ದೈನಂದಿನ ಅಪರಾದ ವರದಿ.
ದಿನಾಂಕ 16.04.2014 ರ 17:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 3 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-04-2014ರಂದು ಬೆಳಿಗ್ಗೆ 8-30 ಗಂಟೆಯಿಂದ ಸಂಜೆ 4-00 ಗಂಟೆ ಮಧ್ಯೆ ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದ ಬಳಿ ಇರುವ ಬಾಸ್ಕೆಟ್ ಬಾಲ್ ಕ್ರೀಡಾಂಗಣದ ಬಳಿಯಲ್ಲಿರುವ ರೂಂನ ಬಾಗಿಲಿನ ಶಟ್ಟರನ್ನು ಯಾರೋ ಕಳ್ಳರು ಬಲಾತ್ಕಾರವಾಗಿ ತುಂಡರಿಸಿ ತೆರೆದು ರೂಂನಲ್ಲಿರಿಸಿದ್ದ (1) 10 pairs of shoes value Rs. 3000/- (2) Flood Lights -6 Value Rs. 15000/-, (3) Basket ball training Kit value Rs. 6000/-, (4) Wwight Plates 2 of 25 kgs each value Rs.200 ಒಟ್ಟು ಮೌಲ್ಯ ಸುಮಾರು 24,200/-ರೂ. ಮೌಲ್ಯದ ಕ್ರೀಡೋಪಕರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14/04/2014 ರಂದು 20:30 ಗಂಟೆಗೆ ಮೋಟರ್ ಸೈಕಲ್ ನಂಬ್ರ KA-19-EC-2849 ನ್ನು ಅದರ ಸವಾರ ಸಹ ಸವಾರರಾಗಿ ಒಬ್ಬರನ್ನು ಕುಳ್ಳಿರಿಸಿಕೊಂಡು ಹಂಪನಕಟ್ಟೆ ಕಡೆಯಿಂದ A.B ಶೆಟ್ಟಿ ವೃತ್ತದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು U.P ಮಲ್ಯ ರಸ್ತೆಯ ರೈಲ್ವೆ ಸ್ಟೆಷನ್ ಕ್ರಾಸ್ ರಸ್ತೆಯ ಬಳಿ ರಸ್ತೆ ದಾಟಲು ನಿಂತಿದ್ದ ಕೆ.ಟಿ ಮೊಯಿದ್ದಿನ್ ಎಂಬುವರಿಗೆ ಡಿಕ್ಕಿ ಮಾಡಿದ್ದು ,ಮೊಯಿದ್ದಿನ್ ರಸ್ತೆಗೆ ಬಿದ್ದು ತಲೆಗೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗೊಂಡು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿ NICU ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ ಅಪಘಾತದ ವೇಳೆ ಅರೋಪಿ ಮೋಟರ್ ಸೈಕಲ್ ಸವಾರನಿಗೆ ಮತ್ತು ಸಹ ಸವಾರನಿಗೆ ರಕ್ತಗಾಯಗಳಾಗಿರುತ್ತದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಎಸ್.ಮೋಹನ್ ರಾವ್ ರವರ ತಮ್ಮ ಸುರೇಶ್ ಕುಮಾರ್ ಪ್ರಾಯ 61 ವರ್ಷ ಎಂಬವರು ದಿನಾಂಕ 14.04.2014 ರಂದು ಸಮಯ ಸುಮಾರು ಮದ್ಯಾಹ್ನ 2.15 ಗಂಟೆಗೆ ಮಂಗಳೂರು ತಾಲಕು ಪಾವಂಜೆ ಗ್ರಾಮದ ಪಾವಂಜೆ ದೇವಸ್ಥಾನಕ್ಕೆ ತನ್ನ ಅಣ್ಣನೊಂದಿಗೆ ಬಂದಿದ್ದವರು ವಾಪಾಸು ತನ್ನ ಮನೆಗೆ ಅಂದರೆ ಮುಲ್ಕಿ ಕಡೆಗೆ ಹೋಗುವರೇ ಪಾವಂಜೆ ದೇವಸ್ಥಾನದ ಕಡೆಯಿಂದ ಮುಲ್ಕಿ ಕಡೆಗೆ ಹೋಗುವ ಬಸ್ಸಿಗಾಗಿ ರೆಸ್ತೆಯನ್ನು ದಾಟುವ ಸಮಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಆರೋಪಿ ಮಾರುತಿ ಓಮಿನಿ ಕಾರು ಚಾಲಕ ಸುನೀಲ್ ಡುಮಿಂಗ್ ಡಿಸೋಜಾ ಎಂಬಾತನು ತನ್ನ ಬಾಬ್ತು KA 47 M 3645 ನೇ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರೇಶ್ ಕುಮಾರ್ ರವರಿಗೆ ಢಿಕ್ಕಿ ಪಡಿಸಿದ ಪರಿಣಾಮ ಅವರ ತಲೆಗೆ ಕೈಗೆ ಹಾಗೂ ಕಾಲಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಜ್ಯೋತಿ ಕೆ.ಎಮ್.ಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸತೀಶ್ ಪೂಜಾರಿಯವರಿಗೆ ತನ್ನ ಗ್ರಾಮದ ನಿವಾಸಿ ದಿವಾಕರ ಚೌಟ ಎಂಬವರು ದಿನಾಂಕ 13-04-2014 ರಂದು 2.30 ಗಂಟೆಯ ಸಮಯಕ್ಕೆ ಪಿರ್ಯಾಧಿ ಮನೆಯಲ್ಲಿದ್ದ ಸಮಯದಲ್ಲಿ ಪಿರ್ಯಾಧಿದಾರರ ಮನೆಗೆ ಬಂದು ಮನೆಯ ಒಳಗೆ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನೀನು ಕಾಂಗ್ರೆಸ್ ಪಕ್ಷದಲ್ಲಿ ಬಾರಿ ಪ್ರಚಾರ ಮಾಡುತ್ತಿಯಾ ಎಂದು ಬೈದು ನಿನ್ನ ಸೊಂಟ ಮುರಿದು ಹಾಕುತ್ತೇನೆ ಎಂಬುದಾಗಿ ಬೈದು ಬೆದರಿಕೆ ಒಡ್ಡಿರುತ್ತಾರೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 15-04-2014 ರಂದು ಬೆಳಿಗ್ಗೆ 05-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಜೇಶ ರವರ ಚಿಕ್ಕಪ್ಪನ ಮಗನಾದ ನವೀನ್ ಎಂಬವನ ಮೋಟಾರು ಸೈಕಲ್ ನಂಬ್ರ ಕೆಎ 19 ಇಜೆ 6796 ನೇಯದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಮೋಟಾರು ಸೈಕಲ್ನ್ನು ನವೀನ್ ಎಂಬವರು ಅಲಂಗಾರು ಕಡೆಯಿಂದ ತಮ್ಮ ಮನೆಯಾದ ಬಿರಾವು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಿಪ್ರಿಯನ್ ಎಂಬವರ ಮನೆ ಬಳಿ ತಿರುವು ರಸ್ತೆಯಲ್ಲಿ ಎದುರು ಕಡೆಯಿಂದ ಅಂದರೆ ಬಿ.ಸಿ.ರೋಡ್ ಕಡೆಯಿಂದ ಮೂಡಬಿದ್ರೆ ಕಡೆಗೆ ಟೆಂಪೋ ಟ್ರಾವೆಲರ್ ನಂಬ್ರ ಕೆಎ 20 ಬಿ 7991 ನೇಯದನ್ನು ಅದರ ಚಾಲಕ ಇಕ್ಬಾಲ್ ಎಂಬವರು ಅತೀ ವೇಗ ಹಾಗೂ ಅಜಾರೂಕತೆಯಿಂದ ತೀರ ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರು ಸೈಕಲ್ ಸವಾರರು ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದು ಪಿರ್ಯಾದಿದಾರರಿಗೆ ಎಡಕಣ್ಣಿನ ಎಡಬದಿ, ಎಡ ಗದ್ದಕ್ಕೆ, ಎಡಕಾಲಿನ ಮಣಿಗಂಟಿನ ಬಳಿ ರಕ್ತಗಾಯವಾಗಿ, ಎಡಕೈಗೆ ಮತ್ತು ಬಲಕಾಲಿಗೆ ಗುದ್ದಿದ ನೋವುಂಟಾಗಿರುವುದಲ್ಲದೇ ಮೋಟಾರು ಸೈಕಲ್ ಸವಾರ ನವೀನ್ಗೆ ತಲೆಯ ಎಡಭಾಗಕ್ಕೆ, ಬಲಕೈ ಮಣಿಗಂಟಿನ ಬಳಿ, ತುಟಿ ಮತ್ತು ನಾಲಿಗೆಗೆ ಗಾಯವಾಗಿದ್ದು ಬಲಕಾಲಿಗೆ ಗುದ್ದಿದ ನೋವುಂಟಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಧೀರ್ ರವರು ಮಂಗಳೂರು ನಗರದ ಮಾರ್ನಮಿಕಟ್ಟೆಯಲ್ಲಿರುವ ಟರ್ನಿಂಗ್ ಪಾಯಿಂಟ್ ಬಿಲ್ಡಿಂಗ್ ನಲ್ಲಿ ಪಿಂಟೊ ಅಸೋಸಿಯೇಟ್ಸ್ ಎಂಬ ಟ್ರಾವೆಲಿಂಗ್ ಏಜೆನ್ಸಿ ಸಂಸ್ಥೆಯನ್ನು ನಡೆಸುತ್ತಿದ್ದು, ದಿನಾಂಕ 03-12-2013 ರಂದು ಮಹಾಕಾಳಿಪಡ್ಪು ನಿವಾಸಿ ಸಂತೋಷ್ ಎಂಬವರ ಪರಿಚಯದ ಮೇರೆಗೆ, ಗಿರೀಶ್ ರೈ ಎಂಬವರು ಪಿರ್ಯಾದಿದಾರರ ಬಾಬ್ತು ಕೆಎ 19 ಎಮ್ ಎ 4807 ನೇ ನಂಬ್ರದ ಮಾರುತಿ ಸುಜುಕಿ ರಿಡ್ಜ್ ಕಾರನ್ನು ದಿನಕ್ಕೆ ರೂಪಾಯಿ 1,200/- ರಂತೆ ಗೊತ್ತು ಪಡಿಸಿ ಬಾಡಿಗೆಗೆ ಪಡೆದುಕೊಂಡು ಹೋಗಿದ್ದು, ಕಳೆದ 4 ತಿಂಗಳಿನಿಂದ ಕಾರನ್ನು ವಾಪಾಸು ನೀಡದೇ, ಬಾಡಿಗೆಯನ್ನು ನೀಡದೇ ಮೋಸ ಮಾಡಿರುತ್ತಾರೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:14-4-2014 ರಂದು ರಾತ್ರಿ 08.30 ಗಂಟೆಗೆ ಮಾನ್ಯ ಸಹಾಯಕ ಪೊಲೀಸು ಆಯುಕ್ತರು, ಮಂಗಳೂರು ದಕ್ಷಿಣ ಉಪ ವಿಭಾಗ ರವರ ಆದೇಶದಂತೆ ದಕ್ಷಿಣ/2014 ನೇ ಜ್ಞಾಪನದಲ್ಲಿ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ. ಬಿ. ಜನಾರ್ಧನ ಪೂಜಾರಿಯವರ ಪ್ರತಿನಿಧಿ ಶ್ರೀ ವಸಂತ ಕಾರಂದೂರ್ ಎಂಬವರು, ಲೋಕ ಸಭಾ ಚುನಾವಣೆಗೆ ಸ್ಪರ್ಧಿಸುವ ಶ್ರೀ. ಬಿ. ಜನಾರ್ಧನ ಪೂಜಾರಿಯವರ ಮುಖವನ್ನು ನಾಯಿಯ ಮೇಲೆ ಕುಳಿತಿರುವ ವಿವಸ್ತ್ರ ವ್ಯಕ್ತಿಗೆ ಜೋಡಿಸಿ, ಅವರ ಕುತ್ತಿಗೆಗೆ " Pls vote for modhi jai BJP " ಎಂಬ ಫಲಕವನ್ನು ತೂಗಾಡಿಸಿ ಅವರ ಹಿಂದೆ ಸೋನಿಯಾ ಗಾಂಧಿಯವರ ಮುಖವನ್ನು ಬೇರೆ ಹೆಂಗಸಿನ ದೇಹಕ್ಕೆ ಜೋಡಿಸಿ ಶ್ರೀ ಬಿ.ಜನಾರ್ಧನ ಪೂಜಾರಿಯವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ;ಹಾಳು ಮಾಡುವ ಉದ್ದೇಶದಿಂದ ಸಂದೇಶವನ್ನು ಜಾಲ ತಾಣದಲ್ಲಿ ಯಾರೋ ಕಿಡಿಗೇಡಿಗಳು ಬಿತ್ತರಿಸಿ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ ಎಂಬುದಾಗಿ ದ.