Monday, April 7, 2014

Daily Crime Reports 07-04-2014

ದೈನಂದಿನ ಅಪರಾದ ವರದಿ.

ದಿನಾಂಕ 07.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀಮತಿ ಬಿ. ಶ್ರುತಿ ರವರ ಗಂಡ ಎಂ.ಎಸ್  ರುದ್ರಪ್ಪ ಪ್ರಾಯ 35 ಎಂಬವರು ದಿನಾಂಕ 24-03-2014 ರಂದು ಬೆಳಿಗ್ಗೆ 07.30 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.

 

2.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 19-02-2014 ರಂದು ನೆರೆಯ ನಿವಾಸಿಯಾದ ಆರೋಪಿ ಹರೀಶನ ವಿರುದ್ದ ಪಿರ್ಯಾದಿದಾರರಾದ ಶ್ರೀ ರಮೇಶ್ ಪೂಜಾರಿ ರವರು ಠಾಣೆಗೆ ದೂರು ನೀಡಿರುವುದರಿಂದ ಸಿಟ್ಟು ಗೊಂಡ ಆತನು  ದಿನಾಂಕ   02-04-2014 ರಂದು  18-00 ಗಂಟೆಗೆ  ಪಿರ್ಯದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ "ಪೊಲೀಸರಿಗೆ ದೂರು ಕೊಡುತ್ತಿಯ ನಿನ್ನಿಂದ ಎನು ಮಾಡಲು ಸಾದ್ಯ ಇದೆ" ಎಂಬುದಾಗಿ ಅವಾಚ್ಯ ಶಬ್ದ ದಿಂದ ಬೈದು  ನಿನಗೆ ಗತಿ ಕಾಣಿಸುತ್ತೇನೆಂದು ಹೇಳಿ ಆತನ ಮನೆಗೆ ಹೋಗಿ  ಮನೆಯಿಂದ  ಕೊಡಲಿಯನ್ನು ಹಿಡಿದುಕೊಂಡು ಬಂದು  ಹೊಡೆಯಲು ಪ್ರಯತ್ನಿಸಿದಾಗ  ಅತನ ಕೈಯನ್ನು ಹಿಡಿದು  ಬೊಬ್ಬೆ ಹಾಕಿದ ಸಮಯ ನೆರೆಕರೆಯವರು ಬರುವುದನ್ನು ನೋಡಿ ನಿನ್ನನು ಜೀವಂತ ಬಿಡುವುದಿಲ್ಲವೆಂದು ಹೇಳಿ  ಅಲ್ಲಿಂದ ಹೋಗಿರುವುದಾಗಿದೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 02-04-2014 ರಂದು 18:45 ಗಂಟೆಯ ವೇಳಗೆ ಪಿರ್ಯಾದಿದಾರರಾದ ಶ್ರೀ ಪುರಂದರ ಆಚಾರ್ಯ ರವರ ನೆರೆಮನೆ ನಿವಾಸಿಯಾದ  ಹರೀಶ್ ಸುವರ್ಣ ಎಂಬವನು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ತಾಯಿ ಶ್ರೀಮತಿ ಚಂದ್ರಾವತಿರವರಲ್ಲಿ ಅವಾಚ್ಯ ಶಬ್ದಗಳಿಂದ "ಎಲ್ಲಿ? ನಿನ್ನ ಮಗ ಎಲ್ಲಿ, ರಮೇಶನ ಸಾವು ನನ್ನ ಕೈಯಲ್ಲಿ ಇದೆ, ನಿನ್ನ ಮಗ ಪುರಂದರ  ಎಲ್ಲಿದ್ದಾನೆ"   ಎಂದು ಹೇಳಿ ಪಿರ್ಯಾದಿಯ ತಾಯಿಗೆ ಕೊಡಲಿಯನ್ನು ತೋರಿಸಿದಾಗ ಪಿರ್ಯಾದಿದಾರರು ನೀನು ಯಾಕೆ ಮನೆಯ ಒಳಗೆ ಬಂದಿರುವುದು, ಆಗ ಹರೀಶ್ ಸುವರ್ಣನು ಆತನ ಕೈಯಲ್ಲಿದ್ದ ಕೊಡಲಿಯಿಂದ ಒಂದೇ ಸಮನೆ ಹೊಡೆಯಲು ಬಂದಾಗ  ಪಿರ್ಯಾದಿದಾರರು ತಪ್ಪಿಸಿ ಕೊಂಡಿದ್ದು, ಸಮಯ ಆರೋಪಿಯು ನೀನು ಪೊಲೀಸ್ ಠಾಣೆಗೆ ತನ್ನ ಬಗ್ಗೆ ದೂರು ನೀಡುತ್ತಿಯಲ್ಲ  ಎಂದು ಹೇಳಿದ್ದಲ್ಲದೆ ನಿನ್ನನು  ಎನು ಮಾಡುತ್ತೇನೆ ನೋಡು ಎಂದು  ಹೇಳಿದಾಗ ಪಿರ್ಯಾದಿದಾರರ ತಾಯಿ ಅತನನ್ನು ತಡೆದ ಸಮಯ ಅವರನ್ನು ದೂಡಿ ಹಾಕಿ  ಅವಾಚ್ಯ ಶಬ್ದದಿಂದ ಬೈದು  ಪೊಲೀಸ್ ಠಾಣೆಗೆ ದೂರು ನೀಡಿದರೆ ನಿನ್ನನು ಕೊಲ್ಲದೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-04-2014 ರಂದು  19:00 ಗಂಟೆಯ ವೇಳೆಗೆ  ಆರೋಪಿಗಳಾದ ರಮೇಶ್ ಪೂಜಾರಿ, ಮತ್ತು ಪುರಂದರ ಆಚಾರ್ಯ ಎಂಬವರು ಪಿರ್ಯಾದಿದಾರರಾದ ಶ್ರೀ ಹರೀಶ್ ಸುವರ್ಣ ರವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ  ಅಂಗಳದಲ್ಲಿ ಕುಳಿತುಕೊಂಡಿದ್ದ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ "ನಿನಗೆ ಬಹಳ ಅಹಂಕಾರ  ಇದೆ ಎಂದು ಹೇಳಿ ಆರೋಪಿ ರಮೇಶ್ ಪೂಜಾರಿಯು ಆತನ  ಕೈಯಲ್ಲಿದ್ದ ದೊಣ್ಣೆಯಿಂದ  ಪಿರ್ಯಾದಿಯ ಎಡ ಕೈಗೆ ಮತ್ತು ಹೊಟ್ಟೆಯ ಎಡ ಭಾಗಕ್ಕೆ ಹೊಡೆದಿರುತ್ತಾನೆ.  ಅಲ್ಲದೇ 2 ನೇ ಆರೋಪಿ ಪುರಂದರ ಆಚಾರ್ಯ ರವರು ಕೈಯಿಂದ  ಪಿರ್ಯಾದಿಗೆ ಹೊಡೆದಿದ್ದು, ಸಮಯ ಪಿರ್ಯಾದಿದಾರರು ಹಾಗೂ ಮನೆಯೊಳಗಿನಿಂದ ಬಂದ ಪಿರ್ಯಾದಿದಾರರ ಹೆಂಡತಿ ಹಾಗೂ ಮಗಳು  ಬೊಬ್ಬೆ ಹಾಕಿದ ಸಮಯು  ಆರೋಪಿತರು "ಇವತ್ತು ನೀನು ಬಚಾವಾದೆ, ಒಂದು ವಾರದೊಳಗೆ ನಿನ್ನನು ಕೊಂದು ಹಾಕುತ್ತೇವೆ"  ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಬಳಿಕ ಪಿರ್ಯಾದಿದಾರರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಹೋಗಿ ದಾಖಲಾಗಿರುವುದಾಗಿದೆ.  

 

5.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.04.2014 ರಂದು ಪಿರ್ಯಾದಿದಾರರಾದ ಶ್ರೀ ಕೃಷ್ಣಮೂರ್ತಿ ರವರು ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿ ಮನೆ ಮಾಡಿರುವ ತನ್ನ ತಂಗಿಯ ಮನೆಗೆ ಬಂದು ತಮ್ಮ ಬಾಬ್ತು ಕೆಎ-21-ಕ್ಯೂ-2938 ನೇ ನಂಬ್ರದ ಪಿಂಕ್ ಬಣ್ಣದ ಗ್ಲ್ಯಾಮರ್ ಬೈಕನ್ನು ಮನೆ ಅಂಗಳದಲ್ಲಿ ನಿಲ್ಲಿಸಿದವರು, ಕೊನೆಯದಾಗಿ ದಿನಾಂಕ 05.04.2014 ರಂದು 00:30 ಗಂಟೆಗೆ ನೋಡಿದ್ದು, ನಂತರ ಮಲಗಿದ ಪಿರ್ಯಾದಿದಾರರು ಹಾಗೂ ಮನೆಯವರು ಬೆಳಗ್ಗೆ  ಎದ್ದು ನೋಡಿದಾಗ ಪಿರ್ಯಾದಿದಾರರ ಮೋಟಾರ್ ಸೈಕಲ್ ಹಾಗೂ ಅದರಲ್ಲಿದ್ದ ಸಿಂಡಿಕೇಟ್ ಬ್ಯಾಂಕ್ ಬೆಳ್ಳಾರೆ ಶಾಖೆಯ ಚೆಕ್ ಪುಸ್ತಕ, ಬೈಕ್ ಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು, ಹಾಗೂ ಬೈಕ್ ಕೀ ಬಂಚ್ ಹಾಗೂ ಕೀ ಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

6.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 06-04-2014ರಂದು ರಾತ್ರಿ ಸಮಯ 08-45 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸುಧೀರ್ ಎನ್ ಎಂಬವರು ಅವರ ಬಾಬ್ತು ಕೆಎ-19-ಇಡಿ-8475 ನಂಬರಿನ ಮೋಟಾರ್ ಸೈಕಲಿನಲ್ಲಿ ಮೇರಿಹಿಲ್ ಕಡೆಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿರುವ ಸಮಯ ಎದುರಿನಿಂದ ಹೋಗುತ್ತಿದ್ದಾಗ ಪದವಿನಂಗಡಿ ಎಟಿಎಂ ಬಳಿ ತಲುಪಿದಾಗ ಎದುರಿನಲ್ಲಿ ಕೆಎ-19-ಇಎ-5932ನೇ ನಂಬರಿನ ಮೋಟಾರ್ ಸೈಕಲ್ ಹೋಗುತ್ತಿದ್ದು, ಪಿರ್ಯಾದುದಾರರು ಸದ್ರಿ ಮೋಟಾರ್ ಸೈಕಲನ್ನು ಆತನ ಮೋಟಾರ್ ಸೈಕಲಿನಂದ ಮುಂದಕ್ಕೆ ಚಲಾಯಿಸಿದರು, ಸ್ವಲ್ಪಮುಂದಕ್ಕೆ ಹೋಗುತ್ತಿದ್ದಾಗ ಆತನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲನ್ನು ಚಲಾಯಿಸಿ ಡಿಕ್ಕಿ ಹೊಡೆಸಿ, ನಿಲ್ಲಿಸದೇ ಪರಾರಿಯಾಗಿರುತ್ತಾರೆ   ಇದೇ ಸಮಯದಲ್ಲಿ ಪಿರ್ಯಾದುದಾರರು ಆಯಾ ತಪ್ಪಿ ಇನ್ನೊಂದು ಬೈಕ್ ನಂಬ್ರ ಕೆ-19-ಇಇ-6415ನೇದಕ್ಕೆ  ಡಿಕ್ಕಿ ಹೊಡೆದು ರಭಸಕ್ಕೆ ರಸ್ತೆಗೆ ಬಿದ್ದು  ಎರಡು ಮೋಟಾರ್ ಸೈಕಲ್ ಜಖಂಗೊಂಡು, ಪಿರ್ಯಾದುದಾರರ ಕೈಗೆ ಮತ್ತು ಕಾಲಿಗೆ ರಕ್ತ ಗಾಯವಾಗಿರುತ್ತದೆ.

