Friday, April 11, 2014

Daily Crime Reports 11-04-2014

ದೈನಂದಿನ ಅಪರಾದ ವರದಿ.

ದಿನಾಂಕ 11.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/04/2014 ರಂದು ಬೆಳಗ್ಗೆ ಸುಮಾರು 6:50 ಗಂಟೆಗೆ ಇಂಜಿನ್ ನಂಬ್ರ D13A2320796, ಚಾಸಿಸ್ ನಂಬ್ರ MA3FHEB1500607913BE ನೇ ದನ್ನು ಅದರ ಚಾಲಕ ರಾಜೀಶ ಎಂಬುವರು ಪದವು ಜಂಕ್ಷನ್ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಂತೂರು ಜಂಕ್ಷನ್ ತಲುಪುವಾಗ ಬಿಕರ್ನಕಟ್ಟೆ ಕಡೆಯಿಂದ ಪದವು ಜಂಕ್ಷನ್ ಕಡೆಗೆ ಬರುತ್ತಿದ್ದ ಮೋಟರ್ ಸೈಕಲ್ ನಂಬ್ರ KA-19-ED-2927 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟರ್ ಸೈಕಲ್ ಸವಾರ ಕೇಶವ ಹಿಂಬದಿ ಸವಾರ ಉದಯ ರಸ್ತೆಗೆ ಬಿದ್ದು ಗಾಯಗೊಂಡು ಸಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

2.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 9-4-2014ರಂದು ಪಿರ್ಯಾದುದಾರರಾದ ಶ್ರೀ ಆನಂದ ರವರು ಆಕಾಶಭವನದಿಂದ ಕೆಲಸ ಮುಗಿಸಿ ರವಿಕುಮಾರ್ ಎಂಬವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಸಿ- 4953   ನೇದರಲ್ಲಿ  ಹಿಂಬದಿ  ಸವಾರ ನಾಗಿ ಕುಳಿತುಕೊಂಡು ಬರುತ್ತಾ ಕಾವೂರು ಕಟ್ಟೆ ಪೆಟ್ರೋಲ್ ಪಂಪ್ ಬಳಿ  ತಲುಪಿದ್ಧಾಗ ರಾತ್ರಿ 7.00 ಗಂಟೆಗೆ ಎದುರಿನಿಂದ ಅಂದರೆ   ಕಾವೂರು ಕಡೆಯಿಂದ ಕಾರು ನಂಬ್ರ  ಕೆಎ-19-ಎಂ –9835 ನೇಯದನ್ನುಅದರ ಚಾಲಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಪಿರ್ಯಾದಿದಾರರು ರಸ್ತೆಗೆ ಬಿದ್ದು, ಪಿರ್ಯಾದಿ ದಾರರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಬೈಕ್ ಸವಾರ ರವಿಕುಮಾರ್ ರವರಿಗೆ  ಬಲಕಾಲಿಗೆ ರಕ್ತಗಾಯವಾಗಿರುತ್ತದೆ.ಕಾರಿನ ಚಾಲಕರು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಮುಂದಕ್ಕೆ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಮಗೇಶ್ ಎಂಬವರಿಗೂ ಕೂಡಾ  ಡಿಕ್ಕಿ ಹೊಡೆದು ಅವರಿಗೂ ಬಲಕಾಲಿಗೂ ಮತ್ತು ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ರವಿಕುಮಾರ್ ಮತ್ತು ಮಗೇಶ್ ರವರುಮಂಗಳೂರಿನ  .ಜೆ ಆಸ್ಪತ್ರೆಯಲ್ಲಿ  ಹೊರರೋಗಿಯಾಗಿ ಚಿಕಿತ್ಸೆ ಪಡೆದು ಪಿರ್ಯಾದಿದಾರರು ಒಳರೋಗಿಯಾಗಿ  ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.

 

3.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-04-2014 ರಂದು ಸಂಜೆ 5-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಅರೆಕರೆ ಬೈಲ್ ಅಂಬಾ ಮಹೇಶ್ವರಿ ದೇವಸ್ಥಾನದ ಜಲಕದ ಮೆರವಣಿಗೆಯು ಜಪ್ಪು, ಗುಜ್ಜರಕೆರೆಯ ಬಳಿಯಿರುವ ಮಾರಿಗುಡಿ ದೇವರ ಕಟ್ಟೆಯ ಬಳಿ ತಲುಪುತ್ತಿದ್ದಂತೆ, ಮೆರವಣಿಗೆಯ ಮುಂಭಾಗದಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರಾದ ಶ್ರೀ ಪ್ರವೀಣ್ ಎಂಬವರನ್ನು ಆರೋಪಿಗಳಾದ ಧನರಾಜ್, ಪ್ರತಾಪ್ , ಕೌಶಿಕ್ ಮತ್ತು ವಿಗ್ಗು ಎಂಬವರು ಅಕ್ರಮವಾಗಿ ತಡೆದು "ನಿಕ್ಕ್ ಭಾರಿ ಅಹಂಕಾರ ಉಂಡು" ಎಂದು ಅವಾಚ್ಯ ಶಬ್ದಗಳಿಂದ ಬೈದು, ಅವರುಗಳ ಪೈಕಿ ಧನರಾಜ್ ನು ಆತನ ಕೈಯಲ್ಲಿದ್ದ ಕಬ್ಬಿಣದ ಪಂಚ್ ನಿಂದ ಪಿರ್ಯಾದಿದಾರರ ತಲೆಯ ಮುಂಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿದ್ದಲ್ಲದೇ, ಅವರ ಜೊತೆಯಲ್ಲಿದ್ದ ವಿಗ್ಗು ಎಂಬಾತನು ಪಿರ್ಯಾದಿದಾರರ ಬಲ ಕೈಯನ್ನು ತಿರುವಿ ತೀವ್ರ ನೋವುಂಟು ಮಾಡಿದ್ದಲ್ಲದೇ, ಬಾಕಿ ಉಳಿದ ಆರೋಪಿಗಳು ಕೈಗಳಿಂದ  ಪಿರ್ಯಾದಿದಾರರ ಮುಖಕ್ಕೆ ಹೊಡೆದುದಲ್ಲದೇ, ಬಳಿಕ ಆರೋಪಿಗಳೆಲ್ಲರೂ ಸೇರಿ ಪಿರ್ಯಾದಿಯನ್ನು ಬೀಳಿಸಿ ಕಾಲಿನಿಂದ ದೇಹದ ಭಾಗಕ್ಕೆ ತುಳಿದು ನೋವುಂಟು ಮಾಡಿರುತ್ತಾರೆ. ಈ ಕೃತ್ಯಕ್ಕೆ ಪಿರ್ಯಾದಿದಾರರು ಮೆರವಣಿಗೆಯ ಮುಂಭಾಗದಲ್ಲಿ ಹೋಗುತ್ತಿರುವುದನ್ನು ಕಂಡು ಅಸೂಯೆಗೊಂಡು, ಜಯರಾಜ್ ಎಂಬಾತನ ಕೊಲೆ ಯತ್ನ ಪ್ರಕರಣದಲ್ಲಿ ಅವರಿಗೆ  ಸಹಕಾರ ನೀಡಿದ ದ್ವೇಷವೇ ಈ ಕೃತ್ಯಕ್ಕೆ ಕಾರಣವಾಗಿದೆ.

 

 

4.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಉಮೇಶ್ ರವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 10-04-2014 ರಂದು ಫಿರ್ಯಾದಿದಾರರು ತನ್ನ ಹೆಂಡತಿ ಶ್ರೀಮತಿ ಸುರೇಖ(34 ವರ್ಷ) , ಮಕ್ಕಳಾದ ವಚನ್ (12 ವರ್ಷ) ಮತ್ತು ಯದ್ವಿತ್ (6 ವರ್ಷ) ಇವರನ್ನು ತನ್ನ ಹೋಂಡಾ ಆಕ್ಟಿವಾ ಮೋಟಾರು  ಸೈಕಲ್ ನಂ: ಕೆಎ 19 ಇಎ 1009 ನೇದರಲ್ಲಿ ಮುಲ್ಕಿಯ ಪೊಲೀಸ್ ವಸತಿ ಗೃಹದಿಂದ ಹೊರಟು, ಕಟೀಲು ದೇವಸ್ಥಾನಕ್ಕೆ ಹೋಗಿ, ಅಲ್ಲಿಂದ ಅಡ್ಡೂರಿಗೆಂದು ಹೋಗಲು ಕಟೀಲು-ಬಜಪೆ ಮಾರ್ಗವಾಗಿ ಬರುತ್ತಾ ಬೆಳಿಗ್ಗೆ 11-30 ಗಂಟೆಗೆ ಮಂಗಳೂರು ಬಡಗ ಎಕ್ಕಾರು ಗ್ರಾಮದ ವಿಜಯ ನಗರ ಎಂಬಲ್ಲಿಗೆ ತಲುಪುತ್ತಿದ್ದಂತೇ ಹಿಂದಿನಿಂದ ಅಂದರೆ, ಕಟೀಲು ಕಡೆಯಿಂದ ಬಜಪೆ ಕಡೆಗೆ ಕೆಎ 20 ಬಿ 1004 ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ನೆಲ್ಸನ್ ಬಾಬು ಎಂಬವರು ತಿರುವಾದ ರಸ್ತೆಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರು ಸೈಕಲ್ ನ್ನು ಓವರ್ ಟೇಕ್ ಮಾಡಿದಾಗ, ಟಿಪ್ಪರ್ ನ ಎದುರಿನ ಬಂಪರ್ ಮತ್ತು ಟಯರು ಮೋಟಾರು ಸೈಕಲ್ ಗೆ ಬಡಿದಾಗ, ಮೊಟಾರು ಸೈಕಲ್ ರಸ್ತೆಗೆ ಬಿದ್ದು, ಟಿಪ್ಪರ್ ನ ಹಿಂಬದಿಯ ಟಯರಿಗೆ ಸಿಲುಕಿ ಸುಮಾರು 20 ಅಡಿ ದೂರ ಎಳೆದುಕೊಂಡು ಹೋದ ಪರಿಣಾಮ ಫಿರ್ಯಾದಿದಾರರ ಹೆಂಡತಿಗೆ ಮತ್ತು ಮಗ ವಚನ್ ಗೆ  ತೀವ್ರ ತರಹದ ಗಾಯವಾಗಿದ್ದು, ಗಾಯಾಳುಗಳಾದ 4 ಮಂದಿಯನ್ನು ಮಂಗಳೂರು ಎ.ಜೆ. ಆಸ್ಪತೆಗೆ ದಾಖಲಿಸಲಾಗಿ ತೀವ್ರ ಗಾಯಗೊಂಡ ಫಿರ್ಯಾದಿದಾರರ ಹೆಂಡತಿ ಶ್ರೀಮತಿ ಸುರೇಖ ಮತ್ತು ಮಗ ವಚನ್ ಮೃತಪಟ್ಟಿದ್ದುಫಿರ್ಯಾದಿದಾರರು ಮತ್ತು ಅವರ ಕಿರಿಯ ಮಗ ಯದ್ವಿತ್ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

5.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಬಾಬು ಗಟ್ಟಿ ಎಂಬವರಿಗೆ ಕೋಟೆಕಾರಿನಲ್ಲಿ ಸರ್ವೆ ನಂಬ್ರ 214/7 ರ ಪೈಕಿ 2 ಎಕರೆ 42 ಸೆಂಟ್ಸ್ ಜಾಗವನ್ನು ಹೊಂದಿದ್ದು, ಸದ್ರಿ ಜಾಗವನ್ನು ಮಾರಾಟ ಮಾಡುವ ಉದ್ದೇಶದಿಂದ ಆರ್.ಟಿ.ಸಿ.ಯನ್ನು ತೆಗೆದಾಗ ಆರ್..ಟಿ.ಸಿ.ಯಲ್ಲಿ ಈ ಪ್ರಕರಣದ 1ನೇ ಆರೋಪಿ ರಾಜೀವ್ ಕೊಟ್ಟಾರಿ (44) ಬಿನ್ ಸೋಮನಾಥ ಎಂಬವರ ಹೆಸರಿನಲ್ಲಿ ದಾಖಲಾಗಿದ್ದು, ಮಾಹಿತಿ ಹಕ್ಕಿನ ಮೂಲಕ ದಾಖಲಾತಿಗಳನ್ನು ಸಂಗ್ರಹಿಸಿದಲ್ಲಿ ಸದ್ರಿ ಜಾಗವನ್ನು ದಿನಾಂಕ 04-11-2011 ರಂದು 2ನೇ ಆರೋಪಿ ಹರೀಶ್ ವಕೀಲರು ಇವರು ಪಿರ್ಯಾದಿದಾರರನ್ನು ಗುರುತಿಸಿ 6ನೇ ಆರೋಪಿ ವಿಜಯ ಮತ್ತು 7ನೇ ಆರೋಪಿ ವಿಶ್ವನಾಥ ಇವರ ಸಮಕ್ಷಮದಲ್ಲಿ ನಕಲಿ ಪವರ್ ಆಫ್ ಅಟಾರ್ನಿಯ ಆಧಾರದಲ್ಲಿ 1ನೇ ಆರೋಪಿ ರಾಜೇಶ್ ಕೊಟ್ಟಾರಿಯ ಹೆಸರಿಗೆ ಪಿರ್ಯಾದಿದಾರರು ಮಾರಾಟ ಮಾಡಿದ್ದೇನೆಂಬ ನಕಲಿ ಕ್ರಯ ಪತ್ರವನ್ನು ನೊಂದಾಯಿಸಿ ರೂ. 18,15,000/- ಹಣವನ್ನು ನಗದಾಗಿ ಪಿರ್ಯಾದಿದಾರರಿಗೆ ಕೊಟ್ಟಿರುವುದಾಗಿ ಸುಳ್ಳಾಗಿ ನಮೂದು ಮಾಡಿರುತ್ತಾರೆ. ಪಿರ್ಯಾದಿದಾರರು 2009 ರ ಜೂನ್ 29 ರಂದು ಅವರ ಬೇರೆ ಜಾಗದ ಸಂಬಂಧ ಅವರ 3 ಭಾವಚಿತ್ರವನ್ನು 3ನೇ ಆರೋಪಿ ನೋಟರಿ ಪುಷ್ಪಲತಾ ಯು.ಕೆ. ಮತ್ತು 4 ನೇ ಆರೋಪಿ 3ನೇ ಆರೋಪಿಯ ಸಹೋದರ ಹರ್ಷವರ್ದನವರಿಗೆ ನೀಡಿದ್ದು, ಅದೇ ಫೋಟೋವನ್ನು ಸದ್ರಿ ಆರೋಪಿಗಳು 5ನೇ ಆರೋಪಿ ನೋಟರಿ ಮಹಮ್ಮದ್ ಇಕ್ಬಾಲ್ಗೆ ನೀಡಿ ಆರೋಪಿಗಳೆಲ್ಲರೂ ಸೇರಿಕೊಂಡು ಪಿರ್ಯಾದಿದಾರರಿಗೆ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆರೋಪಿ 1ನೇಯವರ ಹೆಸರಿಗೆ ವರ್ಗಾಹಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪೋರ್ಜರಿ ಮಾಡಿ ವಂಚನೆ ಮಾಡಿರುತ್ತಾರೆ.

 

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-04-2014 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ನೌಫಾಲ್ ರವರು ಮಂಗಳೂರಿನಿಂದ ಉಳ್ಳಾಲದ ಕೋಡಿ ಕಡೆಗೆ ಪಿರ್ಯಾದಿದಾರರ ಗೆಳೆಯ ಮುಸ್ತಾಫ ಎಂಬವರ ಬಾಬ್ತು ಬೈಕ್ ನಂಬ್ರ KA-19-EF-0673 ನೇದರಲ್ಲಿ ಸಹಸವಾರನಾಗಿ ಕುಳಿತು ಬರುತ್ತಾ ತೊಕ್ಕಟ್ಟು ಓವರ್ ಬ್ರಿಡ್ಜ್ ಬಳಿ ತಲುಪುತ್ತಿದ್ದಂತೆ ನಾಯಿಯೊಂದು ಅಡ್ಡ ಬಂದುದರಿಂದ ಸವಾರ ಮುಸ್ತಾಫ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೇಲೆ ಬ್ರೇಕ್ ಹಾಕಿದಾಗ ಬೈಕ್ ಸಮೇತ ಪಿರ್ಯಾದಿದಾರರು ಹಾಗೂ ಸಹಸವಾರರು ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ತಲೆಗೆ ಗಾಯವಾಗಿ 2-3 ದಿನ ಪ್ರಜ್ಞೆ ತಪ್ಪಿದ್ದು, ಬೈಕ್ ಸವಾರ ಮುಸ್ತಾಫ ರವರು ತನ್ನ ಬಾಬ್ತು ಬೈಕನ್ನು ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿದೇ ಈ ಅಪಘಾತಕ್ಕೆಕಾರಣವಾಗಿರುತ್ತದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಇಕ್ಬಾಲ್ ರವರು ಕೆ. 19 ಬಿ 266 (ಬಸ್ಸ್ ರೂಟ್ನಂ 11 ಬಿ) ನೇ ನಂಬ್ರದ ಸಿಟಿ ಬಸ್‌‌ನಲ್ಲಿ ಚಾಲಕರಾಗಿ ದುಡಿಯುತ್ತಿದ್ದು . ದಿನಾಂಕ 09-04-2014 ರಂದು ರಾತ್ರಿ 08.30 ಗಂಟೆಗೆ ಮಂಗಳೂರು ಸ್ಟೇಟ್ಬ್ಯಾಂಕ್ನಿಂದ ಪ್ರಯಾಣಿಕರನ್ನು ಬಸ್ಸ್ ನಲ್ಲಿ ಕುಳ್ಳಿರಿಸಿಕೊಂಡು ಜಲ್ಲಿಗುಡ್ಡೆಗೆ ಬಂದು ಪ್ರಯಾಣಿಕರನ್ನು ಜಲ್ಲಿಗುಡ್ಡೆಯಲ್ಲಿ ಇಳಿಸುತ್ತಿದ್ದಾಗ ಸುಮಾರು 10 ಜನ ಮುಸ್ಲಿಂ ಯುವಕರು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಹುಡುಗಿಯರಿಗೆ ಮೊಬೈಲ್ ನಂಬ್ರ ಕೊಡುತ್ತಿಯ ಎಂದು ಕೇಳಿದಾಗ ಅಲ್ಲಿದ್ದ ಇತರ ಜನರು ಆರೋಪಿತರನ್ನು ಸಮಾಧಾನ ಪಡಿಸಿ ಕಳುಹಿಸಿದ್ದು . ನಂತರ ಪಿರ್ಯಾದಿದಾರರು ಸದ್ರಿ ಬಸ್ಸ್ ನ್ನು ಚಲಾಯಿಸಿಕೊಂಡು ರಾತ್ರಿ ಸುಮಾರು 09.30 ಗಂಟೆಗೆ ಪಡೀಲ್ರೈಲ್ವೆ ಗೇಟ್ಬಳಿ ಗೇಟ್ ಹಾಕಿದರಿಂದ ಬಸ್ಸನ್ನು ನಿಲ್ಲಿಸಿದ್ದಾಗ ಜಲ್ಲಿಗುಡ್ಡೆಯಲ್ಲಿ ಜೋರು ಮಾಡಿದ ಆರೋಪಿತರು ಬೈಕ್ಗಳಲ್ಲಿ ಬಂದು ಪಿರ್ಯಾದಿದಾರರಿಗೆ  ಅವಾಚ್ಯ ಶಬ್ದದಿಂದ ಬೈದು, ಕೈಗಳಿಂದ ಹೊಡೆದುದಲ್ಲದೆ  ಪಿರ್ಯಾದಿದಾರರು ಬಸ್ಸಿನಿಂದ ಇಳಿಯದಂತೆ ತಡೆದು ಬಸ್ಸಿನ ಎದುರಿನ ಗಾಜಿಗೆ ಕಲ್ಲು ಬಿಸಾಡಿ ಗಾಜನ್ನು ಹುಡಿ ಮಾಡಿರುತ್ತಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : 2014 ರ ಲೋಕಸಭಾ ಚುನಾವಣೆಯ 17ನೇ ದಕ್ಷಿಣ ಕನ್ನಡ ಲೋಕಸಭಾ ಪ್ರದೇಶದ ಸೆಕ್ಟರ್ 14 ನೇದರ  ಸೆಕ್ಟರ್‌‌ ಮ್ಯಾಜಿಸ್ಟ್ರೇಟ್ ರವರಾದ ಶ್ರೀ.ಸಿ ಲೋಕೇಶ್ ರವರು ದಿನಾಂಕ 09.04.2014 ರಂದು ದೂರೊಂದನ್ನು ನೀಡಿದ್ದು, ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ್ಗೆ  ದಿನಾಂಕ: 30.03.2014 ರಂದು ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 7.00 ಗಂಟೆಯ ವರೆಗೆ ಎಡಪದವಿನಿಂದ ವಾಮಂಜೂರು ವರೆಗೆ ಪಾದಯಾತ್ರೆ ಪ್ರಚಾರ ಭಾಷಣ ಮತ್ತು ವಾಹನಕ್ಕೆ ಧ್ವನಿವರ್ಧಕ ಬಳಕೆ ಅನುಮತಿಯನ್ನು ಪಡೆದುಕೊಂಡಿದ್ದ ಶ್ರೀ.ಕೆ ಭಾಸ್ಕರ ಸಾಲ್ಯಾನ್ ಪ್ರಧಾನ ಕಾರ್ಯದರ್ಶಿ ಭಾರತೀಯ ಜನತಾ ಪಕ್ಷ ದುರ್ಗಾಪ್ರಸಾದ್ ಕಾಂಪ್ಲೆಕ್ಸ್ ಮಂಗಳೂರು ಇವರು ಸಂಜೆ 7 ಗಂಟೆಯ ನಂತರವೂ ವಾಮಂಜೂರು ವೃತ್ತದ ಸಮೀಪ ಚುನಾವಣಾ ಮಾದರಿ  ನೀತಿ ಸಂಹಿತೆಯನ್ನು ಉಲ್ಲಂಘಿಸಿ ಪಕ್ಷದ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಶ್ರೀ.ಸದಾನಂದ ಗೌಡ, ಮಾಜಿ ಸಚಿವರಾದ ಶ್ರೀ.ಬಿ.ನಾಗರಾಜ್ ಶೆಟ್ಟಿಯವರ ಮೂಲಕ ಭಾಷಣವನ್ನು ಮಾಡಿಸಿದ್ದು ಪಿರ್ಯಾದಿದಾರರು  ಕಾರ್ಯಕ್ರಮವನ್ನು ನಿಲ್ಲಿಸುವರೇ ಅದರ ಆಯೋಜಕರಿಗೆ ಕೇಳಿಕೊಂಡರೂ ಅವರು ಮಾತಿಗೆ ಬೆಲೆಕೊಡದೇ ಸುಮಾರು 1 ಗಂಟೆಯಷ್ಟು ಕಾಲ ತಮ್ಮ ಕಾರ್ಯಕ್ರಮವನ್ನು ಮುಂದುವರಿಸಿ ಆ ಮೂಲಕ ಚುನಾವಣಾ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ. ಆದುದರಿಂದ ಈ ಬಗ್ಗೆ ಶ್ರೀ.ಕೆ ಭಾಸ್ಕರ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಬಿಜೆಪಿ, ಮತ್ತು ಅಭ್ಯರ್ಥಿ ಶ್ರೀ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಶ್ರೀ.ಸದಾನಂದ ಗೌಡ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತು ಇತರರ ವಿರುದ್ದ ಸೂಕ್ತ ಕಾನೂನುಕ್ರಮವನ್ನು ಜರುಗಿಸುವವರೇ ನೀಡಿದ ಪಿರ್ಯಾಯಂತೆ ಮಂಗಳೂರು ಗ್ರಾಮಾಂತರ ಠಾನೆಯಲ್ಲಿ NCR NO: 375/14 ರಂತೆ ಸ್ವೀಕರಿಸಿ, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.

No comments:

Post a Comment