ಕ. ಲೋಕ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯವರು, ಜಿಲ್ಲಾಧಿಕಾರಿಯವರಿಗೆ ದೂರು ನೀಡಿರುವುದಾಗಿದೆ. ಸದರಿ ದೂರು ಅರ್ಜಿಯನ್ನು ಸ್ವೀಕರಿಸಿಕೊಂಡು ಘನ ಜೆ.ಎಂ.ಎಫ್.ಸಿ. 2ನೇ ನ್ಯಾಯಾಲಯದಿಂದ ಅನುಮತಿ ಆದೇಶದಂತೆ ಪ್ರಕರಣ ದಾಖಲಾಗಿರುವುದಾಗಿದೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14-04-2014 ರಂದು ಸಂಜೆ 5-45 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ, ಬಜಪೆ ಪೊಲೀಸ್ ಠಾಣಾ ಸರಹದ್ದಾದ, ಬಜಪೆ ಗ್ರಾಮದ ಒಡ್ಡಿದ ಕಲ ಎಂಬಲ್ಲಿ ಬಜಪೆಯಿಂದ ಶಾಂತಿಗುಡ್ಡೆ ಕಡೆಗೆ ಹೋಗುವ ಡಾಮಾರು ರಸ್ತೆಯಲ್ಲಿ ಜೀಪು ನಂ: ಕೆಎ 25 ಎಂ 824 ನೇದ್ದನ್ನು ಮಹೇಶ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದು, ಅವರ ಬದಿಯಲ್ಲಿ ಮಹಮ್ಮದ್ ಎಂಬವರು ಕುಳಿತ್ತಿದ್ದು, ಆ ಸಮಯ ಅವರ ಎದುರಿನಿಂದ ಅಂದರೆ, ಶಾಂತಿಗುಡ್ಡೆ ಕಡೆಯಿಂದ ಬಜಪೆ ಕಡೆಗೆ ಟಿಪ್ಪರ್ ಲಾರಿ ನಂ: ಕೆಎ 19 ಎಎ 515 ನ್ನು ಅದರ ಚಾಲಕ ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಮಹೇಶ್ ರವರು ಡಾಮಾರು ರಸ್ತೆಯ ತೀರಾ ಎಡಬದಿಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಜೀಪಿಗೆ ಜಖಂ ಆದುದ್ದಲ್ಲದೇ ಜೀಪು ಚಾಲಕ ಮಹೇಶ್ ರವರ ಹಣೆಗೆ , ಬಲ ದವಡೆಗೆ ತೀವ್ರ ಜಖಂ ಆದುದಲ್ಲದೇ ಮಹಮ್ಮದ್ ರವರ ಗಲ್ಲಕ್ಕೆ , ಕೆಳ ತುಟಿಗೆ ಜಖಂ ಆಗಿದ್ದು, ಗಾಯಾಳುಗಳನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಿರುವುದಾಗಿದೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಬಾಲಕೃಷ್ಣ ಎಂಬವರು ದಿನಾಂಕ: 09-04-2014 ರಂದು ಕೆಲಸದ ನಿಮಿತ್ತ ಮಧ್ಯಾಹ್ನ ಸಮಯ 1-30 ಗಂಟೆಗೆ ಮಂಗಳೂರು ತಾಲೂಕಿನ, ಕಂದಾವರ ಗ್ರಾಮದ, ಕಂದಾವರ ಪಂಚಾಯತು ಕಛೇರಿಗೆ ಹೋದಾಗ ಅಧ್ಯಕ್ಷರಾದ ಶ್ರೀಮತಿ ವಿಜಯ ಗೋಪಾಲ ಸುವರ್ಣ ಎಂಬವರಲ್ಲಿ ನೀರು ಸರಬರಾಜು ಮಾಡಿರುವ ಬಾಬ್ತು 25000/- ರೂಪಾಯಿಯನ್ನು ಕೇಳಿದಾಗ, ಅವರು ಅವಾಚ್ಯ ಶಬ್ದಗಳಿಂದ ಬೈದು, ಕಾಲರ್ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದು, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.
10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ದೇವಿ ಪ್ರಸಾದ್ ರವರು ತಾನು ಹಾಗೂ ತನ್ನ ಅಣ್ಣ ಶ್ರೀನಾಥ್ ಎಂಬವರು ದಿನಾಂಕ 15-04-2014 ರಂದು ಸಂಜೆ 8-45 ಗಂಟೆಗೆ ತೆಂಕ ಎಕ್ಕಾರು ಗ್ರಾಮದ ದುರ್ಗಾ ನಗರ ಎಂಬಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೆಎ 19 ಪಿ 3909 ನಂಬ್ರದ ಮಾರುತಿ 800 ಕಾರನ್ನು ಅದರ ಚಾಲಕ ಲಕ್ಷ್ಮಣ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತನ್ನ ಅಣ್ಣ ಶ್ರೀನಾಥ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಯ ಮೇಲೆ ಬಿದ್ದು ತೀವ್ರ ತರಹದ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ.
11.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕೈಕಂಬ ಎಂಬಲ್ಲಿ ಸೈಬರ್ ಸೆಂಟರ್ ನ್ನು ನಡೆಸುತ್ತಿದ್ದ ಹರಿಪ್ರಸಾದ್ ಎಂಬವರು ದಿನಾಂಕ 14/04/2014 ರಂದು ಸಂಜೆ 03-00 ಗಂಟೆಗೆ ಮನೆಬಿಟ್ಟು ಹೊಂಡಾ ಆಕ್ಟಿವಾದಲ್ಲಿ ಹೋದವನು ಮನೆಗೆ ವಾಪಾಸು ಬಾರದೆ ಕಾಣಿಯಾಗಿದ್ದು ಆತನ ಬಗ್ಗೆ ಸಂಬಂಧಿಕರು ಹಾಗೂ ನೆರೆಮನೆಯವರಲ್ಲಿ ವಿಚಾರಿಸಿದಾಗ ಎಲ್ಲಿಯೊ ಪತ್ತೆಯಾಗದೆ ಇದ್ದು ಕಾಣೆಯಾದ ವ್ಯಕ್ತಿಯ ಚಹರೆ ವಿವರ: ಹೆಸರು: ಹರಿಪ್ರಸಾದ್, ಪ್ರಾಯ: 29 ವರ್ಷ, ಕಪ್ಪು ಮೈ ಬಣ್ನ, ಮಿಸೆ ಬೋಳಿಸಿರುತ್ತಾರೆ, ಎತ್ತರ: 5 ಅಡಿ 5 ಇಂಚು, ದೃಡಕಾಯ ಶರೀರ, ಬಟ್ಟೆಗಳು: ಕಪ್ಪು ಪ್ಯಾಂಟ್, ಬಿಳಿ & ಹಸಿರು ಬಣ್ಣದ ಚೆಕ್ಸ್ ಶರ್ಟ್, ಎದುರು ಹಲ್ಲುಗಳು ಕಪ್ಪಾಗಿರುತ್ತವೆ.
12.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಶ್ರಫ್ ಜಮಾಲ್ ರವರ ಅಕ್ಕ ರುಕಿಯಾ ಬಾನು ಎಂಬವಳನ್ನು 2005 ನೇ ಮೇ ತಿಂಗಳಿನಲ್ಲಿ ಆರೋಪಿ ನಾಸಿರ್ ಹುಸೈನ್ ಎಂಬಾತ ಮದುವೆಯಾಗಿದ್ದು ಮದುವೆ ಬಳಿಕದಿಂದ ರುಕಿಯಾ ಬಾನುಳಿಗೆ ಅವಳ ಗಂಡ ನಾಸಿರ್ ಹುಸೈನ್ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು ಅಲ್ಲದೇ ಆತ ಇನ್ನೊಂದು ಮದುವೆ ಕೂಡ ಆಗಿದ್ದು ಆರೋಪಿಯ ಹಿಂಸೆಯಿಂದ ದಿನಾಂಕ 13-04-2014 ರಂದು ಬೆಳಿಗ್ಗೆ 09-00 ಗಂಟೆಗೆ ಸಸಿಹಿತ್ಲು ದರ್ಗಾ ಬಳಿಇರುವ ಮನೆಯಲ್ಲಿ ಪಿರ್ಯಾದಿಯ ಅಕ್ಕ ಮೈಗೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮ ಹತ್ಯೆಗೆ ಪ್ರಯತ್ನಿಸಿ ಸುಟ್ಟ ಗಾಯಗಳಿಂದ ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
13.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿನೋದ್ ಕೆ. ಕುಡ್ವ ರವರ ಕುಟುಂಬಕ್ಕೆ ಸೇರಿದ ಆಸ್ತಿಯು ಇಡ್ಯಾ ಗ್ರಾಮದ ಸುರತ್ಕಲ್ ಪದ್ಮಾವತಿ ಆಸ್ಪತ್ರೆ ಬಳಿ ಇದ್ದು ಸದ್ರಿ ಆಸ್ತಿಯನ್ನು ಕುಟುಂಬದ ಸದಸ್ಯರು ಪಾಲು ಮಾಡಿಕೊಳ್ಳುವ ವ್ಯಾಜ್ಯವು ಮಾನ್ಯ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ತನಿಖೆಯಲ್ಲಿದ್ದು ನ್ಯಾಯಾಲಯವು ಕೆಲವು ಆಸ್ತಿಗಳ ಮೇಲೆ ತಡೆಯಾಜ್ಞೆ ನೀಡಿರುತ್ತದೆ. ಆಪಾದಿತರಾದ ಪಿರ್ಯಾದಿದಾರರ ಅಣ್ಣ ವರದರಾಯ ಕುಡ್ವ ಮತ್ತು ಅವರ ಏಜೆಂಟರಾದ ರೋಹನ್ ಮೊಂತೆರೋ ರವರು ದಿನಾಂಕ 06-04-2014 ರಿಂದ ಈ ದಿನದವರೆಗೆ ಕಾನೂನು ಬಾಹಿರವಾಗಿ ಮತ್ತು ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಪಿರ್ಯಾದಿದಾರರ ಕುಟುಂಬದವರ ಆಸ್ತಿ ಇರುವ ಜಾಗದಲ್ಲಿರುವ ಮರಗಳನ್ನು ಜೆ ಸಿ ಬಿ ಮೂಲಕ ಕಡಿದು ನೆಲಸಮ ಗೊಳಿಸಿರುತ್ತಾರೆ, ಈ ಬಗ್ಗೆ ಪಿರ್ಯಾದಿದಾರರು ಅವರಲ್ಲಿ ವಿಚಾರಿಸಲು ತೆರಳಿದಾಗ "ನನ್ನ ಕೃತ್ಯಗಳಿಗೆ ಅಡ್ಡಿ ಬಂದಲ್ಲಿ ನಿಮ್ಮನ್ನು ಕೊಲೆ ಮಾಢದೇ ಬಿಡುವುದಿಲ್ಲ" ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರವೀಂದ್ರ ಮುನ್ನಿಪಾಡಿ ರವರು ಕಾರ್ಯದರ್ಶಿಯಾಗಿರುವ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ದಿನಾಂಕ 14-04-2014 ರಂದು ರಾತ್ರಿ ಶ್ರೀ ದೇವರಿಗೆ ಪೂಜೆಯನ್ನು ಮಾಡಿ, ದೇವಸ್ಥಾನದ ಎಲ್ಲಾ ಬಾಗಿಲುಗಳನ್ನು ಹಾಕಿ ಅರ್ಚಕರು ಮತ್ತು ಮೇನೇಜರ್ ಮನೆಗೆ ಹೋಗಿದ್ದು ದಿನಾಂಕ 15-04-2014 ರಮದು ಬೆಳಿಗ್ಗೆ 5-30 ಗಂಟೆಗೆ ದೇವಸ್ಥಾನಕ್ಕೆ ಬಂದಾಗ ದೇವಳದ ಉತ್ತರ ಬಾಗಿಲು ಒಡೆದಿದ್ದು, ಅದೇ ಬಾಗಿಲಿನಿಂದ ಒಳಪ್ರವೇಶೀಸಿ ನೋಡಿದಾಗ ದೇವರ ಮುಂದಿದ್ದ ಎರಡು ದೊಡ್ಡ ಕಾಣಿಕೆ ಡಬ್ಬಿಗಳನ್ನು ಒಡೆದಿದ್ದು, ಗರ್ಭಗುಡಿಯ ಒಳಗೆ ನೋಡಿದಾಗ ಪ್ರಧಾನ ಗರ್ಭಗುಡಿಯ ಒಳಗೆ ಇದ್ದ ದೇವರ ಮೂರ್ತಿಯಲ್ಲಿರುವ ಚಿನ್ನ ಲೇಪಿತ ಚೈನ್ ತೆಗೆದುಕೊಂಡು ಹೋಗಿರುತ್ತಾರೆ. ದೇವಸ್ಥಾನದ ಸ್ಟಾಕ್ ರೂಮ್ ಮತ್ತು ಕಛೇರಿಯನ್ನು ಜಾಲಾಡಿ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಕಳವಾದ ಅಂದಾಜು ಮೊತ್ತ ಸುಮಾರು 15,000/- ಆಗಬಹುದು.
15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಕನ್ನಪ್ಪ ಮಲ್ಲಪ್ಪ ಕಲಗಡೆ ರವರು ದಿನಾಂಕ: 15.04.2014 ರಂದು ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಕೆಎಸ್ಆರ್‌ಟಿಸಿ ಬಸ್ಸು ನಂ: ಕೆಎ-19-ಎಫ್-2494 ನೇ ದನ್ನು ಚಲಾಯಿಸಿಕೊಂಡು ಬರುತ್ತಾ ಪಡೀಲ್ ಸಮೀಪ ತಲುಪಿದಾಗ ಮುಂದುಗಡೆಯಲ್ಲಿ ಕೆಎ-19-ಇಜಿ-5148 ನೇ ದ್ವಿಚಕ್ರ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ಹೋಗುತ್ತಿದ್ದುದರಿಂದ ಪಿರ್ಯಾಧಿದಾರರು ಸೈಡ್ ನೀಡುವಂತೆ ಆತನಿಗೆ ಸೂಚನೆ ನೀಡುವ ಸಲುವಾಗಿ ಹಾರ್ನ್ ಹಾಕಿದರೆಂಬ ದ್ವೇಶದಿಂದ ಆರೋಪಿಯು ಬೆಳಿಗ್ಗೆ 09.10 ಗಂಟೆಯ ವೇಳೆಗೆ ನಾಗೂರಿ ಗರೋಡಿ ಸಮೀಪ ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿಗೆ ಆತನ ದ್ವಿಚಕ್ರವಾಹನವನ್ನು ಅಡ್ಡವಾಗಿಟ್ಟು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಬಸ್ಸಿನೊಳಗಡೆ ಬಂದು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಕೈಗಳಿಂದ ಹೊಡೆದು ಪೊಲೀಸ್ ಸ್ಟೇಷನ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿ ಪಿರ್ಯಾಧಿದಾರರು ಸರಕಾರಿ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿರುತ್ತಾರೆ.
No comments:
Post a Comment