Monday, April 14, 2014

Daily Crime Reports 13-04-2014

ದೈನಂದಿನ ಅಪರಾದ ವರದಿ.

ದಿನಾಂಕ 13.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12-03-2014 ರಂದು  ಪಿರ್ಯಾದಿದಾರರಾದ ಮಾಹಿಪಾಲ್ ಸಿಂಗ್ ರವರು ಅವರ ಮಗನಾದ ಅಮರ್ಜೀತ್ಸಿಂಗ್ನ ಜೊತೆಯಲ್ಲಿ ಸಹ ಸವಾರನಾಗಿ, ಅವನ ಬಾಬ್ತು ದ್ವಿಚಕ್ರ ವಾಹನ ನಂಬ್ರ ಕೆ.-19-.ಜಿ-7161 ನೇದರಲ್ಲಿ ಮಂಗಳೂರು ನಗರದ ಬಿಜೈಯಲ್ಲಿ ಕೆಲಸ ಮುಗಿಸಿ ವಾಪಾಸು ತಮ್ಮ ಮನೆಯಾದ ಸುಲ್ತಾನ್ ಬತ್ತೇರಿಗೆ ಹೋಗಲು ಬಿಜೈ ಜಂಕ್ಷನ್ನಿಂದ ಬರುವರೇ ಕೆ.ಎಸ್.ಆರ್.ಟಿ.ಸಿ ಜಂಕ್ಷನ್ಗೆ ಬೆಳಿಗ್ಗೆ 06:30 ಗಂಟೆಗೆ ತಲುಪಿದಾಗ, ಅವರ ಎದುರುಗಡೆಯಿಂದ ಅಂದರೆ ಲಾಲ್ಬಾಗ್ಕಡೆಯಿಂದ ಕೆ.ಎಸ್.ಆರ್‌.ಟಿಸಿ ಬಸ್ನಿಲ್ದಾಣಕ್ಕೆ ಬಸ್ನಂಬ್ರ ಕೆ.-19-ಎಫ್-3067 ನೇದನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಲಕ್ಕೆ ತಿರುಗಿಸುವಾಗ ಯಾವುದೇ ಸೂಚನೆ ನೀಡದೆ ತಿರುಗಿಸಿದ ಪರಿಣಾಮ, ಪಿರ್ಯಾದಿದಾರರು ಇದ್ದ ದ್ವಿಚಕ್ರ ವಾಹನಕ್ಕೆ ಬಸ್ನ ಹಿಂಬದಿ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನದಲ್ಲಿದ್ದ ಅಮರ್ಜೀತ್ಸಿಂಗ್ರು ವಾಹನ ಸಮೇತ ರಸ್ತೆಗೆ ಬಿದ್ದು ಅವರ ಎಡ ಕೈಗೆ ತರಚಿದ ರಕ್ತ ಗಾಯ, ಎಡಕಾಲಿನ ಕಿರು ಬೆರಳಿಗೆ ಮೂಳೆ ಮುರಿತದ ಗಾಯ ಹಾಗೂ ಎಡ ಕಾಲಿನ ಕೋಲು ಕಾಲಿಗೆ ಗುದ್ದಿದ ನಮೂನೆಯ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದು, ಈ ರಸ್ತೆ ಅಪಘಾತದಿಂದ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿರುತ್ತದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕೆ.ಎಲ್.ಎಸ್.ಎ.ಪಿ.  ಪಿಸಿ 7696 ಶ್ರೀ ಶರೂನ್ ಕ್ರಷ್ಣನ್ ರವರು ಮಂಗಳೂರು ಎಸಿಪಿ ಕೇಂದ್ರ ಆಫೀಸಿನಿಂದ ಚುನಾವಣಾ ಕರ್ತವ್ಯ ನಿಮಿತ್ತ ನಿಯೋಜನೆಗೊಂಡಿದ್ದವರು ನಂತೂರು ಚೆಕ್ ಪಾಯಿಂಟ್ ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 11-04-2014 ರಿಂದ 10:00 ಗಂಟೆ ಕರ್ತವ್ಯ ನಿರ್ವಹಿಸಿಕೊಂಡಿರುವ ಸಮಯ ಸ್ಯಾಂಟ್ರೋ ಕಾರು ನಂಬ್ರ ಜಿಎ-08-ಎ-3727 ನೇದನ್ನು ಅದರ ಚಾಲಕರು ನಂತೂರು ಜಂಕ್ಷನ್ ಕಡೆಯಿಂದ ಒಮ್ಮೇಲೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂತೂರು ಚೆಕ್ ಪಾಯಿಂಟ್ ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಪಿರ್ಯಾದಿದಾರರ ಬಲಕಾಲಿನ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆ ಬಿದ್ದು, ಬಲಕಾಲಿಗೆ ನೋವುಂಟಾದವರನ್ನು ಚಿಕಿತ್ಸೆಯ ಬಗ್ಗೆ ನಗರದ ಸಿಟಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ.       

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-04-2014 ರಂದು ಸಮಯ ಸುಮಾರು 11:30 ಗಂಟೆಗೆ ಪಿರ್ಯಾದಿದಾರರಾದ ಕು. ದೇಶಪಾಂಡೆ ರವರು ತನ್ನ ಎ.ಎಫ್.ಟಿ.ಇ.ಎಂ. ಪರೀಕ್ಷೆಯ ನಿಮಿತ್ತ ಝೆರಾಕ್ಸ್ ತರಲೆಂದು ರೋಶನಿ ಕಾಲೇಜಿನ ಎದುರಿನ ಅಂಗಡಿಗೆ ಹೋಗಿ ವಾಪಾಸ್ಸು ಬರುತ್ತಿದ್ದಾಗ ಮೂರು ಚಕ್ರದ ಟೆಂಪೋ ನಂಬ್ರ ಕೆಎ-19-ಬಿ-6284 ನೇಯದ್ದನ್ನು ಅದರ ಚಾಲಕರು ಕಂಕನಾಡಿ ಕಡೆಯಿಂದ ಜೆಪ್ಪು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದು ಪುಟ್ ಪಾತ್ ಗೆ ಬೀಳಿಸಿದರ ಪರಿಣಾಮ ತಲೆಗೆ ಮತ್ತು ಎಡ ತೋಳಿಗೆ ಗಾಯಗೊಂಡವರನ್ನು ಯೆನಪೊಯ ಆಸ್ಪತ್ರೆಗೆ ದಾಖಲುಗೊಳಿಸಿದ್ದಲ್ಲಿ ಎಡ ತೋಳಿನ ಮೂಳೆ ಮುರಿತದ ಹಾಗೂ ತಲೆಗೆ ಗುದ್ದಿದ ಗಾಯಗೊಂಡಿರುವುದಾಗಿದೆ.

 

4.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.04.2014 ರಂದು ಸಂಜೆ ಸುಮಾರು 3:45 ಗಂಟೆಗೆ ಮಂಗಳೂರು ತಾಲೂಕು ಹರೇಕಳ ಗ್ರಾಮದ ಡೆಬ್ಬೇಲಿ ಎಂಬಲ್ಲಿ ಆರೋಪಿ ಮಾಕ್ಸಿಮ್ಎಂಬಾತನು ಫಿರ್ಯಾದಿದಾರರಾದ ಶ್ರೀ ಮೊಂತು ವೇಗಸ್ ರವರನ್ನು ತಡೆದು ನಿಲ್ಲಿಸಿ "ದಾರಿಯಲ್ಲಿ ನಿನಗೆ ಯಾವುದೇ ಹಕ್ಕು ಇಲ್ಲ'' ಎಂದು ಅವಾಚ್ಯ ಶಬ್ದಗಳೀಂದ ಬೈದು ಮರದ ದೊಣ್ಣೆಯಿಂದ ಫಿರ್ಯಾದಿದಾರರ ಎಡ ಕಣ್ಣಿನ ಬಳಿಗೆ ಹೊಡೆದಿರುತ್ತಾರೆ. ಅಲ್ಲದೇ ಜೀವ ಬೆದರಿಕೆಯನ್ನು ಕೂಡಾ ಒಡ್ಡಿರುತ್ತಾರೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಕೃತ್ಯಕ್ಕೆ ಫಿರ್ಯಾದಿದಾರರಿಗೆ ಮತ್ತು ಆರೋಪಿಗೆ ದಾರಿಯ ವಿಚಾರದಲ್ಲಿ ಇದ್ದ ತಕರಾರೇ ಕಾರಣವಾಗಿರುತ್ತದೆ.

 

5.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-04-2014 ರಂದು ಮಂಗಳೂರು ತಾಲೂಕು ಪಣಂಬೂರು ಗ್ರಾಮದ ದೀಪಕ್ ಪೆಟ್ರೋಲ್ ಬಂಕಿನ ಬಳಿ ಇರುವ ಮೆ|| ಟ್ರಾನ್ಸ್ ಲಿಂಕ್ಸ್ ಲಾರಿ ಆಫೀಸಿನ ಎದುರುಗಡೆಯಿಂದ ಪಿರ್ಯಾದಿದಾರರಾದ ಶ್ರೀ ಕೆ.ಜಿ. ಲೋಕೇಶ್ ರವರು ಎಪಿ-02/ಡಬ್ಲ್ಯೂ-0094 ಮತ್ತು ಕೆಎ-25/ಬಿ-5398 ನೇ ನಂಬ್ರದ ಟ್ರಕ್ ಗಳಲ್ಲಿ ಕ್ರಮವಾಗಿ 13880 ಎಂಟಿ. ಮತ್ತು 17000 ಎಂ.,ಟಿ. ಒಟ್ಟು ಬೆಲೆ 5,22,026 ರೂ ಮೌಲ್ಯದ ಮೆಟ್ ಕೋಕ್ ನ್ನು ಹೊಸಪೇಟೆಯ ಬೇವಿನ ಹಳ್ಳಿ ಕಿರ್ಲೋಸ್ಕರ್ ಪೆರ್ರಸ್ ಇಂಡಸ್ಟ್ರೀಸ್ ಸಂಸ್ತೆಗೆ ಸಾಗಿಸುವರೇ  ಕಳುಹಿಸಿದ್ದು ಆರೋಪಿಗಳಾದ ಗುರುಮೂರ್ತಿ, ಕೃಷ್ಣಮೂರ್ತಿ ಹೆಚ್., ರಾಜನ, ಜಾಕೀರ್ ತವರಗಿ, ಇಸ್ಮಾಯಿಲ್ ಖಾನ್ ಎಂಬವರುಗಳು ಈ ಮೆಟ್ ಕೋಕ್ ನ್ನು ಕಿರ್ಲೋಸ್ಕರ್ ಪರ್ರಸ್ ಇಂಡಸ್ಟ್ರೀಸ್ ಕಂಪನಿಗೆ ತಲುಪಿಸದೆ ಮೆಟ್ ಕೋಕ್ ನ್ನು ಯಾರಿಗೋ ಮಾರಾಟ ಮಾಡಿ ಪಿರ್ಯಾದಿದಾರರಿಗೆ ಮತ್ತು ಕಿರ್ಲೋಸ್ಕರ್ ಪೆರ್ರಸ್ ಇಂಡಸ್ಟ್ರೀಸ್ ಕಂಪನಿಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ.

 

6.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-03-2014 ರಂದು  ತನ್ನ ಬಾಬ್ತು ಎಂಹೆಚ್-43/ಎಕೆ-8150 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ಪಿರ್ಯಾದಿದಾರರಾದ ಶ್ರೀ ದಿಪಾಂಕರ್ ಪ್ರಪುಲ್ಲದಾಸ್ ರವರು ಸುರತ್ಕಲ್  ಕಾನದಲ್ಲಿರುವ ತಾನು ಕೆಲಸ ಮಾಡುತ್ತಿರುವ  ಬಿ..ಎಸ್,ಎಫ್. ಕಂಪನಿಯಿಂದ ಮಣ್ಣಗುಡ್ಡೆಯಲ್ಲಿರುವ ತನ್ನ ಮನೆಗೆ ಹೋಗುತ್ತಿರುವ ಸಮಯ ರಾತ್ರಿ ಸುಮಾರು 8-30 ರ ವೇಳೆಗೆ ಜೋಕಟ್ಟೆ ಕ್ರಾಸ್ ಬಳಿಗೆ ತಲುಪಿದಾಗ ಹಿಂದಿನಿಂದ  ಯಾವುದೋ ಒಂದು ವಾಹನವನ್ನು  ಅದರ ಚಾಲಕ ಅತೀ ವೇಗಾ ಹಾಗೂ ಅಜಾಗರಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಹಿಂದಿನಿಂದ ಬಲವಾಗಿ ಡಿಕ್ಕಿ  ಹೊಡೆದು ವಾಹನವನ್ನು ನಿಲ್ಲಿಸದೆ ಪರಾರಿಯಾದ  ಪರಿಣಾಮ ಪಿರ್ಯಾದದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಹಣೆಯ ಎಡ ಭಾಗದ ಉಬ್ಬಿನ ಮೇಲೆ, ಹಾಗೂ ಮೇಲ್ದವಡೆಗೆ ತೀವ್ರ ಸ್ವರೂಪದ ರಕ್ತ  ಗಾಯ ಹಾಗೂ ಎಡ ಕಾಲಿನ ಮೊಣಗಂಟಿನ ಬಳಿ ಹಾಗೂ ಬಲ ಕಾಲಿನ ಮೊಣಗಂಟಿಗೆ ರಕ್ತಗಾಯವದಾಗಿದ್ದು ಪ್ರಜ್ಞೆ ಕಳೆದುಕೊಂಡಿರುವುದಾಗಿರುತ್ತದೆ, ಅಪಘಾತದಿಂದ ಉಂಟಾದ ತೀವ್ರ  ಸ್ವರೂಪದ ಗಾಯದಿಂದ ಪ್ರಜ್ಞೆ ಕಳೆದುಕೊಂಡಿದ್ದು ತೀವ್ರ ನಿಗಾ ವಿಭಾಗದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಮತ್ತು ನೆನೆಪು ಬಾರದೆ ಇದ್ದುದರಿಂದ  ಮನೆಯಲ್ಲಿ ಸರಿಯಾದ ಜನರು ಇಲ್ಲದೆ ಇದ್ದ ಕಾರಣ ಠಾಣೆಗೆ ದೂರು ನೀಡಲು ತಡವಾಗಿರುವುದಾಗಿದೆ.

 

7.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-04-2014 ರಂದು ರಾತ್ರಿ 8-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಶೇಖರ್ ರವರು ಅವರ ಬಾಬ್ತು ಪಲ್ಸರ್ ಮೋಟಾರು ಸೈಕಲ್ ನಂಬ್ರ KA 19 S 8778 ನೇದನ್ನು ಸುರತ್ಕಲ್ ಫ್ಲೈ ಓವರ್ ಕೆಳಗಡೆ ಅಂದರೆ ಸದಾನಂದ ಹೋಟೇಲ್ ಮುಂದುಗಡೆ ನಿಲ್ಲಿಸಿ ಅಂಗಡಿಗೆ ತೆರಳಿ ಸಾಮಾನು ಖರೀದಿ ಮಾಡಿ ವಾಪಾಸು 8-15 ಗಂಟೆಗೆ ಬೈಕ್ ಇರುವಲ್ಲಿಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು ಎಲ್ಲ ಕಡೆ ಹುಡಿಕಿದರೂ ಪತ್ತೆಯಾಗದೇ ಇದ್ದುಸದ್ರಿ ಬೈಕನ್ನು ಯಾರೋ ಕಳ್ಳರು ರಾತ್ರಿ 8-00 ಗಂಟೆಯಿಂದ 8-15 ಗಂಟೆ ಮದ್ಯೆ ಕಳವು ಮಾಡಿ ಕೊಂಡು ಹೋಗಿರುವುದಾಗಿ ಕಳವಾದ ಬೈಕಿನ ಮೌಲ್ಯ ರೂ 20000/- ಆಗಿರುವುದಾಗಿದೆ.

 

8.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-04-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ವೆಂಕಟೇಶ್ ರವರು ತನ್ನ ಬಾಭ್ತು ಕೆಎ-20-ಡಿ-6676 ನೇ ಟಾಟಾ ಸುಮೋ ವಾಹನವನ್ನು ರಾ ಹೆ 66 ರಲ್ಲಿ ಕುಳಾಯಿ ಕಡೆಯಿಂದ ಸುರತ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವ ಸಮಯ 21-30 ಗಂಟೆಗೆ ಹೊಸಬೆಟ್ಟು ಜಂಕ್ಷನ್ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಕೆಎ-19-ಡಿ-7373 ನೇ ಇಂಡಿಕಾ ವಿಸ್ತಾ ಕಾರನ್ನು ಅದರ ಚಾಲಕ ಡಾಯೋನಿ ಕೆನತ್ ರಾಯ್ ಮಿಸ್ಕಿತ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಟಾಟಾ ಸುಮೋ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಟಾಟಾ ಸುಮೋ ಹತೋಟಿ ತಪ್ಪಿ ರಸ್ತೆಯ ಎಡ ಭಾಗಕ್ಕೆ ಹೋಗಿದ್ದು ಟಾಟಾ ಸುಮೋ ವಾಹನದ ಹಿಂಬದಿ ಮತ್ತು ಅಪಘಾತ ಪಡಿಸಿದ ಇಂಡಿಕಾ ಕಾರಿನ ಎದುರು ಭಾಗ ಪೂರ್ಣ ಜಖಂಗೊಂಡಿದ್ದು ಕಾರಿನ ಎದುರು ಎಡಬದಿಯಲ್ಲಿ ಕುಳಿತ್ತಿದ್ದ ದಾಮೋದರ ಎಂಬವರ ಕಾಲಿಗೆ ಗಾಯವಾಗಿದ್ದು ಚಿಕತ್ಸೆ ಬಗ್ಗೆ ಸುರತ್ಕಲ್ ನ ಮಿಸ್ಕಿತ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

No comments:

Post a Comment