ದಿನಾಂಕ 23.04.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 2 |
ಇತರ ಪ್ರಕರಣ | : | 0 |
1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21.04.2014 ರ ಬೆಳಿಗ್ಗೆ 10:00 ಗಂಟೆಯಿಂದ 22.04.2014 ರ ಬೆಳಿಗ್ಗೆ 09:00 ಗಂಟೆಯ ಮಧ್ಯೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಕೆ.ಬಿ. ಅಬ್ದುಲ್ ಅಝೀಜ್ ರವರ ಮನೆಯ ಹಿಂಬಾಗಿಲ ಚಿಲಕವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿದ್ದ ಕಪಾಟಿನಲ್ಲಿಟ್ಟಿದ್ದ ಸುಮಾರು 14 ಪವನ್ ತೂಕದ ಚಿನ್ನಾಭರಣ ಮತ್ತು ರೂ. 9,500/- ನ್ನು ಕಳವು ಮಾಡಿರುತ್ತಾರೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ. 3,19.500/- ಆಗ ಬಹುದು.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎಂ. ರಣಧೀರ ರವರು ನಡೆಸುತ್ತಿರುವ ಮಂಗಳೂರು ನಗರದ ಯೆಯ್ಯಾಡಿಯ ಹೊಟೇಲ್ ವರ್ಧಮಾನದಲ್ಲಿ 14-09-2013 ರಂದು ಕೆಲಸಕ್ಕೆ ಸೇರಲು ಬಂದಿದ್ದ ಉತ್ತರ ಪ್ರದೇಶದ ಹರ್ ದೋಯಿ ಜಿಲ್ಲೆಯ ಸಂಡಿಲಾ ತಾಲೂಕಿನ ಗೇರ್ ವಾ ಗ್ರಾಮದ ರಾಮ್ ಲಖನ್ ಎಂಬವರು ದಿನಾಂಕ 15-09-2013 ರ ಬೆಳಿಗ್ಗೆ ಹೊಟೇಲ್ ನಲ್ಲಿ ಎಲ್ಲಾ ಕೆಲಸಗಾರರು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದಾಗ ಅವರೆಲ್ಲರ ಕಣ್ನು ತಪ್ಪಿಸಿ ನಾಪತ್ತೆಯಾಗಿರುವನು. ಈ ಬಗ್ಗೆ ಮಂಗಳೂರು ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿ ಹಾಗೂ ರಾಮ್ ಲಖನ್ ಬಗ್ಗೆ ಸ್ವಂತ ಊರು ಆದ ಉತ್ತರ ಪ್ರದೇಶದ ಹರ್ ದೋಯಿ ಜಿಲ್ಲೆಯ, ಸಂಡಿಲಾ ತಾಲೂಕಿನ ಗೇರ್ ವಾ ಗ್ರಾಮದಲ್ಲಿ ವಿಚಾರಿಸಿ ಈ ತನಕ ಅವರು ನಾಪತ್ತೆಯಾಗಿರುವುದಾಗಿದೆ.
