Saturday, April 19, 2014

Daily Crime Reports 19-04-2014

ದೈನಂದಿನ ಅಪರಾದ ವರದಿ.

ದಿನಾಂಕ 19.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರು ಮೆಸ್ಕಾಂನಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆಪಿರ್ಯಾದಿದಾರರ ತಂಗಿಯ ಗಂಡನ ಅಣ್ಣ ಲೋಕೇಶ್ ಎಂಬುವರು ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದು, ಈಗ್ಗೆ ಸುಮಾರು 3 ದಿನಗಳಿಂದ  ಅವರು ವಾಮಂಜೂರು ಸಂತೋಷ್ ನಗರ ಎಂಬಲ್ಲಿ, ಪುಷ್ಪಾವತಿ ಎಂಬುವರ ನಿರ್ಮಾಣದ ಹಂತದಲ್ಲಿರುವ  ಮನೆಯ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 18-04-2014 ರಂದು ಬೆಳಿಗ್ಗೆ 9-45 ಗಂಟೆ ವೇಳೆಗೆ ಸಂತೋಷ್ ನಗರದ ಪುಷ್ವಾವತಿ ರವರ ಒಂದನೇ ಮಹಡಿಯ ಬಾಗಿಲನ್ನು ಅಳವಡಿಸುವ ವೇಳೆ ಆಯತಪ್ಪಿ ಕೆಳಗಡೆ ಸುಮಾರು 12 ಫೀಟ್ ಎತ್ತರದಿಂದ ನೆಲಕ್ಕೆ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಕೂಡಲೇ ಪಿರ್ಯಾದಿದಾರರು ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಲೋಕೇಶ್ ನನ್ನು ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು ಅವರು ಮಾತನಾಡುತ್ತಿರಲಿಲ್ಲ. ನಂತರ ಪಿರ್ಯಾದಿದಾರರು ಲೋಕೇಶ್ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ನರ್ಸಿಂಗ್ ಹೋಮ್ ಗೆ ಕೊಂಡೊಯ್ದಿದ್ದು ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಲೋಕೇಶ್ ರವರು ಸಂಜೆ 6-05 ಗಂಟೆಗೆ ಮೃತಪಟ್ಟಿರುವುದಾಗಿದೆ. ಅವರು ಕೆಲಸ ಮಾಡುತ್ತಿದ್ದ ಮನೆಯ ಮಹಡಿಯ ಬಾಗಿಲ ಬದಿಯಲ್ಲಿ ಯಾವುದೇ ತಡೆಗೋಡೆಯನ್ನು ನಿರ್ಮಿಸದೇ ಇದ್ದರೂ ಸದ್ರಿ ಸ್ಥಳದಲ್ಲಿ ಪುಷ್ಪಾವತಿರವರು ಬಾಗಿಲನ್ನು ಅಳವಡಿಸುವಂತೆ ಲೋಕೇಶ್ ರಿಗೆ ತಿಳಿಸಿ ಕೆಲಸ ಮಾಡುವಂತೆ ಒತ್ತಾಯಿಸಿದ್ದರಿಂದ ಲೋಕೇಶ್ ರವರು ಬಾಗಿಲನ್ನು ಅಳವಡಿಸುವರೇ ಹೋಗಿದ್ದಾಗಿದ್ದು, ಸದ್ರಿ ಸ್ಥಳದಲ್ಲಿ ಯಾವುದೇ  ತಡೆಗೋಡೆ (ರೈಲಿಂಗ್) ಯನ್ನು ನಿರ್ಮಿಸದೆ ಪುಷ್ಪಾವತಿ ರವರು ನಿರ್ಲಕ್ಷ ವಹಿಸಿದ್ದರಿಂದ ಮತ್ತು ಸದ್ರಿ ಸ್ಥಳದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕೆಳಗಡೆ ಬಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಕೆಲಸ ಮಾಡಿಸುತ್ತಿದ್ದ ಪುಷ್ಪಾವತಿಯವರಿಗೆ ತಿಳಿದಿದ್ದರೂ  ಅವರು ಯಾವುದೇ ಸುರಕ್ಷಾ ಕ್ರಮವನ್ನು ಅಳವಡಿಸದೇ ನಿರ್ಲಕ್ಷತನ ತೋರಿದ್ದರಿಂದಲೇ ಈ ಅವಗಡವು ಸಂಭವಿಸಿ ಲೋಕೇಶ್ ರವರು ಮೃತಪಟ್ಟಿದ್ದಾಗಿದೆ.

No comments:

Post a Comment