Wednesday, April 30, 2014

Daily Crime Reports 30-04-2014

ದೈನಂದಿನ ಅಪರಾದ ವರದಿ.

ದಿನಾಂಕ 30.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

3

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಿ.ಕೆ. ವಿಶ್ವನಾಥ್ ರೈ ರವರ ಮಗಳು ಸುಜಾತ ಎಲ್ ಶೆಟ್ಟಿಯವರ ಮಗನಾದ ಸಚಿನ್ ಎಲ್ ಶೆಟ್ಟಿ(14) ಯು ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿಂದೆ ಇದ್ದು, ದಿನಾಂಕ 28-04-2014 ರಂದು ಫಲಿತಾಂಶ ಇದ್ದುದರಿಂದ ಬೆಳಿಗ್ಗೆ ಪಿರ್ಯಾದಿದಾರರು ಸಚಿನ್ ಶೆಟ್ಟಿ ಜೊತೆಯಲ್ಲಿ ಹೋಗಿ, ಫಲಿತಾಂಶ ನೋಡಿದಾಗ 2 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದನು. ಬಳಿಕ ಸಮಯ 10:30 ಗಂಟೆಗೆ ಪಿರ್ಯಾದಿದಾರರು ಹಾಗೂ ಸಚಿನ್ ವಾಪಾಸು ಮನೆ ಕಡೆ ಹೊರಟು, ಪಿರ್ಯಾದಿದಾರರಿಗೆ ತುರ್ತು ಕೆಲಸ ಇದ್ದುದರಿಂದ ಅಸೈಗೋಳಿಯಲ್ಲಿ ಇಳಿದಿದ್ದು, ಸಚಿನ್ನು ಫಜೀರು ಕಡೆಗೆ ಹೋಗಿದ್ದು, ಪಿರ್ಯಾದಿದಾರರು ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ಸಚಿನ್ನು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾನೆ. ಬಳಿಕ ಈತನನ್ನು ಎಲ್ಲಾ ಕಡೆಯಲ್ಲಿ ಹುಡುಕಾಡಿದಲ್ಲಿ ಸಚಿನ್ನು ಪತ್ತೆಯಾಗಿರುವುದಿಲ್ಲ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28/29-04-2014ರಂದು ರಾತ್ರಿ ಸುಮಾರು 01:00 ಸಮಯಕ್ಕೆ  ಕರ್ನಿರೆ  ನ್ಯೂ ಹೌಸ್ ವಾಸಿ ಶ್ರೀ ಅಬೂಬ್ಬಕ್ಕರ್ ಸಿದ್ದೀಕ್  ಎಂಬವರ ಮನೆಗೆ ಒಂದು  ಕಪ್ಪು ಬಣ್ಣದ ಸ್ವೀಪ್ಟ್  ಕಾರಿನಲ್ಲಿ  ಬಳ್ಕುಂಜೆಯ  ಇಸ್ಮಾಯಿಲ್  ಮತ್ತು ಇತರರು ಸೇರಿ  ಪಿರ್ಯಾದಿಯ ಮನೆಯ  ಕಾಂಪೌಂಡ್ ಒಳಗೆ ಪ್ರವೇಶಿಸಿ  ಮನೆಯ  ಕಿಟಕಿಯ  ಗಾಜು  ಮತ್ತು ಕಾಂಪೌಂಡ್  ಗೋಡೆಯ ಸುತ್ತಲು ಅಳವಡಿಸಿದ ವಿದ್ಯುತ್ ಲೈಟ್ ನ್ನು   ಮರದ ಸೋಂಟೆಯಿಂದ   ಹುಡಿ ಮಾಡಿ  ಅಂಗಳದಲ್ಲಿ ನಿಲ್ಲಿಸಿದ್ದ   MEX 7017    ಬುಲೈಟ್ ಬೈಕ್ ಹಾಗೂ KA -19-J-3633ನೇ ಎಂ-80ಬೈಕ್ ನ್ನು  ಕೂಡಾ ದೂಡಿ ಹಾಕಿ  ಮನೆಯ  ಎದುರು ಗಡೆ ಇರುವ  ಗೇಟ್ ನ್ನು ಕಿತ್ತು  ಸಾಮಾನುಗಳನ್ನು   ಹುಡಿ ಮಾಡಿ  ಚೆಲ್ಲಾಪಿಲ್ಲಿ  ಮಾಡಿ  ಮನೆಯಿಂದ  ಹೊರಗಡೆ ಹೋಗುವ ವೇಳೆ ಅಂಗಳದಲ್ಲಿ ಇರಿಸಿದ್ದ ಗ್ಯಾಸ್ ಸಿಲಿಂಡರ್ ನ್ನು ಕೊಂಡು ಹೋಗಿರುತ್ತಾರೆ. ಇದರ ಅಂದಾಜು ಮೌಲ್ಯ  ರೂ 75,000 ನಷ್ಟ ಉಂಟು  ಮಾಡಿರುತ್ತಾರೆ.  

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ನಾರಾಯಣ ಎಂಬವರ ಮಗಳು ಕುಮಾರಿ ಪ್ರಮೀಳಾ (28) ಎಂಬವರು ಲಿಂಗಪ್ಪಯ್ಯಕಾಡಿನ ಮನೆಯಲ್ಲಿ ಇದ್ದು ಕೂಲಿ ಕೆಲಸ ಮಾಡಿಕೊಂಢಿದ್ದು ದಿನಾಂಕ 16-04-2014 ರಂದು ಮನೆಯಲ್ಲಿ ಹೇಳದೇ ಕೇಳದೇ ಮನೆಯಿಂದ ಹೋಗಿದ್ದು ಬಗ್ಗೆ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಕಾಣೆಯಾಗಿರುವ ಕುಮಾರಿ ಪ್ರಮೀಳಾ 28 ವರ್ಷ ಎಂಬವರ ಚಹರೆ ಗುರುತು: ಎತ್ತರ 4 ಅಡಿ 5 ಇಂಚು, ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ ಗಿಡ್ಡ ಶರೀರ ಕನ್ನಡ ತುಳು ಮಾತನಾಡುತ್ತಾರೆ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ.

 

4.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದಿನೇಶ್ ಕುಮಾರ್ ಬಿ.ಸಿ. ರವರು ಗಂಜಿಮಠದ ಗ್ರಾಮಕರಣಿಕರಾಗಿದ್ದು ದಿನಾಂಕ:29/04/2014 ರಂಧು ಬೆಳಗ್ಗೆ ಕರ್ತವ್ಯಕ್ಕೆ ಹೋದವರು ಮದ್ಯಾಹ್ನ ನಂತರ ಮಂಗಳೂರು ತಾಲೂಕು ಕಛೇರಿಯಲ್ಲಿ ಮೀಟಿಂಗ್ ಬಗ್ಗೆ ಹಾಜರಾಗುವರೇ ತನ್ನ ಬಜಪೆ ಬಾಡಿಗೆ ಮನೆಗೆ ಮಧ್ಯಾಹ್ನ ಬಂದು ಕಛೇರಿಗೆ ಸಂಬಂದಪಟ್ಟ ಕಡತಗಳನ್ನು ತೆಗೆದುಕೊಂಡು ಮಧ್ಯಾಹ್ಣ 02:00 ಗಂಟೆಗೆ ತನ್ನ ಮನೆಗೆ ಬೀಗ ಹಾಕಿ ಮಂಗಳೂರಿಗೆ ಹೋಗಿ ವಾಪಸ್ಸು ಸಂಜೆ 07:00 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿನ ಬೀಗ ತೆರೆದಿದ್ದು ಬಾಗಿಲಿನ ಚಿಲಕ ಹಾಕಿರುವುದ್ದನ್ನು ಗಮನಿಸಿದ ಪಿರ್ಯಾದಿದಾರರು ಬಾಗಿಲಿನ ಚಿಲಕ ಸರಿಸಿ ಮನೆ ಒಳ ಪ್ರವೇಶಿಸಿ ನೋಡಿದಾಗ ಮನೆ ಒಳಗಿನ ಕಪಾಟಿನಲ್ಲಿದ್ದ ಬಟ್ಟೆ ,ಬರೆ ಹಾಗೂ ಪುಸ್ಗಕಗಳು ಚೆಲ್ಲಾ ಪಿಲ್ಲಿ ಆಗಿರುವುದು ಕಂಡು ಬಂದಿದ್ದು ಕಪಾಟಿನಲ್ಲಿದ್ದ ರೂ 20,000/- ನಗದು ಹಣವನ್ನು ಪರಿಶೀಲಿಸಿದಾಗ ಸದ್ರಿ ನಗದುನ್ನು ಯಾರು ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಲ್ಲದೇ ಮನೆಯ ಮಾಲಿಕರ ಮನೆಯ ಮುಂಭಾಗದ ಬಾಗಿಲಿನ ಲ್ಯಾಚನ್ನು ಮುರಿದಿದ್ದು  ಕಳ್ಳರು ಸದ್ರಿ ಮನೆಯ ಒಳ ಪ್ರವೇಶಿಸಿದ್ದಾರೆಯೇ ? ಎಂಬ ಬಗ್ಗೆ ತಿಳಿದಿರುವುದಿಲ್ಲ.

 

5.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಮೊಲಿ ಮೇರಿ ಡಿ'ಸೋಜಾ ರವರ ಅಣ್ಣ ರಿಚರ್ಡ್ಮೆನೇಜಸ್‌(46) ಎಂಬವರು ನೀರುಮಾರ್ಗ ಎಂಬಲ್ಲಿ ವಾಸಮಾಡಿಕೊಂಡಿದ್ದು, ಆತನ ದಾಂಪತ್ಯ ಜೀವನದಲ್ಲಿ ಕಳೆದೆರಡು ವರ್ಷಗಳಿಂದ ಸಮಸ್ಯೆ ಇದ್ದಿದ್ದು ದಿನಾಂಕ 25-04-2014 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರರು ಅವರ ಅಣ್ಣ ರಿಚರ್ಡ್ರವರಿಗೆ ಮೊಬೈಲ್ಕರೆ ಮಾಡಿದಾಗ ಆತನು ತಾನು ಪಂಪುವೆಲ್ಬಸ್‌‌ನಿಲ್ದಾಣದಲ್ಲಿದ್ದು ತನ್ನ  ಹೆಂಡತಿಯ ತಂಗಿ ರೋಜಿ ಎಂಬವಳ ಮನೆಯಾದ ಉಜಿರೆಗೆ ಹೋಗುತ್ತಿರುವುದಾಗಿ ತಿಳಿಸಿದ್ದು, ನಂತರ ಆತನೇ ಸ್ವತಃ ಪೋನ್ಮಾಡಿ ತಾನು ಮತ್ತು ರೋಜಿಯ ಗಂಡ ಒಟ್ಟಿಗೆ ಬಸ್ಸಿನಲ್ಲಿ ಉಜಿರೆಗೆ ಹೋಗುತ್ತಿರುವುದಾಗಿ ಹೇಳಿದ್ದು ಮರುದಿನ ರಿಚರ್ಡ್ಗೆ ಪೋನ್ಮಾಡಿದಾಗ ಆತನ ಮೊಬೈಲ್ಸ್ವಿಚ್ಆಫ್ಬರುತ್ತಿದ್ದುದರಿಂದ ದಿನಾಂಕ 28-04-2014 ರಂದು ರೋಜಿಯ ಗಂಡ ಮಾರ್ಟಿನ್ಗೆ ಪೋನ್ಮಾಡಿದಾಗ ಆತನು, ರಿಚರ್ಡ್ತನ್ನ ಜೊತೆ ಬಂದಿಲ್ಲವೆಂದು ತಿಳಿಸಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.04.2014 ರಂದು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಎಸ್. ರವರು ತನ್ನ ಬಾಬ್ತು KA19EH7845 ನೇ  ಬೈಕ್‌‌ನಲ್ಲಿ  ತನ್ನ ಮಗಳು ನಸ್ರೀನಾಳನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು  ಉಳ್ಳಾಲ ಕಡೆಯಿಂದ  ಬಜಾಲ್‌‌ನಲ್ಲಿರುವ ತನ್ನ ಮನೆ ಕಡೆಗೆ ಬರುತ್ತಾ ರಾಹೆ-66 ರಲ್ಲಿ  ಜಪ್ಪಿನಮೊಗರು ಕಿರುಸೇತುವೆ ಬಳಿ ತಲುಪುತ್ತಿದ್ದಂತೆ ಬೆಳಿಗ್ಗೆ ಸುಮಾರು 10.30 ಗಂಟೆಗೆ  ಪಂಪ್ವೆಲ್‌‌ ಕಡೆಯಿಂದ ತೊಕ್ಕೊಟ್ಟು ಕಡೆಗೆ KA20A3828 ನೇ ಬಸ್ಸನ್ನು ಅದರ ಚಾಲಕ ಪ್ರಶಾಂತ್‌‌ ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು  ಪಿರ್ಯಾಧಿದಾರರ ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ  ಪಿರ್ಯಾಧಿದಾರರು ಮತ್ತು  ಅವರ ಮಗಳು ಮೋಟಾರ್‌‌ ಸೈಕಲ್‌‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರ ಕೈಗೆ  ಸಣ್ಣಪ್ರಮಾಣದ ಗುದ್ದಿದ ನೋವುಂಟಾಗಿರುವುದಾಗಿಯೂ, ಪಿರ್ಯಾಧಿದಾರರ ಮಗಳ ಬಲಕಾಲಿನ ಪಾದಕ್ಕೆ ರಕ್ತಗಾಯವಾಗಿರುವುದಾಗಿದೆ.

No comments:

Post a Comment