ದೈನಂದಿನ ಅಪರಾದ ವರದಿ.
ದಿನಾಂಕ 24.04.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
1
|
ಹಲ್ಲೆ ಪ್ರಕರಣ
|
:
|
3
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
2
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
4
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22-04-2014 ರಂದು ರಾತ್ರಿ ಪಿರ್ಯಾದುದಾರರಾದ ಶ್ರೀ ಮಣಿ ರವರು ಮಂಗಳೂರು ನಗರದ ಕೆ.ಎಸ್.ಆರ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ರಾತ್ರಿ 10:00 ಗಂಟೆಗೆ ಪೂಂಜಾ ಆರ್ಕೇಡ್ ಹೋಟೇಲ್ ಬಳಿ ತಲುಪಿದಾಗ, ಅವರ ಹಿಂಬದಿಯಿಂದ ಅಂದರೆ ನವಭಾರತ್ ಕಡೆಯಿಂದ ಹಂಪನ್‌ಕಟ್ಟೆ ಜಂಕ್ಷನ್ ಕಡೆಗೆ ಸ್ಕೂಟರೊಂದನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿನ ಬಳಿ ತೊಡೆಗೆ ಗುದ್ದಿದ ಗಾಯವಾದ್ದವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ., ಅಪಘಾತದ ಸಮಯ ಗಡಿಬಿಡಿಯಲ್ಲಿ ಸದ್ರಿ ಸ್ಕೂಟರ್ನ ನಂಬ್ರವನ್ನು ನೋಡಿರುವುದಿಲ್ಲ. ಅಲ್ಲದೇ ಈ ಅಪಘಾತ ನಡೆಸಿದ ಸ್ಕೂಟರ್ ಸವಾರನು ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸದೇ ತನ್ನ ಸ್ಕೂಟರಿನೊಂದಿಗೆ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 23.04.2014 ರಂದು ಪಿರ್ಯಾದಿದಾರರಾದ ಶ್ರೀ ರಕ್ಷಿತ್ ಕುಮಾರ್ ಮತ್ತು ಅವರ ಗೆಳೆಯರಾದ ಶಿವಪ್ರಸಾದ್, ಚಂದ್ರಶೇಖರ್ ಇವರು ಗಳು ನಗರದ ಕೆ.ಎಸ್ ರಾವ್ ರಸ್ತೆಯಲ್ಲಿರುವ ಹೋಟೆಲಿಗೆ ಹೋಗಿ ಊಟ ಮುಗಿಸಿಕೊಂಡು ಬಂದು ಹೊಟೇಲಿನ ಎದುರು ನಿಂತುಕೊಂಡು ಮಾತನಾಡುತ್ತಾ ನಂತರ ಶಿವಪ್ರಸಾದ್ ರವರು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ.21.ಕ್ಯೂ.5697ನೇದರಲ್ಲಿ ಚಂದ್ರಶೇಖರ್ ರವರನ್ನು ಸಹಾಸವರರನ್ನಾಗಿ ಕುಳ್ಳಿರಿಸಿಕೊಂಡು ರೂಮ್ ಕಡೆ ಹೋಗುವರೇ ತಯಾರಿನಡೆಸುತ್ತಿದ್ದಂತೆ ಸಮಯ ರಾತ್ರಿ 23.00 ಗಂಟೆಗೆ ಕಾರು ನಂಬ್ರ ಕೆಎ.19.