ದೈನಂದಿನ ಅಪರಾದ ವರದಿ.
ದಿನಾಂಕ 03.04.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 6 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 2.4.2014 ರಂದು ಬೆಳಿಗ್ಗೆ 6.30 ಗಂಟೆಗೆ ಫಿರ್ಯಾದಿದಾರರಾದ ಅಬ್ದುಲ್ ರಜಾಕ್ ರವರ ಮಾವನವರು ಮಂಗಳೂರು ತಾಲೂಕು ಪಾವಂಜೆ ಗ್ರಾಮದ ಕದಿಕೆಬಸ್ತಿ ಎಂಬಲ್ಲಿ ವಾಕಿಂಗ ಮಾಡುತ್ರಿರುವ ವೇಳೆ ಆರೋಪಿಗಳಾದ ರಜಾಕ್ ಕದಿಕೆ ಇಮ್ರಾನ್ ಕಾರ್ನಾಡು ಫಯಾಜ್ ಎಂಬವರ ಅಕ್ರಮ ಪ್ರವೇಶಿಸಿ ತಡೆದು ನಿಲ್ಲಿಸಿ ಮದುವೆಯನ್ನು ಮಾಡಿಸಲು ನೀನು ಯಾರು ಎಂಬುದಾಗಿ ಅವಾಚ್ಯ ಶಬ್ದಗಳಿಂದ ಮಾವನವರನ್ನು ಬೈದಿದ್ದು ಸಮಾಧಾನಪಡಿಸಲು ಹೋದ ಫಿರ್ಯಾದಿದಾರರಿಗೆ ಕೈಯಿಂದ ಹೊಡೆದು ದೂಡಿದ್ದು ಪರಿಣಾಮ ಫಿರ್ಯಾದಿದಾರರ ಬಲಕೈಗೆ ತೋಳಿಗೆ ಗುದ್ದಿದ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 2.4.2014 ರಂದು ಬೆಳಿಗ್ಗೆ 6.30 ಗಂಟೆಗೆ ಫಿರ್ಯಾದಿದಾರರಾದ ಅಬ್ದುಲ್ ರಜಾಕ್ ಎಂಬವರು ಅವರ ಬಾಬ್ತು ಮೋಟಾರ್ ಸೈಕಲಿನಲ್ಲಿ ಕದಿಕೆಯ ತನ್ನ ಮನೆಯಿಂದ ಕಾರ್ನಾಡಿ ಕೋಳಿ ಅಂಗಡಿಗೆ ಹೋಗುತ್ತಿರುವಾಗ್ಗೆ ಕದಿಕೆ ಬಸ್ತಿಯ ಬಳಿಯಲ್ಲಿ ಆರೋಪಿಗಳಾದ 1] ಮಹಮದ್ 2]ಕಬೀರ್, 3] ಅಬ್ದುಲ್ ರಜಾಕ್ 4] ಕೈಸರ್ 5] ಅಜೀಜ್ ಎಂಬವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೀನು ಯಾಕೆ ಪಂಚಾಯತಿಗೆ ಬರಲಿಲ್ಲ ನೀನು ಯಾಕೆ ಶಬನಾಳ ಮದುವೆಗೆ ಬರಲಿಲ್ಲ ಎಂದು ಹೇಳಿ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಹೊಡೆದು ದೂಡಿದ್ದು ಪರಿಣಾಮ ಫಿರ್ಯಾದಿದಾರರು ಆಯತಪ್ಪಿ ಕೆಳಗೆ ಬಿದ್ದು ಅವರ ಎಡಕೈಗೆ ಗಾಯವಾಗಿ ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-04-14 ರಂದು ಶ್ರೀ ಎಸ್ ರವಿ ಕುಮಾರ್, ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಉತ್ತರ ಉಪವಿಭಾಗ ರವರಿಗೆ ಸಿಕ್ಕಿದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೋಂದಿಗೆ 14.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ನೆಲ್ಲಿಗುಡ್ಡೆ ಎಂಬಲ್ಲಿ ದಾಳಿ ಮಾಡಿದಾಗ ಆರೋಪಿಗಳು ಕರಿಂಜೆ ಗ್ರಾಮದ ಸರಕಾರಿ ಕಾಡು ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪಟ್ ಎಲೆಗಳನ್ನು ಉಪಯೋಗಿಸಿ ಉಳಾಯಿ ಪಿದಾಯಿ ಎಂಬ ಜುಗಾರಿ ಆಟವನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ ಆರೋಪಿಗಳಾದ ಬದ್ರುದ್ದೀನ್, ಸುಲೇಮನ್, ರತ್ನಾಕರ್ ಕುಂದರ್, ಇಡ್ಯಬ್ಬಾ, ಪವಿತ್ರ ಎಂಬವರನ್ನು ಹಾಗೂ ಆಟಕ್ಕೆ ಉಪಯೋಗಿಸಿದ 32,680 ಮತ್ತು ಇತರ ಸ್ವತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮೂಡಬಿದ್ರೆ ಠಾಣೆಗೆ ಹಸ್ತಾಂತರಿಸಿರುವುದಾಗಿದೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-04-14 ರಂದು 11.