Tuesday, April 30, 2013

Daily Crime Incidents For April 30, 2013


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;


  • ದಿನಾಂಕ: 28-04-2013 ರಂದು ಸಮಯ ಸುಮಾರು 13.20 ಗಂಟೆಗೆೆ ಪಿರ್ಯಾದುದಾರರು, ತನ್ನ ಮಗಳಾದ ಸುಮಾರು 11ವರ್ಷ ಪ್ರಾಯದ  ಕು|| ರೋಸ್ ಬಾಸ್ಟಿನ್ರವರ ಜೊತೆ ಬಲ್ಮಠದ ದೀಪಾ ಪ್ಯಾರಡೈಸ್ ಅಪಾಟರ್್ಮೆಂಟ್ ಎದುರು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿರುವಾಗ ಬಲ್ಮಠ ಸರ್ಕಲ್ ಕಡೆಯಿಂದ ಎಸ್ಸಿಎಸ್ ಆಸ್ಪತ್ರೆ ಕಡೆಗೆ ಕಾರು ನಂಬ್ರ ಏಐ- 14 ಎ- 1678 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕು|| ರೋಸ್ ಬಾಸ್ಟಿನ್ರವರಿಗೆ ಕಾರು ಡಿಕ್ಕಿಯಾದ ಮಾಡಿದ ಪರಿಣಾಮ   ಕು|| ರೋಸ್ ಬಾಸ್ಟಿನ್ ರಸ್ತೆಗೆ ಬಿದ್ದು ಬಲಕೈಗೆ ತರಚಿದ ಗಾಯ ಹಾಗೂ ಬಲಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಡಾ|| ಅಂಬೇಡ್ಕರ್ ವೃತ್ತದ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸಿನಾ ಡೆನ್ನಿ (40) ಗಂಡ: ಡಾ|| ಬಾಸ್ಟಿನ್  ವಾಸ: # 601, ದೀಪಾ ಪ್ಯಾರಡೈಸ್ ಅಪಾಟರ್್ಮೆಂಟ್, ಬಲ್ಮಠ,   ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 84/13  ಕಲಂ  279,  338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ  28-4-2013 ರಂದು ರಾತ್ರಿ ಸುಮಾರು 8-30 ಗಂಟೆಯ ಸಮಯಕ್ಕೆ ವಳಚ್ಚಿಲ್ ಕಡೆಯಿಂದ ನೀರುಮಾರ್ಗದ ಕಡೆಗೆ, ಆರೋಪಿ ಜೋಸುವಾ ಎಂಬವನು ಏಂ 19-ಇಈ 9287 ನೇ ನಂಬ್ರದ  ಮೋಟಾರು ಸೈಕಲ್ನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕಾರಣ, ಆತನಿಗೆ ನಿಯಂತ್ರಣ ತಪ್ಪಿ ಸದ್ರಿ ಮೋಟಾರು ಸೈಕಲ್ ರಸ್ತೆಯಲ್ಲಿ ಅಡ್ಡ ಬಿದ್ದು ಈ ಕಾರಣ ಸದ್ರಿ ಮೋಟಾರು ಸೈಕಲ್ನಲ್ಲಿ ಆತನ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಅಂತೋಣಿ ಪಾಯಸ್ ಎಂಬವರಿಗೆ ಮತ್ತು ಮೋಟಾರು ಸೈಕಲ್ ಸವಾರ ಜೋಶುವಾ ಅರುಣ್ ಕ್ರಾಸ್ತಾ ಎಂಬವರಿಗೆ ತೀವ್ರ ಜಖಂಗಳಾಗಿ   ಮಂಗಳೂರು ಪಾದರ್ ಮುಲ್ಲರ್ಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಅರುಣ್ ಮೆಲ್ವಿನ್ ಪಿರೇರಾ, ಪ್ರಾಯ 38 ವರ್ಷ ತಂದೆ: ಶ್ರೀ ಚಾಲ್ಸ್ ಪಿರೇರಾ  ವಾಸ: ಮೇರ್ಲ ಪದವು ಮನೆ, ಮೇಲ್ಲಪದವು,ಪರಂಗಿಪೇಟೆ ಪೋಸ್ಟ್, ಅಕರ್ುಳ ಗ್ರಾಮ,      ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಠಾಣೆ ಅಪರಾದ ಕ್ರಮಾಂಕ 152/2013 ಕಲಂ 279 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 28-4-2013 ರಂದು ಒರಿಜ ಸುಮಾರು 5  ಗಂಟೆಯ ಸಮಯಕ್ಕೆ ಪಿಯರ್ಾದುದಾರರು ತನ್ನ ಬಾವನ ಬಾಬ್ತು ಕೆಎ-03-ಎಂಬಿ-4804 ನೇ ನಂಬ್ರದ ಸ್ಕಾಪರ್ಿಯೋ ಕಾರನ್ನು ಚಲಾಯಿಸಿಕೊಂಡು ಬಿ.ಸಿ. ರೋಡ್ ಕಡೆಯಿಂದ ಪಂಪ್ವೆಲ್ ಕಡೆಗೆ ಹೋಗುತ್ತಿದ್ದವರು, ಕಂಕನಾಡಿ ಗರೋಡಿ ಸಮೀಪ ತಲುಪುವಾಗ, ಅವರ ಎದುರಿನಿಂದ ಅಂದರೆ ಪಂಪ್ವೆಲ್ ಕಡೆಯಿಂದ ಬಿ.ಸಿ. ರೋಡ್ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಕೆಎ 36-ಎಂ-5524 ನೇ ನಂಬ್ರದ ಮಾರುತಿ ಅಲ್ಟೋ ಕಾರನ್ನು ಅದರ ಚಾಲಕ ವೇಣುಗೋಪಾಲ ಎಂಬವರು  ಚಲಾಯಿಸಿಕೊಂಡು  ಎದುರಿನಲ್ಲಿ ಹೋಗುತ್ತಿದ್ದ ಲಾರಿಯನ್ನು ಒವರ್ಟೇಕ್ ಮಾಡಿ ಮುಂದೆ ಬಂದು, ಪಿಯರ್ಾದುದಾರರ ಕಾರಿಗೆ ಡಿಕ್ಕಿ ಹೊಡೆದುದಾಗಿದೆ.  ಈ ಕಾರಣ ಆರೋಪಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರವೀಳಾ ಎಂಬವರಿಗೆ ತಲೆಗೆ ರಕ್ತ ಬರುವ ಗಾಯವಾಗಿದ್ದು ಅವರು ಮಂಗಳೂರು ಇಂಡಿಯಾನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಯಲ್ಲಿ ಇರುವುದಾಗಿದೆ. ಪಿಯರ್ಾದುದಾರರ ಕಾರಿನಲ್ಲಿದ್ದ ಅವರ ತಂದೆಗೆ ಮತ್ತು ಅವರಿಗೆ ಅಲ್ಪ ಸ್ವಲ್ಲ ಜಿಖಂ ಉಂಟಾಗಿರುವುದಾಗಿದೆ ಎಂಬುದಾಗಿ ಮಹಮ್ಮದ್ ಕಲಂದರ್   ತಂದೆ: ಅಬೂಬಕ್ಕರ್ ವಾಸ: ಮಾರಿಪಲ್ಲ, ಪುದು ಗ್ರಾಮ ಬಂಟ್ವಾಳ ರವರು ನೀಡಿದ ದೂರಿನಂತೆ ಮಂಗಳೂರು ಠಾಣೆ ಅಪರಾದ ಕ್ರಮಾಂಕ 153/2013 ಕಲಂ 279 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 28-4-2013 ರಂದು ಮದ್ಯಾಹ್ನ ಪಿಯರ್ಾದುದಾರರು ತನ್ನ ಗೆಳೆಯ ಹರೀಶ ಎಂಬವರೊಂದಿಗೆ ಕೆಎ-19-ಡಬ್ಲ್ಯು-3766 ನೇ ನಂಬ್ರದ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಮಿಜಾರಿನಿಂದ ವಾಮಂಜೂರಿಗೆ ಹೊರಟವರು,  ಸುಮಾರು 2 ಗಂಟೆಯ ಸಮಯಕ್ಕೆ  ಕೆತ್ತಿಕಲ್ ಎಂಬಲಿಗೆ ತಲುಪುವಾಗ ಅವರ ಎದುರಿನಿಂದ ಬಸ್ಸೊಂದನ್ನು, ಒಂದು ಕಾರು ಓವರ್ಟೇಕ್ ಮಾಡಿ ಬರುತ್ತಿದ್ದುದನ್ನು ಕಂಡ ಸವಾರ ಹರೀಶನು ತನ್ನ ಸ್ಕೂಟರನ್ನು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿದ ಕಾರಣ ಸದ್ರಿ ಸ್ಕೂಟರ್ ರಸ್ತೆಯ ಹೊಂಡಕ್ಕೆ ಬಿದ್ದು, ಈ ಪರಿಣಾಮ ಸ್ಕೂಟರಿನ ಹಿಂಬದಿ ಕುಳಿತಿದ್ದ ಪಿಯರ್ಾದುದಾರರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುವುದಾಗಿದೆ ಇತ್ಯಾದಿಯಾಗಿ ಸಾರಾಂಶವಾಗಿದೆ ಎಂಬುದಾಗಿ ಸತೀಶ್ ಆಚಾರ್ಯ ತಂದೆ ನಾರಾಯಣ ಆಚಾರ್ಯ ವಾಸ: ಶಕ್ತಿನಗರ ಪದವು ಮಂಗಳೂರು ರವರು ನೀಡಿದ ದೂರಿನಂತೆ 154/2013 ಕಲಂ 279 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ..