ಎಂ ಎಲ್.3ನೇದನ್ನು ಅದರ ಚಾಲಕ ಹಂಪನಕಟ್ಟೆ ಕಡೆಯಿಂದ ನವಭಾರತ್ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ರೂಮಿಗೆ ಹೋಗುವರೇ ರೆಡಿಯಾಗಿದ್ದ ಶಿವಪ್ರಸಾದ್ ರವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಶಿವಪ್ರಸಾದ್ ಮತ್ತು ಸಹಸವಾರ ಚಂದ್ರ ಶೇಖರ್ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಲಟ್ಟು ಶಿವಪ್ರಸಾದ್ ರವರಿಗೆ ಎಡ ಕೈ ಮಣಿಗಂಟಿಗೆ ಮೂಳೆ ಮುರಿತದ ತೀವೃ ಗಾಯ ಹಾಗೂ ಎಡ ಕೋಲು ಕಾಲಿಗೆ, ಬಲ ಕಾಲಿನ ಬೆರಳುಗಳಿಗೆ, ಬಲ ಕೈ ತಟ್ಟಿಗೆ ಹಾಗೂ ಮುಖಕ್ಕೆ ರಕ್ತ ಗಾಯ ಹಾಗೂ ಚಂದ್ರಶೇಖರ್ ರವರಿಗೆ ಎಡ ಕೋಲು ಕಾಲಿಗೆ ಹಾಗೂ ತೊಡೆಯಲ್ಲಿ ಮೂಳೆ ಮುರಿತದ ಗಾಯ ಮತ್ತು ಮುಖದ ಭಾಗಕ್ಕೆ, ಬಲ ಬದಿ ಸೊಂಟಕ್ಕೆ, ಎಡ ಗೈ ಭುಜಕ್ಕೆ ರಕ್ತ ಗಾಯವಾದವರು ಮೊದಲಿಗೆ ಯೆನಪೊಯ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಆರೋಪಿ ಕಾರು ಚಾಲಕ ಅಪಘಾತ ಎಸಗಿದ ಬಳಿಕ ತನ್ನ ಕಾರನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/04/2014 ರಂದು 20:00 ಗಂಟೆಗೆ ಆಟೋರಿಕ್ಷಾ ನಂಬ್ರ KA-19-D-5846 ನ್ನು ಅದರ ಚಾಲಕ ನಂತೂರು ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ಏಕಮುಖವಾಗಿ ವಾಹನ ಸಾಗಲು ಇರುವ ವ್ಯವಸ್ಥೆಗೆ ವಿರುದ್ದವಾಗಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಿಕರ್ನಕಟ್ಟೆಯ 32 ಡೆಂಟಲ್ ಸ್ಪಾ ಕ್ಲಿನಿಕ್ ಎದುರು ತಲುಪುವಾಗ ಕುಲಶೇಖರ ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ ಬರುತ್ತಿದ್ದ ಸ್ಕೂಟರ್ ನಂಬ್ರ KA-19-EB-7868 ಕ್ಕೆ ಡಿಕ್ಕಿ ಮಾಡಿ ಶಕ್ತಿ ನಗರ ಕ್ರಾಸ್ ರಸ್ತೆ ಕಡೆಗೆ ತಿರುಗಿಸಿ ಚಲಾಯಿಸಿದ್ದಾಗಿದೆ ಅಪಘಾತದಿಂದ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭಿರ ಸ್ವರೂಪದ ಗಾಯಗೊಂಡು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ MICU ನಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಆಳ್ವಾರೀಸ್ ರಸ್ತೆಯ ಸ್ಟೂಡೆಂಟ್ ಲೇನ್ ನಲ್ಲಿ ಪಿರ್ಯಾದಿದಾರರಾದ ಶ್ರೀ ಶ್ರೀನಿವಾಸ ಶೆಟ್ಟಿ ರವರ ಬಾಬ್ತು ವಾಸದ ಮನೆಯ ಕೆಲಸದಾಕೆ ಮರಿಯಮ್ಮ ಎಂಬವರು ದಿನಾಂಕ 22-04-2014ರ ಹಿಂದಿನ ದಿನಗಳಿಂದ ಪಿರ್ಯಾದಿದಾರರ ಬಾಬ್ತು ವಾಸದ ಮನೆಯಿಂದ ಸುಮಾರು 111ಗ್ರಾಂ ತೂಕವಿರುವ ವಿವಿಧ ನಮೂನೆಯ ಚಿನ್ನಾಭರಣಗಳನ್ನು ಕಳವು ಮಾಡಿದ್ದು, ಕಳವು ಮಾಡಿದ ಸೊತ್ತುಗಳ ಅಂದಾಜು ಮೌಲ್ಯ 4,30,000/- ರೂ ಆಗಬಹುದು.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-04-2014ರಂದು ಸಂಜೆ 4-45 ಗಂಟೆಗೆ ಬಂಟ್ಸ್ ಹಾಸ್ಟೇಲ್ ನ ಶ್ರೀ ವಿನಾಯಕ ಪ್ರಭು ಎಂಬವರ ಮನೆಯಲ್ಲಿ ಮುತ್ತು ಕುಮಾರ್ ಎಂಬವರ ಗುತ್ತಿಗೆಯಲ್ಲಿ ಪಿರ್ಯಾದಿದಾರರಾದ ಶ್ರೀ ರಾಮಮೂರ್ತಿ ರವರ ಜೊತೆ ರಾಜೇಶ್ ಎಂಬಾತನು ಟೈಲ್ಸ್ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮುತ್ತು ಕುಮಾರ್ ರವರು ಟೈಲ್ಸ್ ಕಟ್ಟಿಂಗ್ ಮಾಡುವ ಮಿಷೀನ್ ಗೆ ಸರಿಯಾದ ವಯರ್ ಅಳವಡಿಸದೇ ಜೋಡಿಸಿದ ವಯರ್ ನ್ನು ಅಳವಡಿಸಿ ಆ ವಯರ್ ಗೆ ಯಾವುದೇ ಟೇಪ್ ಕೂಡಾ ಹಾಕದೇ ಹಾಗೂ ವಯರ್ ಗೆ ಪ್ಲಗ್ ಕೂಡಾ ಹಾಕದೇ ಸ್ವಿಚ್ ಬೋರ್ಡ್ ಗೆ ವಯರನ್ನು ಸಿಕ್ಕಿಸಿ ಮುಂಜಾಗರೂಕತಾ ಕ್ರಮ ವಹಿಸದೇ ನಿರ್ಲಕ್ಷತನದಿಂದ ಕೆಲಸ ಮಾಡಿಸುತ್ತಿದ್ದುದರಿಂದ ರಾಜೇಶ್ ಗೆ ಜೋಡಿಸಿದ್ದ ವಯರ್ ನಿಂದ ಕರೆಂಟ್ ಶಾಕ್ ತಗಲಿ ರಾಜೇಶ್ ಮೃತಪಡಲು ಕಾರಣವಾಗಿರುತ್ತದೆ.
6.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಿ. ನಿತ್ಯಾನಂದ ಶೆಟ್ಟಿ ರವರು ದಿನಾಂಕ 23/04/2014 ರಂದು ಕೊಟ್ಟಾರ ಚೌಕಿಯಲ್ಲಿರುವ ಗಣೇಶ್ ಶಿಪ್ಪಿಂಗ್ ನ ಕಛೇರಿಯಲ್ಲಿರುವ ಸಮಯ ಸಂಜೆ ಸುಮಾರು 3-15 ಗಂಟೆಗೆ ಆರೋಪಿಗಳಾದ ಸನತ್ ಶೆಟ್ಟಿ, ಲಲಿತ ಎನ್ ಶೆಟ್ಟಿ, ಭವಾನಿ ಶೆಟ್ಟಿ, ಉಮಾವತಿ ಎಂ ಶೆಟ್ಟಿ ರವರು ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಹೊರಗೆ ಬರುವಂತೆ ಕರೆದಿದ್ದು, ಫಿರ್ಯಾದಿದಾರರು ಹೊರಗೆ ಬಂದಾಗ ಆರೋಪಿ ಸನತ್ ಶೆಟ್ಟಿ ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ "ನಿನ್ನನ್ನು ನೋಡಿಕೊಳ್ಳುತ್ತೇನೆ, ನಿನ್ನನ್ನು ಬಿಡುವುದಿಲ್ಲ, ಹಿರಿಯರ ಆಸ್ತಿಯಲ್ಲಿ ಮೋಸ ಮಾಡುತ್ತೀ" ಎಂದು ಹೇಳುತ್ತಾ ಎಲ್ಲರು ಹೊರಗೆ ಹೋಗಿದ್ದು, ಆರೋಪಿ ಸನತ್ ಶೆಟ್ಟಿ ರಸ್ತೆ ಬದಿಯಲ್ಲಿದ್ದ ಕಲ್ಲನ್ನು ಹೆಕ್ಕಿ ಫಿರ್ಯಾದಿದಾರರ ಕಡೆಗೆ ಬಿಸಾಡಿದ್ದರಿಂದ ಕಛೇರಿಯ ಗಾಜು ಹುಡಿಯಾಗಿರುವುದಲ್ಲದೆ, ಒಂದು ಕಲ್ಲು ಫಿರ್ಯಾದಿದಾರರ ಹೊಟ್ಟೆಗೆ ತಾಗಿ ಗಾಯವಾಗಿರುತ್ತದ್ದೆ, ನಂತರ ಆರೋಪಿಗಳು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆಯೊಡ್ಡಿ ಹೊರಟು ಹೋಗಿರುತ್ತಾರೆ.
