVS ಕಡೆಗೆ ಚಲಾಯಿಸಿಕೊಂಡು ಹೋಗುವರೇ ಒಮ್ಮಲೆ ಬಲಕ್ಕೆ ತಿರುಗಿಸಿ ಚಲಾಯಿಸಿದ ಪರಿಣಾಮ PVS ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KSRTC ಬಸ್ಸಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ಕಾರಿನ ಚಾಲಕನ ತಲೆಗೆ ಹಾಗೂ ಮೈಕೈಗೆ ಗುದ್ದಿದ ಗಾಯವಾಗಿ KMC ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/08/2014 ರಂದು ಸಮಯ ಸುಮಾರು 20:50 ಗಂಟೆಗೆ ಫಿರ್ಯಾದುದಾರರಾದ ಕಾರ್ತಿಕ ಪಾಂಡೆ ರವರು ತನ್ನ ಸ್ನೆಹಿತನಿಗಾಗಿ ಸುವರ್ಣ ರೆಸಿಡೆನ್ಸಿ ಎದುರು ತನ್ನ ಸ್ನೆಹಿತನ ಮೋಟರ್ ಸೈಕಲ್ ನಂಬ್ರ KA-19-EL-0453 ನೆದರಲ್ಲಿ ಕುಳಿತು ಕಾಯುತ್ತಿರುವಾಗ ಭಾರತ ಬಿಡಿ ಕಡೆಯಿಂದ ಕದ್ರಿ ಬಟ್ಟಗುಡ್ಡೆ ಕಡೆಗೆ KA-19-P-7256 ನೆದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು ಪಿರ್ಯಾದುದಾರು ಎಡಕಣ್ಣಿನ ಮೆಲ್ಬಾಗ ರಕ್ತ ಗಾಯ ತಲೆಗೆ ಗುದ್ದಿದ ಗಾಯ ಎಡಕಾಲಿನ ಮೊಣಗಂಟಿಗೆ ತರಚಿದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಜ್ಯೋತಿ ವೃತ್ತದ KMC ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.08.2014 ರಂದು ರಾತ್ರಿ 8:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗಿರೀಶ್ ರವರು ಮಂಗಳೂರು ತಾಲೂಕು, ಬೆಳ್ಮ ಗ್ರಾಮದ, ದೇರಳಕಟ್ಟೆ ಮೀಟಿಂಗ್ ಪಾಯಿಂಟ್ ಬಾರ್ & ರೆಸ್ಟೋರೆಂಟ್ ಮುಂಭಾಗದಲ್ಲಿ ತನ್ನ ಬಾಬ್ತು ನೀಲಿ ಬಣ್ಣದ ಹೊರೋ ಹೋಂಡಾ ಫ್ಯಾಶನ್ ಪ್ಲಸ್ ಮೋಟರ್ ಸೈಕಲ್ ನಂಬ್ರ ಕೆಎ-19ವೈ-1950 ನೇಯದನ್ನು ನಿಲ್ಲಿಸಿ ಪಾರ್ಸೆಲ್ ತರಲು ಹೋಗಿದ್ದು, ಬಳಿಕ ಅದನ್ನು ಚಲಾಯಿಸಲು ಸದ್ರಿ ಮೋಟಾರ್ ಸೈಕಲಿನ ಚೈನ್ ಸಾಕೆಟ್ ತೊಂದರೆಗೊಳಗಾದ ಕಾರಣ ಸದ್ರಿ ಮೋಟಾರ್ ಸೈಕಲ್‌ನ್ನು ಅಲ್ಲಿಯೇ ನಿಲ್ಲಿಸಿ, ದಿನಾಂಕ 11.08.2014 ರಂದು ಬೆಳಿಗ್ಗೆ 08:00 ಗಂಟೆಗೆ ನೋಡಲಾಗಿ ಸದ್ರಿ ಮೋಟಾರ್ ಸೈಕಲ್ ಅಲ್ಲಿ ಇಲ್ಲದೇ ಇದ್ದು, ಸದ್ರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್ ಸೈಕಲಿನ ಅಂದಾಜು ಮೌಲ್ಯ ರೂ. 25,000/- ಆಗಬಹುದು.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದೇವದಾಸ್ ರವರು ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದು, ದಿನಾಂಕ 11/08/2014 ರಂದು ಶ್ರೀಮತಿ ವಿನುತ ಎಂಬುವರ ಬಾಬ್ತು ಗಿಲ್ ನೆಟ್ ಎಂಬ ದೋಣಿಯಲ್ಲಿ ಪಿರ್ಯಾದಿದಾರರು ತನ್ನ ನೆರೆಕೆರೆಯವರಾದ ಜಗನ್ನಾಥ ಕರ್ಕೇರಾ ಮತ್ತು ಕೇಶವ ಎಂಬುವವರನ್ನು ಜೊತೆಗೆ ಕರೆದುಕೊಂಡು ಸುಮಾರು 2.00 ಗಂಟೆ ಸಮಯಕ್ಕೆ ತೋಟಾ ಬೆಂಗ್ರೆ ಗುರುಪುರ ನದಿಯಿಂದ ಹೊರಟು ಅಳಿವೆ ಬಾಗಿಲಿನ ಬಳಿ ತಲುಪಿದಾಗ, ಸಮುದ್ರದ ದೊಡ್ಡ ತೆರೆಯೊಂದು ರಭಸದಿಂದ ಬಂದು ದೋಣಿಗೆ ಅಪ್ಪಳಿಸಿದಾಗ ದೋಣಿ ಅಲುಗಾಡಿ ದೋಣಿಯಲ್ಲಿದ್ದ ಜಗನ್ನಾಥ ರವರು ನೀರಿಗೆ ಎಸೆಯಲ್ಪಟ್ಟು ಪಿರ್ಯಾದಿದಾರರು ನೋಡುತ್ತಿದ್ದಂತೆ ನೀರಿನ ಸುಳಿಗೆ ಸಿಕ್ಕು ಕಣ್ಮರೆಯಾಗಿರುತ್ತಾರೆ.
6.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-08-2014 ರಂದು ರಾತ್ರಿ 12-00 ಗಂಟೆಯಿಂದ 11-08-2014 ರ ಬೆಳಿಗ್ಗೆ 06-00 ಗಂಟೆ ಮಧ್ಯದ ಅವಧಿಯಲ್ಲಿ ಮಂಗಳೂರು ತಾಲೂಕು ತೋಕೂರು ಗ್ರಾಮದ ಪಿರ್ಯಾದಿದಾರರಾದ ಶ್ರೀ ಲಿಯೋ ಕುಟಿನ್ಹೋ ರವರ ಬಾಬ್ತು ಜಾಸ್ಮಿನ್ ಎಂಬ ಹೆಸರಿನ ಡೋರ್ ನಂಬ್ರ 2-95(ಡಿ) ರ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ದೂಡಿ ಒಳ ಪ್ರವೇಶಿಸಿ, ಅಡುಗೆ ಕೋಣೆಯ ಚಿಲಕವನ್ನು ಕಿಟಕಿಯ ಮೂಲಕ ಯಾವುದೋ ಸಾಧನ ಬಳಸಿ ತೆಗದು, ಬೆಡ್ ರೂಮಿನ ಗೋದ್ರೇಜಿನ ಲಾಕರಿನಲ್ಲಿರಿಸಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ರೂ 9,000/- ವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1,44,000/- ರೂ ಆಗಬಹುದು. ಕಳವಾದ ಸೊತ್ತಿನ ವಿವರ : 1] ಸುಮಾರು 4 ಪವನ್ ತೂಕದ " † " ಪೆಂಡೆಂಟ್ ಇರುವ ಬಂಗಾರದ ಚೈನ್-1, 2] ಸುಮಾರು 4 ಪವನ್ ತೂಕದ ಬಂಗಾರದ ಬ್ರಾಸ್ಲೆಟ್ (ತೆಂಡೂಲ್ಕರ್ ಡಿಸೈನ್) -1, 3] " † " ಮಾರ್ಕ್ ಇರುವ LS ಎಂದು ಒಳಗಿನಿಂದ ಬರೆದಿರುವ ಸುಮಾರು 1 ಪವನ್ ತೂಕದ ಬಂಗಾರದ ಉಂಗುರ-1, 4] " † " ಮಾರ್ಕ್ ಇರುವ ಸುಮಾರು 1 ಪವನ್ ತೂಕದ ಬಂಗಾರದ ಉಂಗುರ-1, 5] ನಗದು ಹಣ ರೂ 9,000/-.
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅರಾಫತ್ ಅಮೀನ್ ರವರು ಕೊಹಿನೂರ್ ಕಂಪ್ಯೂಟರ್ ಝೋನ್ ಎಂಬ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದು, ದಿನಾಂಕ 10-8-2014 ರಂದು ರಾತ್ರಿ ಸುಮಾರು 9 ಗಂಟೆಗೆ ಫಿರ್ಯಾದಿದಾರರು ಅಂಗಡಿಯಲ್ಲಿದ್ದ ಸಮಯ ಆರೋಪಿಗಳಾದ 1)ಎಮ್ಮೆಕೆರೆ ಸಲಾಂ, 2) ಇಮ್ತಿಯಾಜ್ ಯಾನೆ ಇಮ್ತಿ, ಹಾಗೂ ಇನ್ನೊಬ್ಬ ಸುಮಾರು 45 ವರ್ಷ ಪ್ರಾಯದ ವ್ಯಕ್ತಿ ಫಿರ್ಯಾದಿದಾರರ ಅಂಗಡಿಗೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಉದ್ದೇಶಿಸಿ "ನೀನು ನಿನ್ನ ಹೆಂಡತಿಯನ್ನು ಡೈವೋರ್ಸ್ ಮಾಡಿದರೆ ನಿನ್ನ ಅಂಗಡಿಗೆ ಬೆಂಕಿ ಹಚ್ಚುತ್ತೇವೆ. ನಿನ್ನನ್ನು ಕೊಂದು ಬಿಡುತ್ತೇವೆ" ಎನ್ನುತ್ತಾ ಇಮ್ತಿಯು ಸ್ಟೆಪ್ಲರ್ ನಿಂದ ಫಿರ್ಯಾದಿದಾರರಿಗೆ ಚುಚ್ಚಲು ಬಂದಾಗ ಫಿರ್ಯಾದಿದಾರರು ತಪ್ಪಿಸಿದಾಗ ಅಲ್ಲೇ ಇದ್ದ ಗಾಜಿನ ಮಗ್ ನಿಂದ ಮುಖಕ್ಕೆ ಹೊಡೆದಿದ್ದು, ಮತ್ತು ಅಲ್ಲೇ ಇದ್ದ ದೊಡ್ಡ ದೊಡ್ಡ ಪುಸ್ತಕಗಳಿಂದ ಫಿರ್ಯಾದಿದಾರರಿಗೆ ಹೊಡೆದಿರುತ್ತಾರೆ. ಇದರಿಂದ ಎಡಗಲ್ಲ, ಬಲಗಣ್ಣಿನ ಬಳಿ ಮತ್ತು ಮೂಗಿಗೆ ರಕ್ತ ಗಾಯವಾಗಿರುತ್ತದೆ. ಅರೋಪಿಗಳು ಫಿರ್ಯಾದಿದಾರರ ಹೆಂಡತಿ ಖತೀಜಾ ಕೌಸರ್ ಳ ತಾಯಿ ಅಣ್ಣಂದಿರಾದ ಅಬ್ದುಲ್ ರೆಹಮಾನ್ ಹಾಗೂ ಮೊಹಿದ್ದಿನ್ ಎಂಬವರ ಕುಮ್ಮಕ್ಕಿನಿಂದ ಫಿರ್ಯಾದಿದಾರರಿಗೆ ಹಲ್ಲೆ ನಡೆಸಿ. ಸುಮಾರು 20,000/- ಮೌಲ್ಯದ ಸೊತ್ತನ್ನು ನಷ್ಠಮಾಡಿರುತ್ತಾರೆ. ಆರೋಪಿಗಳು ಹೋಗುವಾಗ "ಹೆಂಡತಿ ಬೇಡವೇ ? ನೀನು ಹೇಗೆ ಅವಳಿಗೆ ಡೈವರ್ಸ್ ಕೊಡುತ್ತಿ ಎಂದು ನಾವು ನೋಡುತ್ತೇವೆ" ಎಂದು ಬೆದರಿಕೆ ಒಡ್ಡಿರುತ್ತಾರೆ, ಈ ಎಲ್ಲಾ ಘಟನೆಗಳು ಅಂಗಡಿಯ ಸಿಸಿ ಟಿವಿ ಕೆಮರಾದಲ್ಲಿ ರೆಕಾರ್ಡು ಆಗಿದ್ದು, ಬಳಿಕ ಫಿರ್ಯಾದಿದಾರರು ಕೆ.ಎಂ.ಸಿ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುತ್ತಾರೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಬಿನೋಯ್ ರವರು ಮಂಗಳೂರು ತಾಲೂಕಿನ, ಪೆರ್ಮುದೆ ಗ್ರಾಮದ, ಪೆರ್ಮುದೆ ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ರಿಡೆಂಟ್ ಕಂಪೆನಿಯಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಸದ್ರಿಯವರು ಕೆಲಸ ಮಾಡಿಸುತ್ತಿರುವ ಸೈಟ್ ನಲ್ಲಿ ಸುಮಾರು 30 ಟಿಪ್ಪರ್ ಮತ್ತು 7 ಹಿಟಾಚಿಗಳಿಂದ ಕೆಲಸ ನಡೆಯುತ್ತಿದ್ದು, ದಿನಾಂಕ: 10-08-2014 ರಂದು ಸಂಜೆ 17-30 ಗಂಟೆಯವರೆಗೆ ಕೆಲಸ ಮುಗಿಸಿದ್ದು, ದಿನಾಂಕ: 11-08-2014 ರಂದು ಬೆಳಿಗ್ಗೆ ಸೈಟ್ ಗೆ ಹೋಗಿ ನೋಡಲಾಗಿ ಅಲ್ಲಿದ್ದ ವಾಹನಗಳ 16 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಮೌಲ್ಯ ಸುಮಾರು 160000/- ರೂಪಾಯಿ ಆಗಬಹುದು.
No comments:
Post a Comment