ದೈನಂದಿನ ಅಪರಾದ ವರದಿ.
ದಿನಾಂಕ 06.04.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 4.4.2014 ರಂಧು 18.40 ಗಂಟೆಗೆ ಕಾರು ನಂಬ್ರ KA19-MB-8508 ನ್ನು ಅದರ ಚಾಲಕ ಅವೇರಿ ಜಂಕ್ಷನ್ ಕಡೆಯಿಂದ ಅಂಬೇಡ್ಕರ್ ಸರ್ಕಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು LG ಶೋ ರೋಮಿನ ಎದುರು ತಲುಪುವಾಗ ಅಂಬೇಡ್ಕರ್ ಸರ್ಕಲ್ ಕಡೆಯಿಂದ ಪಳ್ನಿರ್ ರಸ್ತೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಶೇಖರ್ ಪೂಜಾರಿ ಎಂಬುವವರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು ಸೋಂಟಕ್ಕೆ ಗುದ್ದಿದ ಗಾಯ ತಲೆಯ ಹಿಂಭಾಗಕ್ಕೆ ರಕ್ತಗಾಯ ಗೊಂಡು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕೆತ್ಸೆಯಲ್ಲಿರುತ್ತಾರೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.04.2014 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 05.04.2014 ರ ಬೇಳಿಗ್ಗೆ 08:00 ಗಂಟೆಯ ಮಧ್ಯೆ ಮಂಗಳೂರು ತಾಲೂಕು, ಬೋಳಿಯಾರು ಗ್ರಾಮದ, ಬೋಳಿಯಾರು ಜಂಕ್ಷನ್ನಲ್ಲಿರುವ ಫಿರ್ಯಾದಿದಾರರ ಶ್ರೀದೇವಿಪ್ರಸಾದ್ ಹಾರ್ಡ್‌ವೇರ್ ಶಾಫ್ ಎಂಬ ಅಂಗಡಿಯ ಎದುರಿನ ಶಟರನ್ನು ಯಾರೋ ಕಳ್ಳರು ಒಡೆದು ಒಳನುಗ್ಗಿ ಅಂಗಡಿಯಲ್ಲಿದ್ದ ಸುಮಾರು ರೂ. 18,000/- ಮೌಲ್ಯದ ಹಾರ್ಡ್‌ವೇರ್ ಉಪಕರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ನೀಲಮ್ಮ ಎಂಬವರ ಮಗನಾದ ಶ್ರೀಕಾಂತನು ಕೊಟ್ಟಾರದ ಸರಕಾರಿ ಶಾಲೆಯಿಂದ ದಿನಾಂಕ 05-04-2014ರ ಮದ್ಯಾಹ್ನ 12-00 ಗಂಟೆ ಸಮಯಕ್ಕೆ ಶಾಲೆ ಬಿಟ್ಟು ಮನೆಯಾದ ಬಂಗ್ರಕೂಳೂರು 4 ನೇ ಮೈಲುಕಲ್ಲು ಎಂಬಲ್ಲಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೂಳೂರಿನಿಂದ ಕೊಟ್ಟಾರ ಚೌಕಿ ಕಡೆಗೆ ಬರುತ್ತಿದ್ದ ಕೆಎ -19-ಹೆಚ್-9099 ನೇಯ ಮೋಟಾರ್ ಸೈಕಲಿನ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿದ್ದ ಪಿರ್ಯಾದುದಾರರ ಮಗನಾದ ಶ್ರೀಕಾಂತನಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಕಾಂತನು ರಸ್ತೆಗೆ ಬಿದ್ದು ತುಟಿಯ ಬಳಿ ತಲೆಯ ಭಾಗಕ್ಕೆ, ಮುಖದ ಎಡ ಮತ್ತ ಬಲ ಭಾಗಕ್ಕೆ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಬೈಕ್ ಸವಾರನು ರಸ್ತೆಗೆ ಬಿದ್ದು ಗಾಯಗೊಂಡು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ.
