Tuesday, August 19, 2014

Daily Crimes Report 19-08-2014

ದಿನಾಂಕ 19.08.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

2

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

3

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-08-2014 ರಂದು ಪಣಂಬೂರು ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಹರೀಶ್ ರವರು ಇಲಾಖಾ ಜೀಪು ನಂಬ್ರ ಕೆಎ-19/ಜಿ-290ನೇ ದರಲ್ಲಿ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಕೂರಿಕಟ್ಟೆ ಮೀನಕಳಿಯ, ಅಯ್ಯಪ್ಪ ಗುಡಿಯ ಬಳಿ ಸಮುದ್ರದ ಬದಿ ಸಾರ್ವಜನಿಕ ಸ್ತಳದಲ್ಲಿ ಸುಮಾರು 7-8 ಜನರು ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಖಚಿತ ವರ್ತಮಾನದಂತೆ ಮೇಲಾಧಿಕಾರಿಗಳ ಆದೇಶದಂತೆ ಸದ್ರಿ ಸ್ಥಳಕ್ಕೆ ಎ.ಎಸ್.ಐ. ದೇವು ಶೆಟ್ಟಿ, ಮತ್ತು ಸಿಬ್ಬಂದಿಯವರಾದ  ಪಿ.ಸಿ. 2160 ನೇ ಚಂದ್ರಹಾಸ ಆಳ್ವ, ಪಿ.ಸಿ. 2266 ನೇ ರಾಧ ಕೃಷ್ಣ, ಹೆಚ್,ಸಿ, 2000 ನೇ ರುಕ್ಮಯ್ಯ  ಪಿ.ಸಿ. 1025 ನೇ ಬಾಲ ಕೃಷ್ಣ ಹಾಗೂ ಪಂಚರರಾದ ಭರತ್ ಮತ್ತು ಅಜಯ್ ಎಂಬವರೊಂದಿಗೆ ದಾಳಿ ನಡೆಸಲಾಗಿ ಸದ್ರಿ ಸ್ಥಳದಲ್ಲಿ 7-8 ಜನ ವ್ಯಕ್ತಿಗಳು ನೆಲದ ಮೇಲೆ ಸುತ್ತುವರಿದು ಕುಳಿತು ಅವರ ಪೈಕಿ ಓರ್ವ ಅವರು ಕುಳಿತಿದ್ದ ಸ್ಥಳದ ಮಧ್ಯ ಭಾಗಕ್ಕೆ ಕೈಯಲ್ಲಿದ್ದ ಇಸ್ಪೀಟ್ ಎಲೆಗಳನ್ನು ಒಳಗೆ ಹೊರಗೆ ಎಂದು ಹೇಳುತ್ತಾ ಎಸೆಯುತ್ತಿದ್ದು, ಉಳಿದವರು ಹಣವನ್ನು ಪಣವಾಗಿ ಇಟ್ಟು ಜುಗಾರಿ ಆಟದಲ್ಲಿ ನಿರತರಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಅವರು ಜುಗಾರಿ ಆಟವನ್ನು ಆಡುತ್ತಿದ್ದುದರಿಂದ ಅವರನ್ನು ಸುತ್ತುವರಿದು ಹಿಡಿದು ವಿಚಾರಿಸಿದಾಗ 1.