Monday, April 21, 2014

Daily Crime Reports 21-04-2014

ದೈನಂದಿನ ಅಪರಾದ ವರದಿ.

ದಿನಾಂಕ 21.04.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-04-2014 ರಂದು ಸುಮಾರು 20:00 ಗಂಟೆಗೆ ಉರ್ವಾ ಡೋಮಿನಿಕ್ ಚರ್ಚ್ ಎದರುಗಡೆ ಇರುವ ಮೋಹಿನಿ ಎಂಬವರ ಮನೆಯ ಬಳಿ ಪಿರ್ಯಾದಿದಾರರಾದ ಶ್ರೀ ಪ್ರಕಾಶ್ ರವರ ವೈಯುಕ್ತಿಕ ವಿಚಾರದಲ್ಲಿ ತಗಾದೆ ತೆಗೆದು ಆರೋಪಿಗಳ ಪೈಕಿ ಪ್ರತಾಪ್ ಎಂಬವನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ "ನೀನು ಭಾರತಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ" ಎಂದು ಹೇಳಿ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ಎಡಗೈಯ ಕೊಲುಗೈಗೆ ಹೊಡೆದ ಪರಿಣಾಮ ರಕ್ತಗಾಯವಾಗಿದ್ದಲ್ಲದೆ ಇತರ ಆರೋಪಿಗಳಾದ ವಸಂತ ಹಾಗೂ ಗಣೇಶ ಕಾಲಿನಿಂದ ತುಳಿದು ಅವಾಚ್ಯ ಶಬ್ಚಗಳಿಂದ ಬೈದ್ದಿದ್ದು ಗಲಾಟೆಯನ್ನು ಬಿಡಿಸಲು ಬಂದ ಮೋಹಿನಿಯವರಿಗೆ ಕುಮಾರ್ ಎಂಬವನು ಸ್ಪಾನರ್ ನಿಂದ  ಬಲ ತುಟಿಯ ಮೇಲ್ಬಾಗಕ್ಕೆ ಹೋಡೆದು ರಕ್ತಗಾಯ ಮಾಡಿದ್ದು ಅಲ್ಲದೆ ಬಲಭಾಗದ ಮೇಲಿನ ಹಲ್ಲಿಗೆ ಜಖಂ ಆಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-04-2014 ರಂದು  ಬೆಳಿಗ್ಗೆ ಸುಮಾರು 08.45 ಗಂಟೆಗೆ ಬಸ್ಸು ನಂಬ್ರ KA- 19-C-883 ನೇದನ್ನು ಅದರ ಚಾಲಕ ಯೋಗಿಶ ಎಂಬುವರು ಕದ್ರಿ ಶಿವಭಾಗ್ ಕಡೆಯಿಂದ ಸೈಂಟ್  ಆ್ಯಗ್ನೆಸ್ ಜಂಕ್ಷನ್ ಕಡೆಗೆ ಕದ್ರಿ ಮಲ್ಲಿಕಟ್ಟೆಯ ಮುಂಭಾಗದ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಲ್ಲಿಕಟ್ಟೆ ನಗರ ಗ್ರಂಥಾಲಯದ ಹಿಂಭಾಗದ ರಸ್ತೆಗೆ ಏಕಾಏಕಿ ತಿರುಗಿಸಿ ಚಲಾಯಿಸುವಾಗ ಕದ್ರಿ ಶಿವಭಾಗ ಕಡೆಯಿಂದ ಸಿಟಿ ಆಸ್ಪತ್ರೆ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಪಲ್ಸರ್ ಮೊ,ಸೈಕಲ್  ನಂಬ್ರ  KA- 19-X-313 