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-04-2014 ರಂದು ಬೆಳಿಗ್ಗೆ 9:30 ಗಂಟೆಗೆ ಎರಡನೇ ಅಡಿಷನಲ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಟೈಪಿಸ್ಟ್ ಶರ್ಮಿಳಾ ಇವರು ಕೋರ್ಟಿನ ಹೊಸ ಕಟ್ಟಡದ 3 ನೇ ಮಹಡಿಯಲ್ಲಿ ಅಳವಡಿಸಿದ್ದ ಸರ್ವರ್ ಮತ್ತು ಲ್ಯಾನ್ ಇದರ ಸ್ವೀಚ್ಚನ್ನು ಆನ್ ಮಾಡುವ ಸಮಯ ಯುಪಿಸ್ (NUMERIC DIGITAL 600 EX-C) ಕಳವಾಗಿರುವುದು ಕಂಡುಬಂದಿದ್ದು, ಕೂಡಲೆ ಸಿಸ್ಟಂ ಆಫಿಸರ್ ಇವರ ಗಮನಕ್ಕೆ ತಂದಿದ್ದು, ಸದ್ರಿ ಯುಪಿಎಸ್ ನ ಅಂದಾಜು ಬೆಲೆ ರೂ. 2500/- ಆಗಬಹುದು, ಸದ್ರಿ ಯುಪಿಎಸ್ ಅನ್ನು ದಿನಾಂಕ 04-04-2014 ರ ಸಂಜೆಯಿಂದ 05-04-2014 ರಂದು ಬೆಳಿಗ್ಗೆ 9:30 ಗಂಟೆ ಮಧ್ಯೆ ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-04-2014 ರಂದು ಸ್ಕೂಟರ್ ನಂಬ್ರ ಕೆಎ-19/ಇಎಫ್.-6050 ನೇ ದರಲ್ಲಿ ಮಧ್ಯಾಹ್ನ ಮಂಗಳೂರಿನಲ್ಲಿ ಒರುವ ಅಲೋಸಿಯಸ್ ಕಾಲೇಜಿನಿಂದ ಪಿರ್ಯಾದಿದಾರರಾದ ಶ್ರೀ ಹೆರಿಕ್ ಡಿ'ಸೋಜಾ ರವರು ತನ್ನ ಮನೆಯಾದ ತೋಕೂರಿನ ಭಂಕಿ ಕುದ್ರಿಗೆ ಸವಾರಿ ಮಾಡಿಕೊಂಡು ಹೊರಟು ಕುದುರೆಮುಖ ಜಂಕ್ಷನ್ ನಿಂದೆ ಎಂ.ಆರ್ ಪಿ.ಎಲ್ ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ ಸಮಯ 4-00 ಗಂಟೆಗೆ ಕಿಸ್ಕೋ ಕಂಪನಿಯ ಮುಖ್ಯ ದ್ವಾರದ ಕಡೆ ಹೋಗುವ ರಸ್ತೆಗಿಂದ ಸ್ವಲ್ಪ ಮುಂದೆ ಪಿಕಪ್ ವಾಹನ ಕೆಎ-17/ಎ-8496 ನೇ ದನ್ನು ಅದರ ಚಾಲಕರು ಅತೀ ವೇಗಾ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವರು ಒಮ್ಮೆಲೆ ಯಾವುದೇ ಸೂಚನೆ ಯನ್ನು ನೀಡದೆ ಪಿಕಪ್ ವಾಹನವನ್ನು ರಸ್ತೆಯ ಮದ್ಯೆ ನಿಲ್ಲಿಸಿದ ಪರಿಣಾಮ ಸ್ಕೂಟರ್ ನಲ್ಲಿ ಹಿಂದಿನಿಂದ ಹೋಗುತ್ತಿದ್ದ ಪಿರ್ಯಾದಿದಾರರು ಪಿಕಪ್ ವಾಹನದ ಹಿಂಬದಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಾಗ ಬಲ ಕಾಲಿನ ಕೋಲು ಕಾಲಿಗೆ ತೀವ್ರ ಸ್ವರೂಪದ ಮೂಳೆ ಮುರಿತದಂತಹ ಗಾಯ ಹಾಗೂ ಎಡ ಕೈಯ ಮೊಣಗಂಟಿನ ಬಳಿ ತರಚಿದಂತ ರಕ್ತ ಗಾಯ ವಾಗಿರುತ್ತದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05.04.2014 ರಂದು ಪಿರ್ಯಾದಿದಾರರಾದ ಶ್ರೀ ಸಂದೇಶ್ ಕೆ. ಶೆಟ್ಟಿ ರವರು ತನ್ನ ಬಾಬ್ತು ಕೆಎ19ಜೆಡ್6039 ನೇ ನಂಬ್ರದ ಇನ್ನೋವಾ ಕಾರಿನಲ್ಲಿ ಪಂಪ್‌ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಾ 15.00 ಗಂಟೆಗೆ ನೇತ್ರಾವತಿ ಹೊಸಸೇತುವೆಯಲ್ಲಿ ಹೋಗುತ್ತಿದ್ದಂತೆ ಹಿಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಕೆಎ19ಇಹೆಚ್1945 ನೇ ಮೋಟಾರ್ ಸೈಕಲನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಇನ್ನೋವಾ ಕಾರಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಅನ್ಸಾರ್ ಮತ್ತು ಸಹಸವಾರ ಹನೀಶ್ ಎಂಬವರುಗಳಿಗೆ ಗಾಯವಾಗಿರುವುದಾಗಿದೆ.
No comments:
Post a Comment