Sunday, April 21, 2013

Daily Crime Incidents for April 21, 2013.


ಸುಲಿಗೆ ಪ್ರಕರಣ



ಮಂಗಳೂರು.ಪೂರ್ವ ಪೊಲೀಸ್ ಠಾಣಾ  


ದಿನಾಂಕ 20-04-2013 ರಂದು ಪಿರ್ಯಾದಿದಾರರಾದ ಅಸುಂತಾ ಡಿ'ಸೋಜಾ ವಾಸ: ಕದ್ರಿ ಕೈಬಟ್ಟಲು, ಮಂಗಳೂರು. ಮನೆಯಿಂದ ಬೆಂದೂರ್ ಚರ್ಚಗೆ ಪ್ರಾರ್ಥನೆ ಬಗ್ಗೆ ಹೊರಟು ಜಾಜರ್್ಮಾಟರ್ಿಸ್ ರಸ್ತೆ ಕಡೆಯಿಂದ ಕದ್ರಿ ದೇವಸ್ಥಾನದ ಕಡೆಗೆ ಒಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಪಿರ್ಯಾದಿದಾರರ ಎದುರುಗಡೆಯಿಂದ ದ್ಚಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವಕರು ಪಿರ್ಯಾದಿದಾರರ ಹತ್ತಿರ ತಲುಪುತಿದ್ದಂತೆ ಬೈಕ್ನ ಇಬ್ಬರು ಹಿಂಬದಿ ಕುಳಿತುಕೊಂಡ ಸವಾರನು ಏಕಾಏಕಿಯಾಗಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 34 ಗ್ರಾಂ ತೂಕದ ಚನ್ನದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಕಿತ್ತು ಲೂಟಿ ಮಾಡಿಕೊಂಡು ಜಾಜರ್್ ಮಾಟರ್ಿಸ್ ರಸ್ತೆ ಕಡೆಗೆ ಪರಾರಿಯಾಗಿದ್ದು ಘಟನೆ ನಡೆಯುವಾಗ್ಗೆ ಸಮಯ ಸುಮಾರು 16-50 ಗಂಟೆಯಾಗಿರಬಹುದು. ಸರವನ್ನು ಸುಮಾರು 30 ವರ್ಷದ ಹಿಂದೆ ಮಾಡಿಸಿದ್ದು ಅದರ ಅಂದಾಜು ಮೌಲ್ಯ ಸುಮಾರು 75000/-ರೂ ಆಗಬಹುದು ಎಂಬುದಾಗಿ ನೀಡಿದ ಪಿರ್ಯಾದಿಯಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ಮೊ.ನಂ. 58/2013 ಕಲಂ: 392 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹುಡುಗ ಕಾಣೆ ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣಾ


ದಿನಾಂಕ ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಫಿಯರ್ಾದಿದಾರರಾದ ಸುರೇಶ್ (22) ವಾಸ: ಬೆನ್ ಅಪಾಟರ್್ಮೆಂಟ್, ಕಾಫ್ರಿಗುಡ್ಡ, ಮಂಗಳೂರು ರವರು ಸ್ವಂತ ಊರಾದ ರಾಜಸ್ಥಾನ ರಾಜ್ಯದ ಜಾಲೂರು ಜಿಲ್ಲೆಯ ಅರುಣ ಗ್ರಾಮದ ತನ್ನ ಮನೆಯ ಪಕ್ಕದ ದೋಲಾರಾಮ (18), ರವರು ನೆಂಟರಾಗಿ ಮಂಗಳೂರು ಮನೆಗೆ ಬಂದಿದ್ದು, ದೊಲಾರಾಮ ರವರು ಸಮಯ ಸಿಕ್ಕಾಗ ಅಂಗಡಿಯಲ್ಲಿರುತ್ತಿದ್ದು, ದಿನಾಂಕ 19-04-2013 ರಂದು ಬೆಳಿಗ್ಗೆ 12:00 ಗಂಟೆಗೆ ಅಂಗಡಿಗೆ ಬಂದಿದ್ದವರು ಸಂಜೆ 4:00 ಗಂಟೆಗೆ ಮಂಗಳೂರು ಅತ್ತಾವರ ಮನೆಯಲ್ಲಿರುವ ಸ್ಟಾಕ್ ರೂಮ್ಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮನೆಗೂ ಹೋಗದೇ ಅಂಗಡಿಗೂ ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಪಿರ್ಯಾದಿದಾರರು ರೈಲ್ವೆಸ್ಟೇಷನ್, ಬಸ್ಸು ನಿಲ್ದಾಣ ಮತ್ತು ಊರಿಗೆ ಹೋಗಿರಬಹುದೆಂದು ಊರಿಗೆ ವಿಚಾರಿಸಿದ್ದಲ್ಲಿ ಊರಿಗೂ ಹೋಗದೇ ಇದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಈ ಬಗ್ಗೆ ಪಿರ್ಯಾದಿದಾರರು ಠಾಣೆಗೆ ತಡವಾಗಿ ಬಂದು, ಕಾಣೆಯಾದ ದೊಲಾರಾಮ ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಪಿರ್ಯಾದಿಯಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 93/2013 ಕಲಂ ಹುಡುಗ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣಗಳು

ಬಜಪೆ ಪೊಲೀಸ್ ಠಾಣೆ


ದಿನಾಂಕ: 18-04-2013 ರಂದು ಬೆಳಿಗ್ಗೆ ಸುಮಾರು 9-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಮೂಳೂರು ಗ್ರಾಮದ ಗುರುಪುರ ಹಾಲಿನ ಸೊಸೈಟಿ ಬಳಿ, ಪಿರ್ಯಾದಿರರಾದ ಮಹಮ್ಮದ್ ಶರೀಫ್ (38) ವಾಸ: ಮೂಳೂರು ಗ್ರಾಮ, ಮಂಗಳೂರು ತಾಲೂಕು  ನಡೆದುಕೊಂಡು ಹೋಗುತ್ತಿರುವಾಗ, ಪೊಳಲಿ ದ್ವಾರದ ಕಡೆಯಿಂದ ಬರುತ್ತಿದ್ದ ಮೋಟಾರು ಸೈಕಲ್ ನಂ: ಕೆಎ 19 ಕ್ಯೂ 9720 ನೇಯದ್ದನ್ನು ಅದರ ಸವಾರ ಮೊಟಾರು ಸೈಕಲನ್ನು ಅತೀವೇಗ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಬಿದ್ದು, ಅವರ ಬಲ ಕಾಲಿನ ತೊಡೆಯ ಮೂಳೆ ಮುರಿದ ಜಖಂ ಆಗಿರುವುದಲ್ಲದೇ ಎಡ ಕಿವಿಗೆ, ಎಡಕಾಲಿನ ಮೊಣ ಗಂಟಿಗೆ ರಕ್ತ ಗಾಯ, ಹಾಗು ತರಚಿದ ಗಾಯವಾಗಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎಸ್.ಸಿ.ಎಸ್. ಆಸ್ಪತೆಗೆ ದಾಖಲಿಸಲಾಗಿದೆ ಎಂಬುದಾಗಿ ಪಿರ್ಯಾದಿರರಾರು ನೀಡಿದ ದೂರತಿನಂತೆ ಬಜಪೆ ಪೊಲೀಸ್ ಠಾಣೆ ಅ.ಕ್ರ: 21/2013 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸಂಚಾರ ಪೂರ್ವ ಪೊಲೀಸ್ ಠಾಣೆ


 ದಿನಾಂಕ: 19-04-2013 ರಂದು ಸಮಯ ಸುಮಾರು 21.00 ಗಂಟೆಗೆೆ  ಪಿರ್ಯಾದುದಾರ ವೈಶಾಕ್ .ವಿ. ಬಾಬ್ಜಿ (23) ವಾಸ: ಬೆಂದೂರ್ವೆಲ್,  ಮಂಗಳೂರು ತನ್ನ ಸ್ನೇಹಿತರಾದ ವಿವೇಕ್ ಮತ್ತು ಅನೂಪ್ರವರೊಂದಿಗೆ ಬಲ್ಮಠ ವೃತ್ತದಿಂದ ಎಸ್ಸಿಎಸ್ ಆಸ್ಪತ್ರೆಯ ಕಡೆಗೆ ರಸ್ತೆಯ ಬಲಭಾಗದಲ್ಲಿ ನಡೆದುಕೊಂಡು ಹೋಗುತ್ತಾ ಬಲ್ಮಠ ಸರ್ಕಲ್ ಬಳಿಯಿರುವ ಪ್ರಿಸ್ಟಿಜ್ ಹೋಟೆಲ್ ಎದುರು ತಲುಪುವಾಗ, ಎಸ್ಸಿಎಸ್ ಆಸ್ಪತ್ರೆಯ ಕಡೆಯಿಂದ ಬಲ್ಮಠ ವೃತ್ತದ ಕಡೆಗೆ ಕಾರು ನಂಬ್ರ ಏಂ-55 ಒ-3620  ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಭಾಗದಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಎಡಕಾಲಿನ ಮೂಳೆ ಮುರಿತ ಗಂಭಿರ ಸ್ವರೂಪದ ಗಾಯ ಮತ್ತು ಎಡಕೈಗೆ ತರಚಿದ ಗಾಯವಾಗಿ ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತ ಸಂಭವಿಸಿದ ಬಳಿಕ ಅರೋಪಿತರು ಅಪಘಾತ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿರುತ್ತಾರೆ ಎಂಬುದಾಗಿ ಪಿರ್ಯಾದಿರರಾರು ನೀಡಿದ ದೂರತಿನಂತೆ ಸಂಚಾರ ಪೂರ್ವ ಪೊಲೀಸ್ ಠಾಣೆ ಅ.ಕ್ರ: 79/13 ಕಲಂ-279,  338 ಐಪಿಸಿ & 134 (ಎ)(ಬಿ) ಮೋ.ವಾ.ಕಾಯ್ದೆ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಿಕ ಮರಣ ಪ್ರಕರಣ

ಮಂಗಳೂರು.ಪೂರ್ವ ಪೊಲೀಸ್ ಠಾಣಾ 


ದಿನಾಂಕ 20-04-2013 ರಂದು ಸಂಜೆ 17.00 ಗಂಟೆಯಿಂದ 18.30  ಗಂಟೆಯ ಮಧ್ಯೆಫಿರ್ಯಾದಿದಾರರ ತಮ್ಮ ಮನೋಜ್ ಪಾಟೀಲ (25) ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ಫ್ಯಾನಿಗೆ ಬಟ್ಟೆಯಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಅಲ್ಲದೇ ಸದ್ರಿ ಮೃತನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂಬಿತ್ಯಾದಿ ಪಿರ್ಯಾದಿದಾರರಾದ ವೈಶಾಲಿ. (35) ವಾಸ: ಭೋಜರಾವ್ ಲೇನ್, ಮಂಗಳೂರು ನೀದಿದ ಲಿಖಿತ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ  ಯು.ಡಿ.ಆರ್.ನಂ. 14/2013 ಕಲಂ: 174 ಸಿಆರ್ಪಿಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




No comments:

Post a Comment