ಸುಲಿಗೆ ಪ್ರಕರಣ:
ಮಂಗಳೂರು ಪೂರ್ವ ಠಾಣೆ;
- ದಿನಾಂಕ 12-04-2013ರಂದು ರಾತ್ರಿ ಸುಮಾರು 9.15 ಗಂಟೆ ಸುಮಾರಿಗೆ ಪಿರ್ಯಾದಿದಾರರು ಮಂಗಳೂರು ನಗರದ ಪಂಪ್ವೆಲ್ ಒಮೇಗಾ ಆಸ್ಪತ್ರೆಯ ಎದುರುಗಡೆ ರಸ್ತೆ ಬದಿಯಲ್ಲಿ ಪಿರ್ಯಾದಿದಾರರ ಸ್ನೇಹಿತ ಜಯರಾಮ ಎಂಬವರನ್ನು ಕಾಯುತ್ತಿದ್ದಾಗ ಅದೇ ರಸ್ತೆಯಲ್ಲಿ ಗೋಲ್ಡನ್ ಕಲರ್ ಮಾರುತಿ 800 ಕಾರಿನಲ್ಲಿದ್ದ ನಾಲ್ಕು ಜನ ಅಪರಿಚಿತರು ನನ್ನ ಬಳಿಗೆ ಬಂದು ನನ್ನನ್ನು ತಡೆದು ಬಲವಂತವಾಗಿ ಕಾರಿನಲ್ಲಿ ಅಪಹರಿಸಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಿಂದಾಗಿ ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದಾಗ ಕಾರಿನ ಹಿಂಬದಿ ಸೀಟಿನಲ್ಲಿದ್ದ ಇಬ್ಬರು ವ್ಯಕ್ತಿಗಳು ನನಗೆ ಕೈಯಿಂದ ಹೊಡೆದು ತಮಗೆ 30000/- ರೂ. ಹಣವನ್ನು ಕೊಡುವಂತೆ ಒತ್ತಾಯಿಸಿದಾಗ ಪಿರ್ಯಾದಿದಾರರು ನನ್ನಲ್ಲಿ ಅಷ್ಟೊಂದು ಹಣ ಇಲ್ಲಾ ಎಂಬುದಾಗಿ ತಿಳಿಸಿದಾಗ, ಹಣವಿಲ್ಲದಿದ್ದರೆ ಪಿರ್ಯಾದಿದಾರರ ಎಟಿಎಂ ಪಿನ್ ನಂಬ್ರ ಹೇಳುವಂತೆ ಬಲವಂತ ಮಾಡಿ ಪಿರ್ಯಾದಿದಾರರ ಎಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕಿನ ಎಟಿಎಂ ಪಿನ್ ನಂಬ್ರ ಪಡಕೊಂಡು ಬಿ.ಸಿ.ರೋಡ್ ತಲಪಾಡಿ ಕೆಎಸ್ಆರ್ಟಿಸಿ ಡಿಪ್ಪೋ ಬಳಿ ಕಾರನ್ನು ನಿಲ್ಲಿಸಿ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಹೋಗಿದ್ದು ನಂತರ ಪಿರ್ಯಾದಿದಾರರನ್ನು ಉಳಿದ ಇಬ್ಬರು ವ್ಯಕ್ತಿಗಳು ಬಿ.ಸಿ.ರೋಡ್ ಆಸುಪಾಸಿನಲ್ಲಿ 30-40 ನಿಮಿಷದ ತನಕ ಸುತ್ತಾಡಿಸಿಕೊಂಡು ಕಾರಿನಿಂದ ಇಳಿದು ಹೋದ ಇಬ್ಬರು ವ್ಯಕ್ತಿಗಳು ವಾಪಾಸು ಬಂದು ಪಿರ್ಯಾದಿದಾರರಿಗೆ ಎಟಿಎಂ ಕಾರ್ಡನ್ನು ವಾಪಾಸು ನೀಡಿ ಇದರಲ್ಲಿ ಹಣ ಇಲ್ಲ ಎಂದು ಹೇಳಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಬಂಗಾರದ ಚೈನ್ ಹಾಗೂ ಸುಮಾರು 50000/- ರೂ. ಮೌಲ್ಯದ ಆಪಲ್-ಐ ಫೋನ್ ಮೊಬೈಲ್, ಹಾಗೂ ಪಿರ್ಯಾದಿದಾರರ ಪಸರ್್ನಲ್ಲಿದ್ದ ನಗದು ರೂ.5000/- ಹಣವನ್ನು ಬಲವಂತವಾಗಿ ಸುಲಿಗೆ ಮಾಡಿ ಪಿರ್ಯಾದಿದಾರರನ್ನು ಬಿ.ಸಿ.ರೋಡ್ ತಲಪಾಡಿ ಕೆಎಸ್ಆರ್ಟಿಸಿ ಡಿಪ್ಪೋದ ಬಳಿ ಕಾರಿನಿಂದ ಇಳಿಸಿ ನಾಲ್ಕು ಜನ ಅಪರಿಚಿತರು ಕಾರಿನೊಂದಿಗೆ ಪರಾರಿಯಾಗಿರುತ್ತಾರೆ. ಎಂಬುದಾಗಿ ಎನ್.ಎಂ.ಯೋಗೇಶ್ ಕುಮಾರ್ (27), ತಂದೆ: ಡಿ.ಮೋಹನ್, ವಾಸ: 3-1, ಸುಬ್ರಹ್ಮಣ್ಯಪುರಂ, ತಿರುವೆರಂಬೂರು, ತಿಚರ್ಿ, ತಮಿಳುನಾಡು ರವರು ನೀಡಿದ ದೂರಿನಂತೆ 55/2013 ಕಲಂ: 341, 366, 323, 392 ಡಿ/ತಿ 34 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಪಣಂಬೂರು ಠಾಣೆ;
- ದಿನಾಂಕ 12-04-13 ರಂದು ಸಂಜೆ 16-30 ಗಂಟೆಗೆ ಫಿಯರ್ಾದಿದಾರರು ತನ್ನ ಮಿತ್ರ ಪವನ್ ಎಂಬಾತನೊಂದಿಗೆ ಬೈಕಂಪಾಡಿಯಲ್ಲಿದ್ದಾಗ ಆರೋಪಿತರು ಸಮಾನ ಉದ್ದೇಶದಿಂದ ಕಾರೊಂದರಲ್ಲಿ ಬಂದು ಆರೋಪಿಗಳ ಪೈಕಿ ಸಂದೀಪ್ ಎಂಬಾತನು ಫಿರ್ಯಾಧಿದಾರರನ್ನು ಉದ್ದೇಶಿಸಿ ರಂಡೆ ಮಗನೇ ನೀನು ಸುರತ್ಕಲ್ ಸಂದೀಪನ ಮರ್ಡರ್ ಕೇಸಿನಲ್ಲಿದ್ದೀಯಲ್ಲ ಎಂದು ಅವ್ಯಾಚ್ಯಶಬ್ದದಿಂದ ಬೈದು ಫಿರ್ಯಾದಿದರರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿ ಮುಂದಕ್ಕೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಮಿಥುನ್ ಶೆಟ್ಟಿ (24) ತಂದೆಃ ಪ್ರಕಾಶ್ ಶೆಟ್ಟಿ, ಮಹಾದೇವ್ ಮಾರ್ಬಲ್ ಬಳಿ, ಕುಳಾಯಿ, ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 59/13 ಕಲಂ 504,341,323,506 ಜತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 12-04-2013 ರಂದು 08-45 ಗಂಟೆ ಸಮಯಕ್ಕೆ ಮೋಟಾರು ಸೈಕಲ್ ನಂ: ಕೆಎ 19 ಡಬ್ಲ್ಯೂ 6073 ನ್ನು ಅದರ ಸವಾರ ಕೆಂಜಾರು ಗ್ರಾಮದ ಕರಂಬಾರು ಗ್ಯಾರೇಜಿನ ಬಳಿ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತ್ತಿದ್ದ ಟಾಟಾ ಸುಮೋ ನಂ: ಕೆಎ 18 ಎಂ 6176 ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಮೋಟರು ಸೈಕಲ್ ಸವಾರರ ಬಲಕಾಲಿಗೆ ತೀವ್ರ ರೀತಿಯ ಜಖಂ ಆಗಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಬಜಪೆ ಠಾಣೆ ಅಪರಾದ ಕ್ರಮಾಂಕ ಬಿ. ಮೊಯಿದಿನ್ ಬಾವಾ, 62 ವರ್ಷ, ತಂದೆ: ದಿ: ಬಾವಾ ಬ್ಯಾರಿ, ವಾಸ: ಬಾವು ಬ್ಯಾರಿ ಹೌಸ್, ಹೊರನಾಡು ರಸ್ತೆ, ಕಳಸ, ಚಿಕ್ಕಮಗಳೂರು ಜಿಲ್ಲೆ ರವರು ನೀಡಿದ ದೂರಿಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 113/2013 ಕಲಂ: 279-338 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ: 12-04-2013 ರಂದು ಸಮಯ ಸುಮಾರು 17.30 ಗಂಟೆಗೆೆ ದೋಷಪೂರಿತ ನೊಂದಣಿ ಸಂಖ್ಯೆಯ ಸ್ಕೂಟರ್ ನಂಬ್ರ ಏಂ-02 ಊಈ-476 ನ್ನು ಅದರ ಸವಾರ ಕೆ. ವಿಷ್ಣುವರ್ಧನ ರೆಡ್ಡಿ ಎಂಬವರು ಹಂಪನಕಟ್ಟೆ ಕಡೆಯಿಂದ ಏಕಮುಖ ರಸ್ತೆಯಲ್ಲಿ ವಿರುದ್ದವಾಗಿ ಡಾ|| ಅಂಬೇಡ್ಕರ್ ವೃತ್ತದ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಮಾಂಡೋವಿ ಶೊ ರೂಂ ಬಳಿ ತಲುಪುವಾಗ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಪಿರ್ಯಾದುದಾರರು ಸ್ಕೂಟರನ್ನು ನಿಲ್ಲಿಸುವಂತೆ ನೀಡಿದ ಸೂಚನೆಯನ್ನು ಉಲ್ಲಂಘಿಸಿ ಮುಂದಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಕಾಂಕ್ರೀಟ್ ರಸ್ತೆಗೆ ಬಿದ್ದು ಎಡಮುಂಗೈಗೆ ಗುದ್ದಿದ ಗಾಯ ಮತ್ತು ಎರಡೂ ಕಾಲುಗಳಿಗೆ ತರಚಿದ ರಕ್ತಗಾಯ ಉಂಟಾಗಿ ಸಕರ್ಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಅಪಘಾತವನ್ನುಂಟು ಮಾಡಿದ ನಂತರ ಅರೋಪಿತರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೆ ಅಪಘಾತ ಸ್ಥಳದಿಂದ ಸ್ಕೂಟರ್ ಸಮೇತ ಪರಾರಿಯಾಗಿರುತ್ತಾರೆ ಎಂಬುದಾಗಿ ಸಂಚಾರಿ ಪೂರ್ವ ಠಾಣೆ ಅಪರಾದ ಕ್ರಮಾಂಕ 71/13 ಕಲಂ 279, 337 ಐಪಿಸಿ ಮತ್ತು 134 (ಂ) ಖ ಖ ಖಣಟಜ 17 () ಖಣಟಜ 129 ಅಒಗಿ ಖಣಟಜ 51 ಖಜಛಿ 119.. ಮೋ ವಾ ಕಾಯ್ದೆ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 11-04-2013 ರಂದು ರಾತ್ರಿಯಿಂದ 12-4-2013 ರಂದು ಬೆಳಿಗ್ಗೆ 8-00 ಗಂಟೆ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂಭಾಗದಲ್ಲಿ ಕೆ. ಆನಂದ @ ನಾಗರಾಜ @ ಸ್ವಾಮಿನಾಥ 67 ವರ್ಷ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಅಮಲು ಪದಾರ್ಥ ಸೇವಿಸುವ ಚಟವುಳ್ಳವರಾಗಿದ್ದು, ಮಂಡಿ ನೋವಿನಿಂದ ಬಳಲುತ್ತಿದ್ದುದಲ್ಲದೇ ಹಾಗೂ ಆಥರ್ಿಕ ಅಡಚಣೆಯಿಂದ ಇದ್ದವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಶಿವರಾಮ ಕಾರಂತ, 52 ವರ್ಷ, ತಂದೆ: ಕೆ. ಪರಮೇಶ್ವರ ಕಾರಂತ, ಚಚರ್್ ಬಳಿ, ಕುಪ್ಪೆಪದವು, ಕೆಲಿಂಜಾರು ಗ್ರಾಮ, ಮಂಗಳುರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಯುಡಿಆರ್ ನಂ: 15/2013 ಕಲಂ: 174 ಸಿಆರ್ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment