ಅಪಘಾತ ಪ್ರಕರಣ:
ಉಳ್ಳಾಲ ಠಾಣೆ;
- ದಿನಾಂಕ. 22-4-2013 ರಂದು ಮದ್ಯಾಹ್ನ 12-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ನಡುದಾರಿ ಎಂಬಲ್ಲಿ ಆರೋಪಿ ನೌಶದ್ ಎಂಬಾತನು ಕೆಎ-19-ಇಹೆಚ್-3880 ನೇ ಮೋಟಾರು ಸೈಕಲ್ನಲ್ಲಿ ತಯ್ಯೂಬ್ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುವಾಗ ಆತನ ನಿಯಂತ್ರಣ ತಪ್ಪಿ ಮೋಟಾರು ಸೈಕಲ್ ಸಮೇತ ಸವಾರ ನೌಶದ್ ಹಾಗೂ ಸಹ ಸವಾರ ತಯ್ಯೂಬ್ ರವರು ರಸ್ತೆಗೆ ಬಿದ್ದು, ಪರಿಣಾಮ ತಯ್ಯೂಬ್ ರವರ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೂಚರ್ೆ ತಪ್ಪಿದವರನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಗಾಯಾಳು ತಯ್ಯೂಬ್ ರವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ಪಿ.ಕೆ.ಅಹಮ್ಮದ್ ಕುಂಞ (43) ತಂದೆ. ಬಡುವ ಕುಂಞ ವಾಸ. ತಾಹಿರ ಮಂಜಿಲ್, ಕುತುಬಿನಗರ ಕಿನ್ಯಾ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 167/2013 ಕಲಂ 279, 304(ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 20-04-2013 ರಂದು ರಾತ್ರಿ 21-00 ಗಂಟೆಯಿಂದ 21-04-2013 ರಂದು 06-00 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿದಾರರ ಮಗಳು ಪ್ರಥಮ ಪಿ.ಯು.ಸಿ. ವಿದ್ಯಾಥರ್ಿನಿಯಾದ ಶಾಂತಿ ವನಿತಾ ನೊರೊನ್ಹಾ, 19 ವರ್ಷ, ಈಕೆಯು ತನ್ನ ವಾಸದ ಮನೆಯಾದ ಬಜಪೆ ಗ್ರಾಮದ ಕೊಂಚಾರು ಎಂಬಲ್ಲಿಂದ ಕಾಣೆಯಾಗಿರುವುದಾಗಿದೆ. ಈಕೆಯು ನಿತಿನ್ ಎಂಬ ಹುಡುಗನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು ಎಂಬುದಾಗಿ ರೋಸಿ, 52 ವರ್ಷ, ಗಂಡ: ಮೈಕಲ್ ನೊರೊನ್ಹಾ, ವಾಸ: ಕಾಮಜಿಲ ಕೋಡಿ ಮನೆ, ಅಡ್ಡೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 122/2013 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉಳ್ಳಾಲ ಠಾಣೆ;
- ದಿನಾಂಕ. 20-4-2013 ರಂದು ಸಂಜೆ 4-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಹೆಂಡತಿಯ ತಂಗಿ ಕು: ಕೌಸರ್ (18) ಈಕೆಯು ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಮಾರ್ಗತಲೆ ಕಟ್ಟೆತ್ತಿಲ್ ಹೌಸ್ ಎಂಬಲ್ಲಿರುವ ಫಿರ್ಯಾದಿದಾರರ ಮನೆಯ ಬಳಿಯಿಂದ ಉಳ್ಳಾಲ ದಗರ್ಾಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು, ಆಕೆಯನ್ನು ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಫಿರ್ಯಾದಿದಾರರಾದ ಮೊಹಮ್ಮದ್ ಶರೀಫ್ (30) ತಂದೆ: ಹಸನಬ್ಬ, ಕಟ್ಟೆತ್ತಿಲ್ ಮನೆ, ಮಾರ್ಗತಲೆ, ಉಳ್ಳಾಲ ಗ್ರಾಮ, ಮಂಗಳೂರು ಠಾಣೆಗೆ ಬಂದು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 165/2013 ಕಲಂ ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.
No comments:
Post a Comment