ಕ್ಕೆ ಡಿಕ್ಕಿ ಆಗಿ ಮೊ,ಸೈಕಲ್  ಸವಾರ ಮತ್ತು ಸಹ ಸವಾರರು ರಸ್ತೆಗೆ ಬಿದ್ದಾಗ ಬಸ್ಸಿನ ಎಡ ಭಾಗದ ಹಿಂಭಾಗದ ಚಕ್ರ ಮೊ,ಸೈಕಲ್  ಸವಾರ ಮತ್ತು ಹಿಂಬದಿ ಸವಾರ ಹಾಗೂ ಮೊ,ಸೈಕಲ್  ಮೇಲೆ ಹರಿದು ಹೋಗಿ ಸವಾರ ಮತ್ತು ಸಹಸವಾರರಿಬ್ಬರು ಗಂಭಿರ ಸ್ವರೂಪದ ಗಾಯಗೊಂಡು ಸವಾರ ಮನೋಜ್ ನಾಯಕ್ ರವರು ಸ್ಥಳದಲ್ಲಿ ಮೃತ ಪಟ್ಟಿದ್ದಾಗಿದ್ದು ಹಿಂಬದಿ ಸವಾರ ರಕ್ಷಿತ್ ಶೆಣೈ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಜಸ್ವಿನಿ  ಆಸ್ಪತ್ರೆಯಲ್ಲಿ  ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ  ಕುಮಾರಿ ಶಮಿಕಾ ರವರು ಬೈಕ್ ಸವಾರ  ಅಭಿಜಿತ್ ರವರ  ಜೊತೆ ದಿನಾಂಕ  20.4.2014  ರಂದು  ಅಭಿಜಿತ್  ರವರ  ಬಾಬ್ತು ಕೆಎ  19 EJ  2813 ನೇ ಯಮಹಾ   ಮೋಟಾರ್ ಸೈಕಲಿನಲ್ಲಿ   ಉಡುಪಿ ಕಡೆಯಿಂದ ಮಂಗಳೂರು ಕಡೆಗೆ  ಸಹಸವಾರಳಾಗಿ  ಬರುತ್ತಿದ್ದ  ಸಮಯ ಸಂಜೆ  4.00  ಗಂಟೆಗೆ   ಮಂಗಳೂರು ತಾಲೂಕು  ಮುಲ್ಕಿ ಠಾಣಾ ಸರಹದ್ದಿನ  ಬಪ್ಪನಾಡು  ಗ್ರಾಮದ  ಮುಲ್ಕಿ  ಪುನರೂರು ಕಾಂಪ್ಲೆಕ್ಸ್  ಎದುರಿನ  ಎನ್  ಹೆಚ್  66 ರಲ್ಲಿ  ತಲುಪುವಾಗ್ಗೆ   ಎದುರುಗಡೆಯಿಂದ  ಅಂದರೆ  ಮಂಗಳೂರು ಕಡೆಯಿಂದ    ಕೆಎ 20 M  9337 ನೇ  ಓಮಿನಿ ಕಾರು ಚಾಲಕ  ಆರೋಪಿ ಲಾರ್ಡ  ಕ್ಸೆವಿಯರ್  ಎಂಬಾತನು ತನ್ನ ಬಾಬ್ತು ಓಮಿನಿ ಕಾರನ್ನು ರಸ್ತೆಯ   ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ  ಢಿಕ್ಕಿ  ಪಡಿಸಿದ  ಪರಿಣಾಮ    ಮೋಟಾರ್   ಬೈಕ್ ಸವಾರ  ಮತ್ತು ಸಹಸವಾರಳು ರಸ್ತೆ  ಎಸೆಯಲ್ಪಟ್ಟಿದ್ದು  ಪರಿಣಾಮ   ಫಿರ್ಯಾದಿದಾರರ  ತಲೆಗೆ  ರಕ್ತಗಾಯ  ಎದೆಗೆ  ಕೈಗೆ  ಗುದ್ದಿದ  ಗಾಯ   ಅದೇ   ರೀತಿ ಅಭಿಜಿತ್  ರವರಿಗೂ  ತಲೆಗೆ  ರಕ್ತ ಗಾಯವುಂಟಾಗಿದ್ದು ಚಿಕಿತ್ಸೆ  ಬಗ್ಗೆ   ಮುಕ್ಕ  ಶ್ರೀನಿವಾಸ ಆಸ್ಪತ್ರೆಗೆ  ಒಳರೋಗಿಯಾಗಿಯಾಗಿ ದಾಖಲಾಗಿರುವುದಾಗಿದೆ.

 

4.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-04-2014 ರಂದು ರಾತ್ರಿ ಸಮಯ ಪಿರ್ಯಾದಿದಾರರಾದ ಶ್ರೀ ಸಂತೋಷ್ ರವರು ಅವರ ಬಾಬ್ತು ಬೈಕಿನಲ್ಲಿ ಸುರತ್ಕಲ್ ನಿಂದ ಎಮ್ ಆರ್ ಪಿ ಎಲ್ ಕಡೆಗೆ ಹೋಗುತ್ತಿದ್ದು ಅವರ ಮುಂದಿನಿಂದ ಮೋಟಾರು ಸೈಕಲ್ ನಂಬ್ರ ಕೆ 19 ಇಎಪ್ 1350 ನೇದರಲ್ಲಿ  ಅವರ ಸ್ನೇಹಿತ ಮಧು  ಎಂಬವರು ಸವಾರಿ ಮಾಡಿಕೊಂಡ ಹೋಗುತ್ತಿದ್ದು ರಾತ್ರಿ ಸುಮಾರು 9-35 ಗಂಟೆಗೆ ಇಡ್ಯಾ ಗ್ರಾಮದ ಬಿ ಎಸ್ ಎಪ್ ಬಳಿ ತಲುಪುತ್ತಿದ್ದಂತೆ ಎಮ್ ಆರ್ ಪಿ ಎಲ್ ಕಡೆಯಿಂದ ಸುರತ್ಕಲ್ ಕಡೆಗೆ ಕೆ 19 ಎಮ್ 2342 ನೇ ಕಾರನ್ನು ಅದರ ಚಾಲಕ ವಿಪಿನ್ ಜೋಸೆಪ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ಮಧು ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಕೆಳಗೆ ಬಿದ್ದು ಬಲಕಾಲಿಗೆ ಕೈಗೆ ಗಾಯವುಂಟಾಗಿರುವುದಲ್ಲದೇ ಕಾರಿನಲ್ಲಿದ್ದ ಗಿರಿಜಾ ಮೇರಿ ಎಂಬವರಿಗೂ ಕೂಡ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಇಬ್ಬರನ್ನು ಮಂಗಳೂರಿನ ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

5.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.04.2014 ರಂದು ಪಿರ್ಯಾದುದಾರರಾದ ಜೈರಾಜ್ ರವರು ರಾತ್ರಿ 10:05 ಗಂಟೆ ಸಮಯಕ್ಕೆ ಮಂಗಳೂರು ನಗರದ NH 17ನೇ ದಡ್ಡಲಕಾಡು ಕ್ರಾಸ್ ರಸ್ತೆಯ ಬದಿಯಲ್ಲಿ ಮುರಳೀಧರ ಎಂಬವರ ಜೊತೆ ನಿಂತುಕೊಂಡಿರುವ ಸಮಯ ಕುಂಟಿಕಾನ ಕಡೆಯಿಂದ ಕೂಳೂರು ಕಡೆಗೆ KA-20-J-7766ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ಗುರುಪ್ರಸಾದ್ ಎಂಬವರು ಅತೀವೆಗ ಮತ್ತು ತೀರಾ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಜೊತೆ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಮುರಳೀಧರ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಮುರಳೀಧರ ರವರು ರಸ್ತೆಗೆ ಬಿದ್ದು ಅವರ ಎಡಕಾಲಿಗೆ ಮತ್ತು ಎದೆಗೆ ಬಲವಾದ ಗುದ್ದಿದ ಗಾಯ ಹಾಗೂ ಮುಖಕ್ಕೆ ಕೈಗಳಿಗೆ ತರಚಿದ ತರಹದ ಗಾಯಗೊಂಡವರನ್ನು ಪಿರ್ಯಾದುದಾರರು ಮತ್ತು ಆರೋಪಿ ಗುರುಪ್ರಸಾದ್ ರವರು ಚಿಕಿತ್ಸೆ ಬಗ್ಗೆ ನಗರದ .ಜೆ ಆಸ್ಪತ್ರೆ ದಾಖಲುಗೊಳಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮುರಳೀಧರ ರವರು ದಿನಾಂಕ: 20.04.2014 ರಂದು ರಾತ್ರಿ 11:55 ಗಂಟೆ ಸಮಯಕ್ಕೆ ಮೃತಪಟ್ಟಿರುವುದಲ್ಲದೇ ಸದ್ರಿ ಅಪಘಾತದಿಂದ ಆರೋಪಿ ಮೋಟಾರ್ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿರುವುದಾಗಿದೆ.

 

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಜೆನೆಟ್ ತೆರಿಚಾ ಡಿ'ಸೋಜಾ ರವರು ಅಡ್ಯಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 4 ವರ್ಷದಿಂದ ಕೆಲಸ ಮಾಡುತ್ತಿದ್ದು ದಿನಾಂಕ 20-04-2014 ರಂದು ತೊಕ್ಕೋಟು ಸೆಬಾಸ್ಟಿನ್ಚರ್ಚ ಗೆ ಪ್ರಾರ್ಥನೆ ಮುಗಿಸಿ ತಮ್ಮ ತಾಯಿ ರೋಸಿ ಯವರೊಂದಿಗೆ ಅವರ ಬಾಬ್ತು ಸ್ಕೂಟರ್‌‌ ನಂಬ್ರ ಕೆಎ 19 ಇಜೆ 5019 ನೇಯದ್ದರಲ್ಲಿ ಹೋಗುತ್ತಿರುವಾಗ ಉಳ್ಳಾಲ ಹೊಯ್ಗೆ ಎಂಬಲ್ಲಿ ತಲ್ಪಿ ಹೆರಿ ಡಿಸೋಜಾ ಎಂಬುವವರ ಮನೆ ಬಳಿ ತಲ್ಪುವಾಗ ಸುಮಾರು 09-00 ಗಂಟೆ ಸಮಯಕ್ಕೆ ಫಿರ್ಯಾದಿದಾರರ ಬಲಬದಿಯಿಂದ ಒಬ್ಬ ಮೋಟಾರ್ಸೈಕಲ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಅವರ ತಾಯಿಯ ಜೊತೆಯಲ್ಲಿ ಸವಾರಿ ಮಾಡುತ್ತಿದ್ದ ಸ್ಕೂಟರ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದುದಾರರು ಹಾಗೂ ಅವರ ತಾಯಿ ಸ್ಕೂಟರ್‌‌ ಸಮೇತ ರಸ್ತೆಗೆ ಬಿದ್ದು ಫಿರ್ಯಾದುದಾರರ ತಲೆಗೆ ಮತ್ತು ಬಲಬದಿ ಕಣ್ಣಿಗೆ ತರಚಿದ ಹಾಗೂ ರಕ್ತಗಾಯವಾಗಿರುತ್ತದೆ. ಅಲ್ಲದೆ ಬಲಕಾಲು ಬಲಕೈಗೆ ತರಚಿದ ಗಾವಾಗಿರುತ್ತದೆ. ಫಿರ್ಯಾದುದಾರರ ತಾಯಿಗೆ ಕೈಗೆ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು ನಂತ್ರ ಅಲ್ಲಿ ಹತ್ತಿರದ ಜನ ಸೇರಿ ಆರೈಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ತೊಕ್ಕೋಟು ಸಹರಾ ಆಸ್ಪತ್ರೆಗೆ ದಾಖಲು ಮಾಡಿದ್ದು ಸದ್ರಿ ಅಪಘಾತ ಉಂಟು ಮಾಡಿದ  ಮೋಟಾರ್ಸೈಕಲ್ನಂಬ್ರ ಕೆಎ 19 ಇಹೆಚ್‌ 8462 ನೇ ಸ್ಪ್ಲೆಂಡರ್ಮೋಟಾರ್ಸೈಕಲ್ಆಗಿರುತ್ತದೆ. ಚಾಲಕ ಆಲ್ವಿನ್ಡಿಸೋಜಾ ಎಂದು ತಿಳಿದು ಬಂದಿದ್ದು ಅಪಘಾತಕ್ಕೆ ಮೋಟಾರ್ಸೈಕಲ್ಸವಾರನ ಅತೀ ವೇಗ ಹಾಗು ಅಜಾಗರೂಕತೆ ನಿರ್ಲಕ್ಷತನವೇ ಕಾರಣವಾಗಿರುತ್ತದೆ.

No comments:

Post a Comment