ದೈನಂದಿನ ಅಪರಾದ ವರದಿ.
ದಿನಾಂಕ 28.04.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-04-2014 ರಂದು ಸಂಜೆ 06:30 ಗಂಟೆಗೆ ಪಿರ್ಯಾದಿದಾರರಾದ ನಾಗೇಶ್ .ಆರ್ (52) ಎಂಬುವರು ಮಂಗಳೂರು ಮಹಾನಗರ ಪಾಲಿಕೆಯ ಎದುರಿನ ಪಾರ್ಕಿಂಗ ಸ್ಥಳದಲ್ಲಿ ತನ್ನ ಬಾಬ್ತು HONDA ACTIVE ದ್ವಿಚಕ್ರ ವಾಹನವಾದ KA- 19 W -5968 ನೆ ದನ್ನು ಪಾರ್ಕ ಮಾಡಿ ಸಾಯಿಬಿನ್ ಕಾಂಪ್ಲೇಕ್ಸಗೆ ಮೋಬೈಲ್ ರಿಪೇರಿಗೆ ಹೋಗಿ ವಾಪಸ್ಸು 07:00 ಗಂಟೆಗೆ ಬಂದು ನೊಡಿದಾಗ ಪಾರ್ಕ ಮಾಡಿದ ಸ್ಥಳದಲ್ಲಿ ದ್ವಿಚಕ್ರ ವಾಹನ ಕಾಣಿಸದೆ ಇದ್ದು ಈ ಬಗ್ಗೆ ಅಕ್ಕಪಕ್ಕದಲ್ಲಿ ಹುಡುಕಾಡಿದರೂ ಪತ್ತೆಯಾಗದೆ ನಂತರ. ಮಂಗಳೂರು ನಗರ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿ ತಡವಾಗಿ ದೂರು ನೀಡಿದ್ದು ಸದ್ರಿ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು, ಕಳವಾದ ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ 20000/- ರೂ ಆಗಬಹುದು.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/04/2014ರಂದು ಸಮಯ ಸುಮಾರು 08.25 ಗಂಟೆಗೆ ಫಿರ್ಯದುದಾರರಾದ ಶ್ರೀ ವಿನೋದ್ ರವರು ಸ್ಕೂಟರ್ ನಂಬ್ರ KA-19-EB-2499 ನೇದರಲ್ಲಿ ಶಿವಭಾಗ್ ಕಡೆಯಿಂದ ಬಂಟ್ಸ್ಹ ಹಾಸ್ಟೆಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ, ಕದ್ರಿ ನಗರ ಗ್ರಂಥಾಲಯದ ಹಿಂದುಗಡೆ ಇರುವ ಪ್ರೊಪರ್ಟ ಬಿಲ್ದರ್ ಕಟ್ಟಡದ ಎದುರು ತಲುಪುವಾಗ ಸ್ಯೆಂಟ್ ಆಗ್ನೆಸ್ ಕಡೆಯಿಂದ ಮಲ್ಲಿಕಟ್ಟೆ ಜಂಕ್ಷನ್ ಕಡೆಗೆ ಬಸ್ಸು ನಂಬ್ರ KA-19-D-7651 ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕದ್ರಿ ನಗರ ಗ್ರಂಥಾಲಯದ ಹಿಂದುಗಡೆ ಇರುವ ಏಕುಮುಖ ರಸ್ತೆಗೆ ವಿರುದ್ದವಾಗಿ ಬಂದು ಪಿರ್ಯದಿದಾರರ ಸ್ಕೂಟರ್ ಗೆ ಡಿಕ್ಕಿ ಮಾಡುವ ಸಾಧ್ಯತೆ ಇರುವುದನ್ನು ಕಂಡು ಪಿರ್ಯದಯದಾರು ಸ್ಕೂಟರನ್ನು ಬಲ ಬದಿಗೆ ಚಲಾಯಿಸಿ ಡಿಕ್ಕಿಯಾಗುವುದನ್ನು ತಪ್ಪಿಸಿಕೊಂಡಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-04-2014 ರಂದು ಮದ್ಯಾಹ್ಬ 3.00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ವಸಂತ ದೇವಾಡಿಗ ರವರು ಅವರ ಬಾಬ್ತು ಮೋಟಾರ್ ಸೈಕಲ್ ನಂ ಕೆಎ 19-ಇಡಿ-472 ರಲ್ಲಿ ಕಿನ್ನಿಗೋಳಿಯಿಂದ ಮೂಡಬಿದ್ರೆ ಗೆ ಬರುತ್ತಿರುವ ಸಮಾಯ ಕಲ್ಲಮೂಂಡ್ಕರು ಜಯರಾಮಶೆಟ್ಟಿಯವರ ಮನೆಯ ಬಳಿ ತಲುಪುವಾಗ ಮೂಡಬಿದ್ರೆ ಕಡೆಯಿಂದ ಕಿನ್ನಿಗೋಲಿಕಡೆಗೆ ಬಸ್ಸ್ ನಂ ಕೆ ಎ 19 ಸಿ 6696 ನೇದರ ಚಾಲಕ ರಾಜೇಶ್ ಎಂಬವನು ಬಸ್ಸ್ ನ್ನು ಅತೀ ವೇಗ ಹಾಗೊ ಅಜಾಗುರುಕತೆಯಿಂದ ಚಲಾಯಿಸಿ ಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಧಿದಾರರು ರಸ್ತೆಗೆ ಬಿದ್ದು ಪಿರ್ಯಧಿದಾರರ ಎಡಕಾಲಿನ ಮಂಡಿಗೆ ಗಂಭಿರ ಗಾಯ ವಾಗಿರುತ್ತದೆ, ಎಡಭುಜಕ್ಕೆ ಗುದ್ದಿದ ಗಾಯ ಎಡ ಹಣೆಯ ಮೇಲೆ ರಕ್ತ ಗಾಯವಾಗಿರುತ್ತದೆ ಚಿಕಿತ್ಸೆಯ ಬಗ್ಗೆ ಮಂಗಳೂರು ಸಿಟಿ ಅಸ್ಪತ್ರಗೆ ದಾಖಾಲಾಗಿರುವುದಾಗಿದೆ
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-04-2014 ರಂದು ರಾತ್ರಿ ಸುಮಾರು 1.00 ಗಂಟೆಯಿಂದ ಬೆಳಿಗ್ಗೆ 4.45 ಗಂಟೆಯ ನಡುವೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ಶಶಿಧರ ದೇವಾಡಿಗ ರವರ ಬಾಬ್ತು ಪುತ್ತಿಗೆ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿರುವ ಹಂಚು ಛಾವಣಿ ಮನೆಯ ಹಂಚನ್ನು ತೆಗೆದು ಅದರ ಮೂಲಕ ಒಳ ಪ್ರವೇಶಿಸಿ ಮನೆಯ ಒಳಗೆ ಸೆಲ್ಫ್ ಕಪಾಟಿನಲ್ಲಿಟ್ಟಿದ್ದ ಸುಮಾರು 12 ಪವನ್ ಬಂಗಾರದ ಆಭರಣ ಮತ್ತು ರೂ. 6000 ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ 2,50,000 /- ರೂ ಆಗಬಹುದು.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-04-2014 ರಂದು ಬೆಳಿಗ್ಗೆ ಸುಮಾರು 10.00.ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಸದಾನಂದ ಸುವರ್ಣ ರವರು ಮನೆಯಿಂದ ಅವರ ಬಾಬ್ತು ಸೈಕಲ್ ನಲ್ಲಿ ಬೆಳುವಾಯಿ ಪೇಟೆಗೆ ಬರುವ ಸಮಯ ಬೆಳುವಾಯಿ ಲಿಟ್ಲ ಸ್ಟಾರ್ ಬೇಕರಿಯ ಅಂಗಡಿಯ ಎದುರಿನಲ್ಲಿ ಹೋಗುತ್ತಿರುವಾಗ ಬೆಳುವಾಯಿ ಕಡೆಯಿಂದ ಅಟೋರಿಕ್ಷಾ ನಂ ಕೆ ಎ 19 ಎಎ 2987 ನೇದರ ಚಾಲಕ ದಿನೇಶ್ ಎಂಬವರು ಅತೀ ವೇಗ ಹಾಗೊ ಅಜಾಗುರುಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾಧಿದಾರರ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಧಿದಾರರು ರಸ್ತೆಗೆ ಬಿದ್ದು ಪಿರ್ಯಧಿದಾರರ ಬಲ ಕಾಲಿನ ಮಂಡಿಗೆ ಗಂಭಿರ ಗಾಯ ವಾಗಿರುತ್ತದೆ ,ಬಲ ಕಾಲಿನ ಹಿಮ್ಮಡಿಗೆ ಜಖಂ ಆಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವೀನಿ ಅಸ್ಪತ್ರಗೆ ದಾಖಾಲಾಗಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 27-04-2014 ರಂದು 21-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಮೂಡಬಿದ್ರೆ ಹಳೇ ಬಸ್ಸು ನಿಲ್ದಾಣದ ಬಳಿ ಇರುವ ವಿಜಯರಾಜ್ ಪೆಟ್ರೋಲ್ ಪಂಪ್ ಬಳಿ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಶ್ರಫ್ ರವರು ತಾನು ಚಾಲಕರಾಗಿದ್ದ ಕೆಎ 19 ಎಎ 2245 ನೇ ನಿಶ್ಮಿತಾ ಬಸ್ಸಿಗೆ ಡಿಸೇಲ್ ತುಂಬಿಸಿ ಅದೇ ಪೆಟ್ರೋಲ್ ಬಂಕ್‌ನಲ್ಲಿ ಸದ್ರಿ ಬಸ್ಸನ್ನು ಹಾಲ್ಟ್ ಮಾಡಲು ಮುಂದಕ್ಕೆ ಚಲಾಯಿಸಿಕೊಂಡು ಹೋಗುತ್ತಿರುವ ವೇಳೆ ಆರೋಪಿಗಳಾದ ಚಂದ್ರಕಾಂತ ಹಾಗೂ ನಂದಕುಮಾರ್ ಎಂಬವರು ತಮ್ಮ ಕಾರು ನಂಬ್ರ ಕೆಎ 19 ಎಂಡಿ 9196 ನೇಯದಕ್ಕೆ ಸದ್ರಿ ಬಸ್ಸು ತಾಗಿತು ಎಂದು ತಿಳಿದು ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜೇಮ್ಸ್ ಬಿ. ಕ್ರಾಸ್ತಾ ರವರು ಸುಮಾರು 2 ತಿಂಗಳಿನಿಂದ "PEREGRINE" ಎಂಬ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಇದೇ ಕಂಪೆನಿಯ ಬಾಬ್ತು ಮಂಗಳೂರಿನ ಪಾಂಡೇಶ್ವರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಮಾಲಿ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಸಮಯ ದಿನಾಂಕ 25-04-2014 ರಂದು ಬೆಳಿಗ್ಗೆ 11-30 ಗಂಟೆಗೆ ಮಾಲ್ ನ ಉತ್ತರ ದಿಕ್ಕಿನಲ್ಲಿರುವ ಗೇಟ್ ನ ಬಳಿಯಲ್ಲಿ ಟಿಪ್ಪರ್ ಲಾರಿಯೊಂದು ಮಾಲ್ ನ ಒಳಗಡೆ ಬರುವರೇ ಪಿರ್ಯಾದಿದಾರರು ಮತ್ತು ಸುಶೀಲ್ ಕುಮಾರ್ ಮೊಹಂತಿ ಎಂಬವರು ಜೊತೆಯಾಗಿ ಗೇಟ್ ನ್ನು ತೆರೆಯುತ್ತಿದ್ದಾಗ, ಗೇಟ್ ಇದ್ದಕ್ಕಿದಂತೆ ವಾಲಿಕೊಂಡು ಬೀಳುತ್ತಿದ್ದಂತೆ, ಇವರುಗಳು ಹಿಂಭಾಗಕ್ಕೆ ಸರಿದಾಗ, ಆಗ ಗೇಟ್ ಒಮ್ಮೆಲೇ ಬಿದ್ದು, ಪಿರ್ಯಾದುದಾರರ ಎಡ ಮೊಣ ಕಾಲಿಗೆ ಹಾಗೂ ಸುಶೀಲ್ ಕುಮಾರ್ ಎಂಬವರ ಬಲ ಕಾಲಿಗೂ ತೀವ್ರ ರಕ್ತ ಗಾಯವಾಗಿರುತ್ತದೆ. ಕೂಡಲೇ ರಾಕೇಶ್ ರೈ ಎಂಬವರು ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಗೇಟ್ ನ್ನು ನಿರ್ಮಾಣ ಮಾಡಿದ ಸುಪರ್ ವೈಸರ್ ಹಾಗೂ ಗುತ್ತಿಗೆದಾರರ ಬೇಜವ್ದಾರಿ ಹಾಗೂ ನಿರ್ಲಕ್ಷತನದಿಂದ ಗೇಟ್ ನ್ನು ನಿರ್ಮಾಣ ಮಾಡಿದ್ದು ಕಾರಣವಾಗಿರುತ್ತದೆ ಎಂಬಿತ್ಯಾದಿ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/04/2014 ರಂದು ಮಂಗಳೂರು ನಗರದ ಪಾಂಡೇಶ್ವರ FORUM FIZA MALL ನ 2ನೇ ಮಹಡಿಯ ಶಾಪ್ ನಂಬ್ರ 9 ಮತ್ತು 10 ರಲ್ಲಿ FAB INDIA ಎಂಬ ಕಂಪನಿಯ ಬಾಬ್ತು ಶಾಪ್ ನಲ್ಲಿ ಪ್ಲಾಸ್ಟರ್ ಆಪ್ ಪ್ಯಾರಿಸ್ ಹಾಗೂ ಇತರ ಕೆಲಸ ಕಾರ್ಯಗಳ ಗುತ್ತಿಗೆಯನ್ನು ಉಣ್ಣಿ ಕೃಷ್ಣನ್ ಕಂಪನಿಯವರು ಪ್ಲಾಸ್ಟರ್ ಆಪ್ ಪ್ಯಾರಿಸ್ ಹಾಗೂ ಇತರ ಕೆಲಸವನ್ನು ಮಾಡುತ್ತಿರುವ ಸಮಯ ಈ ಪ್ರಕರಣದ ಪಿರ್ಯಾದಿದಾರರಾದ ಧರ್ಮಿಂದರ್ (20) ಅಣ್ಣ ರಾಮ್ ದುಲಾರೆ (26) ಎಂಬುವರು ಡ್ರಿಲ್ಲಿಂಗ್ ಮಷಿನ್ ನ ಮೂಲಕ ರಾತ್ರಿ ಸುಮಾರು 8.30 ಗಂಟೆಗೆ ಸುಮಾರು 12 ಅಡಿ ಎತ್ತರದ ಸ್ಲಾಪಿನಲ್ಲಿ ಕೆಲಸ ಮಾಡುತ್ತಿದ್ದಾಗ ಡ್ರಿಲ್ಲಿಂಗ್ ಮಷಿನ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಆಯ ತಪ್ಪಿ ಮಹಡಿಯ ನೆಲದ ಮೇಲೆ ದೊಪ್ಪನೆ ಮುಗುಚಿ ಕೆಳಗೆ ಬಿದ್ದು ತಲೆಗೆ ಗಂಬೀರ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ಆಸ್ಪತ್ರೆಗೆ ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಹೊಂದಿರುತ್ತಾರೆ ಎಂಬುದಾಗಿ ವೈದ್ಯರು ತಿಳಿಸಿರುವುದಾಗಿದೆ. ಈ ಕೃತ್ಯ ಸಂಭವಿಸಲು ಪೇಜ್ ಇಂಡಿಯಾದ ಗುತ್ತಿಗೆದಾರರಾದ ಉಣ್ಣಿ ಕೃಷ್ಣನ್ ಹಾಗೂ ಇದರ ಮಾಲೀಕ ಹಾಗೂ ಪೊರಂ ಪೀಜಾ ಮಾಲ್ ನ ಮಾಲಕರು ಕೆಲಸದ ಸಮಯ ಸರಿಯಾದ ಮುಂಜಾಗೂರುಕತಾ ಸಲಕರಣೆಯನ್ನು ಕೆಲಸಗಾರರಿಗೆ ನೀಡದೆ ನಿರ್ಲಕ್ಷತನ ವಹಿಸಿದ್ದೆ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ
9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಡೊಮ್ಮಿ ರವರು ತನ್ನ ತಮ್ಮನಾದ ಸಂಜೀವ ಪ್ರಾಯ 40 ವರ್ಷ ಎಂಬವರನ್ನು ದಿನಾಂಕ 21/04/2014 ರಂದು ಬೆಳಿಗ್ಗೆ 09.00 ಗಂಟೆಗೆ ಕಂಕನಾಡಿ ಫಾದರ್ ಮುಲ್ಲರ್ಸ ಆಸ್ಪತ್ರೆಗೆ ಕುಡಿತದ ಚಟವಿರುವ ಕಾರಣ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದು ಆತನನ್ನು ವೈದ್ಯರಲ್ಲಿ ಪರೀಕ್ಷಿಸಿ ಬಳಿಕ ಅಲ್ಲಿಯೇ ಮೆಡಿಕಲ್ ನಿಂದ ಔಷಧಿ ಖರೀದಿಸಿ ಬರುವಾಗ ಮದ್ಯಾಹ್ನ 12.00 ಗಂಟೆಗೆ ಆಸ್ಪತ್ರೆಯಿಂದ ಪಿರ್ಯಾದಿದಾರರ ತಮ್ಮನು ಕಾಣೆಯಾಗಿರುತ್ತಾನೆ ಈತನನ್ನು ಎಲ್ಲ ಕಡೆಗಳಲ್ಲಿ ಹುಡುಕಾಡಿದರೂ ಈ ವರೆಗೆ ಪತ್ತೆಯಾಗಿರುವುದಿಲ್ಲ.
No comments:
Post a Comment