ದೈನಂದಿನ ಅಪರಾದ ವರದಿ.
ದಿನಾಂಕ 08.04.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-03-2014 ರಂದು ಪಿರ್ಯಾದುದಾರರಾದ ಶ್ರೀ ತಾರನಾಥ್ ಶೆಟ್ಟಿ ರವರು ಮಂಗಳೂರು ನಗರದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನಿಂದ ಕರ್ನಾಟಕ ಬ್ಯಾಂಕ್‌ಗೆ ಹಣ ಕಟ್ಟುವರೇ ರಸ್ತೆಯ ತೀರಾ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ಸಮಯ ಮದ್ಯಾಹ್ನ ಸುಮಾರು 12:30 ಗಂಟೆಗೆ ಯೆನೆಪೋಯಾ ಆಸ್ಪತ್ರೆಯ ಬಳಿ ತಲುಪಿದಾಗ, ಪಿರ್ಯಾದಿದಾರರ ಹಿಂಬದಿಯಿಂದ ಅಂದರೆ ಸಿಟಿ ಸೆಂಟರ್ ಕಡೆಯಿಂದ ನವಭಾರತ್ ಕಡೆಗೆ ಕಾರು ನಂಬ್ರ ಕೆ.ಎ-19-ಎಂ.ಬಿ-8529 ನೇದನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಸೊಂಟದ ಭಾಗ ಹಾಗೂ ಎಡಕಾಲಿನ ಮೊಣಗಂಟಿಗೆ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ನಗರದ ಯೆನೆಪೋಯಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ತೆರಳಿದ್ದು, . ಆದರೆ ಸ್ವಲ್ಪ ದಿನದಿಂದ ಪಿರ್ಯಾದಿದಾರರಿಗೆ ಕಾಲು ಹಾಗೂ ಸೊಂಟ ವಿಪರೀತ ನೋವು ಉಂಟಾಗಿರುವುದರಿಂದ ಸುರತ್ಕಲ್ನ ಪದ್ಮಾವತಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಕಾಲಿನ ಮೂಳೆ ಮುರಿತ ಉಂಟಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆಯೆಂದು ತಿಳಿಸಿರುವುದರಿಂದ ತಡವಾಗಿ ದೂರು ನೀಡಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲೊನಿಯ ವಾಸಿ ಮಲ್ಲಿಕಾರ್ಜುನರವರ ಅಕ್ಕನ ಮಗಳು ಅಂದರೆ, ಪಿರ್ಯಾದಿದಾರರಾದ ಶ್ರೀ ಮಲ್ಲಿಕಾರ್ಜುನ್ ರವರ ದೊಡ್ಡಪ್ಪನ ಮಗಳು ಭಾಗಮ್ಮ ಎಂಬವರ ಮಗಳಾದ ಶ್ರೀಮತಿ ನಿಂಗವ್ವ ಪ್ರಾಯ 24 ವರ್ಷ ಎಂಬವರು ದಿನಾಂಕ 10-03-2014 ರಂದು ತನ್ನ ಗಂಡನ ಮನೆಯಾದ ಗುಲ್ಬರ್ಗದ ಜೇವರ್ಗಿಯಿಂದ ಮುಲ್ಕಿಯ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲೊನಿಯಲ್ಲಿರುವ ತಾಯಿ ಮನೆಗೆ ಬಂದಿದ್ದು, ದಿನಾಂಕ 17-03-2014 ರಂದು ಮನೆಯವರೆಲ್ಲರೂ ಕೂಲಿ ಕೆಲಸಕ್ಕೆ ಹೋದ ನಂತರ ಒಬ್ಬಳೇ ಮನೆಯಲ್ಲಿದ್ದ ನಿಂಗವ್ವ ಯಾರಲ್ಲಿಯೂ ಹೇಳದೆ ಮನೆಯಿಂದ ಹೊರಗೆ ಹೋದವಳು ವಾಪಾಸ್ ಬಾರದೇ ಕಾಣೆಯಾಗಿರುತ್ತಾರೆ. ಆಕೆಯು ಸ್ವಲ್ಪ ಖಿನ್ನತೆಯಿಂದ ಇದ್ದಳು. ಈವರೆಗೆ ಮುಲ್ಕಿ ಹಾಗೂ ಗುಲ್ಬರ್ಗದ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.
3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅನಿಲ್ ಅನಸ್ತಾ ರವರು ಈಗಲ್ ಐ ಸೆಕ್ಯುರಿಟಿ ಸಂಸ್ಥೆಯಲ್ಲಿ ಕೆಲಸವಾಗಿದ್ದು, ಈಗ ಸಹರಾ ಅಪಾರ್ಟ್ ಮೆಂಟಿನಲ್ಲಿ ಸೆಕ್ಯುರಿಟಿ ಕೆಲಸವಾಗಿರುತ್ತದೆ, ದಿನಾಂಕ 07-04-2014 ರಂದು ಸಂಜೆ 6:30 ಗಂಟೆಗೆ ಕೆಎ-19-ಎಂ.ಎ-2765 ನೇ ಕಾರಿನಲ್ಲಿ 3 ಜನ ಬಂದಿದ್ದು, ಕಾರು ಪಾರ್ಕು ಮಾಡಲು ಬಂದಾಗ ಫಿರ್ಯಾದಿದಾರರು ಇಲ್ಲಿ ಪಾರ್ಕು ಮಾಡಬಾರದಾಗಿ ಹೇಳಿದಾಗ ಅವರಲ್ಲಿ ಇಬ್ಬರು ಫಿರ್ಯಾದಿದಾರರನ್ನು ತಡೆದು ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಜಿವ ಬೆದರಿಕೆ ಒಡ್ಡಿ ಕಾರು ಪಾರ್ಕಿಂಗ್ ಜಾಗದಿಂದ ಕೆಳಗೆ ದೂಡಿ ಹಾಕಿದ್ದು, ಇದರಿಂದ ಫಿರ್ಯಾದಿದಾರರಿಗೆ ಏಳಲು ಸಾಧ್ಯವಾಗದೇ ಇದ್ದಾಗ ಅಲ್ಲಿ ಹತ್ತಿರದ ಅಂಗಡಿಯವರು ವೆನ್ ಲಾಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ನಂತರ ಫಿರ್ಯಾದಿದಾರರ ಮ್ಯಾನೆಜರ್ ರವರು ಸ್ಥಳಕ್ಕೆ ಬಂದಾಗ ಆರೋಪಿಗಳು ಸ್ಥಳದಿಂದ ಓಡಿ ಹೋಗಿರುವುದಾಗಿದೆ.
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಉಮ್ಮರ್ ಸೊಹೇಲ್ ರವರಿಗೆ ದಕ್ಷಿಣ ದಕ್ಕೆಯಲ್ಲಿ ಮೀನುಗಾರಿಕಾ ಕೆಲಸವಾಗಿದ್ದು, ದಿನಾಂಕ 06-04-2014 ರಂದು ಮಂಗಳೂರು ನಗರದ ಬಂದರಿನ ಅನ್ಸಾರಿ ರಸ್ತೆಯಲ್ಲಿರುವ ಮೈದಾನದಲ್ಲಿ ಕ್ರಿಕೇಟ್ ಪಂದ್ಯಾಟದ ಸಮಯ ಬಂದರಿನ ತಂಡದಲ್ಲಿರುವ ಓರ್ವ ವ್ಯಕ್ತಿಯು ಕುದ್ರೋಳಿಯ ಯುವಕನಿಗೆ ಕಿರಿಕಿರಿ ಮಾಡಿದ್ದು, ನಂತರ ಆ ವಿಚಾರವನ್ನು ರಾಜಿಯಲ್ಲಿ ಇತ್ಯರ್ಥಪಡಿಸಿದ್ದು, ದಿನಾಂಕ 07-04-2014 ರಂದು ಸಂಜೆ ಸುಮಾರು 7:00 ಗಂಟೆಗೆ ರಾಜಿ ಸಂಧಾನ ಮಾಡುವ ಬಗ್ಗೆ ಕೈಸರ್, ಅಮೀರ್, ಅವೇಜ್, ನೌಫಾಲ್ ಎಂಬವರ ಜೊತೆ ಅನ್ಸಾರಿ ರೋಡಿಗೆ ಹೋಗಿರುತ್ತಾರೆ. ಈ ಸಮಯ ಫಿರ್ಯಾದಿದಾರರ ಪರಿಚಯವಿರುವ ಯುವಕರು ಕೈಯಲ್ಲಿ ರಾಡ್ ಹಿಡಿದುಕೊಂಡು ಅವರಲ್ಲಿ ಹಿದಾಯತುಲ್ಲಾ ಎಂಬವನು ಏಕಾಏಕಿಯಾಗಿ ಬೊಬ್ಬೆ ಹೊಡೆಯುತ್ತಾ ತಲೆಯ ನೆತ್ತಿಗೆ ಹೊಡೆದಿದ್ದು, ಪುನಃ ಹೊಡೆಯಲು ಪ್ರಯತ್ನಿಸಿದಾಗ ತಪ್ಪಿಸಿ ನೆಲಕ್ಕೆ ಬಿದ್ದಿದ್ದು, ಆಗ ಫಿರ್ಯಾದಿದಾರರ ಬಲ ಭಗ ಬೆನ್ನಿಗೆ ನೋವುಂಟಾಗಿರುತ್ತದೆ. ಫಿರ್ಯಾದಿದಾರರಿಗೆ ಪರಿಚಯವಿರುವ ಅಮ್ರಾಜ್, ಅಲ್ಪಾದ್, ಸಾಯಿಲ್ ಮತ್ತು ಮೂರು ನಾಲ್ಕು ಮಂದಿ ಸೇರಿ ಫಿರ್ಯಾದಿದಾರರು ಹಾಗೂ ಅವರ ಜೊತೆಗಿದ್ದ ಕೈಸರ್, ಅಮೀರ್, ಅವೇಜ್, ನೌಫಾಲ್ ಎಂಬವರಿಗೆ ಕೈಯಿಂದ ಹಲ್ಲೆ ನಡೆಸಿದ್ದು, ಆ ಸಮಯ ಬೊಬ್ಬೆ ಕೇಳಿ ಸಾರ್ವಜನಿಕರು ಸೇರಿದಾಗ ಹಿದಾಯತುಲ್ಲನು ರಾಡನ್ನು ಬಿಸಾಡಿ ಎಲ್ಲರೂ ಓಡಿ ಹೋಗಿರುತ್ತಾರೆ. ಬಳಿಕ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಆರೋಪಿಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಮಾರಕಾಯುಧವನ್ನು ಹಿಡಿದು ಕ್ರಿಕೆಟ್ ಆಟದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೊಲ್ಲುವ ಉದ್ದೇಶದಿಂದ ತಲೆಯ ನೆತ್ತಿಯ ಭಾಗಕ್ಕೆ ಹಲ್ಲೆ ನಡೆಸಿದ್ದು ಹಾಗೂ ಇತರರಿಗೆ ಕೈಯಿಂದ ಹಲ್ಲೆ ನಡೆಸಿರುವುದಾಗಿದೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ; 05-04-2014 ರಂದು ಸಂಜೆ ಸುಮಾರು 5-45 ಗಂಟೆಗೆ ಪಿರ್ಯಾಧಿದಾರರಾದ ಶ್ರೀನಿವಾಸ ಎಂಬುವರು ಬಜಪೆ ಬಸ್ಸು ನಿಲ್ದಾಣ ದಿಂದ ಸರ್ವಾಣೆ ಬಸ್ಸಿನಲ್ಲಿ ಕುಳಿತು ಮಂಗಳೂರು ತಾಲೂಕು, ಮಳವೂರು ಗ್ರಾಮದ , ಅಂಥೋನಿ ಕಟ್ಟೆ ಬಸ್ಸು ನಿಲ್ದಾಣದಲ್ಲಿ 6-00 ಗಂಟೆಗೆ ಇಳಿದು ಸದ್ರಿ ಬಸ್ಸು ತಂಗುದಾಣದಲ್ಲಿ ರುವ ಪರಿಚಯದ ರವೀಂದ್ರ ಪೊಜಾರಿ ಎಂಬುವರೊಂದಿಗೆ ಮಾತನಾಡಿ ಕೊಂಡಿರುವಾಗ ಸಂಜೆ ಸುಮಾರು 6-00 ಗಂಟೆಗೆ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಮಾರುತಿ ಕಾರೊಂದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ಬಲ ಬದಿಗೆ ಚಲಾಯಿಸಿಕೂಂಡು ಬರುತ್ತಾ ಕಚ್ಚಾಮಣ್ಣು ರಸ್ತೆಯಲ್ಲಿ ರುವ ಅಂಥೋನಿ ಕಟ್ಟೆ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಜಖಂ ಪಡಿಸಿದಲ್ಲದೆ ಕ್ಷಣರ್ಧದಲ್ಲಿ ಮಾರುತಿ ಕಾರನ್ನು ಅದರ ಚಾಲಕ ರಿವರ್ಸ್ ತೆಗೆದು ಅತೀ ವೇಗದಲ್ಲಿ ಬಜಪೆ ಕಡೆಗೆ ಚಲಾಯಿಸಿಕೂಂಡು ಪರಾರಿಯಾಗಿರುತ್ತಾನೆ. ಅಪಘಾತದಿಂದ ಪಿರ್ಯಾದಿದಾರರಾದ ಶ್ರೀನಿವಾಸ್ ಎಂಬುವರ ಎಡಕಾಲಿನ ಮೊಣಗಂಟಿನ ಕೆಳಗೆ ಕೋಲು ಕಾಲಿಗೆ, ಪಾದಕ್ಕೆ ಗಾಯವುಂಟಾಗಿದಲ್ಲದೆ ಬೆನ್ನಿಗೆ ಗುದ್ದಿದಂತೆ ಒಳ ನೋವುಂಟಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದು ರವೀಂದ್ರ ಪೊಜಾರಿ ಎಂಬುವರ ಎಡಕಾಲಿನ ಕೆಳಗೆ ಕೋಲು ಕಾಲಿಗೆ ತರಚಿದಂತಹ ಸಾಮಾನ್ಯ ಗಾಯವುಂಟಾಗಿರುವುದಾಗಿದೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಡಾ. ಪ್ರಶಾಂತ್ ಕುಮಾರ್ ರವರು 204 ನೇ ಮಂಗಳೂರು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮತ್ತು ಮಂಗಳೂರು ಸಹಾಯಕ ಆಯುಕ್ತರಾಗಿದ್ದು, ಅವರು ನವೀನ್ ಪೂಜಾರಿ, ಕಟಪಾಡಿ ಉಡುಪಿಯವರಿಂದ ದೂರೊಂದನ್ನು ಸ್ವೀಕರಿಸಿದ್ದು, ಸದ್ರಿ ದೂರನ್ನು ಮುಂದಿನ ಕಾನೂನು ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಯವರ ಮುಖಾಂತರ ಕಳುಹಿಸಿಕೊಟ್ಟಿದ್ದು, ಪೇಸ್ಬುಕ್- ಸಾಮಾಜಿ ಜಾಲತಾಣದಲ್ಲಿ Billawas For Namo" ಎಂಬ ಪೇಸ್ ಬುಕ್ ಪೇಜ್ನಲ್ಲಿ ನರೇಂದ್ರ ಮೋದಿಯು ಬ್ರಹ್ಮಶ್ರೀ. ನಾರಾಯಣ ಗುರುರವರ ಅವತಾರ ಎಂದು ಹೇಳುವಂತಹ ಸಂದೇಶವನ್ನು ಜಾಲತಾಣದಲ್ಲಿ ಭಿತ್ತರಿಸಿದ್ದು, ಬಿಲ್ಲವ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದ್ದು, ಸದ್ರಿ ಪೇಸ್ ಬುಕ್ ಪೇಜ್ನ್ನು ನಿಷೇದಿಸಿ, ಈ ಪೇಜ್ನ್ನು ಸೃಷ್ಠಿಸಿದ Admin ಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ನೀಡಿರುವುದಾಗಿದೆ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಚಿನ್ ಕುಮಾರ್ ರವರು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ KA 19 X 3160 ನೇದನ್ನು ದಿನಾಂಕ 01-04-2014 ರಂದು ರಾತ್ರಿ ಸುಮಾರು 9-30 ಗಂಟೆಗೆ ಕೈಕಂಬ ಲಲಿತ್ ಬಾರ್ ಎಂಡ್ ರೆಸ್ಟೋರೆಂಟ್ನ ಮುಂದುಗಡೆ ನಿಲ್ಲಿಸಿ, ಬಾರ್ಗೆ ಹೋಗಿ ಊಟ ಮುಗಿಸಿಕೊಂಡು ಪುನ: ರಾತ್ರಿ ಸುಮಾರು 10-00 ಗಂಟೆಗೆ ಬಂದು ನೋಡಿದಾಗ ಮೋಟಾರು ಸೈಕಲ್ ನಿಲ್ಲಿಸಿದ್ದ ಜಾಗದಲ್ಲಿ ಇಲ್ಲದೇ ಇದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು ಸದ್ರಿ ಮೋಟಾರು ಬೈಕನ್ನು ಯಾರೋ ಕಳ್ಳರು ದಿನಾಂಕ 01-04-2014 ರಂದು ರಾತ್ರಿ ಸುಮಾರು 9-30 ಗಂಟೆಯಿಂದ ಸುಮಾರು 10-00 ಗಂಟೆಯ ಮಧ್ಯೆ ಕಳ್ಳತನ ಮಾಡಿರುವುದಾಗಿದೆ. ಕಳವಾದ ಮೋಟಾರು ಬೈಕಿನ ವಿವರ: ನಂಬ್ರ KA 19 X 3160, ಕಂಪೆನಿ- ಹೀರೋ ಹೋಂಡಾ (ಹಂಕ್), ಬಣ್ಣ- ಕೆಂಪು, ಇಂಜೀನ್ ನಂಬ್ರ- KC13EA7GM08507, ಚೇಸಿಸ್ ನಂಬ್ರ – MBLKC13EA7GM11202, ಅಂದಾಜು ಮೌಲ್ಯ ರೂ. 35,000/-.
8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಮುಸ್ತಾಫಾ ರವರು ಬಜಾಜ್ ಕಂಪೆನಿಯ ಕಪ್ಪು ಬಣ್ಣದ ಪಲ್ಸರ್ ಮೋಟಾರು ಬೈಕು ನಂಬ್ರ ಕೆಎ-19 ಯು -8605 ಹೊಂದಿದ್ದು. ದಿನಾಂಕ 03-04-2014 ರಂದು ರಾತ್ರಿ ಸುಮಾರು 10-00 ಗಂಟೆಗೆ ಎಂದಿನಂತೆ ಮೋಟಾರು ಬೈಕನ್ನು ಇಡ್ಯಾ ಗ್ರಾಮದ ಗುಡ್ಡೆಕೊಪ್ಪಳ ಮಸೀದಿ ಬಳಿಯಿರುವ ಮನೆಯ ಕಂಪೌಂಡಿನ ಒಳಗಡೆ ಅಂಗಳದಲ್ಲಿ ಬೈಕನ್ನು ನಿಲ್ಲಿಸಿದ್ದು, ಮರುದಿನ ದಿನಾಂಕ 04-04-2014 ರಂದು ಬೆಳಿಗ್ಗೆ ಸುಮಾರು 08-00 ಗಂಟೆಗೆ ನೋಡಿದಾಗ ಪಿರ್ಯಾದಿದಾರರು ನಿಲ್ಲಿಸಿದ್ದ ಮೋಟಾರು ಬೈಕು ಆ ಸ್ಥಳದಲ್ಲಿ ಇರಲಿಲ್ಲ ನಂತರ ಪಿರ್ಯಾದಿದಾರರು ಇಡ್ಯಾ, ಗುಡ್ಡೆಕೊಪ್ಲ, ಸುರತ್ಕಲ್ ಪರಿಸರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು, ಪತ್ತೆಯಾಗದೇ ಇದ್ದುದರಿಂದ ಸದ್ರಿ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.
No comments:
Post a Comment