ದೈನಂದಿನ ಅಪರಾದ ವರದಿ.
ದಿನಾಂಕ 04.04.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.03.2014 ರಂದು ಪಿರ್ಯಾದುದಾರರಾದ ಶ್ರೀಮತಿ ಉಷಪ್ರಭಾ ಎನ್.ನಾಯಕ್ ರವರು ತಮ್ಮ ಬಾಬ್ತು KA19MC54ನೇ ನಂಬ್ರದ ಕಾರನ್ನು ಮಂಗಳೂರು ನಗರದ ಲೇಡಿಹಿಲ್ ಕಡೆಯಿಂದ ಕೋಡಿಯಾಲಬೈಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮಧ್ಯಾಹ್ನ 15:00 ಗಂಟೆಗೆ ಲಾಲ್ ಭಾಗ್ ಸಿಗ್ನಲ್ ಬಳಿ KA36M9860ನೇ ನಂಬ್ರದ 'ನಿಸ್ಸಾನ್ ಸನ್ನಿ' ಕಾರನ್ನು ಅದರ ಚಾಲಕರು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದು ಜಖಂಗೊಳಿಸಿ ಆರೋಪಿ ಕಾರು ಚಾಲಕ ತನ್ನ ಕಾರಿನೊಂದಿಗೆ ಸೀದಾ ಪರಾರಿಯಾಗಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03/04/2014 ರಂದು ಸಮಯ ಸುಮಾರು 14:45 ಗಂಟೆಗೆ ಭಾಸ್ಕರ್ ಆಚಾರ್ ಎಂಬಾತನು ಮೋಟರ್ ಸೈಕಲ್ ನಂಬ್ರ KA20-ED-8859 ರಲ್ಲಿ ಸವಾರನಾಗಿದ್ದುಕೊಂಡು ಮಲ್ಲಿಕಟ್ಟೆ ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗು ರೀತಿಯಲ್ಲಿ ಚಲಾಯಿಸಿಕೋಂಡು ಬಂದು ಕದ್ರಿ ಶಿವಭಾಗ ಪೆಟ್ರೊಲ್ ಬಂಕ್ ಎದುರು ಮುಂದಿನಿಂದ ಹೋಗುತ್ತಿದ್ದ ಪೋಲಿಸ್ ಇಲಾಖಾ ಅಂಬಾಸಿಡರ್ ಕಾರು ನಂಬ್ರ KA-03-G-1008ನ್ನು ನಿರ್ಲಕ್ಷತನದಿಂದ ಓವರಟೆಕ್ ಮಾಡುವಾಗ ಮೋಟರ್ ಸೈಕಲ್ ಕಾರಿನ ಮುಂಭಾಗದ ಬಲಭಾಗಕ್ಕೆ ಡಿಕ್ಕಿಯಾಗಿರುತ್ತದೆ ಕಾರಿನ ಮುಂಭಾಗದ ಬಲಭಾಗದ ಬಂಪರ್ ಬೆಂಡಾಗಿರುತ್ತದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03/04/2014 ರಂದು ಸಮಯ ಸುಮಾರು 21:50 ಗಂಟೆಗೆ ಸ್ಕಾರ್ಪಿಯೊ ಕಾರು ನಂಬ್ರ KA-05-MF-7790 ನೇ ದನ್ನು ಅದರ ಚಾಲಕ ಹನುಮಂತಪ್ಪ ಪೂಜಾರ ಎಂಬುವರು ಪದವು ಜಂಕ್ಷನ್ ಕಡೆಯಿಂದ ಕೆ ಪಿ ಟಿ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು NH-66 ರಸ್ತೆಯ BSNL ಕಛೆರಿಯ ಎದುರು ರಸ್ತೆ ದಾಟುತ್ತಿದ್ದ ಬೊತಲಪ್ಪ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಬೊತಲಪ್ಪ ರಸ್ತೆಗೆ ಬಿದ್ದು ದೇಹದ ಮೇಲೆ ಗಂಭೀರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಗಿದೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-04-2014 ರಂದು22-00 ಗಂಟೆಗೆ ಮಂಗಳೂರು ನಗರದ ಕದ್ರಿ ಸರ್ಕ್ಯೂಟ್ ಹಾಸ್ ಬಳಿ ಇರುವ ಗಜಲಿ ಬಾರ್ & ರೆಸ್ಟೋರೆಂಟ್ ಎದುರುಗಡೆ ಹಣಕಾಸಿನ ವಿಚಾರದಲ್ಲಿ ಮಾತುಕತೆಯಾಡಲು ಅನಿಲ್ ಎಂಬವರ ಜೊತೆಯಲ್ಲಿ ಬಂದ ಪಿರ್ಯಾದಿ ಹರಿಪ್ರಸಾದ್ ರೈ ಎಂಬವರನದ್ನು ಸುಧೀರ್ ಶೆಟ್ಟಿ , ನಿತಿನ್ ಹಾಗೂ ಉದಯ ಎಂಬವರು ಅಕ್ರಮವಾಗಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಸುದೀರ್ ಶೆಟ್ಟಿಯು ಕೈಯಿಂದ ಹಲ್ಲೆ ನಡೆಸಿದ್ದು ಉಳಿದವರು ಕೈಗಳಿಂದ ಹ್ಲಲೆ ನಡೆಸಿ ಕಾಲಿನಿಂದ ತುಳಿದುದಲ್ಲದೇ ಸುಧೀರ್ ಶೆಟ್ಟಿಯು ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 2-4-2014 ರ ರಾತ್ರಿ 8-00 ಗಂಟೆಯಿಂದ ದಿನಾಂಕ 3-4-14 ರ ಬೆಳಿಗ್ಗೆ 9-00 ಗಂಟೆಯ ಮದ್ಯವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಮಾರ್ನಮಿಕಟ್ಟೆ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಅನೀಶ್ ಕುಮಾರ್ ರವರ ಬಾಬ್ತು ಶ್ರೀ ದುರ್ಗಾಪರಮೇಶ್ವರಿ ಅಟೋಮೊಬೈಲ್ಸ್ ವಾಹನ ಬಿಡಿಭಾಗಗಳ ಅಂಗಡಿಯ ಮಾಡಿನ ಹಂಚನ್ನು ತೆಗೆದು ಒಳಪ್ರವೇಶಿಸಿ ಕ್ಯಾಶ್ ಬಾಕ್ಸ್ ನಲ್ಲಿದ್ದ ನಗದು ಹಣ ರೂಪಾಯಿ 16000 ಮತ್ತು ರೂಪಾಯಿ 500 ಬೆಲೆ ಬಾಳುವ ನೋಕಿಯೊ ಮೊಬೈಲ್ ಸೆಟ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಲತಾ ಕೆ. ಅಮೀನ್ ರವರ ತಂದೆ ಸೋಮಪ್ಪ ಪೂಜಾರಿಯವರು ಮಂಗಳೂರು ತಾಲೂಕು ಬಜಪೆ ಪೊಲೀಸ್ ಠಾಣಾ ಸರಹದ್ದಾದ ನಡುಗೋಡು ಗ್ರಾಮದ ಮಿತ್ತಬೈಲು ಎಂಬಲ್ಲಿ ವಾಸವಾಗಿದ್ದು, ಪಿರ್ಯಾದಿದಾರರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ಈಗ ಅವರಿಗೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಯಾದ ಸಮಯ ದಿನಾಂಕ: 01/06/2013 ರಂದು ಚಿಕ್ಕಮಗಳೂರಿಗೆ ಹೋಗುವ ಸಮಯ ತನ್ನ ಬಾಬ್ತು ಬಂಗಾರದ ನೆಕ್ಲೇಸ್, ಬೆಂಡೋಲೆ, ಕನಕಮಾಲೆ ಇವುಗಳನ್ನು ತನ್ನ ತಂದೆ ಸೋಮಪ್ಪ ಪೂಜಾರಿ ಯವರಲ್ಲಿ ಕೊಟ್ಟು ಹೋಗಿದ್ದು, ಸೋಮಪ್ಪ ಪೂಜಾರಿಯವರು ಅಸೌಖ್ಯವಾಗಿ ದಿನಾಂಕ: 16/09/2013 ರಂದು ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾದ ಸಮಯ ಪಿರ್ಯಾದಿಯ ತಮ್ಮ ಪ್ರಕಾಶನು ಮನೆಯಲ್ಲಿದ್ದ ಸುರಕ್ಷಾ ಕಾರ್ಡನ್ನು ತೆಗೆದುಕೊಂಡು ಆಸ್ಪತ್ರೆಗೆ ತರಲು ಪಿರ್ಯಾದಿಯ ಇನ್ನೊಬ್ಬ ತಮ್ಮ ಪ್ರವೀಣನಲ್ಲಿ ತಿಳಿಸಿದ್ದು, ಈ ಸಮಯ ಆರೋಪಿ ಪ್ರವೀಣನು ಪಿರ್ಯಾದಿದಾರರ ತಂದೆ ಮನೆಯಿಂದ ಸುರಕ್ಷಾ ಕಾರ್ಡಿನೊಂದಿಗೆ ಪಿರ್ಯಾದಿದಾರರ ಬಾಬ್ತು ನೆಕ್ಲೇಸ್, ಬೆಂಡೋಲೆ, ಕನಕಮಾಲೆ ಒಟ್ಟು ಸುಮಾರು 36 ಗ್ರಾಂ ತೂಕದ 57,000/- ರೂಪಾಯಿ ಬೆಲೆಬಾಳುವ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿ ಕಟೀಲಿನ ಕೋ-ಆಪರೇಟಿವ್ ಸೊಸೈಟಿಯಲ್ಲಿ ಗಿರವಿ ಇಟ್ಟಿರುತ್ತಾರೆ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರ ಶ್ರೀಮತಿ ಅನುಸೂಯ ಹಾಗೂ ಆರೋಪಿತ ಲಿಂಗಪ್ಪ ಎಂಬವರುಗಳು ಗಂಡ ಹೆಂಡತಿಯಾಗಿದ್ದು, ಪಿರ್ಯಾದಿದಾರರ ಗಂಡ ಲಿಂಗಪ್ಪನವರು ವಿವಾಹ ವಿಚ್ಛೇದನಕ್ಕೆ ಈ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯವು ಸದ್ರಿ ಅರ್ಜಿಯನ್ನು ವಜಾಗೊಳಿಸಿರುತ್ತದೆ, ಹಾಗೂ ಪಿರ್ಯಾದಿದಾರರ ಗಂಡನ ಮನೆಯಾದ ಹೊಸಬೆಟ್ಟು ಗ್ರಾಮದ ಗ್ರೀನ್ ಪಿಚ್ ಎಂಬಲ್ಲಿ ವಾಸ್ತವ್ಯ ಮಾಡಲು ಆದೇಶಿಸಿದಂತೆ ಪಿರ್ಯಾದಿ, ಅವರ ಮಗಳು ಹಾಗೂ ಸಂಬಂಧಿಗಳು ಈ ದಿನ ದಿನಾಂಕ; 03-04-14 ರಂದು ಸಂಜೆ 4-30 ಗಂಟೆಗೆ ಹೋದಾಗ ಆರೋಪಿ ಪಿರ್ಯಾದಿಯ ಗಂಡ ಲಿಂಗಪ್ಪರವರು ಪಿರ್ಯಾದಿ ಅನುಸೂಯ ಅವರ ಮಗಳು ಹಾಗೂ, ಸಂಬಂಧಿಗಳಿಗೆ ಕೈಯಿಂದ ಹಾಗೂ ಸ್ಪಿಕರ್ ನಿಂದ ಹಲ್ಲೆ ನಡೆಸಿರುತ್ತಾರೆ, ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ ಮತ್ತು ಘಟನೆ ವೇಳೆ ಪಿರ್ಯಾದಿದಾರರ ಮಾಂಗಲ್ಯ ಸರ ಎಳೆದು ತುಂಡು ಮಾಡಿರುತ್ತಾನೆ.
No comments:
Post a Comment