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಯಶವಂತ ರವರು ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 19-04-2014 ರಂದು ಬೆಳಿಗ್ಗೆ ತನ್ನ ಬಾಬ್ತು ಕೈನೆಟಿಕ್ ಹೊಂಡಾ ಸ್ಕೂಟರ್ ನಂಬ್ರ ಕೆಎ-19-ಆರ್-8823 ನೇದರಲ್ಲಿ ಮನೆಯಿಂದ ಹೊರಟು ಸೆಂಟ್ರಲ್ ಮಾರ್ಕೆಟ್ ಗೆ ಬಂದು ಬೆಳಿಗ್ಗೆ 10:30 ಗಂಟೆಗೆ ತನ್ನ ಬಾಬ್ತು ಕೈನೆಟಿಕ್ ಹೊಂಡಾ ಸ್ಕೂಟರ್ ನಂಬ್ರ ಕೆಎ-19-ಆರ್-8823 ನೇಯದ್ದನ್ನು ಮಂಗಳೂರು ಸೆಂಟ್ರಲ್ ಮಾರ್ಕೆಟ್ ನ ದುಬೈ ಮಾರ್ಕೆಟ್ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ನ ಹ್ಯಾಂಡ್ ಲಾಕ್ ಮಾಡದೇ ಪಾರ್ಕ್ ಮಾಡಿ ನಿಲ್ಲಿಸಿ ವೈಯಕ್ತಿಕ ಕೆಲಸದ ನಿಮಿತ್ತ ಪುತ್ತೂರಿಗೆ ತೆರಳಿದ್ದು, ದಿನಾಂಕ 20-04-2014 ರಂದು ಬೆಳಿಗ್ಗೆ 09:00 ಗಂಟೆಗೆ ಮಂಗಳೂರು ಸೆಂಟ್ರಲ್ ಮಾರ್ಕೆಟ್ ನ ದುಬೈ ಮಾರ್ಕೆಟ್ ಎದುರಿನ ಪಾರ್ಕಿಂಗ್ ಸ್ಥಳಕ್ಕೆ ಬಂದು ನೋಡಲಾಗಿ ತನ್ನ ಬಾಬ್ತು ಕೈನೆಟಿಕ್ ಹೊಂಡಾ ಸ್ಕೂಟರ್ ನಂಬ್ರ ಕೆಎ-19-ಆರ್-8823 ಣೇಯದ್ದು ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು, ಬಳಿಕ ಎಲ್ಲಾ ಕಡೆ ಹುಡುಕಾಡಿದ್ದಲ್ಲಿ ಸ್ಕೂಟರ್ ಪತ್ತೆಯಾಗದೇ ಇದ್ದು, ಕೈನೆಟಿಕ್ ಹೊಂಡಾ ಸ್ಕೂಟರ್ ನಂಬ್ರ ಕೆಎ-19-ಆರ್-8823 ನೇಯದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ, ಪಿರ್ಯಾದಿದಾರರಿಗೆ ವಿಪರೀತ ಜ್ವರದ ಕಾರಣ ಪಿರ್ಯಾದು ನೀಡಲು ವಿಳಂಬವಾಗಿದ್ದು, ಪಿರ್ಯಾದಿದಾರರ ಬಾಬ್ತು ಕಳವಾದ ಕೈನೆಟಿಕ್ ಹೊಂಡಾ ಸ್ಕೂಟರ್ ನಂಬ್ರ ಕೆಎ-19-ಆರ್-8823 ನೇಯದ್ದು ಕಪ್ಪು ಬಣ್ಣದಾಗಿದ್ದು, ಇಂಜಿನ್ ನಂಬ್ರ NIEVJ307621, ಚಾಸೀಸ್ ನಂಬ್ರ NIFVJ310794, ಮಾಡೆಲ್ – 2003 ಆಗಿದ್ದು, ಅಂದಾಜು ಮೌಲ್ಯ ರೂ. 5,000/- ಆಗಿರುವುದಾಗಿದೆ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-03-2014 ರ ರಾತ್ರಿ ಯಿಂದ ದಿನಾಂಕ: 02-04-2014 ರ 1900 ಘಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ನಗರದ ಅತ್ತಾವರ ಕಾಪ್ರಿಗುಡ್ಡೆ ಎಂಬಲ್ಲಿ ಇರುವ ಫಿರ್ಯಾದಿದಾರರಾದ ಶ್ರೀ ಅಬ್ದುಲ್ ಸಾಜೀದ್ ರವರ ಬಾಬ್ತು ಗೋಲ್ಡನ್ ಕ್ಯಾಸೆಲ್ ನ ಫ್ಲಾಟ್ ನಂಬ್ರ ಜಿ-6 ನೇ ಮನೆಯಲ್ಲಿ ಫಿರ್ಯಾದಿದಾರರ ಹೆಂಡತಿ ಶ್ರೀಮತಿ ಸರ್ವಥ್ ಎಂಬವರು ದಿನನಿತ್ಯ ಧರಿಸಿಕೊಂಡಿದ್ದ 2 ಚಿನ್ನದ ಉಂಗುರ, 1 ಜೊತೆ ಕಿವಿಯ ಬೆಂಡೋಲೆ, ಮತ್ತು ಚಿನ್ನದ ಬಳೆಗಳು ಎರಡು ಒಟ್ಟು 8 ಪವನು ತೂಕದ ಚಿನ್ನಾಭರಣಗಳನ್ನು ಮೇಜಿನ ಡ್ರಾಯರ್ ನಲ್ಲಿ ಇಟ್ಟಿದ್ದುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ, ಚಿನ್ನಾಭರಣವನ್ನು ಹುಡುಕಾಡಿದಲ್ಲಿ, ತೆಗೆದುಕೊಂಡು ಹೋದವರು ತಂದು ಕೊಡಬಹುದು ಎಂಬ ಭಾವನೆಯಿಂದ ಇದ್ದು ತಡವಾಗಿ ದೂರು ನೀಡಿರುವುದು ಎಂದು, ಈ ನಿಟ್ಟಿನಲ್ಲಿ ಶ್ರೀಮತಿ ಆನಿಶಾ ಎಂಬವರ ಮನೆಯಲ್ಲಿ ಕೆಲಸಕ್ಕೆ ಇರುವ ಕುಮಾರಿ ವೀಣಾ ಎಂಬಾಕೆಯನ್ನು ವಿಚಾರಣೆ ಮಾಡಬೇಕೆಂದು ಲಿಖಿತ ಫಿರ್ಯಾದಿ ನೀಡಿರುವುದಾಗಿದೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಬ್ದುಲ್ಲಾ ಮೊಹಮ್ಮದ್ ಅಲಿ ರವರು ತನ್ನ ಮನೆಯಾದ ಮಂಗಳೂರು ತಾಲೂಕು ಬಜಪೆ ಗ್ರಾಮದ ತಾರಿಕಂಬ್ಳ ಸಹರ್ ಕಾಟೇಜ್ ಎಂಬಲ್ಲಿ ದಿನಾಂಕ: 22/04/2014 ರಂದು 13.20 ಗಂಟೆಗೆ ತನ್ನ ಮಗಳು ಖರೀಧಿಸಿದ ಬೈಕಿನ ಸಾಲದ ಹಣದ ವಸೂಲಾತಿಗೆಂದು ಬಂದಿದ್ದ ಅಪರಿಚಿತ ವ್ಯಕ್ತಿಗಳು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಮನೆಯ ಕಾಲಿಂಗ್ ಬೆಲ್ಲನ್ನು ಒತ್ತಿದ ಸಮಯ ಪಿರ್ಯಾದಿದಾರರು ಬಾಗಿಲನ್ನು ತೆರೆದು ಹೊರ ಬಂದಾಗ, ಬೈಕಿನ ಕಂತನ್ನು ಕಟ್ಟುವಂತೆ ಪಿರ್ಯಾದಿದಾರರಲ್ಲಿ ತಿಳಿಸಿದವರಲ್ಲಿ ಪಿರ್ಯಾದಿದಾರರು " ನಾನು ನಿಮ್ಮಿಂದ ಸಾಲ ಪಡೆದಿಲ್ಲ; ನನಗೆ ಯಾಕೆ ಫೋನ್ ಮಾಡಿ ತೊಂದರೆ ಕೊಡುತ್ತೀರಿ? " ಎಂದು ಕೇಳುತ್ತಿದ್ದಂತೆ ಅವರ ಪೈಕಿ ಓರ್ವ ವ್ಯಕ್ತಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಹಿಸುಕಿದ್ದಲ್ಲದೇ, ಅಲ್ಲೇ ಇದ್ದ ಕಬ್ಬಿಣದ ಸರಳನ್ನು ತೆಗೆದ ಇನ್ನೋರ್ವ ವ್ಯಕ್ತಿ ಪಿರ್ಯಾದಿದಾರರ ಬಲ ಕೈಯ ಮೊಣಗಂಟಿಗೆ ಹೊಡೆದು ಸಾದಾ ತರಹದ ಗಾಯಗೊಳಿಸಿದ್ದಲ್ಲದೇ, ತಡೆಯಲು ಬಂದ ಪಿರ್ಯಾದಿದಾರರ ಮಗಳು ನಫೀಸತ್ ನುಸೈಬಾಳಿಗೆ ಕೂಡಾ ಕೈಯಿಂದ ಹಲ್ಲೇ ಮಾಡಿ, ತಡೆಯಲು ಬಂದ ಕೆಲಸದಾಳು ಸೀತಣ್ಣ ಎಂಬವರನ್ನು ದೂಡಿ ಹಾಕಿ ಅವರುಗಳು ಬಂದ ಮೋಟಾರು ಸೈಕಲ್ ನಲ್ಲಿ ಹೊರಟು ಹೋಗಿರುತ್ತಾರೆ.
