Saturday, April 5, 2014

Daily Crime Reports 05-04-2014

ದೈನಂದಿನ ಅಪರಾದ ವರದಿ.

ದಿನಾಂಕ 05.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 03.04.2014 ರಂದು ಸಂಜೆ 4:00 ಗಂಟೆಗೆ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಮಿತ್ತಕೋಡಿ ಎಂಬಲ್ಲಿ ಬೋಳಿಯಾರು ಕಡೆಯಿಂದ ಕುರ್ನಾಡು ಕಡೆಗೆ ಬೈಕ್ನಂಬ್ರ ಕೆಎ-21ಆರ್‌-4181 ರಲ್ಲಿ ಫಿರ್ಯಾದಿದಾರರಾದ ಶ್ರೀಮತಿ ಶೋಭಾ ರವರು ತನ್ನ ಗಂಡ ದಿವಾಕರರವರ ಜೊತೆಯಲ್ಲಿ ಸಹಸವಾರಳಾಗಿ ಕುಳಿತುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಕಾಯರ್ಗೋಳಿ ಕಡೆಯಿಂದ ಬೋಳಿಯಾರು ಕಡೆಗೆ ಎನ್ಫೀಲ್ಡ್ಬೈಕ್ನಂಬ್ರ ಕೆಎ19ಇಜಿ-0108 ಸವಾರ ಸುಬ್ರಹ್ಮಣ್ಯರವರು ಬಸ್ಸೊಂದನ್ನು ಓವರ್ಟೇಕ್ಮಾಡಿ ರಸ್ತೆಯ ತೀರಾ ಬಲಕ್ಕೆ ಬಂದು ಎದುರುಗಡೆಯಿಂದ ಚಲಾಯಿಸಿ ಬರುತ್ತಿದ್ದ ದಿವಾಕರರವರ ಬೈಕಿಗೆ ಢಿಕ್ಕಿ ಹೊಡೆದು, ಬೈಕು ಸವಾರ ದಿವಾಕರ ಮತ್ತು ಸಹಸವಾರೆ ಶೋಬಾರವರು ರಸ್ತೆಗೆ ಬಿದ್ದು ಅವರಿಬ್ಬರಿಗೂ ಬಲಕಾಲಿನ ಕೋಲುಕಾಲು ಮತ್ತು ತೊಡೆಯ ಕೀಲು ಮುರಿತದ ಗಾಯವಾಗಿದ್ದು, ಆರೋಪಿ ಸುಬ್ರಹ್ಮಣ್ಯರವರಿಗೆ ಕೂಡಾ ಬಲಕಾಲಿನ ಪಾದದ ಕೀಲು ಮುರಿತದ ಗಾಯವಾಗಿದೆ. ಮೂರು ಮಂದಿ ಕೂಡಾ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 04-04-2014 ರಂದು ಬೆಳಿಗ್ಗೆ 08:30 ವೇಳೆಗೆ ಆರೋಪಿ ಕಾರು ಚಾಲಕ ಗೀತೇಶ್ ಎಂಬವರು ತಾನು ಚಲಾಯಿಸುತ್ತಿದ್ದ KA-19-MB-7267 ನೇದ್ದನ್ನು ಉಡುಪಿ ಕಡೆಯಿಂದಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಕಾರ್ನಾಡು ಗ್ರಾಮದ ಕಾರ್ನಾಡು ಮುಲ್ಕಿ ಹಾಲು ಸೊಸೈಟಿ ಬಳಿ ತಲುಪುತ್ತಾ ಎದುರಿನಿಂದ ಹೋಗುತ್ತಿದ್ದ ಸ್ಕೂಟರ್ KA-19-V-3355 ನೇ ದ್ದನ್ನು ಓವರ್ ಟೇಕ್ ಮಾಡುತ್ತಾ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿತ್ತಾ ಬಂದು ಸ್ಕೂಟರ್ ಗೆ ಕಾರಿನ ಹಿಂಬದಿ ತಾಗಿದ ಪರಿಣಾಮ ಸ್ಕೂಟರ್ ಸವಾರೆ ಶ್ರೀಮತಿ ರಾಜೇಶ್ವರಿ ಎಂಬವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಗಲ್ಲಕ್ಕೆ, ಬಾಯಿಗೆ ರಕ್ತಗಾಯವಾಗಿದ್ದು ಗಾಯಾಳು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. 

 

3.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 04-04-2014 ರಂದು ಬೆಳಗ್ಗಿನ ಜಾವ 04-30 ಗಂಟೆಗೆ ಸುಮಾರಿಗೆ ಮಂಗಳೂರು ನಗರದ ಕದ್ರಿ ಬಿ ಗ್ರಾಮದ ಕದ್ರಿ ರಾಕ್ಸ್ ಎಲೈಟ್ ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ವಾಸವಾಗಿರುವ ಶಿವಾನಂದ ರವರ ವಾಸದ ಮನೆಯ ಕೋಣೆಯಲ್ಲಿ ಅಡುಗೆಗೆ ಉಪಯೋಗಿಸುವ ಭಾರತ್ ಗ್ಯಾಸ್ ಕಂಪೆನಿಯ ಗ್ಯಾಸ್ ಸಿಲಿಂಡರ್ ನಿಂದ ಸ್ಟೌವ್ ಗೆ ಗ್ಯಾಸ್ ನ್ನು ಹರಿಸುವ ರಬ್ಬರ್ ಪೈಪ್ ನಿಂದ ಗ್ಯಾಸ್ ಸೋರಿಕೆಯಾಗಿ ಗ್ಯಾಸ್ ಗೆ ಬೆಂಕಿ ಹತ್ತಿ ಸ್ಫೋಟ ಗೊಂಡು ಕೋಣೆಯಲ್ಲಿ ಮಲಗಿದ್ದ ಶಿವಾನಂದ ರವರ ಹೆಂಡತಿ ಭಾಗ್ಯಮ್ಮ ಮಕ್ಕಳಾದ ಭಾರತಿ ಮತ್ತು ಆಂಜನೇಯ ರವರಿಗೆ ತೀವ್ರ ತರಹದ ಗಾಯ ಉಂಟಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದವರ ಪೈಕಿ ಕುಮಾರಿ ಭಾರತಿ (14) ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

No comments:

Post a Comment