ಮೋಹನ್ (34) ತಂದೆಃ- ಕೆ. ವಿಜಯನ್ 2. ಜಗನ್ (35) ತಂದೆಃ- ಆರ್ಮುಗಂ 3. ಹರಿದಾಸ್. (42) ತಂದೆಃ- ಗೋಪಾಲ 4. ಯಶೋದರ (35) ತಂದೆಃ- ಗೋವಿಂದ ಸಾಲಿಯಾನ್ 5. ಕುಮಾರ್ (36) ತಂದೆಃ- ಕುಂಞಪ್ಪ 6. ಕೇಶವ (53) ತಂದೆಃ- ದಿ. ದಾಮೋಧರ 7. ವಿಶ್ವನಾಥ (45) ತಂದೆಃ- ಅಚ್ಚುತ, 8. ರಾಜ (46) ತಂದೆಃ- ಕೃಷ್ಣ ಎಂಬುದಾಗಿದ್ದು ಇವರೆಲ್ಲರು ಕೂರಿಕಟ್ಟೆಯ ಪಣಂಬೂರು ಗ್ರಾಮದ ನಿವಾಸಿಗಳಾಗಿರುತ್ತಾರೆ ಎಂಬುದಾಗಿ ತಿಳಿದು ಬಂದಿದ್ದು ಅವರು ಜುಗಾರಿ ಆಟಕ್ಕೆ ಉಪಯೋಗಿಸಿದ 2885/- ರೂಪಾಯಿ 52 ಇಸ್ಪೀಟ್ ಎಲೆಗಳು ಮತ್ತು ಸ್ಥಳದಲ್ಲಿದ್ದ ದಿನಪತ್ರಿಕೆ ಇವುಗಳನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡು ಆರೋಪಿ ಮತ್ತು ಸೊತ್ತುಗಳನ್ನು ಪಣಂಬೂರು ಠಾಣೆಗೆ ತಂದು ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-08-2014 21.15 ಗಂಟೆಯಿಂದ 21.45 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಎಡ್ವರ್ಡ್ ಮೊಂತೆರೋ ರವರ ಮಂಗಳೂರು ನಗರದ ಬೆಂದುರ್ ವೆಲ್ ನ ಲೆಗಸಿ ಕಾಂಪ್ಲೆಕ್ಸ್ ನಲ್ಲಿರುವ ಪೋರ್ ವಿಂಡ್ಸ್ ಮಾಸ್ ಕಮ್ಯುನಿಕೇಶನ್ ನ ಸರ್ವಿಸ್ ಕಛೇರಿಯ ಬಾಗಿಲ ಇನ್ನರ್ ಲಾಕ್ ನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಮೀಡಿಯಾ ಇನ್ ಚಾರ್ಜ ನಂದನ ಶೆಟ್ಟಿರವರ ಚೆಂಬರ್ ನಲ್ಲಿದ್ದ ಕಂಪ್ಯೂಟರ್ ಮಾನಿಟರನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಇದರ ಬೆಲೆ ಸುಮಾರು 8,000/- ಆಗಿರುತ್ತದೆ.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-08-2014 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಶಾಂತಿಪಲ್ಕೆ ಎಂಬಲ್ಲಿ ಪಿರ್ಯಾಧಿದಾರರಾದ ಶ್ರೀ ನಾರಾಯಣ ರವರ ಮನೆಯ ಬಳಿ ತೆಂಗಿನ ಗುಂಡಿ ತೆಗೆದ ತೆಂಗಿನ ಸಸಿ ನೆಟ್ಟ ವಿಚಾರಕ್ಕೆ ಸಂಬಂದಿಸಿ ಪಿರ್ಯಾದಿದಾರರ ಪತ್ನಿ ಶ್ರೀಮತಿ ಭಾಗಿರಥಿ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, ಇದನ್ನು ಪ್ರಶ್ನಿಸಿದ ಪಿರ್ಯಾದಿದಾರರಿಗೆ ಅಪಾದಿತ ಪಿರ್ಯಾಧಿಯ ಅಣ್ಣ ಪರಮೇಶ್ವರ ಮತ್ತು ಆವರ ಮಗ ನಿತ್ಯಾನಂದ ಎಂಬಾತನು ಮರದ ಸೊಂಟೆಯಿಂದ ಎಡಕೈ ಬೆರಳಿಗೆ ಹಾಗೂ ಎಡಕೈ ಮೆಲ್ಬದಿಗೆ ಹೊಡೆದ ಪರಿಣಾಮ ರಕ್ತಗಾಯವುಂಟಾಗಿರುತ್ತದೆ.

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17.08.2014 ರಂದು ಪಿರ್ಯಾದಿದಾರರಾದ ಶ್ರೀಮತಿ ಮಮ್ತಾಜ್ ಬೇಗಂ ಎಂಬವರು ತನ್ನ ಗಂಡ : ಅಬ್ದುಲ್ ಖಾದರ್ ಶೇಖ್ ಹಾಗೂ ಮಕ್ಕಳ ಜೊತೆಯಲ್ಲಿ ಕಾರು ನಂಬ್ರ: KA-19-MC- 8444 ನೇ ದನ್ನು ಪಿರ್ಯಾದಿದಾರರ ಗಂಡ ಚಲಾಯಿಸಿಕೊಂಡು ಮಂಗಳೂರಿನಿಂದ ಮೂಡಬಿದ್ರೆ ಬರುತ್ತಾ, ಸುಮಾರು 22:00 ಗಂಟೆಗೆ, ಮಂಗಳೂರು ತಾಲೂಕು ತೆಂಕಮಿಜಾರು ಗ್ರಾಮದ  ತೋಡಾರು ಟೆಲಿಪೋನ್ ಎಕ್ಸ್ ಚೇಂಜ್ ಸಮೀಪ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಒಂದು ಕಾರು ಬರುತ್ತಿದ್ದುದ್ದನ್ನು ನೋಡಿ ಒಮ್ಮೆಲೇ ಪಿರ್ಯಾದಿದಾರರ ಗಂಡನವರು ತಾನು ಚಲಾಯಿಸಿಕೊಂಡು ಬರುತ್ತಿದ್ದು ಕಾರನ್ನು ಒಮ್ಮೆಲೇ ಎಡಬದಿಗೆ ಹತೋಟಿ ತಪ್ಪಿ ತಿರುಗಿಸಿದ್ದು, ಕಾರು ಬಲಬದಿಯ ಗುಡ್ಡಕ್ಕೆ ತಾಗಿ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ಮಕ್ಕಳಾದ ಅವಾಲ್ ಅಬ್ದುಲ್ ನ  ತಲೆಗೆ  ಹಾಗೂ  ಮೊಹಮ್ಮದ್ ಆಲಿಂ ನ ಎಡಕೈಗೆ ಪ್ರಾಕ್ಚರ್ ಆಗಿದ್ದು, 3ನೇ ಮಗು ನಬಿಶ ತುಲ್ ಅನನ್  ರ ಬಲಕಾಲಿಗೆ ಜಖಂ ಆಗಿದ್ದು, ಪಿರ್ಯಾದಿದಾರರ ಗಂಡ ಅಬ್ದುಲ್ ಖಾದರ್ ಶೇಖ್ ರವರ ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರಿಗೆ ಯಾವುದೇ ಗಾಯವಾಗಿಲ್ಲ. ನಂತರ ಚಿಕಿತ್ಸೆಯ ಬಗ್ಗೆ ಮಂಗಳೂರು ಇಂಡಿಯನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಈ ಅಪಘಾತಕ್ಕೆ ಪಿರ್ಯಾದಿದಾರರ  ಗಂಡ ತನ್ನ ಬಾಬ್ತು ಕಾರು ನಂಬ್ರ: KA-19-MC-8444 ನೇ ಯದನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ.

 

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-08-2014 ರಂದು ಫಿರ್ಯಾದುದಾರರಾದ ಶ್ರೀ ಇಸ್ಮಾಯಿಲ್ ರವರು ತನ್ನ ತಮ್ಮನ ಜೊತೆ ಬಟ್ಟೆ ವ್ಯಾಪಾರ ಬಂದ್ ಮಾಡಿ ಸಮಯ ಸುಮಾರು ರಾತ್ರಿ 9-30 ಗಂಟೆಯ ವೇಳೆಗೆ ರೀಚಾರ್ಜ್ ಮಾಡಲೆಂದು ಪರಿಚಯ ಇರುವ ಮಂಗಳೂರು ಲೇಡಿಗೋಶನ್ ಎದುರುಗಡೆ ಇರುವ ಎ-1 ಎಂಬ ಮೊಬೈಲ್ ಅಂಗಡಿಗೆ ಹೋಗಿದ್ದು, ಆ ವೇಳೆಯಲ್ಲಿ ಅಂಗಡಿಯಾತ ಫಿರ್ಯಾದುದಾರರನ್ನು ಉದ್ದೇಶಿಸಿ "ನಿನಗೆ ನಾನು ನೀಡಿದ್ದ ಹಳೆ ಮೊಬೈಲ್ ಕೊಡು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಅಂಗಡಿಯಿಂದ ಹೊರಗಡೆ ಬಂದು ಫಿರ್ಯಾದುದಾರರ ಮತ್ತು ಅವರ ತಮ್ಮನಾದ ಇಸ್ರೈಲ್ ರವರನ್ನು ತಡೆದು ನಿಲ್ಲಿಸಿ ಅಲ್ಲೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ಫಿರ್ಯಾದುದಾರರ ತಲೆಯ ಮುಂಭಾಗಕ್ಕೆ ಹೊಡೆದಿದ್ದು, ಪರಿಣಾಮ ಹಣೆಯ ಭಾಗಕ್ಕೆ ರಕ್ತಗಾಯವಾಗಿರುತ್ತದೆ. ಅಲ್ಲದೇ ಇಸ್ರೈಲ್ ನ ಬೆನ್ನ ಮೇಲೆ ಅದೇ ಕಲ್ಲಿನಿಂದ ಹೊಡೆದಿದ್ದು, ಪರಿಣಾಮ ರಕ್ತ ಹೆಪ್ಪುಗಟ್ಟಿದ ಗಾಯವಾಗಿರುತ್ತದೆ. ಅಲ್ಲದೇ ಆರೋಪಿಯು ಫಿರ್ಯಾದುದಾರರ ಎಡ ಕೈಯನ್ನು ಬಲವಾಗಿ ಎಳೆದು ತಿರುವಿದ್ದು, ಇದರಿಂದ ಕೈಯ ಕೀಲು ಜಾರಿ ಹೋಗಿರುತ್ತದೆ. ಅಲ್ಲದೇ ಆರೋಪಿಯು ವಾಪಾಸು ಅವರುಗಳನ್ನು ಉದ್ದೇಶಿಸಿ "ನೀವು ಇಲ್ಲಿ ಇನ್ನು ಮುಂದಕ್ಕೆ ವ್ಯಾಪಾರ ಮಾಡಿದರೆ ನಿಮ್ಮ ವ್ಯಾಪಾರವನ್ನು ನಿಲ್ಲಿಸಲು ನನಗೆ ಗೊತ್ತು" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ನಾನು ನೀಡಿದ ಹಳೆ ಮೊಬೈಲ್ ನೀಡದ್ದಿದ್ದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಘಟನೆಗೆ ಕಾರಣವೇನೆಂದರೆ ಎರಡು ದಿನಗಳ ಹಿಂದೆ ಫಿರ್ಯಾದುದಾರರು ಒಂದು ಮೊಪಬೈಲನ್ನು ರಿಪೇರಿಗೆಂದು ನೀಡಿದ್ದು, ಇದಕ್ಕೆ ಪ್ರತಿಯಾಗಿ ಹಳೆ ಮೊಬೈಲ್ ಬಳಸುವರೇ ಆರೋಪಿಯು ಫಿರ್ಯಾದುದಾರರಿಗೆ ನೀಡಿದ್ದು, ಪಿರ್ಯಾದುದಾರರ ಅದೇ ಮೊಬೈಲನ್ನು ವಾಪಾಸು ನೀಡಿರುತ್ತಾರೆ. ಆದರೇ ಆರೋಪಿ ಇದನ್ನು ತಪ್ಪು ತಿಳಿದು ಫಿರ್ಯಾದುದಾರರು ಆತನಿಗೆ ಹಳೆ ಮೊಬೈಲನ್ನು ವಾಪಾಸು ನೀಡಲಿಲ್ಲವೆರಂದು ನೆಪ ಮಾಡಿಕೊಂಡು ಫಿರ್ಯಾದುದಾರರಿಗೆ ಹಾಗೂ ಅವರ ತಮ್ಮನಿಗೆ ಹಲ್ಲೆ ಮಾಡಿರುವುದಾಗಿದೆ.

 

6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-08-2014 ರಂದು ಪಿರ್ಯಾದಿದಾರರಾದ ಶ್ರೀ ನಿಶಾನ್ ಶೆಟ್ಟಿ ರವರು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ವಿಜಯಾ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ಕುಳಾಯಿ ಶಾಖೆಯಲ್ಲಿ ಇವರು ಹಾಗೂ ಇವರ ಸಿಬ್ಬಂದಿ ದೀಪಕ್ ರೈ ಎಸ್ ರವರು ಕರ್ತವ್ಯ ನಿರ್ವಹಿಸಿ  ಮದ್ಯಾಹ್ನ ಸುಮಾರು 14-00 ಗಂಟೆಗೆ ಕಛೇರಿಯ ಲಾಕರ್ ಮತ್ತು ಶಟರ್ ಗೆ ಬೀಗ ಹಾಕಿ ಹೋಗಿದ್ದು ಪಿರ್ಯಾದಿದಾರರು ದಿನಾಂಕ 18-08-2014 ರಂದು ಬೆಳಿಗ್ಗೆ ಮನೆಯಿಂದ ಕಛೇರಿಗೆ ಬರುತ್ತಿರುವಾಗ ಕಛೇರಿಯ ಮೇಲ್ಗಡೆ ಇರುವ ಗೀತಾ ರವರು ಪೋನ್ ಮಾಡಿ ಕಛೇರಿಯ ಶಟರ್ ಅರ್ಧ ತೆರೆದಿರುವುದಾಗಿ ತಿಳಿಸಿದ್ದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರು ಕಛೇರಿಗೆ ಬಂದಾಗ ಶಟರ್ ಅರ್ಧ ತೆರೆದಿದ್ದು ಅಲ್ಲದೇ ಒಳಗಿನ ಲಾಕರ್ ನ ಬಾಗಿಲು ತೆರೆದಿದ್ದು ಅದರ ಒಳಗಿದ್ದ ನಗದು ರೂಪಾಯಿ 2,44, 942/- ಹಾಗೂ 32 ಜನ ಗ್ರಾಹಕರು ಅಡವಿಟ್ಟಿದ್ದ ವಿವಿದ ನಮೂನೆಯ 581.59 ಗ್ರಾಂ ಬಂಗಾರದ ಆಭರಣಗಳು ಇಲ್ಲದೇ ಇದ್ದು ಇದರ ಅಂದಾಜು ಮೌಲ್ಯ ಸುಮಾರು 1500000/- ರೂಪಾಯಿ ಆಗಿದ್ದು, ಯಾರೋ ಕಳ್ಳರು ನಗದು ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.

 

7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-08-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಖಾದರ್ ರವರು ಅವರ ಕುಟುಂಬ ಹಾಗೂ  ಸಂಬಂದಿಕರೊಂದಿಗೆ ಅವರ ಮಗಳ ಮದುವೆ ನಿಮಿತ್ತ ಹೊರಗಡೆ ಹೋಗಿರುವ ಸಮಯ ಬೆಳಿಗ್ಗೆ 10-30 ಗಂಟೆಯಿಂದ ಸಂಜೆ 4-00 ಗಂಟೆ ಮದ್ಯೆ ಯಾರೋ  ಕಳ್ಳರು ಮಂಗಳೂರು ಕಾಟಿಪಳ್ಳ 2 ನೇ ಬ್ಲಾಕ್ ಸೈಟ್ ನಂಬ್ರ 345 ನೇದರ ಪಿರ್ಯಾದಿದಾರರ ಮನೆಯ ಹಿಂಬದಿ ಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸಿ ಮಹಡಿ ಮೇಲಿನ ಬ್ಯಾಗ್ ಗಳಿಂದ ರೂ 14500/- ನಗದು ಹಣ ಹಾಗೂ ಪಿರ್ಯಾದಿ ಹೆಂಡತಿಯ ನೋಕಿಯಾ ಮೊಬೈಲ್  ಹಾಗೂ ಅವರ ಬಾವಾರವರ ನೋಕಿಯಾ ಮೊಬೈಲ್ ಸೆಟ್ ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-08-2014 ರಂದು ಪಿರ್ಯಾದಿದಾರರಾದ ಶ್ರೀ ವಿಜಯ್ ಕುಮಾರ್ ರವರ ಹೆಂಡತಿ ಶ್ರೀಮತಿ ಮಾಯಾದೇವಿ ರವರು ಅವರ ಮಕ್ಕಳೊಂದಿಗೆ ಗಣೇಶ್ ಪುರ ದೇವಸ್ಥಾನದಲ್ಲಿ ನಡೆಯುವ ಮೊಸರು ಕಡಿಕೆ ಉತ್ಸವ ನೋಡಿ ವಾಪಾಸು ಮನೆ ಕಡೆಗೆ ಕಾಟಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರ ಕಡೆಗೆ ಹೋಗುವ ಡಾಂಮಾರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ರಾತ್ರಿ 8-10 ಗಂಟೆ ಸಮಯಕ್ಕೆ 3ನೇ ಬ್ಲಾಕ್ ಉದಯ ಶೆಟ್ಟಿಯವರ ಮನೆ ಬಳಿ ತಲುಪುತ್ತಿರುವಾಗ್ಗೆ ಹಿಂದಿನಿಂದ ಬೈಕಿನಲ್ಲಿ ಬಂದ ಈರ್ವರು ಸುರತ್ಕಲ್ ಕಡೆಗೆ ಹೋಗುವ ದಾರಿಯ ವಿವರ ಕೇಳಿಕೊಂಡು ಹಿಂಬದಿ ಕುಳಿತ್ತಿರುವವನು ಪಿರ್ಯಾದಿ ಹೆಂಡತಿಯ ಕುತ್ತಿಗೆಯಲ್ಲಿದ್ದ ಸುಮಾರು 10 ಗ್ರಾಂ ತೂಕದ 24000 ರೂ ಮೌಲ್ಯದ ಕರಿ ಮಣಿ ಸರವನ್ನು ಬಲತ್ಕಾರವಾಗಿ ಕಸಿದುಕೊಂಡು ಪರಾರಿಯಾಗಿರುವುದಾಗಿದೆ.

 

9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-08-2014 ರಂದು ಪಿರ್ಯಾದಿದಾರರಾದ ಶ್ರೀಮತಿ ರತ್ನಾವತಿ ರವರು ಗಣೇಶ್ ಪುರ ದೇವಸ್ಥಾನದ ಬಳಿ ನಡೆಯುವ ಮೊಸರು ಕುಡಿಕೆ ಉತ್ಸವ ಮುಗಿಸಿ ವಾಪಾಸು ಮನೆಗೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಾತ್ರಿ ಸುಮಾರು 8-45 ಗಂಟೆ ಸಮಯಕ್ಕೆ ಕಾಟಿಪಳ್ಳ 3ನೇ ಬ್ಲಾಕ್ ಕೋರ್ದಬ್ಬು ದೈವಸ್ಥಾನ ಬಳಿ ತಲುಪುತ್ತಿದ್ದಂತೆ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾಟಿಪಳ್ಳ ಕಡೆಗೆ ಹೋಗುವ ದಾರಿ ಕೇಳಿ ಅವರ ಪೈಕಿ  ಹಿಂಬದಿ ಸವಾರ ಬೈಕಿನಿಂದ ಇಳಿದು ಪಿರ್ಯಾದಿ ಕುತ್ತಿಗೆಗೆ ಕೈ ಹಾಕಿ ಪಿರ್ಯಾದಿದಾರರ ಕರಿಮಣಿ ಸರವನ್ನು ಬಲತ್ಕಾರವಾಗಿ   ಎಳೆದುಕೊಂಡಾಗ ಕರಿಮಣಿ ಸರ  ತುಂಡಾಗಿ  ಅರ್ದ ಕರಿಮಣಿ ಸರ ಕಸಿದು ಕೊಂಡು ಪರಾರಿಯಾಗಿರುವುದಾಗಿ ಕಸಿದು ಕೊಂಡು ಹೋದ ಕರಿಮಣಿ ಸರದ ತೂಕ 12 ಗ್ರಾಂ ಆಗಿದ್ದು ಸುಮಾರು 25000/- ರೂ ಬೆಳೆ ಬಾಳುವುದಾಗಿದೆ.

 

10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಆರೋಪಿ ಚಂದ್ರಶೇಖರರು ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದು ಅಡ್ಡೂರು ಬ್ರ್ಯಾಂಚ್ ಪೋಸ್ಟ್ ಆಫಿಸ್ ನಲ್ಲಿ ಗ್ರಾಮೀಣ ಡಾಕ್ ಸೆವಕ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಯಲ್ಲಿರುತ್ತಾ 2013 ನೇ ಇಸವಿಯ ಮೇ ಜೂನ್ ತಿಂಗಳಲ್ಲಿ ಬ್ರ್ಯಾಂಚ್ ಖಾತೆ ಹೊಂದಿದ ಖಾತೆದಾರರಾದ ಕು: ಸುನಂದಾ, ಶ್ರೀಮತಿ ಕಮಲ, ರೋಹಿತ್ ಎಂಬವರುಗಳು ತಮ್ಮ ಖಾತೆಗೆ ಜಮೆ ಮಾಡಿದ ಒಟ್ಟು ಹಣ 46200/- ರೂ ಗಳನ್ನು ಖಾತೆದಾರರ ಪಾಸ್ ಪುಸ್ತಕಕ್ಕೆ ಮಾತ್ರ ನೊಂದಾಯಿಸಿ ಇಲಾಖಾ ಇತರ ಕಡತಗಳಿಗೆ ನಮುದಿಸದೇ ಈ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಅಂಚೆ ಇಲಾಖೆಗೆ ವಂಚಿಸಿರುವುದಾಗಿದೆ ಎಂಬುದಾಗಿ ಶ್ರೀ ಬಿ. ಶಂಕರ, ಸಹಾಯಕ ಅಂಚೆ ಅಧೀಕ್ಷಕರು, ಮಂಗಳೂರು ಪೂರ್ವ ವಿಭಾಗ  ಇವರು ಪಿರ್ಯಾದಿ ನೀಡಿದ್ದಾಗಿದೆ.

 

No comments:

Post a Comment