ಕಳ್ಳತನ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ 23-04-2013 ರಂದು ಬೆಳಿಗ್ಗೆ 08-00 ಗಂಟೆಗೆ ಪ್ರಕರಣದ ಪಿರ್ಯಾದಿದಾರರಾದ ಶ್ರೀ ಬಾಬಿ ಸಬಾಸ್ಟೀಯನ್ರವರು ಮನೆಗೆ ಬೀಗ ಹಾಕಿ ಕಛೇರಿಯ ಕೆಲಸದ ನಿಮಿತ್ತ ಬೊಂಬಾಯಿಗೆ ಹೋಗಿದ್ದು, ಈ ದಿನ ದಿನಾಂಕ 26-04-2013 ರಂದು ಬೆಳಿಗ್ಗೆ ಸುಮಾರು 07-30 ಗಂಟೆ ಸಮಯಕ್ಕೆ ಇವರ ಹತ್ತಿರದ ಮನೆಯ ಸುಮನ್ ರೆಡ್ಡಿ ಎಂಬವರು ಪಿರ್ಯಾದಿಗೆ ಫೋನು ಮಾಡಿ ಮನೆಯಲ್ಲಿ ಬಾಗಿಲು ಮುರಿದು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ ತಿಳಿಸಲಾಗಿ ನಂತರ ಪಿರ್ಯಾದಿಯು ತಕ್ಷಣವೇ ಮುಂಬೈನಿಂದ ವಿಮಾನದಲ್ಲಿ ಮನೆಗೆ ಬಂದು ನೋಡಿದಾಗ, ಮನೆಯ ಎದುರಿನ ಬಾಗಿಲು ಮುರಿದಿದ್ದು, ಮನೆಯ ಒಳಗೆ ಮಲಗುವ ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಬಾಗಿಲನ್ನು ಮುರಿದು ಅದರೊಳಗಿದ್ದ ಸುಮಾರು 30,000/- ರೂಪಾಯಿ ಮೌಲ್ಯದ ಚಿನ್ನ ಮತ್ತು ಹವಳ ಮಿಶ್ರಿತ 5 ಗ್ರಾಂ ತೂಕದ ಉಂಗುರ-1, ಂಛಿಛಿಣಡಿಚಿಣಜ ಕಂಪೆನಿಯ ವಾಚುಗಳು-2, 3]. ವಿದೇಶಿ ಕರೆನ್ಸಿಯಾದ ಅಮೇರಿಕಾಸ್ ಡಾಲರ್-100, 4]. ನಗದು ಹಣ 2,000/- ರೂಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಎಂಬುದಾಗಿ ಬಾಬಿ ಸೆಬಾಸ್ಟೀಯನ್ (40) ತಂದೆ ವಿ.ಡಿ. ಸಬಾಸ್ಟೀಯನ್, ವಾಸ ಆ.ಓಔ. # 2-109 ಂ-23, ಅಮಲ್ ಭವನ್, ದುಗರ್ಾನಗರ, ಹೊಸಬೆಟ್ಟು ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾನೆ ಅಪರಾದ ಕ್ರಮಾಂಕ 117/2013 ಕಲಂ: 457, 454, 380 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ
ಕಳವು ಪ್ರಕರಣ:
ಉಳ್ಳಾಲ ಠಾಣೆ;
- ಪಿರ್ಯಾದುದಾರರು ತನ್ನ ಬಾಬ್ತು KA 19 W 5809 ನೇ ನಂಬ್ರದ ಮೋಟಾರು ಸೈಕಲ್‌ನ್ನು ದಿನಾಂಕ 25/04/2013 ರಂದು ಮಂಗಳೂರು ತಾಲೂಕು ತೊಕ್ಕೊಟ್ಟಿನ ದೇವ್‌ಚಂದ್ ಕಾಂಪ್ಲೆಕ್ಸ್ ನ ಎದುರುಗಡೆ ನಿಲ್ಲಿಸಿದ್ದು, ಸದ್ರಿ ಬೈಕ್‌ನ್ನು ರಾತ್ರಿ 21-00 ಗಂಟೆಯಿಂದ 21-15 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ತದ ನಂತರ ರಾತ್ರಿ 24-00 ಗಂಟೆ ಸುಮಾರಿಗೆ ಕಳವಾದ ಬೈಕ್ ರಾ.ಹೆ. 66 ರ ಕಲ್ಲಾಪು ಎಂಬಲ್ಲಿ ಅಪಘಾತಕ್ಕೆ ಒಳಗಾಗಿದೆ ಎಂದು ತಿಳಿಸಿದ ಪಿರ್ಯಾದಿ ಅಲ್ಲಿಗೆ ಹೋಗಿ ನೋಡಿದಾಗ ಬೈಕ್ ಪಿರ್ಯಾದುದಾರರಾಗಿದ್ದು, ಈ ಬೈಕ್‌ನ್ನು ಮೋಹನ್ ಮತ್ತು ಇನ್ನೊಬ್ಬ ಕಳವು ಮಾಡಿರುವುದಾಗಿ ತಿಳಿದು ಬಂದಿರುವುದಲ್ಲದೇ, ಬೈಕ್ ಅಪಘಾತದಿಂದ ಮೋಹನ್ ಗಾಯಗೊಂಡಿದ್ದು, ಅತನನ್ನು 108 ನೇ ಅಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದು, ಇನ್ನೊಬ್ಬ ಪರಾರಿಯಾಗಿರುತ್ತಾನೆ. ಕಳವಾದ ಬೈಕಿನ ಅಂದಾಜು ಮೌಲ್ಯ ರೂಪಾಯಿ 30,000/- ಆಗ ಬಹುದು ಎಂಬಿತ್ಯಾದಿಯಾಗಿ ಪಿರ್ಯಾದುದಾರರು ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವಾಗಿದ ಎಂಬುದಾಗಿ ದಯಾನಂದ ವಾಸ: ಅಂಬೇಢ್ಕರ ಮೈದಾನದ ಬಳಿ ಉಳ್ಳಾಲ ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 170/2013 PÀ®A 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ
ಪ್ರಕರಣ:
ಮೂಡಬಿದ್ರೆ
ಠಾಣೆ;
- ಪಿರ್ಯಾದಿದಾರರಾದ ಸುಮಂತ್ ಶೆಟ್ಟಿ (24) ಎಂಬವರು ದಿನಾಂಕ 26-04-2013 ರಂದು 20-30 ಗಂಟೆಗೆ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಗಾಂಧಿನಗರ ಕಡೆಪಲ್ಲ ಎಂಬಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಕೆಎ 20 ಕೆ 7406 ನಂಬ್ರದ ಮೋಟಾರು ಸೈಕಲ್‌ನ್ನು ಅದರ ಸವಾರ ನಿಜಾರ್ ಎಂಬವನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಪಿರ್ಯಾದಿಯು ಚರಂಡಿಗೆ ಎಸೆಯಲ್ಪಟ್ಟು ಅವರ ಬಲಕಾಲಿನ ಎಲುಬು ಮುರಿತವಾಗಿದ್ದು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿರುತ್ತಾರೆ ಎಂಬುದಾಗಿ ಸುಮಂತ್ ಶೆಟ್ಟಿ (24), ತಂದೆ : ಸುಧಾಕರ ಶೆಟ್ಟಿ, ವಾಸ : ರೋಸ್‌ಡೇಲ್ ರೆಸಿಡೆನ್ಸಿ 2 ನೇ ಮಹಡಿ, D .No 230, ಗಾಂಧಿನಗರ, ಮಾರ್ಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 88/2013 ಕಲಂ : 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment