Wednesday, April 2, 2014

Daily Crime Reports 02-04-2014

ದೈನಂದಿನ ಅಪರಾದ ವರದಿ.

ದಿನಾಂಕ 02.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

8

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-04-2014 ರಂದು ಬೆಳಿಗ್ಗೆ 10:00 ಗಂಟೆಗೆ ಮಂಗಳೂರು ತಾಲೂಕು ಹರೇಕಳ ಗ್ರಾಮದ ಮಲಾರ್ ಎಂಬಲ್ಲಿ ಕೆಎ-19-ಇಸಿ-3126 ನೇ ಮೋಟಾರ್ ಸೈಕಲ್ ಸವಾರ ಖಲೀಲ್ ಎಂಬಾತನು ಗ್ರಾಮಚಾವಡಿ ಕಡೆಯಿಂದ ಇನೋಳಿ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಲಾರಿ ನಂಬ್ರ ಕೆಎ-12-3-60 ನೇದರ ಚಾಲಕ ಮೌರಿಸ್ ಸಿಕ್ವೇರ ಎಂಬಾತನು ಲಾರಿಯನ್ನು ಇನೋಳಿ ಕಡೆಯಿಂದ ಅತಿವೇಗ ಹಗೂ ಅಜಾಗರೂಕತೆಯಿಂದ ಚಲಾಯಿಸಿ ಮೋಟಾರ್ ಸೈಕಲ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರನು ಬೈಕ್ ಸಮೇತ ರಸ್ತೆಗೆ ಬಿದ್ದು, ಕುತ್ತಿಗೆ, ಮುಖ ಮತ್ತು ತಲೆಯ ಹಿಂಭಾಗಕ್ಕೆ ತೀವ್ರ ತರದ ಗಾಯವಾಗಿ ಪ್ರಜ್ಞಾಹೀನರಾದವರನ್ನು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ನಜೀರ್ ರವರು ಹಾಗೂ ಲಾರಿ ಚಾಲಕ ಸೇರಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.03.2014ರಂದು   ಬೆಳಿಗ್ಗೆ  9.00 ಗಂಟೆಯಿಂದ  ಮದ್ಯಾಹ್ನ 2.00  ಗಂಟೆಯ ನಡುವಿನ ಸಮಯದಲ್ಲಿ  ಫಿರ್ಯಾದಿದಾರರಾದ ಶ್ರೀ ಸುಶಾಂತ್ ಎಂಬವರ ಕಾರ್ನಾಡು  ಗ್ರಾಮದ ಕನ್ನಡರಬೆಟ್ಟು ಎಂಬಲ್ಲಿರುವ  ವಾಸದ ಮನೆಯ ಹಿಂಬದಿಯ ಬಾಗಿಲನ್ನು  ಒಡೆದು ಮಹೇಶ  ಹಾಗೂ ಮಣಿಕಂಠ ಅಲಿಯಾಸ್  ಮಣಿ ಎಂಬವರು ಒಳಪ್ರವೇಶಿಸಿ ಮನೆಯ ಒಳಗಡೆ ಬ್ಯಾಗಿನ ಒಳಗೆ  ಇಟ್ಟಿದ್ದ  ತಲಾ 2 ಗ್ರಾಂ ತೂಕದ  2 ಸಣ್ಣ  ಬಂಗಾರ ಉಂಗುರ  ತಲಾ 8 ಗ್ರಾಂ ತೂಕದ  ಬಂಗಾರದ  ಚೈನನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ  23,500/- ಆಗಬಹುದು.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಸುಲೋಚನಾ ರವರ ತಮ್ಮ ಸುಧಾಕರ  ಪ್ರಾಯ:40 ವರ್ಷ, ಸುಂದರಿ ನಿವಾಸ, ದೆಲಂತಬೆಟ್ಟು, ಶಿಬರೂರು, ಮಂಗಳೂರು  ಎಂಬಾತನು ದಿನಾಂಕ  4.3.2014 ರಂದು ಮದ್ಯಾಹ್ನ 1.30 ಗಂಟೆ ಸಮಯಕ್ಕೆ ಫಿರ್ಯಾದಿದಾರರ ಮನೆಯಿಂದ ಮುಂಬೈಗೆ  ರೈಲಿನ   ಮೂಲಕ ಹೋಗುತ್ತೇನೆಂದು ಹೇಳಿ ಹೋಗಿದ್ದು ಈವರೆಗೂ ಮುಂಬೈಗೂ  ಹೋಗದೇ  ಮನೆಗೂ ಬಾರದೇ  ಸಂಬಂಧಿಕರ ಮನೆಗೂ ಹೋಗದೇ  ಕಾಣೆಯಾಗಿರುವುದಾಗಿದೆ.

 

4.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  01.04.2014 ರಂದು  ಬೆಳಗ್ಗಿನ ಜಾವ 4.45 ವೇಳೆಗೆ  ಆರೋಪಿ  ಹರೀಶ್ ಎಂಬಾತನು  ತನ್ನ  ಟಾಟಾ ಸುಮೋವನ್ನು ಮಂಗಳೂರು ತಾಲೂಕು ಪಾವಂಜೆ  ಗ್ರಾಮದ  ಪಾವಂಜೆ ಸೇತುವೆಯ ಬಳಿ  ಅವಿನಾಶ್ ಎಂಬಾತನನ್ನು  ಕೊಂದು  ಹಾಕಲು ಅವಿನಾಶನು  ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಮೋಟಾರ್ ಸೈಕಲ್  KA 19 EH 7744  ನೇದಕ್ಕೆ ಢಿಕ್ಕಿ ಪಡಿಸಿದ್ದು ಅವಿನಾಶನಿಗೆ  ಆಗಿರುವ  ತೀವ್ರ ತರಹದ ಜಖಂನಿಂದ  ಮೃತಪಟ್ಟಿರುವುದಾಗಿದೆ.

 

5.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-03-14 ರಂದು 19.15 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಎಂ. ಹರೇಕೃಷ್ಣ ಮಲ್ಯ ರವರು ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ಲಾವಂತಬೆಟ್ಟು ಎಂಬಲ್ಲಿರುವ ತನ್ನ ಅಣ್ಣನ ಬಾಬ್ತು ಲಕ್ಷೀ ನಾರಾಯಣ ಅಕ್ಕಿ ಮಿಲ್ ನಿಂದ ಮನೆ ಕಡೆಗೆ ಹೋಗುತ್ತಿರುವ ಸಮಯ ಆರೋಪಿ ತನ್ನ ಬಾಬ್ತು ಬಸ್ಸನ್ನು ಇರುವೈಲು ಕ್ರಾಸ್  ಕಡೆಯಿಂದ ಲಾವಂತಬೆಟ್ಟು ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಜಖಂ ಪಡಿಸಿ ಸ್ಥಳದಲ್ಲಿ ಬಸ್ಸನ್ನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾರೆ.

 

6.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01-04-2014 ರಂದು ಬೆಳಿಗ್ಗೆ ಪ್ರಕರಣದ ಪಿರ್ಯಾದುದಾರರಾದ ಶ್ರೀ ರಾಕೇಶ್ಎಸ್ಕುಮಾರ್ಎಂಬವರು ತನ್ನ ಬಾಬ್ತು ಮೋಟಾರು ಸೈಕಲ್ನೋಂದಣಿ ಸಂಖ್ಯೆ ಕೆಎ-19-ಇಸಿ-4815 ನೇಯದರಲ್ಲಿ ತನ್ನ ಅಕ್ಕಳ ಮಗಳು ಸುಮಾರುವರ್ಷ ಪ್ರಾಯದ ಎಲ್‌.ಕೆ.ಜಿ ವಿಧ್ಯಾರ್ಥೀ ಕು: ಪ್ರೇಕ್ಷಾ ಎಂಬವಳನ್ನು ಬೈಕಿನ ಮುಂದುಗಡೆಯಲ್ಲಿ ಕುಳ್ಳಿರಿಸಿಕೊಂಡು ಬಜಪೆ ಕಡೆಯಿಂದ ತನ್ನ ಮನೆಯಾದ ಕಾವೂರು ಕಡೆಗೆ ಠಾರು ರಸ್ತೆಯಲ್ಲಿ ಸವಾರಿಮಾಡಿಕೊಂಡು ಬರುತ್ತಾ ಮಾನ್ಯ ನ್ಯಾಯಾಲಯದ ಅಧಿಕಾರವ್ಯಾಪ್ತಿಗೊಳಪಟ್ಟ ಕಾವೂರು ಠಾಣಾ ಸರಹದ್ದಿನ ಮಂಗಳೂರು ತಾಲೂಕು ಮರಕಡ ಗ್ರಾಮದ ಅಂಡಲಬೀಡು ಎಂಬಲ್ಲಿ ರಸ್ತೆಯ ಏರಿಕೆಯ ಸ್ಥಳದ ತಿರುವಿನಲ್ಲಿಗೆ ಬೆಳಿಗ್ಗೆ ಸುಮಾರು 10-00 ಗಂಟೆಗೆ ತಲುಪಿದಾಗ್ಯೆ ತನ್ನ ಮುಂದುಗಡೆಯಿಂದ ಅಂದರೆ ಕಾವೂರು ಕಡೆಯಿಂದ ಬಜಪೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದ ಮೋಟಾರು ಸೈಕಲ್ನಂಬ್ರ: ಕೆಎ-51-ಎಲ್‌-0271 ನೇಯದರದ ಸವಾರ ಆಪಾದಿತ ಶ್ರೀ ಶ್ರೇಯಸ್ಸ್ಎಂಬವರು ತನ್ನ ಬಾಬ್ತು ಮೊಟಾರು ಸೈಕಲನ್ನು ಸದ್ರಿ ಸ್ಥಳದ ತಿರುವಿನಲ್ಲಿ ನಿಯಂತ್ರಿಸಲಾಗದೇ  ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು  ಕು: ಪ್ರೇಕ್ಷಾ ಎಂಬವರು ರಸ್ತೆಗೆ ಎಸೆಯಲ್ವಟ್ಟು ಪರಿಣಾಮ ಪಿರ್ಯಾದುದಾರರ ಬಲಕೈ ಮತ್ತು ಎಡಕೈಗೆ ರಕ್ತಗಾಯ ಹಾಗೂ  ಬಲಕೈ ಮೊಣಗಂಟಿನ ಕೆಳಗೆ ಗುದ್ದಿದ ನಮುನೆಯ ನೋವು , ಕು: ಪ್ರೇಕ್ಷಾಳಿಗೆ ಮುಖಕ್ಕೆ, ದವಡೆಗೆ ಹಾಗೂ ತುಟಿಗೆ ರಕ್ತಬರುವ ಗಾಯವಾಗಿರುವುದಾಗಿದೆ.

 

7.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-03-2014 ರಂದು ಫಿರ್ಯಾದಿದಾರರಾದ ಶ್ರೀ ವಾಸು ಕೆ. ಎಂಬವರು ತನ್ನ ಹೆಂಡತಿ ಮಕ್ಕಳೊಂದಿಗೆ  ತನ್ನ ಬಾಬ್ತು ಕೆಎ 20 5039 ನಂಬ್ರದ ಮಾರುತಿ  ಓಮ್ನಿ ಕಾರಿನಲ್ಲಿ ಹೆಬ್ರಿಗೆ ಹೋಗಿದ್ದು, ದುರ್ಗಾ ಪ್ರಸಾದ್ ಎಂಬವರು  ಕಾರನ್ನು ಚಲಾಯಿಸುತ್ತಿದ್ದು,  ಫಿರ್ಯಾದಿದಾರರು ರಾತ್ರಿ ವಾಪಾಸು  ತನ್ನ ಮನೆಯಾದ ಎಡಪದವಿಗೆ ಬರುತ್ತಾ ದಿನಾಂಕ: 01-04-2014 ರಂದು ರಾತ್ರಿ 01-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ, ಬಡಗ ಎಡಪದವು ಗ್ರಾಮದ ಬೈತರಿ ಎಂಬಲ್ಲಿಗೆ ತಲುಪುತ್ತಿದ್ದಂತೇ ಚಾಲಕರು ಕಾರನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ  ಕಾರು ಚಾಲಕರ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಗೆ ಮಗುಚಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ.

 

8.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2014 ರಂದು ಮಧ್ಯಾಹ್ನ 15:40 ಗಂಟೆಗೆ ಕುಳಾಯಿ ಗ್ರಾಮದ ಕಾರ್ಪೋರೇಟರ್ ಪ್ರತಿಭಾ ಕುಳಾಯಿಯವರು ಅವರ ಕಾಂಗ್ರೇಸ್ ಪಕ್ಷದ ಇಬ್ಬರು ಗಂಡಸು ಮತ್ತು ಇಬ್ಬರು ಹೆಂಗಸರು ಪಕ್ಷದ ಪರವಾಗಿ ಮತಯಾಚನೆಗೆ ಬಂದವರನ್ನು ವಿಜಯವಾಣಿ ಪತ್ರಿಕೆಯಲ್ಲಿ ಎಂ ಎಲ್ ಮೊಯಿದೀನ್ ಬಾವಾರವರು ಬಿ.ಜೆ ಪಿ ಪಕ್ಷದ ಸರ್ಕಾರವಿರುವಾಗ ಹಗಲಿನ ವೇಳೆಯಲ್ಲಿ ಜನರು ಕೋಡಿಕೆರೆಯಲ್ಲಿ ನಡೆದಾಡಲು ಹೆದರುವ ಪರಿಸ್ಥಿತಿಯಿತ್ತು ಈಗ ಪರಿಸ್ಥಿತಿ ಸುದಾರಿಸಿದೆ ಎಂಬಿತ್ಯಾದಿಯಾಗಿ ಬಂದ ವಿಚಾರ ತಪ್ಪೆಂದು ತಿಳಿಸುತ್ತಿರುವಾಗ  ಅವರು ನಮ್ಮನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ನಾವು ಪೇಪರಿನಲ್ಲಿ ಇನ್ನು ಬೇಕಾದರೂ ಬರೆಸುತ್ತೇವೆ ನಾನು ಕಾರ್ಪೋರೇಟರ್ ಏನು ಬೇಕಾದರೂ ಮಾಡುತ್ತೇನೆ ಬರೆಸುತ್ತೇನೆ  ಯಾರು ಕೇಳುದಕ್ಕೆ  ನಾನು ಏನು ಬೇಕಾದರೂ ಮಾಡುತ್ತೇನೆ ಎಂಬಿತ್ಯಾದಿಯಾಗಿ ಊಡಾಪೆಯಾಗಿ ಮಾತಾಡಿ ಅಲ್ಲಿದ್ದ ಮನೀಷ್ ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನನ್ನ ಎದುರಿನಲ್ಲಿ ಬೆಳೆದವ ನಿನ್ನನು ನೋಡಿಕೊಳ್ಳುತ್ತೇನೆ  ಎಂದು ಬೆದರಿಕೆ ಹಾಕಿರುತ್ತಾಳೆ,  ಘಟನೆ ಸುಂದರರವರ ಮನೆಯ ಬಳಿ ನಡೆದಿದ್ದು,  ಪೇಪರಿನಲ್ಲಿ ಬಂದ ಮಾಹಿತಿಯನ್ನು ಪ್ರತಿಭಾರವರಲ್ಲಿ ಕೇಳಿದಕ್ಕೆ ಆಕೆ ರೀತಿಯಾಗಿ ವರ್ತಿಸಿದ್ದಾಗಿದೆ.

 

9.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-03-2014 ರಂದು ಪಿರ್ಯಾದಿದಾರರ ಬಾವಾ ಶೇಖರ ಮಾಡನು ಆತನ ಹೆಂಡತಿ ಶ್ರೀಮತಿ ಸಾಲಿಕಾ ಎಂಬವಳನ್ನು ಅವರ ಬಾಬ್ತು ಆಕ್ಟಿವಾ ಹೋಂಡಾ ಸ್ಕೂಟರ್ ನಂಬ್ರ ಕೆ.. 19. ಇಡಿ 9804 ನೇದರಲ್ಲಿ ಸಹಸವಾರಳನ್ನಾಗಿ ಕುಳ್ಳಿರಿಸಿ ಮಂಗಳೂರು ಕಡೆಗೆ ತೆರಳಿ ವಾಪಾಸು ಕಾನಾ ಮಾರ್ಗವಾಗಿ ಅವರ ಮನೆ ಕಡೆಗೆ ಶೇಖರ ಮಾಡನು ಸದ್ರಿ ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ರಾತ್ರಿ 8-00 ಗಂಟೆ ಸಮಯಕ್ಕೆ ಲಲಿತ್ ಹೋಟೇಲ್ ಕಟ್ಟಡದ ಎದುರು ತಲುಪುತ್ತಿದ್ದಂತೆ ರಸ್ತೆಗೆ ಹಾಕಿದ ಉಬ್ಬನ್ನು ಕಂಡು ಒಮ್ಮೆಲೇ ಬ್ರೇಕ್ ಹಾಕಲು ಹಿಂಬದಿ ಕುಳಿತ್ತಿದ್ದ ಸಾಲಿಕಾಳು ಆಕ್ಟಿವಾ ಹೋಂಡಾದಿಂದ ಕೆಳಗೆ ಬಿದ್ದು ತಲೆಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ .ಜೆ ಆಸ್ಪತ್ರೆಗೆ ದಾಖಲಿಸಿದ್ದು ಅಪಘಾತಕ್ಕೆ ಶೇಖರ ಮಾಡನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.

 

10.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-03-2014 ರಂದು ಪಿರ್ಯಾಧಿದಾರರಾದ ರೇಖಾ ರವರು ತನ್ನ ಬಾಬ್ತು ವಾಹನ ನಂಬ್ರ KA-19-EH-6809 ನೇದರಲ್ಲಿ ಕನ್ಯಾನದಿಂದ ತೊಕ್ಕಟ್ಟುಗೆ ಎಗ್ರಿಕಲ್ಚರಲ್ ಪಿಗ್ಮಿ ಹಣವನ್ನು ಕಟ್ಟುವರೇ ಬರುತ್ತಾ ಕುತ್ತಾರು ಜಂಕ್ಷನ್ ತಲುಪುವಾಗ ಪಿರ್ಯಾದಿದಾರರ ಎದುರುನಿಂದ ಪಿಕ್‌‌ಅಪ್ ಜೀಪು ನಂಬ್ರ KA-19-D-9527 ನೇದರಲ್ಲಿ ಅದರ ಚಾಲಕನು ಮರದ ರೀಪುಗಳನ್ನು ತುಂಬಿಸಿ ಅತೀವೇಗವಾಗಿ ಹೋಗುತ್ತಿದ್ದು, ಪಿರ್ಯಾದಿದಾರರು ಅದರ ಹಿಂದುಗಡೆಯಿಂದ ಹೋಗುತ್ತಾ ಕುತ್ತಾರ್ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬಳಿ ತಲುಪುವಾಗ ಸಮಯ ಸುಮಾರು ಮದ್ಯಾಹ್ನ 1:20 ಗಂಟೆಗೆ ಸದ್ರಿ ಪಿಕ್ಅಪ್ಜೀಪಿನ ಚಾಲಕನು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಜೀಪಿನಲ್ಲಿದ್ದ ಒಂದು ರೀಪು ಜಾರಿ ಹಿಂದಿನಿಂದ ಚಲಾಯಿಸುತ್ತಿದ್ದ ಪಿರ್ಯಾದಿದಾರರ ಬಲ ಕಾಲಿನ ತೊಡೆಯ ಭಾಗಕ್ಕೆ ಬಂದು ಗುದ್ದಿದ್ದು, ಇದರ ಪರಿಣಾಮ ಪಿರ್ಯಧಿದಾರರು ಕೆಳಗೆ ಬಿದ್ದು ರಕ್ತ ಬರುವ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಸದ್ರಿ ಜೀಪಿನ ಚಾಲಕನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಯೇನಪೋಯ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಜೀಪಿನ ಚಾಲಕನು ಪಿರ್ಯದಿದಾರರಿಗೆ ಆದ ಗಾಯಕ್ಕೆ ಆಸ್ಪತ್ರೆಯ ಖರ್ಚುವೆಚ್ಚಗಳನ್ನು ನೀಡುವುದಾಗಿ ತಿಳಿಸಿದ್ದು, ಈವರೆಗೆ ನೀಡದೇ ಇರುವುದಾಗಿದೆ.

 

11.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-04-2014 ರಂದು ರಾತ್ರಿ 10-20 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಶ್ರೀಕಾಂತ್ ಸಾಲಿಯಾನ್ ರವರ ಸಂಬಂದಿಕರಾದ ಶ್ರೀಮತಿ ರುಕ್ಮಿಣಿ ಕೆ ಸಾಲಿಯಾನ್ ಹಾಗೂ ಅವರ ಗಂಡ ಕುಮಾರ್ ಸಾಲಿಯಾನ್ ರವರು ಸುರತ್ಕಲ್ ಪೇಟೆಯ ಶರತ್ ಬೇಕರಿ ಬಳಿ ಮಂಗಳೂರುಉಡುಪಿ ರಾ.ಹೆ 66 ನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ರಸ್ತೆ ದಾಟಿ ಪಶ್ಚಿಮ ಅಂಚು ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಮುಕ್ಕಾ ಕಡೆಗೆ KA.19.EH.1556 ನೇ ಮೋಟಾರು ಸೈಕಲಿನ ಸವಾರನು ಸದ್ರಿ ಮೋಟಾರು ಸೈಕಲನ್ನು ಸದ್ರಿ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು  ಬಂದಿರುವುದಲ್ಲದೇ ರಸ್ತೆಯ ತೀರಾ ಎಡ ಬದಿಗೆ ಬಂದು ರಸ್ತೆ ದಾಟುತ್ತಿದ್ದ ರುಕ್ಮಿಣಿ ಕೆ ಸಾಲಿಯಾನ್ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಸದ್ರಿ ರುಕ್ಮಿಣ ಹಾಗೂ ಮೋಟಾರು ಸೈಕಲ್ ಸವಾರ, ಸಹಸವಾರರಿಬ್ಬರು ರಸ್ತೆಗೆ ಬಿದ್ದು  ರುಕ್ಮಿಣಿ ಕೆ ಸಾಲಿಯಾನ್ ರವರಿಗೆ ತಲೆಗೆ ಹಾಗೂ ಕಾಲಿಗೆ ತೀರ್ವ ಸ್ವರೂಪದ ರಕ್ತ ಗಾಯವಾಗಿದ್ದು  ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರರಿಗೂ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು .ಜೆ ಆಸ್ಪತ್ರೆಗೆ ಕೊಂಡು ಹೋಗಿ ವೈದ್ಯರಲ್ಲಿ ತೋರಿಸಲು ವೈದ್ಯರು ಪರೀಕ್ಷಿಸಿ ತೀರ್ವ  ಗಾಯಗೊಂಡ ರುಕ್ಮಿಣಿ ಕೆ ಸಾಲಿಯಾನ್ ರವರು ಮೃತ ಪಟ್ಟಿರುವುದಾಗಿ, ಮೋಟಾರು ಸೈಕಲ್ ಸವಾರ ಸಹಸವಾರರಿಬ್ಬರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿರುವುದಾಗಿ,  ಅಪಘತಕ್ಕೆ ಮೋಟಾರು ಸೈಕಲ್ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.

 

12.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ದಿವಾಕರ ರವರು ಮಂಗಳೂರಿನ ಮುಳಿಹಿತ್ಲುವಿನಲ್ಲಿ ಗ್ಯಾರೇಜ್ಮೆಕ್ಯಾನಿಕ್ಆಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಮಂಗಳೂರು ಕಡೆಯಿಂದ ಜಪ್ಪಿನಮೊಗರು ಮಾರ್ಗವಾಗಿ ಹಿಂದಿರುಗುವ ಸಮಯ ಇವರ ಎದುರಿನಿಂದ ಪರಿಚಯದ ನೆರೆಕೆರೆಯ ನಿವಾಸಿ ನವರಾಜ್‌‌ (25) ನು ಅದೇ ಮಾರ್ಗವಾಗಿ ತೊಕ್ಕೋಟು ಕಡೆಗೆ ಹೋಗುತ್ತಿದ್ದು ರಾತ್ರಿ ಸಮಯ ಸುಮಾರು 10-30 ಗಂಟೆಗೆ ಜಪ್ಪಿನ ಮೊಗರು ಗ್ರಾಮದ ನೇತ್ರಾವತಿ ಸೇತುವೆ ಕೊನೆಯ ಅಂಚು ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಲಾರಿಯೊಂದು ಅದರ ಚಾಲಕನು ಅತೀವೇಗ, ಅಜಾಗರೂಕತೆ, ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಲಾರಿಯನ್ನು ರಸ್ತೆ ಎಡಕ್ಕೆ ತಿರುಗಿಸಿ ನವಾಜ್ ಮೋಟಾರ್‌‌ ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ನವರಾಜ್ಮೋಟಾರ್‌‌ ಸೈಕಲ್ಸಮೇತ ಡಾಮಾರು ರಸ್ತೆಗೆ ಬಿದ್ದನು. ಸಮಯ ಫಿರ್ಯಾದುದಾರರು ಹಾಗೂ ಇತರೆ ವಾಹನದ ಸವಾರರು ಸೇರಿಕೊಂಡು ನವರಾಜ್ನನ್ನು ಆರೈಕೆ ಮಾಡಲಾಗಿ ಆತನ ಮುಖಕ್ಕೆ ಹಾಗೂ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಫಿರ್ಯಾದುದಾರರು ಕೂಡಲೆ ವಾಹನವೊಂದರಲ್ಲಿ ತೊಕ್ಕೋಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನವರಾಜ್ಮೃತಪಟ್ಟ ವಿಷಯ ಆಸ್ಪತ್ರೆಯ ವೈಧ್ಯರಿಂದ ತಿಳಿದಿರುವುದಾಗಿದೆ. ಅಪಘಾತ ಸಮಯ ಲಾರಿ ನಂಬ್ರ ಕೆಎಲ್‌ 02 ಪಿ 3053 ಆಗಿರುತ್ತದೆ. ಹಾಗೂ ನವರಾಜ್‌‌ ಮೋಟಾರ್ಸೈಕಲ್ನಂಬ್ರ ಕೆಎ 19 ಇಹೆಚ್‌‌ 1557 ಆಗಿರುತ್ತದೆ. ಲಾರಿ ನಂಬ್ರ ಕೆಎಲ್‌ 02 ಪಿ 3053 ನೇದರ ಚಾಲಕನು ತನ್ನ ಬಾಬ್ತು ಲಾರಿಯನ್ನು ಅತೀವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣವಾಗಿರುತ್ತದೆ.

No comments:

Post a Comment