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಶಮೀನಾ ರವರ ಮಗನಾದ ಶಕೀಲ್ ಎಂಬವನು ಐಸ್ಕ್ರೀಂ ತರಲೆಂದು ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ಮಹಾವೀರ ಕಾಲೇಜ್ ಬಳಿ ಮನೆ ಹತ್ತಿರದ ಅಂಗಡಿಗೆ ಹೋಗುತ್ತಿರುವಾಗ ಆರೋಪಿ ತನ್ನ ಬಾಬ್ತು ಕೆಎ -19 -409 ನೇ ನಂಬ್ರದ ಮೋಟಾರ್ ಸೈಕಲ್ ನ್ನು ಕೋಟೆಬಾಗಿಲು ಕಡೆಯಿಂದ ಮಹಾವೀರ ಕಾಲೇಜ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಶಕೀಲ್ ನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಶಕೀಲ್ ನ ತಲೆಯ ಬಲಭಾಗಕ್ಕೆ, ಮುಖಕ್ಕೆ, ಮೂಗಿಗೆ ಹಾಗೂ ಬಲಕಾಲಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯವಾಗಿದ್ದು, ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರ, ಸ್ಥಳದಲ್ಲಿ ಮೋಟಾರ್ ಸೈಕಲ್ ನ್ನು ನಿಲ್ಲಿಸದೇ ಪರಾರಿಯಾಗಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/04/2014 ರಂದು ಮಂಗಳೂರು ತಾಲೂಕು ಕಸಬಾ ಬೆಂಗ್ರೆ ದೊಡ್ಡ ಮಸೀದಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಖಾದರ್ ರವರು ಮಧ್ಯಾಹ್ನ 12-10 ಗಂಟೆಗೆ ನಡೆದುಕೊಂಡು ಬರುತ್ತಿದ್ದಾಗ ಅವರ ಸಂಬಂದಿಯಾದ ಆರೋಪಿ ಅದ್ದು @ ಅಬ್ದುಲ್ ರೆಹಮಾನ್ ಎಂಬವರು ಪಿರ್ಯಾದಿದಾರರನ್ನು ತಡೆದುನಿಲ್ಲಿಸಿ ತನ್ನನ್ನು ಕೇಳದೆ ತನ್ನ ತಂಗಿಯ ಮಕ್ಕಳಿಗೆ ಮದುವೆ ಮಾಡಿಸಲು ನೀನು ಯಾರೂ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಪಿರ್ಯಾದಿದಾರರ ಎದೆಗೆ, ಬೆನ್ನಿಗೆ ಹೊಡೆದು ನೋವನ್ನು ಉಂಟುಮಾಡಿದಲ್ಲದೆ ಇವತ್ತಿಗೆ ಇಷ್ಟು ಸಾಕು ಇನ್ನೊಂದು ದಿನ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡಿರುತ್ತಾರೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:01-042014 ರಂದು 18.30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ತಾರಾ ರವರ ಮೊದಲನೇ ಮಗನಾದ ಶ್ರೀನಿವಾಸ ಎಂಬವನು ಮನೆಗೆ ಬಂದು ಮನೆಯಲ್ಲಿ ಟಿ.ವಿ.ನೋಡುತ್ತಿದ್ದ ಸಮಯ ಫಿರ್ಯಾದುದಾರರನ್ನುದ್ಧೇಶಿಸಿ, "ನಾನು ನಿಮ್ಮ ಖರ್ಚು ನೋಡಬೇಕಾ ನಿಮಗೆ ನಾಚಿಕೆ ಯಾಗುವುದಿಲ್ಲವಾ" ಎಂದು ಹೇಳಿ ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟ್ ನಿಂದ ತನ್ನ ಎಡಕಾಲಿಗೆ ಹೊಡೆದುದಲ್ಲದೇ ಅದನ್ನು ತಡೆದಾಗ ಎಡಕೈ ಹೆಬ್ಬೆರಳಿಗೆ ಗಾಯಗೊಳಿಸಿರುವುದಲ್ಲದೇ, ಫಿರ್ಯಾದುದಾರರ ಗಂಡನವರಿಗೆ ಅದೇ ಕ್ರಿಕೆಟ್ ಬ್ಯಾಟ್ ನಿಂದ ಅವರ ಎಡ ಕಾಲಿಗೆ ಹೊಡೆದು ಹಲ್ಲೆ ರಕ್ತ ಗಾಯಗೊಳಿಸಿರುವುದಾಗಿದೆ. ಅಲ್ಲದೇ ಫಿರ್ಯಾದುದಾರರನ್ನು ಹಾಗೂ ಅವರ ಗಂಡನವರನ್ನುದ್ಧೇಶಿಸಿ "ನಿಮಗೆ ಖರ್ಚಿಗೆ ಹಣ ಬೇಕಾ ಖರ್ಚಿಗೆ ಹಣ ಕೇಳಿದರೆ ನಿಮ್ಮನ್ನು ಯಾರನ್ನೂ ಜೀವ ಸಹಿತ ಬಿಡುವುದಿಲ್ಲ " ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-04-2014 ರಂದು ರಾತ್ರಿ 10-20 ಗಂಟೆ ಸಮಯಕ್ಕೆ ಪಿರ್ಯಾದಿದಾರಾದ ಶ್ರೀ ಶ್ರೀಕಾಂತ್ ಸಾಲ್ಯಾನ್ ರವರ ಸಂಬಂದಿಕರಾದ ಶ್ರೀಮತಿ ರುಕ್ಮಿಣಿ ಕೆ ಸಾಲಿಯಾನ್ ಹಾಗೂ ಅವರ ಗಂಡ ಕುಮಾರ್ ಸಾಲಿಯಾನ್ ರವರು ಸುರತ್ಕಲ್ ಪೇಟೆಯ ಶರತ್ ಬೇಕರಿ ಬಳಿ ಮಂಗಳೂರು – ಉಡುಪಿ ರಾ.ಹೆ 66 ನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ರಸ್ತೆ ದಾಟಿ ಪಶ್ಚಿಮ ಅಂಚು ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಮುಕ್ಕಾ ಕಡೆಗೆ KA.19.EH.1556 ನೇ ಮೋಟಾರು ಸೈಕಲಿನ ಸವಾರನು ಸದ್ರಿ ಮೋಟಾರು ಸೈಕಲನ್ನು ಸದ್ರಿ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದಿರುವುದಲ್ಲದೇ ರಸ್ತೆಯ ತೀರಾ ಎಡ ಬದಿಗೆ ಬಂದು ರಸ್ತೆ ದಾಟುತ್ತಿದ್ದ ರುಕ್ಮಿಣಿ ಕೆ ಸಾಲಿಯಾನ್ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಸದ್ರಿ ರುಕ್ಮಿಣಿ ಹಾಗೂ ಮೋಟಾರು ಸೈಕಲ್ ಸವಾರ, ಸಹಸವಾರರಿಬ್ಬರು ರಸ್ತೆಗೆ ಬಿದ್ದು ರುಕ್ಮಿಣಿ ಕೆ ಸಾಲಿಯಾನ್ ರವರಿಗೆ ತಲೆಗೆ ಹಾಗೂ ಕಾಲಿಗೆ ತೀರ್ವ ಸ್ವರೂಪದ ರಕ್ತ ಗಾಯವಾಗಿದ್ದು ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರರಿಗೂ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕೊಂಡು ಹೋಗಿ ವೈದ್ಯರಲ್ಲಿ ತೋರಿಸಲು ವೈದ್ಯರು ಪರೀಕ್ಷಿಸಿ ತೀರ್ವ ಗಾಯಗೊಂಡ ರುಕ್ಮಿಣಿ ಕೆ ಸಾಲಿಯಾನ್ ರವರು ಮೃತ ಪಟ್ಟಿರುವುದಾಗಿ, ಮೋಟಾರು ಸೈಕಲ್ ಸವಾರ ಸಹಸವಾರರಿಬ್ಬರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿರುವುದಾಗಿ, ಈ ಅಪಘತಕ್ಕೆ ಮೋಟಾರು ಸೈಕಲ್ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.
8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2014 ರಂದು ಕೃಷ್ಣಾಪುರದ ಶ್ರೀವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ದ್ವಾದಶ ರಾಶಿ ಪೂಜಾ ಮಹೋತ್ಸವ ಕಾರ್ಯಕ್ರಮ ನಡೆಸಲು ಷರತ್ತುಬದ್ದ ಅನುಮತಿ ನೀಡಿದ್ದು, ಅದರ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀಕೃಷ್ಣ ಪಾಲೇಮಾರ್ ಇವರು ಸಭೆಯ ಭಾಷಣದಲ್ಲಿ ಮತದಾರರನ್ನು ಓಲೈಸಿರುತ್ತಾರೆ ಎಂಬುದಾಗಿ ಶ್ರೀಶಂಕರ ಕೃಷ್ಣಾಪುರ ಎಂಬವರು ನೀಡಿದ ದೂರಿನ ಮೇರೆಗೆ ಸದ್ರಿ ಕಾರ್ಯಕ್ರಮದ ವಿಡೀಯೋ ದೃಶ್ಯಾವಳಿಯನ್ನು ವೀಕ್ಷಿಸಲಾಗಿ ಅದರಲ್ಲಿ ಸದ್ರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲೆತ್ನಿಸಿರುವುದು ಸ್ವಷ್ಟವಾಗಿರುತ್ತದೆ ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಆದರಿಂದ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ ಶ್ರೀ ಜೆ ಕೃಷ್ಣ ಪಾಲೇಮಾರ್ ಮತ್ತು ಅನುಮತಿ ಪತ್ರದ ಕ್ರಮ ಸಂಖ್ಯೆ 16 ರ ಷರತ್ತನ್ನು ಉಲ್ಲಂಘಿಸಿರುವ ಕಾರ್ಯಕ್ರಮದ ಸಂಚಾಲಕರಾದ ಶ್ರೀಪ್ರಶಾಂತ್ ಕುಮಾರ್ ಸಂಚಾಲಕರು ಶ್ರೀವಿಶ್ವನಾಥ ದೇವಸ್ಥಾನ ಕೃಷ್ಣಾಪುರ ಮಂಗಳೂರು ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಶ್ರೀ ಎನ್. ಶಿವಪ್ರಕಾಶ್ ಸೆಕ್ಟರ್ ಮ್ಯಾಜಿಸ್ಟ್ರೇಟ್, 202 ಮಂಗಳೂರು ಉತ್ತರ 17 ಡಿಕೆ ಪಾರ್ಲಿಮೆಂಟರಿ ಕಾನ್ಸುಟೇನ್ಸಿ ಮಂಗಳೂರು ರವರು ನೀಡಿರುವುದಾಗಿದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ರಘುವೀರ್ ಅಮೀನ್ ರವರ ಮಗ ಅಶಿತ್ ಕುಮಾರ್(30) ಎಂಬಾತನು ಗಂಗಾ ಬಡಾವಣೆ ಕಂಕನಾಡಿ ಯಲ್ಲಿರುವ ಮನೆಯಿಂದ ದಿನಾಂಕ: 01.04.2014 ರಂದು 09.00 ಗಂಟೆಗೆ ಪಡೀಲ್ ಕಡೆಗೆ ಹೋಗಿಬರುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ಹಿಂತಿರುಗಿ ಬಾರದೇ ಕಾಣೆಯಾಗಿರುವುದಾಗಿಯೂ ಆತನು ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ ಅವರ ಪತ್ತೆಯ ಬಗ್ಗೆ ಸಂಬಂಧಿಕರಲ್ಲಿ ನೆರೆಕರೆಯಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಆತನು ಸುಮಾರು 5.7'' ಉದ್ದವಿದ್ದು, ದೃಡಕಾಯ ಶರೀರದವನಾಗಿರುತ್ತಾನೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಸುರೇಂದ್ರ ರೈಯವರಿಗೂ ಕೃಷ್ಣಪ್ಪ ಪೂಜಾರಿ ಎಂಬವರಿಗೂ 2-3 ದಿನಗಳಿಂದ ಚಿಕ್ಕಪುಟ್ಟ ವಿಚಾರದಲ್ಲಿ ಗಲಾಟೆಯಾಗುತ್ತಿದ್ದು, ಡೇನಿಯಲ್ ರೋಡ್ರಿಗಸ್ ಮತ್ತು ಅವರ ತಮ್ಮ ಸೆಬಾಸ್ಟಿಯನ್ ಎಂಬವರು ಕೃಷ್ಣಪ್ಪ ಪೂಜಾರಿಯವರಿಗೆ ಬೆಂಬಲ ನೀಡುತ್ತಾರೆ ಎಂಬ ಸಂಶಯದಿಂದ ದಿನಾಂಕ 02-04-2014 ರಂದು ರಾತ್ರಿ 8-15 ಗಂಟೆಗೆ ಸುರೇಂದ್ರ ರೈ ಎಂಬವರು ಮಂಗಳೂರು ತಾಲೂಕು ಬೊಂಡಂತಿಲ ಗ್ರಾಮದ ನೀರಲ ಎಂಬಲ್ಲಿ ಡೇನಿಯಲ್ ರೋಡ್ರಿಗಸ್ ಮತ್ತು ಅವರ ತಮ್ಮ ಸೆಬಾಸ್ಟಿಯನ್ ಎಂಬವರಿಗೆ ಅವಾಚ್ಯವಾಗಿ ಬೈದು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಪರಿಣಾಮ ಡೇನಿಯಲ್ ರೋಡ್ರಿಗಸ್ ಮತ್ತು ಅವರ ತಮ್ಮ ಸೆಬಾಸ್ಟಿಯನ್ ಎಂಬವರು ಗಾಯಗೊಂಡು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-04-2014 ರಂದು ರಾತ್ರಿ 8-30 ಗಂಟೆಗೆ ಸೆಬಾಸ್ಟಿಯನ್, ಅರುಣ, ಉಮೇಶ್, ಅಪ್ಪು, ಪಚ್ಚು ಹಾಗೂ ಇತರ 15-20 ಜನರು ಸುರೇಂದ್ರ ರೈಯವರ ಹೆಂಡತಿ ಶ್ರೀಮತಿ ಪ್ರಮೀಳಾ ರೈ ಎಂಬವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಸ್ಕೂಟರ್ ,ಬೈಕ್, ಕಾರು ಮತ್ತು ಮನೆಯ ಕಿಟಕಿಯ ಗಾಜುಗಳನ್ನು ಪುಡಿ ಮಾಡಿದ್ದು ಈ ಪೈಕಿ ಸೆಬಾಸ್ಟಿಯನ್ ಎಂಬಾತನು ಮನೆಯ ಸಿಟ್- ಔಟ್ಗೆ ಹೋಗಿ ಅಲ್ಲಿ ನಿಂತಿದ್ದ ಶ್ರೀಮತಿ ಪ್ರಮೀಳಾರವರಿಗೆ ಕೈಯಿಂದ ಹಲ್ಲೆ ನಡೆಸಿದ ಪರಿಣಾಮ ಪ್ರಮೀಳಾರವರ ಎಡಕಿವಿಯಲ್ಲಿ ರಕ್ತ ಗಾಯವಾಗಿದ್ದು, ಶ್ರೀಮತಿ ಪ್ರಮಿಳಾರವರಿಗೆ ಮತ್ತು ಅವರ ಮಗ ಆಕಾಶ್ ಎಂಬಾತನಿಗೆ ಆರೋಪಿಗಳು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದು ಈ ಘಟನೆಯಲ್ಲಿ ಗಾಯಗೊಂಡ ಶ್ರೀಮತಿ ಪ್ರಮೀಳಾ ರೈಯವರು ಚಿಕಿತ್ಸೆ ಬಗ್ಗೆ ತೇಜಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರಾಗಿಯೂ, ಸೆಬಾಸ್ಟಿಯನ್, ಅರುಣ, ಉಮೇಶ್, ಅಪ್ಪು, ಪಚ್ಚು ಹಾಗೂ ಇತರ 15-20 ಜನರು ಸುರೇಂದ್ರ ರೈ ಎಂಬವರಿಗೆ ಹಲ್ಲೆ ಮಾಡಲು ಬಂದಿದ್ದು ಅವರು ಮನೆಯಲ್ಲಿ ಇಲ್ಲದೇ ಇದ್ದುದರಿಂದ ಈ ಕೃತ್ಯ ಎಸಗಿರುವುದಾಗಿದೆ.
No comments:
Post a Comment