ಅಪಘಾತ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ: 28-04-13 ರಂದು ರಾತ್ರಿ 8-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಸಂಜೀವ ಎಂಬವರು ತಡಂಬೈಲ್ ಕುಲಾಲ ಭವನದ ಎದುರುಗಡೆ ನಿಂತುಕೊಂಡು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿರುವ ಸಮಯ ಮೂಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಕೆಎ-19-ಝೆಡ್-8540 ನಂಬ್ರದ ಮಾರುತಿ ಆಲ್ಟೊ ಕಾರನ್ನು ಅದರ ಚಾಲಕ ಗುರುರಾಜ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರತ್ಕಲ್ ಕಡೆಗೆ ಹೋಗುವರೇ ರಸ್ತೆ ಬದಿಯಲ್ಲಿ ನಿಂತುಕೊಂಡು ಬಸ್ಸಿಗೆ ಕಾಯುತ್ತಿದ್ದ ಹರಿಶ್ಚಂದ್ರ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರ ತರದ ರಕ್ತ ಗಾಯವಾಗಿದ್ದವರನ್ನು ಪಿರ್ಯಾದಿದಾರರು ಹಾಗೂ ಇತರರು ಸೇರಿಕೊಂಡು ಒಂದು ಕಾರಿನಲ್ಲಿ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೊರಿಸಿದಾಗ ವೈದ್ಯರು ಪರೀಕ್ಷಿಸಿ ಹರಿಶ್ಚಂದ್ರರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಸಂಜೀವ, ಪ್ರಾಯ 55 ವರ್ಷ, ತಂದೆ: ಸೇಸ ಮೂಲ್ಯ, ವಾಸ: ಅರಿಂಗುಳ ಮನೆ, ಮಂಜೇಶ್ವರ, ಕಾಸರಗೋಡು ಜಿಲ್ಲೆ ರವರು ನೀಡಿದ ದೂರಿನಂತೆ ಸುರತ್ಕಲ್ ಠಾನೆ 118/2013 ಕಲಂ: 279, 304(ಎ) ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನೀರ್ಲಕ್ಷತನದಿಂದ ಮರಣ:
ದಕ್ಷಿಣ ಠಾಣೆ;
- ದಿನಾಂಕ 28-04-2013 ರಂದು ಬೆಳಿಗ್ಗೆ 10-00 ಗಂಟೆಯಿಂದ ಫಿಯರ್ಾದುದಾರರಾದ ಶ್ರೀ ಅಶ್ವತ್ರವರ ಅಣ್ಣ ಅರುಣ್ ಕುಮಾರ್ ಪ್ರಾಯ 42 ವರ್ಷ ಎಂಬವರು ಕುಂಪಲದ ಭಾಸ್ಕರ ಎಂಬವರ ಜೊತೆಯಲ್ಲಿ ನಗರದ ಮಂಗಳಾದೇವಿ, ಮಂಕಿಸ್ಟಾಂಡ್ ಬಳಿ ಇರುವ ಆರೋಪಿ 1 ನೇ ಪ್ರಶಾಂತ್ ರಾವ್ರವರ ಮಾಲಕತ್ವದ ರಂಜಿತ್ ಗ್ಯಾರೇಜ್ ಕಟ್ಟಡದ ಮಾಡಿನ ರಿಪೇರಿ ಕೆಲಸ ಮಾಡುತ್ತಿದ್ದರು. ಈ ಕೆಲಸದ ಉಸ್ತುವಾರಿಯನ್ನು ಆರೋಪಿ 2 ನೇ ರಾಮಚಂದ್ರರವರು ನೋಡಿಕೊಳ್ಳುತ್ತಿದ್ದರು. ಅರುಣ್ ಕುಮಾರ್ರವರು ಕೆಲಸದಲ್ಲಿ ನಿರತರಾಗಿದ್ದಾಗ, ಮಧ್ಯಾಹ್ನ 1-00 ಗಂಟೆಗೆ ಮಾಡಿನ ಸಿಮೆಂಟ್ ಶೀಟ್ ತುಂಡಾಗಿ ಅರುಣ್ ಕುಮಾರ್ರವರು 20 ಅಡಿ ಎತ್ತರದಿಂದ ಸಿಮೆಂಟ್ ನೆಲಕ್ಕೆ ಬಿದ್ದು ತೀವ್ರ ಗಾಯಗೊಂಡವರನ್ನು ಕೂಡಲೇ ಚಿಕಿತ್ಸೆ ಬಗ್ಗೆ ಭಾಸ್ಕರ ಹಾಗೂ ರೈಟರ್ ರಾಮಚಂದ್ರರವರು ಮಂಗಳೂರು ಜ್ಯೋತಿ ಅಂಬೇಡ್ಕರ್ ವೃತ್ತದಲ್ಲಿರು ಕೆ.ಎಮ್.ಸಿ ಅಸ್ಪತ್ರೆಗೆ ದಾಖಲಿಸಿದ್ದು, ಅರುಣ್ ಕುಮಾರ್ರವರು ಅಸ್ಪತ್ರೆಯ ಒಳರೋಗಿಯಾಗಿ ದಾಖಲುಗೊಂಡವರು ಚಿಕಿತ್ಸೆಯಲ್ಲಿರುವಾಗ ಈ ದಿನ ದಿನಾಂಕ 28-04-2013 ರಂದು 16-30 ಗಂಟೆಗೆ ಮೃತಪಟ್ಟಿರುತ್ತಾರೆ. ಅರುಣ್ ಕುಮಾರ್ರವರ ರವರ ಮರಣಕ್ಕೆ ಮಾರ್ಡನ್ ಬೆಡ್ ಮಾಟರ್್ನ ಮತ್ತು ರಂಜಿತ್ ಗ್ಯಾರೇಜ್ ಕಟ್ಟಡದ ಮಾಲಿಕ ಪ್ರಶಾಂತ್ ರಾವ್, ಮಾರ್ಡನ್ ಬೆಡ್ ಮಾಟರ್್ನ ರೈಟರ್ ರಾಮಚಂದ್ರ ಮತ್ತು ಮಾರ್ಡನ್ ಬೆಡ್ ಮಾಟರ್್ನ ಮೆನೇಜರ್ ರೋಯಣ್ಣ ರವರುಗಳ ನಿರ್ಲಕ್ಷತನವೇ ಕಾರಣರಾಗಿರುತ್ತದೆ ಎಂಬುದಾಗಿ ಅಶ್ವತ್ (41), ತಂದೆ: ಶ್ರೀನಿವಾಸ: ವಾಸ: ಶ್ರೀಶ ನಿಲಯ, ಜನಾರ್ಧನಾ ನಗರ, ಜಪ್ಪು ಬಪ್ಪಾಲ್, ಮಂಗಳೂರು ರವರು ನೀಿಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 122/2013 ಕಲಂ 304 (ಎ) ಜೊತೆಗೆ 34 ಐಪಿಸಿ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 27-04-2013 ರಂದು ಮಧ್ಯಾಹ್ನ 1-30 ಗಂಟೆಗೆ ಫಿಯರ್ಾದುದಾರರಾದ ಶ್ರೀ ಚಿನ್ನದೊರೈ ರವರ ಅಕ್ಕನ ಗಂಡನಾದ ಆರುಮುಗಂ ಪ್ರಾಯ 43 ವರ್ಷ ರವರು ಸುಮಾರು 5 ವರ್ಷಗಳಿಂದ ಸಂಸಾರದೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದುಕೊಂಡು ಮಂಗಳೂರು ದಕ್ಕೆಯಲ್ಲಿ ಮೀನಿನ ಕೆಲಸ ಮಾಡಿಕೊಂಡಿರುತ್ತಾರೆ. ಆರುಮುಗಂ ರವರು ಕೆಲಸ ಮುಗಿಸಿ ಬಳಿಕ ದಕ್ಕೆಯಲ್ಲಿ ಕುಳಿತ್ತಿದ್ದವರು ಮಧ್ಯಾಹ್ನ ಸುಮಾರು 2-30 ಗಂಟೆಗೆ ಒಮ್ಮೆಲೇ ಕುಸಿದು ಬಿದ್ದವರನ್ನು ಫಿಯರ್ಾದುದಾರರು ಹೋಗಿ ನೋಡಿದಾಗ, ಆರುಮುಗಂ ರವರು ಫಿಡ್ಸ್ ಖಾಯಿಲೆಯಲ್ಲಿ ಕೈ ಕಾಲು ನಡುಗುತ್ತಿದ್ದು, ಬಾಯಿಯಲ್ಲಿ ನೊರೆ ಬರುತ್ತಿದ್ದು, ಫಿಯರ್ಾದುದಾರರು ಕೂಡಲೇ ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈಧ್ಯಾಧಿಕಾರಿಯವರು ಆರುಮುಗಂ ರವರನ್ನು ಪರೀಕ್ಷಿಸಿದಾಗ, ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕೋರಿ ನೀಡಿದ ಫಿರ್ಯಾಧಿ ಸಾರಾಂಶವಾಗಿದೆ ಎಂಬುದಾಗಿ ಚಿನ್ನದೊರೈ ಪ್ರಾಯ 32 ವರ್ಷ, ತಂದೆ: ಕಳಿಯ ಮೂತರ್ಿ, ವಾಸ: ಹೊಯ್ಗೆ ಬಜಾರ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 37/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment