Wednesday, April 30, 2014

Daily Crime Reports 29-04-2014

ದೈನಂದಿನ ಅಪರಾದ ವರದಿ.

ದಿನಾಂಕ 29.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರೊಂದಿಗೆ ದಿನಾಂಕ 20-04-2014ರಂದು ಪಿರ್ಯಾದುದಾರರಾದ ಶ್ರೀಮತಿ ಶೈಲಜಾ ರವರ ಗಂಡ ಶ್ರೀ ಚಂದ್ರಶೇಖರ (45) ಎಂಬವರು ಪಿರ್ಯಾದುದಾರರ ಅಕ್ಕನ ಮನೆಯಾದ ಬೋಳೂರು ಗ್ರಾಮದ ಸುಲ್ತಾನ್ಬತ್ತೇರಿ ಎಂಬಲ್ಲಿಗೆ ಬಂದಿದ್ದು, ಅಲ್ಲಿ ದಿನಾಂಕ 21-04-2014 ರಂದು ರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಾತ್ರಿ ಸುಮಾರು 8-30 ಗಂಟೆ ಸಮಯಕ್ಕೆ ತನಗೆ ಬೆನ್ನುನೋವು ಬರುತ್ತಿದೆ ಡಾಕ್ಟರ್ರವರಲ್ಲಿ ಹೋಗಿಬರುತ್ತೇನೆಂದು ತಿಳಿಸಿ ಅಲ್ಲಿಂದ ಹೊರಟು ಹೋದವರು ತದ  ನಂತರ ವಾಪಾಸ್ಸು ಅಕ್ಕನ ಮನೆಗೂ ಬಾರದೇ ತನ್ನ ಮನೆಗೂ ಬಾರದೇ ಎಲ್ಲಿಯೋ ಹೋಗಿದ್ದು, ಬಗ್ಗೆ ಅವರನ್ನು ಎಲ್ಲಾ ಕಡೆ ಹುಡುಕಾಡಿ ವರೆಗೆ ಪತ್ತೆಯಾಗದೇ ಇರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27.04.2014 ರಂದು ಮದ್ಯಾಹ್ನ 12.45 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಗೀತಾ ರವರು ಕೆ.ಪಿ.ಟಿ ಬಳಿ ಇರುವ ಬಾರೆ ಬೈಲ್ ಕ್ರಾಸ್ ರಸ್ತೆಯಿಂದ ಬಂದು NH-66 ರಸ್ತೆಯನ್ನು ದಾಟುತ್ತಿರುವಾಗ ಕುಂಟಿಕಾನ ಕಡೆಯಿಂದ ಕೆ.ಪಿ.ಟಿ   ಕಡೆಗೆ ಮೋಟರ್ ಸೈಕಲ್ ನಂಬ್ರ KA19-EC-742 ನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಬಲಕಾಲಿಗೆ ರಕ್ತಗಾಯ, ತಲೆಗೆ ಗುದ್ದಿದ ಗಾಯ ಉಂಟಾಗಿ  .ಜೆ ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿ ಮೋಟರ್ ಸೈಕಲ್ ಸವಾರನ ಎಡ ಅಂಗೈ ಕೂಡಾ ರಕ್ತಗಾಯ ಆಗಿರುತ್ತದೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-04-2014 ರಂದು  ಸಮಾರು 17.00 ಗಂಟೆಯ ವೇಳೆಗೆ ಪಿರ್ಯಾಧಿದಾರರಾದ ಶ್ರೀಮತಿ ಅನೂಸುಯಾ ರವರು ತನ್ನ ಮನೆಯಲ್ಲಿದ್ದ  ವೇಳೆ  ಆರೋಪಿಗಳಾದ ಕಾವೇರಿ, ವಡಿವೇಲು, ಲೋಕೇಶ್ವರಿಯವರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನುದ್ದೇಶಿಸಿ ತೆಲುಗು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಕೈಯಿಂದ ಹಾಗೊ ಪ್ಲಾಸ್ಟಿಕ್ ಚಯರ್ ಗಳಿಂದ ಹೊಡೆದು ಕೊಲ್ಲದೇ ಬಿಡುವುದಿಲ್ಲ ವೆಂದು ಜೀವಬೆದರಿಕೆ ಒಡ್ಡಿದಾಗಿದೆ . ವೇಳೆ ಪಿಯಾಧಿದಾರರ ಗಂಡ ಮನೆಯಲ್ಲಿದ್ದರೂ ಆರೋಪಿಗಳು ಪಿರ್ಯಾಧಿದಾರರಿಗೆ ಹಲ್ಲೆ ನಡೆಸುತ್ತಿರುವ ವೇಳೆ ಯಾವುದೇ ಅಡ್ಡಿ ಪಡಿಸದೇ ಆರೋಪಿಗಳಿಗೆ ಬೆಂಬಲವನ್ನು ಸೂಚಿಸುವ ರೀತಿಯಲ್ಲಿ ವರ್ತಿಸಿದ್ದು ಪಿರ್ಯಾಧಿದಾರರ ತನಗಾದ ಗಾಯದ ಬಗ್ಗೆ ಮೂಡಬಿದ್ರೆ ಆಳ್ವಾಸ್ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ಆರೋಪಿಗಳು ಪಿರ್ಯಾಧಿದಾರನ ಗಂಡ ಆಸ್ತಿಗಾಗಿ ರೀತಿ ಕೃತ್ಯ ವೆಸಗಿದ್ದಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-04-2014 ರಂದು ಸಂಜೆ 5.30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಯೂಸುಫ್ ರವರು ಅವರ ಬಾಬ್ತು ಆಟೋ ರಿಕ್ಷಾ ನಂಬ್ರ ಕೆಎ-19-ಎಎ-105 ರಲ್ಲಿ ಪ್ರಯಾಣಿಕರಾದ ಸ್ವಾತಿ ಎಂಬವರನ್ನು ಕುಳ್ಳಿರಿಸಿಕೊಂಡು ಮೂಡಬಿದ್ರೆಯಿಂದ ಮಿಜಾರು ಕಡೆಗೆ ಹೋಗುತ್ತಿರುವ ಸಮಯ ಎಡಪದವು ಕಡೆಯಿಂದ ಕೆಎ-19-ಬಿ-5128 ಪಿಕಪ್ ವಾಹನ ಚಾಲಕ ಸುರೇಶ್ ಎಂಬವನು  ಪಿಕಪ್ ವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ರಿಕ್ಷಾ ಚಾಲಕನಿಗೆ ಎಡ ಕಾಲಿನ ಮೊಣ ಗಂಟಿನ ಕೆಳಗೆ ಬಲ ಕಣ್ಣಿಗೆ ಎಡ ಕೈಯ ಮೊಣ ಗಂಟಿಗೆ ತರಚಿದ ಹಾಗೂ ಗುದ್ದಿದ ಗಾಯವಾಗಿರುತ್ತದೆ. ವಿದ್ಯಾರ್ಥಿ ಸ್ವಾತಿಗೆ ಹಣೆಗೆ ಮತ್ತು ಕೆನ್ನೆಗೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

 

5.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-04-2014 ರಂದು ಪಿರ್ಯಾದುದಾರರಾದ ಶ್ರೀ ಗಣೇಶ್ ರವರು ಸಚಿತಾರವರನ್ನು ಕಾರಿನಲ್ಲಿ ಕುಂಜತ್ತಬೈಲಿನ ಬಸವನಗರಕ್ಕೆ ಬಿಡಲು ಹೋಗಿದ್ದು, ಅವರನ್ನು ಕಾರಿನಿಂದ ಇಳಿಸಿ ಪಿರ್ಯಾದುದಾರರು ವಾಪಾಸು ಮನೆಯ ಕಡೆ ಬರುವಾಗ ರಾತ್ರಿ ಸುಮಾರು 10-45 ಗಂಟೆಗೆ ಕಾರನ್ನು ಬಸವನಗರ ಕಟ್ಟೆ ಬಳಿ ತಿರುಗಿಸುತ್ತಿದ್ದಂತೆ ಸುಮಾರು ಹತ್ತು ಹದಿನೈದು ಜನರು ಗುಂಪು ಅಕ್ರಮ ಕೂಟ ಸೇರಿಕೊಂಡು ಪಿರ್ಯಾದುದಾರರ ಕಾರಿನ ಎದುರಾಗಿ ಬಂದು ಕಾರನ್ನು ತಡೆದು ನಿಲ್ಲಿಸಿ ಪಿರ್ಯಾದುದಾರರನ್ನು ಕಾರಿನಿಂದ ಎಳೆದು ಹೊರಗೆ ಹಾಕಿದರು. ನೋಡಿದಾಗ ಅವರ ಪೈಕಿ ರಾಜು, ಸಾಗರ್, ಬಸವರಾಜ್, ಜಗ್ಗ, ಮಂಜು, ರವಿರಾಜ್, ಬರ್ಮಪ್ಪ, ಪಡೆಯಪ್ಪ, ರಾಮ, ರಾಮರೂಢ, ಇರುವುದು ಕಂಡು ಬಂದಿದ್ದು, ಪಿರ್ಯಾದುದಾರರನ್ನು ಕಾರಿನಿಂದ ಎಳೆದು ಹಾಕಿ "ನೀನು ನಮ್ಮ ಮೇಲೆ ದೂರು ನೀಡಿ ಬಂದಿದ್ದೀಯಾ ನೀನು ಯಾರೂ ಇದನ್ನು ಕೇಳಲು" ಎಂದು ಹೇಳಿದವರೇ ರಾಜು ಎಂಬವನು ಆತನ ಕೈಯಲ್ಲಿದ್ದ ಬಿಯರ್ ಬಾಟ್ಲಿಯಿಂದ ಪಿರ್ಯಾದುದಾರರಿಗೆ ಹೊಡೆದರು, ಅಲ್ಲದೇ ರವಿರಾಜ್, ಸಾಗರ್, ಬರ್ಮಪ್ಪರವರು ಪಿರ್ಯಾದುದಾರರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು, ಸಾಗರ್ ಕಲ್ಲಿನಿಂದ ಹೊಡೆದು ನಂತರ ಕಾರು ನಂಬ್ರ ಕೆಎ-19-ಎಂಡಿ-3769ನೇದರ ಎದುರು ಗ್ಲಾಸ್ ಪುಡಿ ಮಾಡಿದರು, ಅಷ್ಟರಲ್ಲಿ ಗಲಾಟೆಯನ್ನು ನೋಡಿದ ಸಚಿತಾರವರು ಮತ್ತು ಅವರ ತಾಯಿ ಬಂದು ಹೊಡೆಯುವುದನ್ನು ಬಿಡಿಸಿದರು, ಅವರನ್ನು ಕೂಡಾ ದೂಡಿದ್ದು, ಹಲ್ಲೆಯಿಂದ ಪಿರ್ಯಾದುದಾರರ ಎಡ ಕಣ್ಣು, ಬಲಮೊಣಗಂಟಿಗೆ ಗಾಯವಾಗಿರುವುದಲ್ಲದೇ ಮೈ-ಕೈ ನೋವಾಗಿದೆ. ನಂತರ  ಅವರೆಲ್ಲರೂ ಜನ ಬರುವುದನ್ನು ನೋಡಿ ಹೊರಟು ಹೋಗಿದ್ದು, ಪಿರ್ಯಾದುದಾರರು ಚಿಕಿತ್ಸೆ ಬಗ್ಗೆ ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಸಂತೋಷ್ ಡಿ'ಸೋಜಾ ರವರು ಚಾಲಕರಾಗಿದ್ದು ದಿನಾಂಕ 27-04-2014 ರಂದು ಕೆಲಸ ಮುಗಿಸಿಕೊಂಡು ಮಂಗಳೂರು ತಾಲೂಕು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೊಕ್ಕೋಟ್ನಿಂದ ಆಡಂಕುದ್ರು ಮನೆ ಕಡೆಗೆ ಕಾರು ನಂಬ್ರ ಕೆಎ 19 ಪಿ 2884 ನೇಯದ್ದರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ ಮಂಗಳೂರು ತಾಲೂಕು ಕಲ್ಲಾಪು ಮಸೀದಿ ಬಳಿ ತಲುಪುತ್ತಿರುವಾಗ ಮಂಗಳೂರು ಕಡೆಯಿಂದ ತೊಕ್ಕೋಟು ಕಡೆಗೆ ಬರುತ್ತಿದ್ದ ಕಾರು ಒಂದು ಅದರ ಚಾಲಕನು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ತೀವ್ರ ತರದ ಜಖಂ ಉಂಟಾಗಿರುತ್ತದೆ. ಫಿರ್ಯಾದುದಾರರಿಗೆ ಯಾವುದೇ ತರದ ಗಾಯಗಳಾಗಿರುವುದಿಲ್ಲ. ಡಿಕ್ಕಿ ಹೊಡೆದ ಕಾರು ನಂಬ್ರ ಕೆಎ 19 ಎಂಎ 6107 ಆಗಿದ್ದು ಇದು ಕೂಡ ಕಾರಿನ ಎದುರು ಭಾಗ ಜಖಂ ಆಗಿದ್ದು ಕಾರಿನಲ್ಲಿದ್ದ ಚಾಲಕ ಹಾಗೂ ಇತರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಪಘಾತವು ದಿನಾಂಕ 27-04-2014 ರಂದು ಸಂಜೆ 7-30 ಕ್ಕೆ ಆಗಿರುವುದಾಗಿದೆ. ಕೆಎ 19 ಎಂಎ 6107 ನೇದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಕಾರು ಚಲಾಯಿಸಿದ್ದರಿಂದಲೇ ಅಪಘಾತ ಸಂಭವಿಸಿರುತ್ತದೆ.

 

7.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-04-14 ರಂದು ಬೆಳಿಗ್ಗೆ ಸುಮಾರು 07-00 ಗಂಟೆಗೆ ಹೊಸಬೆಟ್ಟು ಗ್ರಾಮದ ಅಭಯ್ ಮಾರ್ಬಲ್ಸ್ ಬಳಿ ರಾ ಹೆ 66 ಪೂರ್ವ ಬದಿಯ ರಸ್ತೆಯ ಬದಿಯಲ್ಲಿ ಮಂಗಳೂರು ಕಡೆಗೆ ಬಸ್ಸಿಗಾಗಿ ಹೋಗುವರೇ ಪಿರ್ಯಾದಿದಾರರಾದ ಶ್ರೀ ವಸಂತ ಅಮೀನ್ ರವರು ಅವರ ಚಿಕ್ಕಮ್ಮಳಾದ ಶ್ರೀಮತಿ ವಸಂತಿ ಹಾಗೂ ತಂಗಿ ಮಗಳಾದ ಕುಮಾರಿ ದೀಪ್ತಿ ಎಂಬವರೊಂದಿಗೆ ನಿಂತು ಕೊಂಡಿರುವಾಗ ಅವರ ಪೈಕಿ ದೀಪ್ತಿಗೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಇನೋವಾ ವಾಹನ ನಂಬ್ರ ಕೆ 19 ಝೆಡ್ 6714 ನೇ ನಂಬ್ರದ ವಾಹನವನ್ನು ಅದರ ಚಾಲಕ ವಿನಾಯಕ ಎಸ್ ನಾಯಕ್ ರವರು ಅತೀ ವೇಗದಿಂದ ರಸ್ತೆಯ ಎಡ ಬದಿಗೆ ನಿರ್ಲಕ್ಷತನದಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ತಲೆಯ ಹಿಂಬದಿಗೆ ಬಲಕಣ್ಣಿಗೆ ಎಡ ಭುಜಕ್ಕೆ ಗಾಯಗೊಂಡ ದೀಪ್ತಿಯರವರನ್ನು ಪಿರ್ಯಾದಿದಾರರು ಸದ್ರಿ ವಾಹನ ಚಾಲಕರೊಂದಿಗೆ ಅಲ್ಲಿಗೆ ಬಂದ ಪದ್ಮಾವತಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಮಂಗಳೂರಿನ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ.

No comments:

Post a Comment