Sunday, April 6, 2014

Dacoity Case Traced : 2 Arrested








  ಪಿರ್ಯಾದಿದಾರರಾದ ಮೊಹಮ್ಮದ್ ಪೀರ್ ಸಾಬ್(40) ತಂದೆ: ಕೆ ಅಹಮ್ಮದ್ ವಾಸ: ಕಾನ್ ಕೆರೆ ರಸ್ತೆ,  ಸೊರಬ ಗ್ರಾಮ ಮತ್ತು ತಾಲೂಕು ಶಿವಮೊಗ್ಗ ಜಿಲ್ಲೆ ರವರು ದಿನಾಂಕ 30-03-2014 ರಂದು ಮುಲ್ಕಿ ಠಾಣೆಗೆ ನೀಡಿದ ದೂರಿನಲ್ಲಿ ದಿನಾಂಕ 30-03-2014 ರಂದು ಸಂಜೆ 3:30 ವೇಳೆಗೆ ಪಿರ್ಯಾದಿದಾರರು ತಾನು ಚಲಾಯಿಸಿಕೊಂಡು ಬರುತ್ತಿದ್ದ ಮೀನಿನ ಲಾರಿ KA-20-C-9420 ನೇ ದ್ದನ್ನು ಪಾವಂಜೆ ಗ್ರಾಮದ ಪಾವಂಜೆ ಎಂಬಲ್ಲಿ ಏಳು ಜನ ಅಪರಿಚಿತ ಯುವಕರು ಕಾರಿನಲ್ಲಿ ಬಂದು ತಡೆದು ನಿಲ್ಲಿಸಿ, ಲಾರಿಯ ಡೋರನ್ನು ತೆಗೆದು ಕ್ಯಾಬಿನ್ ನೊಳಗೆ ಹತ್ತಿ ಲಾರಿಯ ಟೂಲ್ಸ್ ಬಾಕ್ಸ್ ನಲ್ಲಿಟ್ಟಿದ್ದ ರೂ 2.51.000/-ನಗದು ಹಣ ಹಾಗೂ ಪಿರ್ಯಾದಿದಾರರ ಪ್ಯಾಂಟಿನ ಕಿಸೆಯಲ್ಲಿದ್ದ ಪರ್ಸ್ ನೊಳಗಿಟ್ಟಿದ್ದ 16.000/- ನಗದು ಹಣ ಒಟ್ಟು 2.67.000/- ನ್ನು ಹಾಗೂ ಪಿರ್ಯಾದಿದಾರರ ಡೈವಿಂಗ್ ಲೈಸೆನ್ಸ್ ,ಕೆನರಾ ಬ್ಯಾಂಕ್ .ಟಿ.ಎಂಕಾರ್ಡ್ ಹಾಗೂ ಮೊಬೈಲ್ ಸಿಮ್ ಕಾರ್ಡ್ ನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿಯಾಗಿದ್ದು, ಈ ಬಗ್ಗೆ ಅ.ಕ್ರ 56/14 ಕಲಂ: 395 ಐ.ಪಿ.ಸಿ ನಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿತ್ತು.
          ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರ್ಯಾದಿದಾರರನ್ನು ಪ್ರಕರಣಕ್ಕೆ ಕುರಿತಂತೆ ಮರುವಿಚಾರ ಮಾಡಿದಾಗ ಅವರು  .ತಾನು ದಿನಾಂಕ 30-03-2014 ರಂದು ಕೇರಳದಿಂದ ವಾಪಾಸ್ ಮಲ್ಪೆ ಕಡೆಗೆ ಬರುತ್ತಾ ಲಾರಿಯ ಡೀಸೆಲ್ ಕಳ್ಳತನ ಮಾಡುವ ಉದ್ದೇಶದಿಂದ ತನ್ನ ಪರಿಚಯದ ಮಹಮ್ಮದ್ ತೌಫಿಕ್ @ ತೌಫಿಕ್ ಮತ್ತು ಮಹಮ್ಮದ್ ನಿಸಾರ್ ರವರಿಗೆ ತಿಳಿಸಿ,  ತೌಫಿಕ್ ಬರಹೇಳಿದಂತೆ ಮದ್ಯಾಹ್ನದ ಹೊತ್ತಿಗೆ 62ನೇ ತೋಕೂರು ಬೋರುಗುಡ್ಡೆ ಎಂಬಲ್ಲಿಗೆ ಲಾರಿಯನ್ನು ಕೊಂಡು ಹೋಗಿ ನಿಲ್ಲಿಸಿ, ಡೀಸೆಲ್ ತೆಗೆಯುವಾಗ ಅಲ್ಲಿಗೆ ಬೈಕಿನಲ್ಲಿ ಬಂದ ಇಬ್ಬರು ಹಣವನ್ನು ದರೋಡೆ ಮಾಡಿರುತ್ತಾರೆ ಎಂಬುದಾಗಿ ಮರುಹೇಳಿಕೆಯಲ್ಲಿ ತಿಳಿಸಿರುತ್ತಾರೆ. ತಾನು ಡೀಸೆಲ್ ಕದಿಯುವ ವಿಚಾರ ಗೊತ್ತಾಗಬಾರದು ಎಂಬ ಉದ್ದೇಶದಿಂದ ಪಾವಂಜೆ ಎಂಬಲ್ಲಿ ದರೋಡೆ ಆಗಿದೆ ಎಂದು ದೂರು ನೀಡಿದ್ದಾಗಿದೆ ಎಂದು ತಿಳಿಸಿರುತ್ತಾರೆ.

          ಅದರಂತೆ ಸದ್ರಿ ಸ್ಥಳಕ್ಕೆ ಹೋಗಿ ಮಹಜರು ತಯಾರಿಸಿ ಕೃತ್ಯಕ್ಕೆ ಬಳಸಿದ 2 ಕ್ಯಾನ್ ಮತ್ತು 1 ಪೈಪ್ ಮತ್ತು ಒಂದು ಮರದ ದೊಣ್ಣೆಯನ್ನು ವಶಪಡಿಸಿ ನೆರೆಕರೆಯವರಿಂದ ಮಾಹಿತಿ ಸಂಗ್ರಹಿಸಲಾಗಿರುತ್ತದೆ.

          ದಿನಾಂಕ 05-04-2014 ರಂದು ಸಂಜೆ ಆರೋಪಿಗಳಾದ
  1. ಮಹಮ್ಮದ್ ತೌಫಿಕ್ @ ತೌಫಿಕ್ ಪ್ರಾಯ 24 ವರ್ಷ ತಂದೆ: ಮಹಮ್ಮದ್ ಹುಸೇನ್ ವಾಸ: ಸನಾಂ ಮಂಜಿಲ್, ಹೊನ್ನಾಳ ಮಸೀದಿ ಬಳಿ, ಬ್ರಹ್ಮಾವರ, ಉಡುಪಿ ಜಿಲ್ಲೆ. ಹಾಲಿ ವಾಸ: ಜನತಾ ಕಾಲೊನಿ, ಭಜನಾ ಮಂದಿರದ ಬಳಿ, ಕಾನಕಟ್ಲ, ಮಂಗಳೂರು ತಾಲೂಕು.
  2. ಮಹಮ್ಮದ್ ನಿಸಾರ್ ಪ್ರಾಯ: 22 ವರ್ಷ ತಂದೆ: ಅಬ್ದುಲ್ ಖಾದರ್ ವಾಸ: ಕಾನಕಟ್ಲ, ಜನತಾ ಕಾಲೊನಿ, ಸುರತ್ಕಲ್, ಮಂಗಳೂರು ತಾಲೂಕು
 ರವರನ್ನು ದಸ್ತಗಿರಿ ಮಾಡಿ ಕೂಲಂಕುಶವಾಗಿ ವಿಚಾರಿಸಿಕೊಂಡಲ್ಲಿ, ಸದ್ರಿಯವರು ಲಾರಿ ಚಾಲಕನನ್ನು ದರೋಡೆ ಮಾಡುವ ಉದ್ದೇಶದಿಂದ ನಿಯಾಜ್ ಮತ್ತು ಮತ್ತು ಸಾನು ಎಂಬವರೊಂದಿಗೆ ಸೇರಿ ಮೊದಲೇ ಮಾಡಿದ ಪ್ಲಾನಿನಂತೆ ತಾವು ಡೀಸೆಲ್ ತೆಗೆಯುವ ನೆಪದಲ್ಲಿ ಲಾರಿ ಚಾಲಕನನ್ನು ಬರಹೇಳಿ, ತಾವು ಡೀಸೆಲ್ ತೆಗೆಯುವಾಗ ಆರೋಪಿಗಳಾದ ನಿಯಾಜ್ ಮತ್ತು ಮತ್ತು ಸಾನು ರವರು ಅಲ್ಲಿಗೆ ಬಂದು ನಮ್ಮನ್ನು ಹೊಡೆದು ಓಡಿಸಿದಂತೆ ನಾಟಕವಾಡಿ, ಬಳಿಕ ಅವರಿಬ್ಬರೂ ಸೇರಿ ಚಾಲಕನ ಹಣ, ಎಟಿ.ಎಂ ಕಾಡ್‌, ಲೈಸೆನ್ಸ್, ಇತ್ಯಾದಿಗಳನ್ನು ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಅದರಂತೆ ದಿನಾಂಕ 06-04-2014 ರಂದು ಆರೋಪಿಗಳಿಂದ ರೂ 2,17,000/- ನಗದು ಹಣ, ಪರ್ಸ್‌, ಎ.ಟಿ.ಎಂ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್, ಮತ್ತು ಇತರೆ ಕಾಗದ ಪತ್ರಗಳನ್ನು ವಶಪಡಿಸಿಕೊಂಡು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇತರೆ ಇಬ್ಬರು ಆರೋಪಿಗಳ ದಸ್ತಗಿರಿಗೆ ಬಾಕಿ ಇದೆ.

             ಪ್ರಕರಣದ ಆರೋಪಿ ಹಾಗೂ ಸೊತ್ತಿನ ಪತ್ತೆಯ ಬಗ್ಗೆ ಮಾನ್ಯ ಪೊಲೀಸು ಆಯುಕ್ತರಾದ  ಆರ್. ಹಿತೇಂದ್ರರವರ  ಆದೇಶದಂತೆ  , ಶ್ರೀ ಡಾ| ಕೆ.ವಿ ಜಗದೀಶ್ ಉಪ ಪೊಲೀಸು ಆಯುಕ್ತರು( ಕಾ & ಸು), ಶ್ರೀ ವಿಷ್ಣುವರ್ಧನ್ ,ಉಪ ಪೊಲೀಸು ಆಯುಕ್ತರು( ಅಪರಾಧ ಮತ್ತು ಸಂಚಾರ ವಿಭಾಗ) ಮತ್ತು ಪಣಂಬೂರು  ಉಪವಿಭಾಗದ  ಸಹಾಯಕ  ಪೊಲೀಸು ಆಯುಕ್ತರಾದ ಶ್ರೀ ರವಿಕುಮಾರ್ ಎಸ್ ರವರ ಮಾರ್ಗದರ್ಶನದಲ್ಲಿ  ,ಆರೋಪಿ ಪತ್ತೆಗೆ  ಹಾಗೂ  ಸೊತ್ತುಗಳ ಸ್ವಾಧೀನತೆಗೆ  ಮುಲ್ಕಿ ಠಾಣೆಯ  ಪೊಲೀಸು ನಿರೀಕ್ಷಕರಾದ ರಾಮಚಂದ್ರ ನಾಯಕ್ ರವರೊಂದಿಗೆ ಠಾಣಾ  ಎ.ಎಸ್.ಐ ವಾಮನ್ ಸಾಲಿಯಾನ್  ಮತ್ತು ಸಿಬ್ಬಂದಿಗಳು ಸಹಕರಿಸಿರುತ್ತಾರೆ.

No comments:

Post a Comment