10.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-04-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಶರೀಫ್ ರವು ಮನೆಯಲ್ಲಿ ಅವರ ಮನೆಯರೊಂದಿಗೆ ಮಲಗಿದ್ದು ದಿನಾಂಕ 24-04-2014 ರಂದು ಬೆಳಿಗ್ಗಿನ ಜಾವ 03-00 ಗಂಟೆಗೆ ಪಿರ್ಯಾದಿಯ ತಮ್ಮನ ಹೆಂಡತಿ ಶ್ರೀಮತಿ ಸುಮಯ್ಯರವರು ಮಗುವಿಗೆ ನೀರು ಕುಡಿಸಲು ಎದ್ದಾಗ ಆಕೆಯ ಕೋಣೆಯ ಕಪಾಟಿನ ಬಾಗಿಲು ತೆರೆದಿರುವುದನ್ನು ಕಂಡು ಅದರೊಳಗಿದ್ದ ಆಕೆಯ ವಾಚ್ -1, ಸುಮಾರು 8 ಪವನ್ ನ ಚಿನ್ನದ ಸರ-1 ಹಾಗೂ ಮಗುವಿನ ಸುಮಾರು 3/4 ಪವನ್ನಿನ ಬಂಗಾರದ ಉಡಿದಾರ-1, ಆಕೆಯ ಕಾಲಿನಲ್ಲಿದ್ದ 1 ಜೊತೆ ಬಂಗಾರದ ಸುಮಾರು 2 ಮುಕ್ಕಾಲು ಬಂಗಾರದ ಕಾಲು ಚೈನ್ ಇಲ್ಲದೇ ಇದ್ದು ಮನೆಯವರಿಗೆ ತಿಳಿಸಿದಾಗ ಎದ್ದು ನೋಡಲಾಗಿ ಮನೆಯ ಹಿಂಬದಿಯ ಬಾಗಿಲಿಗೆ ಹಾಕಿದ ಬೀಗ ಹಾಗೂ ಮತ್ತೊಂದು ಬಾಗಿಲಿನ ಚಿಲಕ ಕೂಡ ತೆರೆದಿದ್ದು ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿದ್ದಲ್ಲದೇ ಸದ್ರಿ ಮನೆಯ ಪಿರ್ಯಾದಿದಾರರ ತಂದೆ ಮಲಗಿದ್ದ ಕೋಣೆಯಲ್ಲಿದ್ದ ರಾಡೋ ವಾಚ್-1 ಹಾಗೂ ಪಿರ್ಯಾದಿದಾರರ ತಂಗಿ ಮಲಗಿದ್ದ ಕೋಣೆಯ ಕಾಪಾಟು ತೆರೆದು ಪಕ್ಕದ ಬ್ಯಾಗಿನಲ್ಲಿದ್ದ ರೂ 500/- ನಗದು ಕಳ್ಳತನ ವಾಗಿದ್ದು ಮಹಡಿ ಮೇಲಿನ ಕೋಣೆಯ ಕಾಪಾಟು ತೆಗೆದಿದ್ದು ಸೊತ್ತುಗಳು ಹೋಗಿರುವುದಿಲ್ಲ, ಶ್ರೀಮತಿ ಸುಮಯ್ಯರವರು ಬೆಳಿಗ್ಗಿನ ಜಾವ 02-30 ಗಂಟೆಗೆ ಮಗುವಿಗೆ ಮೂತ್ರ ಮಾಡಿಸಲು ಎದ್ದಾಗ ಎಲ್ಲವೂ ಸರಿಯಾಗಿ ಇದ್ದು ಮೇಲ್ಕಂಡ ಸೊತ್ತುಗಳನ್ನು ದಿನಾಂಕ 24-04-2014 ರ 02-30 ಗಂಟೆಯಿಂದ 03-00 ಗಂಟೆ ಮದ್ಯೆ ಯಾರೋ ಕಳ್ಳರು ಮನೆಯ ಹಿಂಬದಿಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಕಳವು ಮಾಡಿರುವುದಾಗಿದೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.04.2014 ರಂದು ರಾತ್ರಿ ಸುಮಾರು 08.00 ಗಂಟೆಗೆ ಪಿರ್ಯಾಧಿದಾರರಾದ ಡಾ. ಶ್ರೀಜೀತ್ ಕೆ.ಕೆ. ರವರು ತನ್ನ ಬಾಬ್ತು KL08AX8650 ನೇ ನಂಬ್ರದ ಕಾರಿನಲ್ಲಿ ಕೊಂಚಾಡಿಯಿಂದ ಗುರುನಗರ ಕಡೆಗೆ ಹೋಗುತ್ತಿರುವಾಗ ಗುರುನಗರ ಜಂಕ್ಷನ್ ಬಳಿ ಅಂದರೆ ವಿಕಾಸ್ ಕಾಲೇಜ್ನ ಬಳಿ ರಸ್ತೆಯ ಮತ್ತೊಂದು ಬದಿಗೆ ಹೋಗುವ ಸಲುವಾಗಿ ತನ್ನ ಕಾರನ್ನು ನಿಲ್ಲಿಸಿದ ಸಂದಂರ್ಭದಲ್ಲಿ ಅತೀವೇಗದಲ್ಲಿ ಬಂದ KA19EC0540 ನೇ ನಂಬ್ರದ ಮೋಟಾರ್ ಸೈಕಲ್ ಸದ್ರಿ ಕಾರಿಗೆ ಡಿಕ್ಕಿಹೊಡೆದು ನಂತರ ಮುಂದುವರೆದು ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರು ಹುಡಿಗಿಯರಿಗೆ ಡಿಕ್ಕಿಹೊಡೆದಿರುವುದಾಗಿಯೂ ಈ ಕಾರಣ ಅವರುಗಳಿಗೆ ಪೆಟ್ಟಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೊರರೋಗಿಯಾಗಿ ದಾಖಲು ಮಾಡಿರುವುದಾಗಿಯೂ ಮೋಟಾರ್ ಸೈಕಲ್ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿರುವುದಾಗಿದೆ.
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23.04.2014 ರಂದು ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಪವನ್ ನೆಜ್ಜೂರ್ ರವರಿಗೆ ಸಿಕ್ಕಿದ ಖಚಿತವಾದ ವರ್ತಮಾನದ ಮೇರೆಗೆ ಮೇಲಾಧಿಕಾರಿಗಳ ಆದೇಶದಂತೆ ಮಂಗಳೂರು ಸಿಸಿಬಿ ಯ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ ಕ್ರೈಂ ಮತ್ತು ಅವರ ಸಿಬ್ಬಂದಿಗಳ ಜೊತೆ ಮಂಗಳೂರು ತಾಲೂಕು ತಿರುವೈಲು ಗ್ರಾಮದ ಅಮೃತೇಶ್ವರ ದೇವಸ್ಥಾನದ ಎದುರು ಇರುವ ಬಾಕಿಮಾರು ಗದ್ದೆ ಎಂಬ ಸಾರ್ವಜನಿಕ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಸುಮಾರು 100-150 ಜನರು ಹಣವನ್ನು ಪಣವಾಗಿ ಇರಿಸಿ ಹುಂಜ ಕೋಳಿಗಳ ಕಾಲುಗಳಿಗೆ ಹರಿತವಾದ ಬಾಳನ್ನು ಕಟ್ಟಿ ಎರಡು ಕೋಳಿಗಳನ್ನು ಹಿಂಸೆಯಾಗುವ ರೀತಿಯಲ್ಲಿ ಪರಸ್ಪರ ಕಾದಾಡಲು ಬಿಟ್ಟು ಸಾರ್ವಜನಿಕರು ಹಣವನ್ನು ಪಣವಾಗಿ ಕಟ್ಟುತ್ತಿದ್ದು ಈ ಸಂದರ್ಭದಲ್ಲಿ ಆರೋಪಿತ ವ್ಯಕ್ತಿಗಳು ಓಡಿ ಪರಾರಿಯಾಗಿದ್ದು ಅವರ ಪೈಕಿ ಹತ್ತು ಜನರನ್ನು ದಸ್ತಗಿರಿಮಾಡಿ ಅವರುಗಳು ಕೋಳಿ ಅಂಕಕ್ಕೆ ಪಣವಾಗಿ ಕಟ್ಟಲು ಇರಿಸಿಕೊಂಡಿದ್ದ ಮತ್ತು ಅವರ ಅಂಗ ಜಪ್ತಿ ಸಮಯ ದೊರೆತ ಒಟ್ಟು ರೂಪಾಯಿ 70,800/- ಮತ್ತು ಪರಸ್ಪರ ಕಾದಾಡುತ್ತಿದ್ದ ಎರಡು ಹೂಂಜ ಕೋಳಿಗಳು ಹಾಗೂ ಅಲ್ಲಿಯೇ ಅಂಕಕ್ಕಾಗಿ ಕಟ್ಟಿ ಹಾಕಿದ್ದ 23 ಹುಂಜ ಕೋಳಿಗಳನ್ನು ಸ್ವಾಧೀನಪಡಿಸಿದ್ದಾಗಿದೆ.
No comments:
Post a Comment