Monday, April 14, 2014

Daily Crime Reports 14-04-2014

ದೈನಂದಿನ ಅಪರಾದ ವರದಿ.

ದಿನಾಂಕ 14.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.04.2014 ರಂದು ರಾತ್ರಿ 20:05 ಗಂಟೆ ಸಮಯಕ್ಕೆ KA-19-MC-4990ನೇ ನಂಬ್ರದ ಕಾರನ್ನು ಅದರ ಚಾಲಕರು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಬಾವುಟಗುಡ್ಡ ಲೈಟ್ ಹೌಸ್ ಹಿಲ್ ರಸ್ತೆಯ ಬದಿಯಲ್ಲಿರುವ ಹೈಟೆಂನ್ಷನ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ  HT/LT ವಿದ್ಯುತ್ ಕಂಬವು ತುಂಡಾಗಿ ಕಾರಿನ ಮೇಲೆ ಬಿದ್ದು ವಿದ್ಯುತ್ ಲೈನಿನಲ್ಲಿ ವಿದ್ಯುತ್ ವೈಫಲ್ಯ ಉಂಟಾಗಿ ಜನಸಮಾನ್ಯರಿಗೆ ತೊಂದರೆ ಉಂಟಾಗಿರುವುದಲ್ಲದೇ ಮೆಸ್ಕಾಂಗೆ ಸುಮಾರು 25,000.00 ರೂ. ನಷ್ಟವುಂಟು ಮಾಡಿರುತ್ತಾರೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  12.04.2014  ರಂದು ಫಿರ್ಯಾದಿದಾರರಾದ  ಶ್ರೀ ರಾಯಸ್ಟನ್  ಫೆರ್ನಾಂಡೀಸ್ ರವರು  ತನ್ನ  ಬಾಬ್ತು   ರಿಜಿಸ್ತ್ರೇಶನ್  ಆಗದ   ಮೆಸ್ಟೋಂ  ಎಂಬ ಹೆಸರಿನ   ಮೋಟಾರ್ ಸೈಕಲಿನಲ್ಲಿ  ತನ್ನ  ಮನೆಯಿಂದ   ತನ್ನ ತಾಯಿ ಶ್ರೀಮತಿ ಮೋನಿಕಾ  ಫೆರ್ನಾಂಡೀಸ್ ರವರನ್ನು ಸಹ  ಸವಾರರಾಗಿ ಕುಳ್ಳಿರಿಸಿಕೊಂಡು  ಸವಾರಿ ಮಾಡುತ್ತಾ ಬಂದು ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಗೆ  ಹೋಗುವರೇ  ಬಲಬದಿಗೆ  ತಿರುಗಿಸುತ್ತಿರುವ  ವೇಳೆ ಎದುರಿನಿಂದ ಅಂದರೆ  ಕಿನ್ನಿಗೋಳಿ ಕಡೆಯಿಂದ  ಕೆಎ   19  EH  6508ನೇ   ನೋಂದಣೆಯ ಬೈಕ್ ಸವಾರ   ಅತೀ ವೇಗ  ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು   ಢಿಕ್ಕಿಪಡಿಸಿದ  ಪರಿಣಾಮ  ಫಿರ್ಯಾದಿದಾರರು  ಅವರ  ತಾಯಿ  ರಸ್ತೆಗೆ ಎಸೆಯಲ್ಪಟ್ಟಿದ್ದು ಪರಿಣಾಮ  ಫಿರ್ಯಾದಿದಾರರಿಗೆ  ಗುದ್ದಿದ  ಗಾಯವಾಗಿದ್ದು  ಅವರ  ತಾಯಿಯವರಿಗೆ ತಲೆಗೆ  ಬಲಕೆನ್ನೆಗೆ  ರಕ್ತಗಾಯವಾಗಿದ್ದು ಎಡಕಾಲಿಗೂ ಅಲ್ಲಲ್ಲಿ  ತರಚಿದ  ಗಾಯವಾಗಿರುತ್ತದೆ ಚಿಕಿತ್ಸೆ  ಬಗ್ಗೆ   ಫಾದರ್ ಮುಲ್ಲರ್  ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲುಪಡಿಸಿರುವುದಾಗಿದೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ   13.04.2014 ರಂದು ಬೆಳಿಗ್ಗೆ  8.00  ಗಂಟೆಗೆ   ಫಿರ್ಯಾದಿದಾರರಾದ  ಶ್ರೀ ಸದಾಶಿವರವರು ತನ್ನ  ಮನೆಯಿಂದ  ಉಡುಪಿಗೆ  ಕೆಲಸಕ್ಕೆಂದು   ಕೆಎ  19  ಡಿ   9705ನೇ   ನೋಂದಣೆ ಸಂಖ್ಯೆಯ  ವಿಶಾಲ್  ಬಸ್ಸಿನಲ್ಲಿ  ಮುಲ್ಕಿಯಿಂದ   ತೆರಳುತ್ತಿದ್ದು  ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ  ಬಪ್ಪನಾಡು ದೇವಸ್ಥಾನದ  ದ್ವಾರ  ತಲುಪುವ  ಸಮಯ  ಬಸ್ಸಿನಲ್ಲಿದ್ದ  ಯಾರೋ ಪ್ರಯಾಣಿಕರು  ಬಸ್ಸು ಉಡುಪಿಗೆ  ಹೋಗುವುದಿಲ್ಲ ಎಂದು  ಹೇಳಿದ್ದನ್ನು ಕೇಳಿ  ಫಿರ್ಯಾದಿದಾರರು   ಬಸ್ಸಿನ  ಬಾಗಿಲಿನಲ್ಲಿ ಇಳಿಯಲು ನಿಂತಿದ್ದಾಗ  ಬಸ್ಸಿನ ಚಾಲಕ  ಒಮ್ಮೇಲೆ ದುಡುಕುತನದಿಂದ  ಒಮ್ಮೇಲೇ  ಬಸ್ಸನ್ನು  ಅತೀ ವೇಗ  ಅಜಾಗರೂಕತೆಯಿಂದ  ಚಲಾಯಿಸಿದ  ಪರಿಣಾಮ ಫಿರ್ಯಾದಿದಾರರು  ರಸ್ತೆಗೆ  ಎಸೆಯಲ್ಟ್ಗಟಿದ್ದು   ಅವರ ಎಡಕಾಲಿನ  ಪಾದ  ಹಾಗೂ  ಮಣಿಗಂಟಿನಲ್ಲಿ   ರಕ್ತಗಾಯವಾಗಿದ್ದು   ಚಿಕಿತ್ಸೆ  ಬಗ್ಗೆ  ಮುಕ್ಕಾ  ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