ಅಸ್ವಾಭಾವಿಕ ಮರಣ ಪ್ರಕರಣ:

ಮಂಗಳೂರು ಪೂರ್ವ ಠಾಣೆ;



  • ಫಿರ್ಯಾದಿದಾರರ ತಾಯಿ ಶ್ರೀಮತಿ. ಮೇಜಿ ಮೇರಿ ಸಲ್ಡಾನ್ಹ ಪ್ರಾಯ 81 ವರ್ಷ ಇವರು, ಮಗಳ ಮನೆಯಾದ ಆಳ್ವಾರಿಸ್ ರಸ್ತೆಯ ತಿಯಾರ ಅಪಾಟರ್್ಮೆಂಟ್, ರೂಂ.ನಂ..501 ರಲ್ಲಿ ಒಬ್ಬಂಟಿಗಳಾಗಿ ವಾಸವಾಗಿದ್ದು, ಪಿರ್ಯಾದಿದಾರರ ತಂಗಿ ಅಮೇರಿಕಾದಲ್ಲಿ ವಾಸವಾಗಿದ್ದು, ಪಿರ್ಯಾದಿದಾರರು  ದಿನಾಂಕ 27-04-2013 ರಂದು ತಮ್ಮ ತಾಯಿಗೆ ಚಿಕಿತ್ಸೆ ಬಗ್ಗೆ ಮಂಗಳೂರು ನಗರದ ಕೆ.ಎಂ.ಸಿ ಆಸ್ಪತ್ರೆ ಹಾಗೂ ಕೊಲಾಸೋ ಆಸ್ಪತ್ರೆಯ ವೈದ್ಯರಲ್ಲಿ ಚಿಕಿತ್ಸೆ ಮಾಡಿಕೊಂಡು ಮನೆಗೆ ತಂದು ಬಿಟ್ಟಿರುವುದಾಗಿದೆ. ದಿನಾಂಕ 27-04-2013 ರಂದು ಸಂಜೆಯಿಂದ ದಿನಾಂಕ 29-04-2013 ರಂದು ಬೆಳಿಗ್ಗೆ 09.30 ಗಂಟೆಯ ಮಧ್ಯದ ಅವಧಿಯಲ್ಲಿ ಪ್ರಾಯಸ್ಥಾಳಾಗಿ ಸರಿಯಾದ ಆರೈಕೆಯಿಲ್ಲದೇ ಬೆಡ್ ರೂಮಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿದೆ. ಸದ್ರಿ ಮೃತಳ ಮರಣದ ಬಗ್ಗೆ  ಬೇರೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಮೃತದೇಹ ಬಿಟ್ಟುಕೊಡುವರೇ ಕೋರಿಕೆ ಎಂಬಿತ್ಯಾದಿ ಪಿರ್ಯಾದಿಯ ಲಿಖಿತ ದೂರಿನ ಸಾರಾಂಶವಾಗಿದೆ ಎಂಬುದಾಗಿ ಲೆಸ್ಟರ್ ಸಲ್ಡಾನ್ಹ (55) ತಂದೆ: ದಿ. ಪಿ.ಎಫ್.ಟಿ.ಸಲ್ಡಾನ್ಹ ವಾಸ: ಬ್ಯೂಟಿ ಸ್ಪಾಟ್, ಬಿಕರ್ನಕಟ್ಟೆ ಮುಖ್ಯ ರಸ್ತೆ ಕುಲಶೇಖರ ಪೋಸ್ಟ್, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಯು.ಡಿ.ಆರ್. ನಂಬ್ರ 15/2013 ಕಲಂ 174 ಸಿ.ಅರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪಣಂಬೂರು ಠಾಣೆ;



  • ದಿನಾಂಕ: 29-04-2013 ರಂದು ಪಿರ್ಯಾದಿದಾರರು ಮತ್ತು ಅವರ ಮಿತ್ರ ದೇವದಾಸ್ ಕೆ ಕಾಂಚನ್ ಮತ್ತು ಭಾವನವರಾದ ಚಿದಾನಂದರವೊಂದಿಗೆ ಮೀನುಗಾರಿಕೆಯ ಬಗ್ಗೆ ತೋಟಬೆಂಗ್ರೆ ಕಡಲ ಕಿನಾರೆಯಲ್ಲಿ ಬೀಸುಬಲೆಯೊಂದಿಗೆ ಮೀನುಗಾರಿಕೆ  ನಡೆಸುತ್ತಿದ್ದ ಸಮಯ ಸುಮಾರು ಸಂಜೆ 7-00 ಗಂಟೆಯ ವೇಳೆಗೆ ಬೀಸು ಬಲೆಯನ್ನು ಸಮುದ್ರದ ದಡದಲ್ಲಿ ದೇವದಾಸ್ ಕೆ ಕಾಂಚನ್ರವರು ಎಳೆಯುತ್ತಿದ್ದ ಸಮಯ  ಕೆಮ್ಮುತ್ತ ಬಲೆಯನ್ನು ಬಿಟ್ಟು  ಸಮುದ್ರ ಬದಿಯ ಮರಳಲ್ಲಿ ಕುಸಿದು ಬಿದ್ದರು ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಆರೈಕೆ ಮಾಡಿ ಕಾರಿನಲ್ಲಿ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸಿದಲ್ಲಿ ದಾರಿಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ಪಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಯು ಜಿ ರಾಜಚಂದ್ರ ಪ್ರಾಯ 60 ವರ್ಷ ತಂದೆ: ದಿ: ಯು ಗಣೇಶ ವಾಸ: ಅನುಗ್ರಹ ಮಸೀದಿ ರಸ್ತೆ ಅಂಚೆ ಕಾವೂರು ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಯು.ಡಿ.ಆರ್. ನಂಬ್ರ 07/2013 ಕಲಂ 174 ಸಿ.ಅರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment