1. ಶಿವರಾಮ್ ಪ್ರಾಯ: 20 ವರ್ಷ ತಂದೆ: ದೇವಿ ಸಿಂಗ್, ವಾಸ: ಕಪೂರ ಮಳುಕ, ದತ್ತ ಕಾ ಬೇಡ, ಬಯಾನ ತಾಲುಕು, ಭರತ್ ಪುರ ಜಿಲ್ಲೆ ರಾಜಸ್ಥಾನ ರಾಜ್ಯ
2. ಬಹುದ್ದೂರು ಸಿಂಗ್ @ ಬಹುದ್ದೂರು@ ಬಯ್ಯ , ಪ್ರಾಯ: 22 ವರ್ಷ ತಂದೆ: ಗೋವಿಂದ ಸಿಂಗ್ ವಾಸ: ಕಪೂರ ಮಳುಕ, ದತ್ತ ಕಾ ಬೇಡ, ಬಯಾನ ತಾಲುಕು, ಭರತ್ ಪುರ ಜಿಲ್ಲೆ ರಾಜಸ್ಥಾನ ರಾಜ್ಯ
3. ಶಾಹ ನವಾಜ್ ಪ್ರಾಯ: 20 ವರ್ಷ, ತಂದೆ: ಯಹಶಾನ್ ವಾಸ: ರಾಮ್‌ಪುರ ತಗ, ಮಂಡಿದನೋರ ತಾಲೂಕು, ಅಮರೋಹ ಜಿಲ್ಲೆ ಉತ್ತರ ಪ್ರದೇಶ ರಾಜ್ಯ
ಇವರನ್ನು ದಸ್ತಗಿರಿ ಮಾಡಿದ್ದು, 1 ನೇ ಶಿವರಾಮ್ ಎಂಬಾತನು 7 ವರ್ಷದ ಹಿಂದೆ ಸುಮಾರು 7 ವರ್ಷಗಳ ಕಾಲ ಮೃತೆ ಶ್ರೀಮತಿ ಸುಮತಿ ಪ್ರಭು ರವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ಆರೋಪಿ ಶಿವರಾಮ್‌ನು ಅದೇ ಊರಿನ ಆತನ ಸ್ನೇಹಿತ ಬಹುದ್ದೂರು ಸಿಂಗ್‌ನೊಂದಿಗೆ ಹಾಗು ಇದೇ ಕೃತ್ಯ ನಡೆಸುವ ಸಂಬಂದ 3 ನೇ ಆರೋಪಿಯಾದ ಸ್ಟೇಟ್‌ಬ್ಯಾಂಕ್ ಬಳಿ ವಾಸವಿರುವ ಉತ್ತರ ಪ್ರದೇಶದ ಮೂಲದ ಶಾಹ ನವಾಝ ಇವರನ್ನು ಪರಿಚಯಿಸಿಕೊಂಡು ಶ್ರೀಮತಿ ಸುಮತಿ ಪ್ರಭು ಇವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚುವ ಬಗ್ಗೆ ಸಂಚು ರೂಪಿಸಿ 1 ನೇಯವನು ದಿನಾಂಕ: 8-2-2014 ರಂದು ಬೆಳಿಗ್ಗೆ 2 ಮತ್ತು 3 ನೇಯರವರೊಂದಿಗೆ ಬಂದು ಸುಮತಿ ಪ್ರಭು ಇವರ ಮನೆ ತೋರಿಸಿ, 2 ಮತ್ತು 3 ನೇಯವರು ಬಾಡಿಗೆ ಕೇಳುವ ನೆಪದಲ್ಲಿ ಬಂದು ಸುಮತಿ ಪ್ರಭು ಇವರಲ್ಲಿ ಮಾತನಾಡಿ ಸಂಜೆ ಬರುವುದಾಗಿ ತಿಳಿಸಿ ಹೋಗಿ ನಂತರ ಅದೇ ದಿನ ಮಧ್ಯಾಹ್ನ 2-00 ಗಂಟೆಗೆ 2 ಮತ್ತು 3 ನೇಯವರು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಹೊಂಚು ಹಾಕಿ ಸುಮತಿ ಪ್ರಭು ಟಿ ವಿ ನೋಡುತ್ತಿದ್ದ ಸಮಯ ಬಾಡಿಗೆ ಮುಂಗಡ ಹಣ ನೀಡುವ ನೆಪದಲ್ಲಿ ಮನೆಯ ಒಳಗೆ ಹೋಗಿ ಸುಮತಿ ಪ್ರಭು ಇವರ ಬಾಯಿಯನ್ನು ಕುತ್ತಿಗೆಯನ್ನು ಹಿಡಿದು ಕುತ್ತಿಗೆಯಲ್ಲಿದ್ದ ಸರ ಮತ್ತು ಬೇಂಡೋಲೆಗಳನ್ನು ಮತ್ತು ಕೈಯಲ್ಲಿದ್ದ ಬಳೆಗಳನ್ನು ಕಿತ್ತು ಕೊಂಡಿದ್ದು, ಸುಮತಿ ಪ್ರಭು ಪ್ರತಿರೋಧ ತೋರಿಸಿದಾಗ ಅವರ ಮುಖಕ್ಕೆ ಬಲವಾಗಿ ಹೊಡೆದು, ಅಲ್ಲಿಯೇ ಅಡುಗೆ ಮನೆಯಲ್ಲಿ ಇದ್ದ ಚೂರಿಯಿಂದ ಸುಮತಿ ಪ್ರಭು ಇವರ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದು, ನಂತರ ಆರೋಪಿಗಳು ರಾಜಸ್ತಾನಕ್ಕೆ ಹೋಗಿ ಕೆಲವೊಂದು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದು, ಉಳಿದ ಚಿನ್ನಾಭರಣಗಳನ್ನು ಮಂಗಳೂರಿನಲ್ಲಿ ಮಾರಾಟ ಮಾಡುವ ಬಗ್ಗೆ ವಾಪಾಸು ತಂದಿರುತ್ತಾರೆ. ಇವುಗಳನ್ನು ಸೋಮಶ್ವರ ಉಚ್ಚಿಲ ಪಿಶರಿಶ್ ರಸ್ತೆಯಲ್ಲಿರುವ ಆರೋಪಿಗಳ ಬಾಡಿಗೆ ರೂಮ್‌ನಲ್ಲಿಟ್ಟಿದ್ದನ್ನು ಕೆಲವು ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಹಾಗು ಉಳಿದ ಚಿನ್ನಾಭರಣಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಕುಳಾಯಿಯ ಸುಮತಿ ಪ್ರಭು ಕೊಲೆ ಹಿನ್ನೆಯಲ್ಲಿ ಸಾರ್ವಜನಿಕರಲ್ಲಿ, ಅದರಲ್ಲೂ ಒಂಟಿ ಹೆಂಗಸರು ವಾಸಿಸುವರಲ್ಲಿ ಅತಂಕದ ಬಾವನೆ ನಿರ್ಮಾಣವಾಗಿದ್ದು, ಈ ಕೊಲೆ ಪ್ರಕರಣವನ್ನು ಪತ್ತೆಮಾಡುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಒತ್ತಡವಿದ್ದು, ಸದ್ರಿ ಕೊಲೆ ಪ್ರಕರಣದಲ್ಲಿ ಎಲ್ಲಾ 3 ಜನ ಆರೋಪಿಗಳನ್ನು ಪತ್ತೆ ಮಾಡಿದ ಸುರತ್ಕಲ್ ಪೊಲೀಸರಿಗೆ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಪ್ರಶಂಶೆ ವ್ಯಕ್ತವಾಗಿರುತ್ತದೆ.
ಈ ಕೊಲೆ ಪ್ರಕರಣವನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿ ಕೊಂಡು ತಾಂತ್ರಿಕ ವಿಧಾನ ಮುಖಾಂತರ ಪತ್ತೆ ಹಚ್ಚಿದ್ದು, ಮಂಗಳೂರು ನಗರದ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ, ಪಣಂಬೂರು ಎಸಿಪಿ ರವಿಕುಮಾರ್ ಇವರ ನಿರ್ದೇಶನದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಪಿಐ ಎಂ.ಎ ನಟರಾಜ್, ಪಿಎಸ್‌ಐ ರಾಜೇಂದ್ರ, ಸಿಬ್ಬಂದಿಗಳಾದ ಕೃಷ್ಣಾ, ರಾಜ, ವಿಜಯ್‌ರಾಜ್ ಸಂತೋಷ್, ಚಂದ್ರಶೇಖರ್, ಸಂತೋಷ್, ಗಿರೀಶ್ ಜೋಗಿ, ಮನೋಜ್ ಇವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪ್ರಕರಣವನ್ನು ಬೇದಿಸಿದ ಅಧಿಕಾರಿಗಳಿಗೆ ಡಿಸಿಪಿಗಳಾದ ಜಗದೀಶ್ ಮತ್ತು ವಿಷ್ಣು ವರ್ಧನ್ ಇವರು ಅಭಿನಂದಿಸಿರುತ್ತಾರೆ.
No comments:
Post a Comment