 

7.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-04-2014 ರಂದು ಮಂಗಳೂರಿನಿಂದ ಕಣ್ವತೀರ್ಥಕ್ಕೆ ರುಕ್ಮಯ್ಯ ದೇವಾಡಿಗರವರು ತನ್ನ ಕೆಎ 19 ವೈ 5684 ನೇ ಮೋಟಾರು ಸೈಕಲ್ನಲ್ಲಿ ಪಿರ್ಯಾದುದಾರರಾದ ಶ್ರೀಮತಿ ಧನಲಕ್ಷ್ಮಿ ರವರನ್ನು ಮತ್ತು  ಅವರ 9 ವರ್ಷ ಪ್ರಾಯ ಮಗಳು ಕುಮಾರಿ ತನ್ವಿಯನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡುತ್ತಾ 18-45 ಗಂಟೆಗೆ ರಾ.ಹೆ. 66 ಕುಂಪಳ ಬೈಪಾಸ್ಬಳಿ ತಲುಪುತ್ತಿದ್ದಂತೆ ಅವರ ಎದುರುಗಡೆಯಿಂದ ಕೆಎಲ್‌ 14 ಎಲ್‌ 566 ನೇ ರಿಟ್ಜ್ಕಾರನ್ನು ಅದರ ಚಾಲಕ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದನು. ಇದರಿಂದ ಮೋಟಾರು ಸೈಕಲ್ಸಮೇತ ರಸ್ತೆಗೆ ಬಿದ್ದ ತನ್ವಿಯ ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತ ಹಾಗು ರುಕ್ಮಯ್ಯರವರ ಬಲ ಕಾಲಿಗೆ ಗುದ್ದಿ ಮತ್ತು ಶರೀರಕ್ಕೆ ತರಚಿದ ಗಾಯವಾಗಿರುತ್ತದೆ. ಕೂಡಲೇ ಪಿರ್ಯಾದುದಾರರು ಅವರನ್ನು ಆಟೋ ರಿಕ್ಷಾವೊಂದರಲ್ಲಿ ನೇತಾಜಿ ಆಸ್ಪತ್ರೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಅವರನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ.

 

8.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀ ಟಿ. ಸತ್ಯ ನಾರಾಯಣ ರವರು ಜಿ.ಆರ್ ಇಂಜಿನಿಯರಿಂಗ್ ಪ್ರೈ.ಲಿ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಸಂಸ್ಥೆಯು ಸುರತ್ಕಲ್ ಬಾಳಾ ದಲ್ಲಿರುವ ಹೆಚ್.ಪಿ.ಸಿ.ಎಲ್   ಎಲ್ .ಪಿ.ಜಿ ಮೌಂಟೆಡ್ ಸ್ಟೋರೇಜ್ ವೆಸಲ್ಸ್ ಎಂಬ ಕಾಮಗಾರಿಯನ್ನು ವಹಿಸಿಕೊಂಡಿರುತ್ತದೆ. ಅದರಂತೆ ಸದ್ರಿ ಕಾಮಗಾರಿ ಬಗ್ಗೆ ಅಗತ್ಯವಿರುವ ಮೊನೋಲಿಥಿಕ್ ಇನ್ಸುಲೇಟೆಡ್ ಜೋಯಿಂಟ್ಸ್ ನ್ನು ರೇಕಮ್ ಆರ್.ಪಿ.ಜಿ ಪ್ರೊಜೆಕ್ಟ್ ಲಿ ಕಂಪೆನಿಯವರು 2012ನೇ ಇಸವಿ ಜುಲಾಯಿ ತಿಗಳಿನಲ್ಲಿ ಸರಬರಾಜು ಮಾಡಿದ್ದು, ಸದ್ರಿ ಸ್ವತ್ತುಗಳನ್ನು ಹೆಚ್.ಪಿ.ಸಿ.ಎಲ್ ಒಳಗಡೆ ಅವರ ಬಾಬ್ತು ಸೈಟ್ ಆಫೀಸಿನ ಬಳಿ ಇಟ್ಟಿದ್ದು, ದಿನಾಂಕ 03-04-2014 ರಂದು ಪರಿಶೀಲಿಸಲಾಗಿ ಮೊನೋಲಿಥಿಕ್ ಇನ್ಸುಲೇಟೆಡ್ ಜೋಯಿಟ್ಸ್ 8ಇಂಚು ಹಾಗೂ 12 ಇಂಚಿನ ಒಟ್ಟು 12 ಸ್ವತ್ತು,  ಗ್ಲಾಂಟ್ಸ್- 179, ಹಾಗೂ ಸರ್ಜ್ ಅರೆಸ್ಟರ್ಸ್-3 ಇವುಗಳು ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು ಅವುಗಳ ಒಟ್ಟು ಅಂದಾಜು ಮೌಲ್ಯ 10 ಲಕ್ಷ ರೂಪಾಯಿಗಳಾಗಬಹುದು.

 

9.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಸಫ್ವಾನ್ ರವರು ದಿನಾಂಕ 06-04-2014 ರಂದು ಮದ್ಯಾಹ್ನ ಚೊಕ್ಕಬೆಟ್ಟು ಕ್ರಾಸ್ ಹಾಜಬ್ಬ ಎಂಬವರ ಗುಜುರಿ ಅಂಗಡಿ ಬಳಿ ಇರುವಾಗ ಪಿರ್ಯಾದಿದಾರರ ಪರಿಚಯದ ಉಮ್ಮರ್ ಪಾರೂಕ್ ಎಂಬವರು ಕೆ -19-ಇಡಿ-6871 ನೇ ನೋಂದಣಿ ಸಂಖ್ಯೆಯ ಮೋಟಾರು ಸೈಕಲ್ ನಲ್ಲಿ ಸುರತ್ಕಲ್ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ಹೋಗುತ್ತಿರುವಾಗ ಇಡ್ಯಾ ಗ್ರಾಮದ ಚೊಕ್ಕಬೆಟ್ಟು ಕ್ರಾಸ್ ಶ್ರೀ ಕೃಷ್ಣ ಕಟ್ಟಡದ ಬಳಿ 12-30 ಗಂಟೆಗೆ ಆಪಾದಿತ ಜಿ. ಎಮ್. ಮುಸ್ತಾಕ್ ಎಂಬವರು ಕೆ.. 19-ಎಮ್ ಡಿ-3412 ನೇ ನೋಂದಣಿ ಸಂಖ್ಯೆಯ ಕಾರನ್ನು ಚೊಕ್ಕಬೆಟ್ಟು ಕಡೆಯಿಂದ ಸುರತ್ಕಲ್ ಕಡೆಗೆ ವೇಗವಾಗಿ ಚಲಾಯಿಸಿ ಅವರ ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿ ರಸ್ತೆಯ ಪಶ್ಚಿಮ ಬದಿಗೆ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಪಿರ್ಯಾದಿದಾರರ ಪರಿಚಯದ ಉಮ್ಮರ್ ಪಾರೂಕ್ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ್ದು ಪರಿಣಾಮ ರಸ್ತೆಗೆ ಬಿದ್ದ ಉಮ್ಮರ್ ಪಾರೂಕ್ ರವರ ಬಲಕಾಲಿನ ಮೊಣಗಂಟಿನ ಬಳಿ ರಕ್ತಗಾಯ ಹಾಗೂ ಎರಡೂ ಕೈಗಳ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ತೇಜಸ್ವಿನ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

No comments:

Post a Comment