ಹಲ್ಲೆ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ:04-04-2013 ರಂದು ರಾತ್ರಿ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಜಾತ್ರೆಗೆ ಹೋಗಿದ್ದು, 05-04-13ರ ಬೆಳಿಗ್ಗಿನ ಜಾವ 04:00 ಗಂಟೆಗೆ ಸ್ನೇಹಿತರಾದ ಆತೀಶ ಮತ್ತು ನಾಗೇಶ್ ರವರೊಂದಿಗೆ ಸದ್ರಿ ದೇವಸ್ಥಾನದ ಬಳಿಯಲ್ಲಿರುವಾಗ , ಜೀವನ ಎಂಬವರು ಬಂದು ಅವರೋಳಗೆ ಮಾತಾಗಿ, ಫಿರ್ಯಾಧಿದಾರರು ಆತೀಶನ ಜೊತೆಯಲ್ಲಿರುವುದನ್ನು ಕಂಡು ಫಿರ್ಯಾಧಿದಾರರಲ್ಲಿ ಸದ್ರಿ ಜೀವನರವರು ಜಗಳಕ್ಕೆ ಬಂದು ನಿನ್ನನು ಕೊಂದು ಬಿಡುತ್ತೇನೆಂದು ಹೇಳಿದನು , ಬಳಿಕ ಅವನ ಕೈಯಲ್ಲಿದ್ದ ಚೂರಿಯಿಂದ ಫಿರ್ಯಾಧಿದಾರರ ಹೊಟ್ಟೆಗೆ ತಿವಿದಿದ್ದು, ಇದ್ದರಿಂದ ರಕ್ತಗಾಯವಾಗಿದ ಫಿರ್ಯಾಧಿದಾರರನ್ನು ಆತೀಶ ಮತ್ತು ನಾಗೇಶರವರು ಚಿಕಿತ್ಸೆ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿದ್ದು, , ಅಪಾದಿತ ಜೀವನ ಮೇಲೆ ಕ್ರಮ ಜರಗಿಸಬೇಕಾಗಿ ಎಂಬುದಾಗಿ ಪ್ರಶಾಂತ (26) ವಾಸ: ಸಸಿಹಿತು ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 98/2013 324-506(2) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂ.ಪೂರ್ವ ಠಾಣೆ;
- ದಿನಾಂಕ 05-04-2013 ರಂದು ರಾತ್ರಿ 19-55 ಗಂಟೆ ಸಮಯ ಜಲ್ಲಿಗುಡ್ಡೆಯಿಂದ ಸ್ಟೇಟ್ಬ್ಯಾಂಕ್ ಕಡೆಗೆ ಹೋಗುವ ಕೆ.ಎ.19ಬಿ. 266ನೇ ಪಿಟಿಸಿ ಕಂಪನಿಯ ಬಸ್ಸಿನ ಚಾಲಕನು ಪಂಪ್ವೆಲ್ನಿಂದ ಕಂಕನಾಡಿ ವೃತ್ತ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸುಮಾರು 20-10 ಗಂಟೆ ಸಮಯ ಕೆಂಪು ಬಣ್ಣದ ಮಾರುತಿ ಸ್ವಿಫ್ಟ್ ಕಾರ್ ನಂಬ್ರ ಜಿ.ಎ.03 ಎಚ್.1231ನೇ ಬಸ್ಸಿಗೆ ಅಡ್ಡ ನಿಲ್ಲಿಸಿ ಬಸ್ಸನ್ನು ತಡೆದು ಅದರಲ್ಲಿ ಇದ್ದ ಇಬ್ಬರು ಬಸ್ಸಿನ ಒಳಗೆ ಚಾಲಕನ ಹತ್ತಿರ ಬಂದು ಬೇವಸರ್ಿೆ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿರುತ್ತಾರೆ,ಅಲ್ಲದೇ ಇನ್ನುಳಿದ ಮೂರು ಜನ ಬಸ್ಸಿನ ಚಾಲಕನ ಬದಿಯಿರುವ ಗಾಜಿಗೆ ಕೈಯಿಂದ ಹೊಡೆದು ಬಸ್ಸಿನ ಗಾಜು ಹೊಡೆದಿರುತ್ತಾರೆ ಎಂಬುದಾಗಿ ರೋಹಿತ್ ಪ್ರಾಯ;27 ವರ್ಷ, ತಂದೆ:ಜಾರಪ್ಪ ಮೂಲ್ಯ, ವಾಸ:ನೀರ್ ಮಾರ್ಗ,ತಾರಿಗುಡ್ಡೆ, ಬೊಂಡಂತಿಲ, ಮಂಗಳೂರು ರವರು ನೀಡಿದ ದೂರಿನಂತೆ ಮಂ.ಪೂರ್ವ ಠಾಣೆ ಅಪರಾದ ಕ್ರಮಾಂಕ 53/2013 ಕಲಂ 323 341 427 504 ಡಿ/ತಿ 34 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಮೂಡಬಿದ್ರೆ ಠಾಣೆ;