3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದೇವರಾಜ್ ರವರು ಸತೀಶ್ ಶೆಟ್ಟಿ, ಸುಧಾಕರ ಹಾಗೂ ಮಹೇಶ್ ಶೆಟ್ಟಿ ಎಂಬವರೊಂದಿಗೆ ಕುಂದಾಪುರದಲ್ಲಿ ನಡೆಯುವ ಅವರ ಪರಿಚಯದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ವಾಪಾಸು ಮನೆಗೆ ಹೋಗುವರೇ ಅವರು ಬಂದಿದ್ದ ಇನೋವಾ ಕಾರು ನಂಬ್ರ ಕೆ.ಎ.02-ಎಬಿ 3038 ನೇದರಲ್ಲಿ ಚಾಲಕ ಶಿವರೊಂದಿಗೆ ದಿನಾಂಕ 22-04-2014 ರಂದು ಬೆಳಿಗ್ಗೆ 04-30 ಗಂಟೆಗೆ ಹೊರಟು ರಾ.ಹೆ 66 ರಲ್ಲಿ ಬರುತ್ತಿರುವಾಗ್ಗೆ ಬೆಳಿಗ್ಗೆ ಸುಮಾರು 06-50 ಗಂಟೆಗೆ ಸುರತ್ಕಲ್ ಗ್ರಾಮದ ಮುಕ್ಕಾ ಶ್ರೀನಿವಾಸ ಆಸ್ಪತ್ರೆ ಬಳಿ ತಲುಪಿತ್ತಿದ್ದಂತೆ ಎದುರಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಮುಕ್ಕಾ ಕಡೆಗೆ ವಿಆರ್ ಎಲ್ ಬಸ್ಸು ನಂಬ್ರ ಕೆ.ಎ.25.ಸಿ 6951 ನೇದರ ಚಾಲಕ ಧನಂಜಯರವರು ಸದ್ರಿ ಬಸ್ಸನ್ನು ಅತೀ ವೇಗದಿಂದ ಚಲಾಯಿಸಿ ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ಪೂರ್ವ ಬದಿಗೆ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿ ಬಾಬ್ತು ಇನೋವಾ ಕಾರಿನ ಮುಂಬಾಗ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರಿಗೆ, ಸುದಾಕರ, ಸತೀಶ್ ಹಾಗೂ ಚಾಲಕ ಶಿವರವರಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
4 ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಭಾರತಿ ರವರ ಗಂಡ ನರೇಶ್ ಶರ್ಮ ಎಂಬವರು ಮೂಲತಃ ರಾಜಸ್ಥಾನದವರಾಗಿದ್ದು ಸುಮಾರು 8 ವರ್ಷಗಳ ಹಿಂದೆ ಪಿರ್ಯಾದಿದಾರರು ವಿವಾಹವಾಗಿ 2 ಮಕ್ಕಳಿದ್ದು ಸದ್ರಿಯವರು ಕುಟುಂಬದೊಂದಿಗೆ ಮಂಗಳೂರು ತಾಲೂಕು ಕುಳಾಯಿ ಗ್ರಾಮದ ವಿದ್ಯಾನಗರ ಗೋಪಾಲ ಕೃಷ್ಣ ಭಜನಾ ಮಂದಿರದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ದಿನಾಂಕ 12-03-2014 ರಂದು ಸದ್ರಿ ನರೇಶರು ಆತನ ಊರಾದ ರಾಜಸ್ಥಾನದಲ್ಲಿ ಚಿಕ್ಕಮಗುವಿನ ಕೂದಲು ತೆಗೆಸಿ ಬರುತ್ತೇನೆ ಎಂದು ಹೇಳಿ ಹೋದವರು ಈ ತನಕ ಬಾರದೇ ಇದ್ದು ಮೊಬೈಲ್ ಪೋನ್ ಗೆ ಕರೆಮಾಡಿದಾಗ ಉತ್ತರಸಿದೇ ಇದ್ದು ಸದ್ರಿ ನರೇಶನು ವಾಪಾಸು ಮನೆಗೆ ಬರುವುದಾಗಿ ಈ ತನಕ ಕಾದು ಬಾರದೇ ಕಾಣೆಯಾಗಿರುವುದಾಗಿದೆ.
5 ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-04-2014 ರಂದು ಸಂಜೆ ಸುಮಾರು 16-30 ಗಂಟೆಗೆ ಆರೋಪಿ ಜಯರಾಮ್ ಶೆಟ್ಟಿ ಎಂಬವರು ಗಂಗಾದರ ಎಂಬವರೊಂದಿಗೆ ಮಾರುತಿ ಓಮ್ನಿ ಕಾರ್ ನಂಬ್ರ ಕೆಎ 19 ಎಮ್ ಎ 7688 ರಲ್ಲಿ ಚಾಲಕರಾಗಿ ಸದ್ರಿ ಕಾರನ್ನು ಕಾನ ಕಡೆಯಿಂದ ಸುರತ್ಕಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರತ್ಕಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ಇರುವ ಎಸ್ ಟಿ ಡಿ ಬೂತಿನ ಎದುರು ರಸ್ತೆಯ ಎಡ ಬದಿ ರಸ್ತೆಯನ್ನು ಅಡ್ಡ ದಾಟಲು ನಿಂತಿದ್ದ ಪಿರ್ಯಾದಿದಾರರಾದ ಶ್ರೀ ಲೂಕ್ ರಿಚರ್ಡ್ ರವರ ಮಗ ಲಿಯಾಂಡರ್ ರಾಬಿನ್ ಎಂಬವರಿಗೆ ಓಮಿನಿ ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದ ಲಿಯಾಂಡರ್ ರವರನ್ನು ಅದೇ ಕಾರಿನಲ್ಲಿ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ದು, ಮಾಹಿತಿ ತಿಳಿದ ಪಿರ್ಯಾದಿಯು ಸದ್ರಿ ಆಸ್ಪತ್ರೆಗೆ ಬಂದು ಲಿಯಾಂಡರ್ ನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಪಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಒಳರೋಗಿಯನ್ನಾಗಿ ದಾಖಲಿಸಿದ್ದು ಅಲ್ಲಿ ಆರೋಪಿ ಹಾಗೂ ಗಂಗಾಧರವರು ಕೇಸು ಬೇಡವೆಂತಲೂ ಆಸ್ಪತ್ರೆ ಖರ್ಚು ನೀಡುವುದಾಗಿ ಹೇಳಿ ಆಸ್ಪತ್ರೆಯ ಖರ್ಚು ಹೆಚ್ಚಾಗುವುದನ್ನು ಅರಿತು ಹಣ ಕೊಡಲು ನಿರಾಕರಿಸಿರುವುದಾಗಿದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.04.2014 ರಂದು ಪಿರ್ಯಾದಿದಾರರಾದ ಶ್ರೀಮತಿ ಕಾವೇರಿ ರವರು ಕೆಲಸಕ್ಕೆ ಹೋಗುವರೇ ಪಂಪುವೆಲ್ ಬಸ್ ಸ್ಟಾಂಡ್ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಬಿ.ಸಿ ರೋಡ್ ಗೆ ಹೋಗುವ ಬಸ್ಸು ಬಂದದನ್ನು ಕಂಡು ಬಸ್ಸಿನ ಬಳಿಗೆ ಹೋಗುವಾಗ ಸಮಯ ಸುಮಾರು 9:45 ಗಂಟೆ ಗೆ ಪಿರ್ಯಾದಿದಾರರ ಹಿಂದಿನಿಂದ ಕೆ.ಎ 19 9495 ನಂಬ್ರದ ಟ್ಯಾಂಕರ್ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿಗೆ ಮೂಳೆ ಮುರಿತದ ಗಾಯ ಉಂಟಾಗಿದ್ದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.04.2014 ರಂದು ಪಿರ್ಯಾದಿದಾರರಾದ ಶ್ರೀ ಸಂದೇಶ್ ರವರ ತಂದೆ ಅಶೋಕ್ ಎಂಬವರು ತನ್ನ ಬಾಬ್ತು ಕೆ,ಎ 19 ಇಎಫ್ 4072 ನೇ ಸ್ಕೂಟರ್ನಲ್ಲಿ ಮಂಗಳ ಜ್ಯೋತಿ ಕಡೆಯಿಂದ ಪಚ್ಚನಾಡಿ ಸಂತೋಷ್ ನಗರ ಕಡೆಗೆ ಚಲಾಯಿಸುತ್ತಾ ಬರುತ್ತಿರುವಾಗ ಪಚ್ಚನಾಡಿ ನಿರಾಶ್ರಿತರ ವಸತಿ ಕೇಂದ್ರ ಬಳಿ ಒಳ ರಸ್ತೆಗೆ ಸ್ಕೂಟರ್ ತಿರುಗಿಸುವ ಸಮಯ ಬೋಂದೆಲ್ ಕಡೆಯಿಂದ ಮಂಗಳ ಜ್ಯೋತಿ ಕಡೆಗೆ ಕೆ.ಎ 19 ಝಡ್ 2393 ನೇ ನಂಬ್ರದ ಮಾರುತಿ ಓಮಿನಿ ಕಾರನ್ನು ಅದರ ಚಾಲಕ ರತೀಶ್ ರೈ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರ ತಲೆಗೆ, ಮೂಗಿಗೆ ಹಾಗೂ ಕಾಲುಗಳಿಗೆ ರಕ್ತ ಗಾಯವಾಗಿದ್ದು ಎಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
No comments:
Post a Comment