ಅಪಘಾತ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ 06-04-2013 ರಂದು 13-30 ಗಂಟೆಗೆ ಮಂಗಳೂರು ಅವರ ಗೆಳೆಯ ವಜ್ರೇಶ್ ಎಂಬವರ ಬಾಬ್ತು ಕೆಎ-19-ಇಎಪ್-2725 ನೇ ಮೋಟಾರ್ ಸೈಕಲನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ಹೋಗಿ ಬರುವರೇ ಪಡಕೊಂಡಿದ್ದು ಅದರಲ್ಲಿ ಚೇತನ್ ಎಂಬವರು ಸವಾರರಾಗಿ ಪಿರ್ಯಾದಿದಾರರು ಸಹಸವಾರರಾಗಿ ಎ.ಜೆ. ಆಸ್ಪತ್ರೆಯಿಂದ ವಾಪಾಸು ಅವರ ಮನೆ ಸಸಿಹಿತ್ಲು ಕಡೆಗೆ ಹೋಗುತ್ತಾ ಸಸಿಹಿತ್ಲು ಲಚ್ಚಿಲ್ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಸಸಿಹಿತ್ಲು ಕಡೆಯಿಂದ ಮುಕ್ಕ ಕಡೆಗೆ ಕೆಎ-19-ಎ-3589 ನೇ ಅಟೋರಿಕ್ಷಾವನ್ನು ಅದರ ಚಾಲಕ ರಿಯಾಜ್ ಎಂಬವರು ಅಪರಾಹ್ನ 13-30 ಗಂಟೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರ್ ಸೈಕಲ್ಲಿಗೆ ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲ್ ಸವಾರ ಮತ್ತು ಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ 2 ಕಾಲಿಗೂ ರಕ್ತಗಾಯವಾಗಿದ್ದು ಅಲ್ಲದೇ ಸವಾರ ಚೇತನ್ರವರ 2 ಕೈಗಳಿಗೂ ರಕ್ತಗಾಯವಾಗಿದ್ದು ಅಲ್ಲದೇ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಅಲ್ಲಿಗೆ ಬಂದ ಅನಿಲ್ ಕುಮಾರ್ ಹಾಗೂ ಇತರರು ಗಾಯಾಳುಗಳನ್ನು ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುವುದು ಎಂಬುದಾಗಿ ಪ್ರಶಾಂತ್ 30 ವರ್ಷ ತಂದೆಃ ಜಯಂತ ಕಾಂಚನ್ ವಾಸಃ ಸಾಲ್ಯಾನ್ ನಿಕೇತನ ದಾಂಡಿಬಳಿ ಸಸಿಹಿತ್ಲು ಸುರತ್ಕಲ್ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 99/2013 ಕಲಂ: 279-337-338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ:
ಮೂಡಬಿದ್ರೆ ಠಾಣೆ;
- ಕುಟ್ಟಿ ಯಾನೆ ದಾಮೋದರ ದೇವಾಡಿಗ (75) ಎಂಬವರು ಪಿರ್ಯಾದಿಯರವರ ತಾಯಿ ತಮ್ಮನಾಗಿದ್ದು ಮಾನಸಿಕ ಖಾಯಿಲೆಯಲ್ಲಿದ್ದು ಚಿಕಿತ್ಸೆಗಾಗಿ ಪಿರ್ಯಾದಿದಾರರು ಅವರ ಮನೆಯಾದ ಇರ್ವತ್ತೂರು ಗ್ರಾಮದ ಅರ್ಬಿ ಮನೆ ಎಂಬಲ್ಲಿಂದ ಪಿರ್ಯಾದಿದಾರರ ಮನೆಗೆ ನಿನ್ನೆ ತಾರೀಖು 05/04/2013 ರಂದು ಕರೆದುಕೊಂಡು ಬಂದಿದ್ದು ಇವರು ಈ ದಿನ ತಾರೀಖು 06/04/2013 ರಂದು ಬೆಳಿಗ್ಗೆ 06-00 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ಯಾರಿಗೂ ತಿಳಿಸದೇ ಹೋಗಿ ಕಾಣೆಯಾಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಾ (54), ಗಂಡ : ಶ್ರೀನಿವಾಸ ದೇವಾಡಿಗ, ವಾಸ : ಅಂಗಡಿ ಮನೆ, ಶಿರ್ತಾಡಿ ಗ್ರಾಮ, ಮಂಗಳೂರು ತಾಲೂಕು. ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 71/2013 ಕಲಂ : ಮನುಷ್ಯ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment