ದೈನಂದಿನ ಅಪರಾದ ವರದಿ.
ದಿನಾಂಕ 06.08.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.08.2014 ಸಂಜೆ 3.40 ಗಂಟೆಗೆ ಕೆಪಿಟಿ ಯಿಂದ ಮುಂದೆ ಬಟ್ಟಗುಡ್ಡೆ ಬಳಿ KA20-B-6099 ನೇ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ತಿರುವಿನಲ್ಲಿ ಒಮ್ಮೆಲೆ ಬ್ರೇಕ್ ಹಾಕಿ ಬಲಕ್ಕೆ ತಿರುಗಿಸಿದ ಪರಿಣಾಮ ಬಸ್ಸಿನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಾದ ಶ್ರೀ ಕುಮಾರಿ ಪ್ರತೀಕ್ಷಾ (18) ಎಂಬುವರು ಹಿಡಿದ ರಾಡಿನ ಹಿಡಿತ ತಪ್ಪಿ ಬಸ್ಸಿನಿಂದ ಎಸೆಯಲ್ಪಟ್ಟು ಕಾಂಕ್ರೀಟು ರಸ್ತೆಗೆ ಬಿದ್ದು ಹಣೆಯ ಬಲಬದಿಗೆ ತರಚಿದ ಗಾಯ ,ಕುತ್ತಿಗೆ ಹಾಗೂ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿರುತ್ತದೆ. ಗಾಯಾಳು AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-08-2014 ಸಂಜೆ 17:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರುಕಿಯಾ(46) ರವರು ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೆದಂಬಾಡಿ ಕಡೆಯಿಂದ ಮಂಜನಾಡಿ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಜೆ-9590 ನೇದರ ಸವಾರ ಹಿದಾಯತುಲ್ಲಾ ಎಂಬಾತನು ತನ್ನ ಬಾಬ್ತು ಮೋಟಾರ್ ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಕಾಲಿನ ಮೊಣಗಂಟು ಮತ್ತು ಪಾದಕ್ಕೆ ರಕ್ತಗಾಯವಾಗಿದ್ದು, ಬಳಿಕ ಪಿರ್ಯಾದಿದಾರರನ್ನು ಸಾರ್ವಜನಿಕರು ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರ ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ತಿಳಿಸಿ, ಈಗ ನಿರಾಕರಿಸಿದ ಕಾರಣ ತಡವಾಗಿ ಪಿರ್ಯಾದಿ ನೀಡಿರುವುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-08-2014ರ ಮಧ್ಯಾಹ್ನ 14-00 ಗಂಟೆಯಿಂದ ದಿನಾಂಕ: 04-08-2014ರ ಬೆಳಿಗ್ಗೆ 09-30 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಅನಂತ್ ಕಾಮತ್ ರವರು ಸರ್ವೀಸ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವ ಮಂಗಳೂರು ನಗರದ ಯೆಯ್ಯಾಡಿಯಲ್ಲಿರುವ EXIDE ಇಂಡಸ್ಟ್ರೀಸ್. ಲಿ., ಎಂಬ ಬ್ಯಾಟರಿ ಸರ್ವೀಸ್ ಸ್ಟೇಶನ್ ನ ವೆಂಟಿಲೇಶನ್ ಗೆ ಅಳವಡಿಸಿದ್ದ ಜಾಲರಿಯನ್ನು ಬಾಗಿಸಿ ಆ ಮೂಲಕ ಒಳಪ್ರವೇಶಿಸಿದ ಯಾರೋ ಕಳ್ಳರು ಸದ್ರಿ ಸರ್ವೀಸ್ ಸ್ಟೇಷನ್ ನಲ್ಲಿದ್ದ ವಿವಿಧ ನಮೂನೆಯ ಸುಮಾರು 23,000/- ರೂ ಬೆಲೆ ಬಾಳುವ 38 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.05.2014ರಂದು ಸಂಜೆ ಸುಮಾರು 4.30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಗಂಗಯ್ಯ ರವರ ಅಣ್ಣ ಬೊಗ್ರ ಮುಖಾರಿ ಪ್ರಾಯ 48 ವರ್ಷ ಎಂಬವರು ಅಸೌಖ್ಯದ ಬಗ್ಗೆ ನೊಂದುಕೊಂಡಿದ್ದು, ತನ್ನ ಮನೆಯಿಂದ ಹೊರಟು ಹೋದವರು ಈ ವರೆಗೆ ಮನೆಗೆ ವಾಪಾಸು ಬಾರದೇ ಇದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಧರ್ಮಪಾಲ ರವರ ಅಕ್ಕ ಶ್ರೀಮತಿ ಹರಿನಾಕ್ಷಿ ಎಂಬವರ ಮಗನಾದ ವಿನೋದ್ ಸಾಲಿಯಾನ್, ಪ್ರಾಯ 27 ವರ್ಷ ರವರು ದಿನಾಂಕ 05-08-2014 ರಂದು ಬೆಳಿಗ್ಗೆ 8-15 ಗಂಟೆಗೆ ಮಂಗಳೂರು ನಗರದ ಜಪ್ಪು ಗೋರಕ್ಷದಂಡು ನಡು ಮನೆ ಎಂಬಲ್ಲಿರುವ ತನ್ನ ವಾಸದ ಮನೆಯಿಂದ ಎಂದಿನಂತೆ ರಿಕ್ಷಾದಲ್ಲಿ ದುಡಿಯಲು ಹೋದವನು ಸುಮಾರು 9-00 ಗಂಟೆ ಸಮಯಕ್ಕೆ ಶೈಲೆಶ್ ಎಂಬವರ ಮೊಬೈಲ್ ಗೆ ಫೋನ್ ಮಾಡಿ ತಾನು ದುಡಿಯುತ್ತಿದ್ದ ರಿಕ್ಷಾವನ್ನು ರಿಕ್ಷಾದ ಮಾಲಿಕರಿಗೆ ನೀಡಿ ನಾನು ಹೋಗುತ್ತಿದ್ದೇನೆ. ನನ್ನನ್ನು ಹುಡುಕಬೇಡಿ ಎಂದು ತಿಳಿಸಿರುತ್ತಾನೆ. ಈ ವಿಚಾರವನ್ನು ತಿಳಿದ ಫಿರ್ಯಾದುದಾರು ಹಾಗೂ ಇತರರು ನಗರದಲ್ಲಿ ಹಾಗೂ ಸಂಬಂದಿಕರ ಮನೆಯಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
No comments:
Post a Comment