4.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-04-2014 ರಂದು ಫಿರ್ಯಾಧುದಾರರಾದ ಶ್ರೀ ಸದುನ್ ರಾಯ್ ರವರು ತನ್ನ ಮನೆಯಿಂದ ಕಾವೂರು ಪೇಟೆಗೆ ಬಂದು ಕಾವೂರು ಪೇಟೆಯಲ್ಲಿನ ಕಾವೂರು ಬಾರ್ ನ ಮುಂದುಗಡೆ ಠಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಕೆಎ-19-ಎಂ.ಬಿ-1341ನೇ ಕಾರಿನ ಚಾಲಕನು ತನ್ನ ಬಾಬ್ತು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರ ಎಡಕಾಲಿನ ಪಾದದ ಮೇಲಿನಿಂದಾಗಿ ಹಾದು ಮುಂದಕ್ಕೆ ಹೋದ ಪರಿಣಾಮ ಫಿರ್ಯಾಧುದಾರರ ಕಾಲಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುವುದಾಗಿದೆ.

 

5.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-04-2014 ರಂದು ಪಿರ್ಯಾದಿದಾರರಾದ ತಮೀಜ್ ರವರು ಮಂಗಳೂರು ಬಂದರು ಗಾಂಧಿಸಂನ್ಸ್ ಬಳಿ ಇರುವ ತನ್ನ ತಂದೆಯ ಬಾಬ್ತು ಗೂಡಂಗಡಿಯ ಬಳಿ ಹೊರಗೆ ನಿಂತಿದ್ದಾಗ ಸಮಯ ಸುಮಾರು 21:15 ಗಂಟೆಗೆ ಪಿರ್ಯಾದಿದಾರರ ಪರಿಚಯದ ಸಫವನ್ ಎಂಬವರು ಪಿರ್ಯಾದಿದಾರರ ಹಿಂದುಗಡೆಯಿಂದ ಬಂದು "ನೀನು ಹಿದಾಯತ್ ಗೆ ಬಾರಿ ಸಫೋರ್ಟ್ ಮಾಡುತ್ತೀಯಾ" ಎಂಬುದಾಗಿ ಬ್ಯಾರಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ತಲೆಯ ಬಲಬದಿಗೆ ಯಾವುದೋ ರಾಡ್ ನಿಂದ ಹೊಡೆದ ಪರಿಣಾಮ ಪಿರ್ಯಾದಿದಾರರು ರಕ್ತಗಾಯಗೊಂಡು ನೆಲಕ್ಕೆ ಬಿದ್ದಿದ್ದು, ಆಗ ಆರೋಪಿ ಸಫವನ್ ನ ಜೊತೆಯಲ್ಲಿದ್ದ ಇನ್ನೊಬ್ಬನು ಕಾಲಿನಿಂದ ಹಣೆಗೆ ತುಳಿದಿದ್ದು, ಆರೋಪಿತರು 5-6 ಜನ ಇದ್ದ ಕಾರಣ ಪಿರ್ಯಾದಿದಾರರು ಅಲ್ಲಿಂದ ಓಡಿಹೋಗಿದ್ದು, ನಂತರ ಪಿರ್ಯಾದಿದಾರರು ತನ್ನ ಪರಿಚಯದ ಮುನೀರ್ ಎಂಬವರ ಜೊತೆಯಲ್ಲಿ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಳೆದ ವಾರ ಕ್ರಿಕೆಟ್ ಪಂದ್ಯಾಟದ ವಿಚಾರದಲ್ಲಿ ಅನ್ಸಾರಿ ರಸ್ತೆಯಲ್ಲಿ ಎರಡು ಪಂಗಡದವರಿಗೆ ಗಲಾಟೆ ಆಗಿದ್ದು, ಈ ದ್ವೇಷದಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿದ್ದಾಗಿರುತ್ತದೆ.

 

6.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13-04-14 ರಂದು ಮಧ್ಯಾಹ್ನ 12-00 ಗಂಟೆಗೆ ಮಂಗಳೂರು ತಾಲೂಕು ಹೊಸಬೆಟ್ಟು ಗ್ರಾಮದ ನವಗಿರಿ ಕಲ್ಯಾಣ ಮಂಟಪದ ಬಳಿ ರಾ,ಹೆ, 66 ರಲ್ಲಿ ಪಿರ್ಯಾದಿದಾರರಾದ ಶ್ರೀ ಭರತ್ ಕುಮಾರ್ ರವರು ಹಾಗೂ ಅವರ ಅಜ್ಜಿ ಶ್ರೀಮತಿ ಸರೋಜಿನಿ (60), ರವರು ರಸ್ತೆ ದಾಟುವರೇ ರಸ್ತೆ ಬದಿ ಇದ್ದಾಗ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಬಿ- 2990 ನೇದರನ್ನು ಅದರ ಸವಾರ ನಿತೇಶ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸರೋಜಿನಿರವರಿಗೆ ಢಿಕ್ಕಿ ಹೊಡೆದ ಪರಿಣಾಮ ಸರೋಜಿನಿರವರು ರಸ್ತೆಗೆ ಬಿದ್ದು  ಬಲ ಕಾಲಿಗೆ, ತಲೆಗೆ ಗಂಭೀರ ಗಾಯಗೊಂಡಿರುವುದಲ್ಲದೆ ಬೈಕ್ ಸವಾರ ನಿತೇಶ್ ರವರಿಗೂ ಕೂಡಾ  ಗಾಯವಾಗಿದ್ದು ಇಬ್ಬರೂ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-04-2014 ರಂದು ಸಂಜೆ ವೇಳೆಗೆ ಪಿರ್ಯಾದಿದಾರರಾದ ಗ್ರೇಟ್ಟಾ ಮಸ್ಕರೇನ್ಸ್ ರವರ ತಂಗಿಯ ಮಗಳು ಜೋಯಿಲಿನ್ಲಸ್ರದೋ (09) ಎಂಬವಳು ತಿಂಡಿ ತರಲು ಪಿರ್ಯಾದಿದಾರರ ಮನೆಯ ಎದುರು ಇರುವ ಅಂಗಡಿಗೆ ಹೋಗಲೆಂದು ವಾಮಂಜೂರು ಮೂಡುಶೆಡ್ಡೆ ಡಾಮಾರು ರಸ್ತೆಯನ್ನು ದಾಟುವರೇಮೂಡುಶೆಡ್ಡೆ ಕಡೆಯಿಂದ ವಾಮಂಜೂರು ಕಡೆಗೆ ಬಸ್ಸೊಂದು ಬರುವುದನ್ನು ನೋಡಿ  ರಸ್ತೆ ಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಿಂತಿದ್ದ ಸಮಯ ಸುಮಾರು ಸಂಜೆ 4-15 ಗಂಟೆ ವೇಳೆಗೆ ವಾಮಂಜೂರು ಕಡೆಯಿಂದ ಪಿಕ್ಅಪ್ಜೀಪೊಂದನ್ನು ಅದರ ಚಾಲಕ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಚ್ಚಾ ಮಣ್ಣು ರಸ್ತೆಯಲ್ಲಿ ನಿಂತಿದ್ದ ಜೋಯಿಲಿನ್ಲಸ್ರದೋಳಿಗೆ ಡಿಕ್ಕಿ ಹೊಡೆದ ಪರಿಣಾಮ ಅವಳು ರಸ್ತಗೆ ಬಿದ್ದಳು. ಪಿರ್ಯಾದಿದಾರರು ಮನೆಯ ಮಾಳಿಗೆಯಲ್ಲಿ ನಿಂತು ಜೋಯಿಲಿನ್ಲಸ್ರದೋಳು ರಸ್ತೆ ದಾಟುವುದನ್ನು ನೋಡುತ್ತಿದ್ದವರು ಅಪಘಾತವನ್ನು ಕಂಡು ಸ್ಥಳಕ್ಕೆ ಬಂದು ಜೋಯಿಲಿನ್ಲಸ್ರದೋಳನ್ನು ಉಪಚರಿಸಿದಾಗ ಅವಳಿಗೆ ಎಡಕೈ, ಬಲಕಾಲು ಮೊಣಗಂಟಿಗೆ ತರಚಿದ ಹಾಗೂ ರಕ್ತ ಬರುವ ಗಾಯ, ಗಲ್ಲ, ಎಡಮೊಣಗಂಟಿಗೆ ಮೂಲೆ ಮುರಿತದ ಗಾಯ ಉಂಟಾಗಿರುತ್ತದೆ. ಅಪಘಾತ ಉಂಟು ಮಾಡಿದ ಪಿಕ್ಅಪ್ಚಾಲಕ ವಾಹನವನ್ನು ನಿಲ್ಲಿಸಿ ಬಂದಿದ್ದು ನೋಡಲಾಗಿ ಅದರ ನಂಬ್ರ KA 19 B 7493 ಆಗಿದ್ದು  ಆತನ ಹೆಸರು ಕಿರಣ್ಎಂಬುದಾಗಿರುತ್ತದೆ. ಬಳಿಕ ಗಾಯಗೊಂಡ ಜೋಯಿಲಿನ್ಲಸ್ರದೋಳನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆಈ ಅಪಘಾತಕ್ಕೆ ಕಿರಣ್ಎಂಬಾತನು ತನ್ನ ಬಾಬ್ತು ಪಿಕ್ಅಪ್ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ.

No comments:

Post a Comment