ದೈನಂದಿನ ಅಪರಾದ ವರದಿ.
ದಿನಾಂಕ 15.04.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 3 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-04-2014 ರಂದು ರಾತ್ರಿ 21:30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ರಂಜಿತ್ ಎಂಬವರು ತಮ್ಮ ವಾಸದ ಮನೆಯ ಮಂಗಳೂರು ನಗರದ ಕೋಡಿಕಲ್ ಕಲ್ಬಾವಿಯಲ್ಲಿರುವ ಧಾಮು ಕಾಂಪೌಂಡು ಎಂಬಲ್ಲಿ ಇದ್ದಾಗ ಪಿರ್ಯಾದಿಯ ಪರಿಚಯದ ಅಭಿ @ ಪ್ರೀತಮ್, ಸುನೀಲ್ @ ಕೌಟಿ, ಸುದರ್ಶನ್ ಮತ್ತು ಕೋಡಿಕಲ್ ನ ಬೋಯಿ ರವರು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಇವರುಗಳ ಪೈಕಿ ಅಭಿ ಎಂಬಾತನು ಆತನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾದಿಯ ತಲೆಗೆ ಹೊಡೆದಿದ್ದು ಸುನೀಲ್ @ ಕೌಟಿಯು ಆತನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾದಿಯ ಎಡ ಕಿವಿಗೆ, ಎಡ ಕೈಯ ಅಂಗೈಗೆ ಕಡಿದಿದ್ದು ಪಿರ್ಯಾದಿಗೆ ಬಾರಿ ರಕ್ತ ಗಾಯವಾಗಿದ್ದು, ಬೊಬ್ಬೆ ಹಾಕಿದಾಗ ಆರೋಪಿಗಳು ಕೃತ್ಯ ನಡೆಸಿದ ಬಳಿಕ ಪಿರ್ಯಾದಿಯನ್ನು ಕೊಲ್ಲದೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಒಡಿಹೋಗಿದ್ದು ಪಿರ್ಯಾದಿಯನ್ನು ತಂದೆ ಉಲ್ಲಾಸ್ ಮತ್ತು ತಮ್ಮ ಕಿರಣ್ ರವರು ರಿಕ್ಷಾದಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ. ಪಿರ್ಯಾದಿ ಮತ್ತು ಆತನ ಸ್ನೇಹಿತರು ಈ ಹಿಂದೆ ವಿವೇಕ ಪೂಜಾರಿ ಎಂಬಾತನಿಗೆ ಹಲ್ಲೆ ನಡೆಸಿದ ದ್ವೇಷದಿಂದಲೇ ಆರೋಪಿಗಳೆಲ್ಲರೂ ಈ ಕೃತ್ಯ ನಡೆಸಿದ್ದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.04.2014 ರಂದು ಬೆಳಿಗ್ಗೆ ಸುಮಾರು 09.45 ಗಂಟೆಗೆ ಟ್ರಕ್ ಟ್ರೈಲರ್ ನಂಬ್ರ TN-28-AM-2226 ನೇದನ್ನು ಅದರ ಚಾಲಕ ದೇವರಾಜ್ ಎಂಬುವವರು ಉಳ್ಳಾಲದ ಕಡೆಯಿಂದ ಬೆಂಗಳೂರು ರಸ್ತೆ ಕಡೆಗೆ ಹೋಗಲು ಮಹಾವೀರ ವೃತ್ತ ಬಳುಸುತ್ತಾ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದಾಗ ವೃತ್ತದ ಉತ್ತರ ಭಾಗದಲ್ಲಿ ವೃತ್ತದ ಕಟ್ಟೆಯ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಗೆ ಟ್ರಕ್ ಟ್ರೈಲರ್ ನ ಬಲಭಾಗದ ಬಾಡಿ ಡಿಕ್ಕಿ ಯಾಗಿ ರಸ್ತೆಗೆ ಬಿದ್ದಾಗ ಟ್ರಕ್ ಟ್ರೈಲರ್ ನ ಬಲಭಾಗದ ಹಿಂಭಾಗದ ಚಕ್ರ ಮುಖದ ಮೇಲೆ ಹರಿದು ಹೋಗಿ ಮೃತ ಪಟ್ಟದ್ದಾಗಿದೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-04-2014 ರಂದು ಮಧ್ಯಾಹ್ನ 3:00 ಗಂಟೆಯಿಂದ ಮುಡಿಪು ಕಾಯರ್ಗೋಳಿಯಿಂದ ಮುಡಿಪು ಚೆಕ್ಪೋಸ್ಟ್ ವರೆಗೆ ಬಿ.ಜೆ.ಪಿ ಪಕ್ಷದ ಚುನಾವಣಾ ಪ್ರಚಾರದ ಸಲುವಾಗಿ ಪಾದಯಾತ್ರೆ ನಡೆಸಲು ಶ್ರೀ ಚಂದ್ರಶೇಖರ ಉಚ್ಚಿಲ್, ಅಧ್ಯಕ್ಷರು, ಬಿ.ಜೆ.ಪಿ ಇವರು ಅನುಮತಿ ಕೋರಿಕೊಂಡಂತೆ, ಕಾಯರ್ಗೋಳಿ ಕ್ರಾಸ್ನಿಂದ ಮುಡಿಪು ಜಂಕ್ಷನ್ವರೆಗೆ ಪಾದಯಾತ್ರೆ ನಡೆಸಲು ಅನುಮತಿ ನೀಡಿದ್ದು, ಆದರೆ ಸದ್ರಿ ಪಕ್ಷದ ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ರೈ ಮತ್ತು ಇತರರು ಪಾದಯಾತ್ರೆಯ ಬದಲು ಸುಮಾರು 50 ಕಾರು, 200 ಬೈಕ್, ಒಂದು ಬಸ್ ಹಾಗೂ ಕೆಲವು ರಿಕ್ಷಾಗಳಲ್ಲಿ ಹಾಗೂ ತೆರೆದ ಜೀಪಿನಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಾದ ಪ್ರತಾಪ್ ಸಿಂಹ ನಾಯಕ್ರವರು ಬಾಳೆಪುಣಿ ಗ್ರಾಮ ಹಾಗೂ ಇತರ ಗ್ರಾಮಗಳ ಮಾರ್ಗವಾಗಿ ಮುಡಿಪು ಕಾಯರ್ಗೋಳಿ ಜಂಕ್ಷನ್ ತಲುಪಿ ಅಲ್ಲಿಂದ ಮುಡಿಪು ಜಂಕ್ಷನ್ಗೆ ಬಂದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು, ಈ ಕುರಿತು ಪಿರ್ಯಾದಿದಾರರಾದ ಶ್ರೀ ಜಿ.ಪಿ.ಎಂ. ಚೆರಿಯನ್, ಎಲೆಕ್ಷನ್ ಫ್ಲೈಯಿಂಗ್ ಸ್ಕ್ವಾಡ್, 204-ಮಂಗಳೂರು ಕಾನ್ಸ್ಟೀಟೆನ್ಸಿ, ಮಂಗಳೂರು ನಗರ ರವರು ನೀಡಿದ ದೂರನ್ನು ಸ್ವೀಕರಿಸಿ, ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.04.2014 ರಂದು ಮದ್ಯಾಹ್ನ 3:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಬೂಬಕ್ಕರ್ ಸಾದಿಕ್ ರವರು ತನ್ನ ಬಾಬ್ತು ಆಟೋ ರಿಕ್ಷಾ ನಂಬ್ರ ಕೆಎ-19ಬಿ-8308 ನೇಯದನ್ನು ಬೋಳಿಯಾರ್ ಜಂಕ್ಷನ್‌ನಿಂದ ಚೇಳೂರು ಜಂಕ್ಷನ್ಗೆ ಪ್ರಯಾಣಿಕರೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ತಾಲೂಕು, ಬೋಳಿಯಾರು ಗ್ರಾಮದ ಚೇಳೂರು ಕೇಬಲ್ ಆಫೀಸ್ ಬಳಿ ತಲುಪುತ್ತಿದ್ದಂತಯೇ ಎದುರಿನಿಂದ ಅಂದರೆ ಚೇಳೂರು ಕಡೆಯಿಂದ ಮಾರುತಿ ರಿಟ್ಜ್ ಕಾರ್ ನಂಬ್ರ ಕೆಎ-19ಎಂಸಿ-7693 ನೇಯದನ್ನು ಅದರ ಚಾಲಕ ಆರೋಪಿ ಸುಬ್ರಹ್ಮಣ್ಯ ಭಟ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾವು ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದು ರಿಕ್ಷಾ ಚಾಲಕ ಫಿರ್ಯಾದಿದಾರರಿಗೆ ಗಾಯವಾಗಿರುವುದಲ್ಲದೇ ರಿಕ್ಷಾ ಹಾಗೂ ಕಾರು ಜಖಂಗೊಂಡಿರುತ್ತದೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.
5.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13-04-2014 ರಂದು ಅಪರಾಹ್ನ 4-45 ಗಂಟೆಗೆ ಸರಿಯಾಗಿ ಪಿರ್ಯಾದುದಾರರಾದ ಶ್ರೀ ಶಿವಪ್ರಕಾಶ್, ಸೆಕ್ಟರ್ ಮ್ಯಾಜಿಸ್ಟ್ರೇಟರ್ 202, ಮಂಗಳೂರು ಉತ್ತರ, ಮಂಗಳೂರು ರವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ 202 ರ ವ್ಯಾಪ್ತಿಯ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಕಾವೂರು ಪೊಲೀಸ್ ಠಾಣಾ ಸರಹದ್ದಿನ ಕಾವೂರು ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣಾ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಚುಣಾವಣಾ ಪ್ರಚಾರದ ಕೆಎ-19-ಡಿ-2393 ನೇ ನೊಂದಣಿ ಸಂಖ್ಯೆಯ ವಾಹನವನ್ನು ತಡೆಹಿಡಿದು ಪರಿಶೀಲಿಸಿದಾಗ ಮಂಗಳೂರು ಪೊಲೀಸ್ ಆಯುಕ್ತರ ಕಛೇರಿ ಅನುಮತಿ ಪತ್ರ ಸಂ: 212/17-ಎಲ್.ಎಸ್.ಇ. ಎಲ್.ಎನ್/ಇ.ಎಲ್.ಸಿ/ಸಿ.ಓ.ಪಿ/2013-14 ದಿನಾಂಕ: 05-04-2014 ರಂತೆ 2014 ರ ಸಾರ್ವತ್ರಿಕ ಚುಣಾವಣೆಗೆ ಸಂಬಂದಿಸಿದಂತೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ವಾಹನವನ್ನು ಬಳಸಲು ಅನುಮತಿ ಇಲ್ಲದಿರುವುದು ಕಂಡು ಬಂದಿರುತ್ತದೆಂದು ವಾಹನ ಚಾಲಕರು ಶ್ರೀ ಮುಸ್ತಫಾ ಎಂಬವರಾಗಿದ್ದು ಮತ್ತು ಜೊತೆಯಲ್ಲಿ ಆಮ್ ಆದ್ಮಿ ಪಕ್ಷದವರಾದ ಶ್ರೀ ಆಶೋಕ್ ಪೂಜಾರಿ ಎಂಬವರು ಇದ್ದರೆಂದು ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಪಿರ್ಯಾದಿ ನೀಡಿರುವುದಾಗಿದೆ.
6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ವಸಂತ ಕಾರಂದೂರು ಇವರು ಶ್ರೀ ಬಿ. ಜನಾರ್ಧನ ಪೂಜಾರಿಯವರ ಚುನಾವಣಾ ಪ್ರತಿನಿಧಿಯಾಗಿದ್ದು, ಅಂತರ್ಜಾಲದಲ್ಲಿ ಮಂಗಳೂರು ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಶ್ರೀಬಿ. ಜನಾರ್ಧನಾ ಪೂಜಾರಿಯವರ ಮುಖವನ್ನು ನಾಯಿಯ ಮೇಲೆ ಕುಳಿತಿರುವ ವಿವಸ್ತ್ರ ವ್ಯಕ್ತಿಯ ದೇಹಕ್ಕೆ ಜೋಡಿಸಿ ಅವರ ಕುತ್ತಿಗೆಗೆ " Pls vote for modhi-jai bjp" ಎಂಬ ಫಲಕವನ್ನು ತೂಗಾಡಿಸಿದ್ದು, ಅಲ್ಲದೇ ಸೋನಿಯಾ ಗಾಂಧಿಯವರ ಮುಖವನ್ನು ಒಂದು ಹೆಂಗಸಿನ ದೇಹಕ್ಕೆ ಜೋಡಿಸಿ ಚಿತ್ರದ ಕೆಳಗೆ " Janna in different Look" ಎಂಬ ಅಡ್ಡ ಹೆಸರನ್ನು ಉಪಯೋಗಿಸಿ ಶ್ರೀ ಬಿ ಜನಾರ್ಧನ ಪೂಜಾರಿಯವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಹಾಳು ಮಾಡುವ ಉದ್ದೇಶದಿಂದ ಸದ್ರಿ ಚಿತ್ರೀಕರಣವನ್ನು ಚಿತ್ರಿಸಿ ಅಂತರ್ಜಾಲದ ಮೂಲಕ ಪ್ರಚಾರ ಮಾಡಿ ಕಾನೂನು ಹಾಗೂ ಚುನಾವಣಾ ನೀತಿ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದಾಗಿದೆ.
7.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-04-2014 ರಂದು ಬೆಳಿಗ್ಗೆ 06.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪಂಡಪ್ಪ ಪರಸಪ್ಪ ದೊಡ್ಡಮನಿ ರವರು ಕೆಲಸದ ನಿಮಿತ್ತ ತನ್ನ ಮನೆ ಮೀನಕಳಿಯದಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಡೆಗೆ ತಮ್ಮ ಬಾಬ್ತು ಸೈಕಲ್ ನಲ್ಲಿ ಸವಾರಿಮಾಡಿ ಕೊಂಡು ಹೋಗುತ್ತಿದ್ದ ಸಮಯ ಮೀನಕಳಿಯ ಕ್ರಾಸ್ ನಿಂದ ಸ್ವಲ್ಪ ಮುಂದೆ ಬೈಕಂಪಾಡಿ ಬ್ರಿಡ್ಜ್ ಬಳಿ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ರಾ. ಹೆ 66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆ ಯಿಂದ ಚಲಾಯಿಸಿಕೊಂಡು ಬಂದು ತನ್ನ ಹಿಂದಿನಿಂದ ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ತನಗೆ ಪರಿಚಯವಿರುವ ಆನಂದಪ್ಪ ಮಲ್ಲಪ್ಪ ರೇವಡಿ ರವರ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರು ರಸ್ತೆ ಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ,ಸೊಂಟದ ಬಲ ಬದಿಗೆ, ಬಲ ಕೆನ್ನೆಗೆ,ಬಲ ಕಾಲಿನ ಮೊಣಗಂಟು, ಕೋಲು ಕಾಲಿಗೆ ರಕ್ತ ಗಾಯ ಹಾಗು ತಲೆಯ ಬಾಗಕ್ಕೆ ತೀವ್ರ ಸ್ವರೂಪದ ರಕ್ತ ಗಾಯ ವಾಗಿರುತ್ತದೆ.
No comments:
Post a Comment