- ದಿನಾಂಕ :04-04-2013 ರಂದು 16-00 ಗಂಟೆಗೆ ಪಿರ್ಯಾದಿಯ ತಂದೆ ಜಯ ಮಡಿವಾಳ ಎಂಬವರು ಮನೆಯಿಂದ ಸಿದ್ದಕಟ್ಟೆ ಕಡೆಗೆ ಹೋಗುವರೇ ಕೆಸರುಗದ್ದೆ ರಾಮ ಎಂಬವರ ಅಂಗಡಿಯ ಹತ್ತಿರ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿರುವ ಸಮಯ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಕೆಎ 19 ಎಂಸಿ 4031 ನೇಯ ಕಾರಿನ ಚಾಲಕ ವಿಜೇತ ಹೊಳ್ಳ ಎಂಬವರು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ತಂದೆ ಜಯ ಮಡಿವಾಳರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಅವರ ಬಲಕೈ ಭುಜ ಮತ್ತು ಬಲ ಕಾಲಿಗೆ ಮೂಳೆ ಮುರಿತದ ಗಾಯ ಮತ್ತು ಎಡ ಹಣೆಗೆ ಎಡ ಕೆನ್ನೆಗೆ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ನಿತೇಶ್ ಕುಮಾರ್ (18) ತಂದೆ : ಜಯ ಮಡಿವಾಳ, ವಾಸ : ಮಂಜನಕಟ್ಟೆ ದರ್ಖಾಸು ಹೌಸ್, ಕೆಸರುಗದ್ದೆ, ಬೆಳುವಾಯಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ 69/2013 ಕಲಂ ; 279, 337 ಯಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ :05-04-2013 ರಂದು 12-45 ಗಂಟೆಗೆ ಪಿರ್ಯಾದಿದಾರರು ಅವರ ಬಾಬ್ತು ಕೆಎ 01 ಎಂಎಫ್ 9767 ನೇದರಲ್ಲಿ ಗುರುವಾಯನಕೆರೆ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿರುವಾಗ ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮದ ಗಂಪದ ಬಳಿ ತಲುಪಿದಾಗ ಎದುರಿನಿಂದ ಬರುತ್ತಿದ್ದ ಕೆಎ 19 ಎನ್‌ಟಿ-ಟಿಸಿಆರ್ 20225 ನೇ ( ತಾತ್ಕಾಲಿಕ ರಿಜಿಸ್ಟ್ರೇಷನ್ ನಂಬ್ರದ) ಕಾರಿನ ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಬಲಕಾಲಿಗೆ ಗಂಬೀರ ರಕ್ತಗಾಯವಾಗಿದ್ದು ಮತ್ತು ಅವರ ಪತ್ನಿ ಭಾವನಾ ಎಂಬವರಿಗೂ ಬಾಯಿಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕಾರ್ಕಳದ ಸ್ಪಂದನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಎಂಬುದಾಗಿ ಮಂಥನ (28), ತಂದೆ : ಬಸವ ರೆಡ್ಡಿ, ವಾಸ : No 1286- 17th ಕ್ರಾಸ್ 5thಮೈನ್ ಬೆಂಗಳೂರು – 560102 ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ 69/2013 ಕಲಂ ; 279, 337 ಯಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment