ಹಲ್ಲೆ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ 24-04-13 ರಂದು ಪಿರ್ಯಾದಿ ಸಂತೋಷ್ ರವರ ಮನೆಯಾದ ಮದ್ಯ ಖಡ್ಗೇಶ್ವರಿ ದೇವಸ್ಥಾನದ ಬಳಿ ಅವರ ತಮ್ಮ ಚೇತನ್ ಚಲಾಯಿಸಿಕೊಂಡಿದ್ದ ಕಾರಿಗೆ ಸೈಡ್ ಕೊಡದೇ ಅವಾಚ್ಯ ಶಬ್ದಗಳಿಂದ ಶೋಭರಾಜ್ ಬೈದ ಬಗ್ಗೆ ಕಾರನ್ನು ಮನೆಗೆ ತಂದು ನಿಲ್ಲಿಸಿದ ಚೇತನ್ ಪಿರ್ಯಾದಿ ಸಂತೋಷರ್ ರವರಿಗೆ ತಿಳಿಸಿದಾಗ ಮನೆಗೆ ಬಂದ ಅಪಾದಿತರಾದ ಶೋಭರಾಜ್, ಸತೀಶ್ ಹಾಗೂ ಕಿಶೋರ್ ಎಂಬವರು ಪಿರ್ಯಾದಿದಾರರ ಅಂಗಳಕ್ಕೆ ಬಂದು ಗಲಾಟೆ ಮಾಡುವಾಗ ಅಲ್ಲಿಗೆ ಟಾಟಾ ಸುಮೋ ದಲ್ಲಿ ಬಂದ ನಾಲ್ಕು ಜನರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಅವರ ಪೈಕಿ ಶೋಭರಾಜ್ ಆತನ ಕೈತಲ್ಲಿದ್ದ ಚೂರಿಯಿಂದ ಪಿರ್ಯಾದಿದಾರರ ಹೊಟ್ಟೆಗೆ ತಿವಿದು ಗಾಯಗೊಳಿಸಿದಾಗ ಬಿಡಿಸಲು ಬಂದ ಗುಣವತಿಯವರ ತಲೆಗೆ ಕಿಶೋರ್ ಮತ್ತು ಸತೀಶನು ಮರದ ದೊಣ್ಣೆಯಿಂದ ಹೊಡೆದು ಗಣೇಶನ ಎಡ ಭುಜಕ್ಕೆ ಹಾಗೂ ಅಶೋಕನಿಗೆ ಅವರೆಲ್ಲಾ ಸೇರಿ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದು ಈ ಬಗ್ಗೆ ಗಾಯಾಳುಗಳನ್ನು ಶಮೀರ್ ಎಂಬವರು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪಿರ್ಯಾದಿದಾರರನ್ನು ಗಣೇಶನನ್ನು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿ ಗುಣವತಿ ಮತ್ತು ಅಶೋಕರವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದಲ್ಲಿ ಅಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಆಪಾದಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬುದಾಗಿ ಸಂತೋಷ್ ಪ್ರಾಯ 25 ವರ್ಷ ತಂದೆ: ಸಿದ್ದು ಸಾಲಿಯಾನ್ ವಾಸ:- ಕೆ ಕೆ ದೇವಸ್ಥಾನದ ಬಳಿ, ಮದ್ಯ ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 115/13 PÀ®A: 143, 147, 148, 447, 504, 324 R/W 149 IPC ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಉತ್ತರ ಠಾಣೆ;
- ಪಿರ್ಯಾದಿದಾರರಾದ ಅಶೋಕ ಎಂಬವರು ಮಂಗಳೂರಿನ ಹಳೆ ಬಸ್ಸು ನಿಲ್ದಾಣದ ಹತ್ತಿರ ಇರುವ ಕಿಂಗ್ಸ್ ರಿಕ್ರಿಯೇಶನ್ ಕ್ಲಬ್ನ ಸುಪರ್ ವೈಸರ್ ಆಗಿದ್ದು, ಈ ದಿನ ದಿನಾಂಕ 25-04-2013 ರಂದು ಮಧ್ಯಾಹ್ನ ಸುಮಾರು 1.30 ಗಂಟೆಗೆ ಪಿರ್ಯಾದಿಗೆ ಪರಿಚಯವಿರುವ ಶೈಲು ಯಾನೆ ಶೈಲೇಶ್ ಎಂಬವನು ಕ್ಲಬ್ ನ ಒಳಗೆ ಬಂದು ಅಲ್ಲಿದ್ದ ಒಬ್ಬ ಗಿರಾಕಿಯಲ್ಲಿ ಪೈನಾನ್ಸ್ ವಿಷಯದಲ್ಲಿ ಮಾತಾಡುತ್ತಿದ್ದು ಅದಕ್ಕೆ ಪಿರ್ಯಾದಿಯು ಇಲ್ಲಿ ಪೈನಾನ್ಸ್ ವಿಷಯ ಮಾತಾಡಬೇಡಿ ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಅದಕ್ಕೆ ಆರೋಪಿಯು ನೀನು ಹೊರಗೆ ಬಾ ಅಲ್ಲಿ ನೋಡಿಕೊಳ್ಳುತ್ತೇನೆ ಹೇಳಿ, ಹೋಗಿದ್ದು ಮಧ್ಯಾಹ್ನ ಸುಮಾರು 2.15 ಗಂಟೆಗೆ ಪಿರ್ಯಾದಿಯು ಊಟ ಮಾಡಲೆಂದು ಕ್ಲಬ್ ನಿಂದ ಹೊರಗೆ ಹೊಟೇಲಿಗೆ ಹೋಗಲೆಂದು ಬಂದಾಗ ಶೈಲು ಯಾನೆ ಶೈಲೇಶ್ ಮತ್ತು ಏಳೆಂಟು ಜನರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೀನು ಕ್ಲಬ್ ನ ಒಳಗೆ ಬಾರಿ ಮಾತಾನಾಡುತ್ತಿಯ ಬೇವಸರ್ಿ, ಸೂಳೆ ಮಗ ಎಂಬುದಾಗಿ ಅವಾಚ್ಯ ಶಬ್ದದಿಂದ ಬೈದು, ಶೈಲೇಶನು ಕೈಯಿಂದ ಮುಖಕ್ಕೆ ಹೊಟ್ಟೆಗೆ ಗುದ್ದಿ ಆತನ ಜೊತೆಗಿದ್ದ ಇತರರು ಬೊಂಡದೊಟ್ಟೆಯಿಂದ ಪಿರ್ಯಾದಿಯ ಮುಖಕ್ಕೆ ,ಬೆನ್ನಿಗೆ, ಎದೆಯ ಭಾಗಕ್ಕೆ, ತಲೆಗೆ ಹೊಡೆದಾಗ ಪಿರ್ಯಾದಿ ಬೊಬ್ಬೆ ಹಾಕಿದ್ದು, ಇದನ್ನು ನೋಡಿದ ಪಿರ್ಯಾದಿಯ ಕ್ಲಬ್ನಲ್ಲಿದ್ದ ಕೆಲಸಗಾರರು ಹಾಗೂ ಸ್ನೇಹಿತರು ಸ್ಥಳಕ್ಕೆ ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದು, ಸ್ನೇಹಿತರು ಪಿರ್ಯಾದಿಯನ್ನು ಚಿಕಿತ್ಸೆ ಬಗ್ಗೆ ದಾಖಲು ಮಾಡಿದ್ದು ಎಂಬುದಾಗಿ ಅಶೋಕ ತಂದೆ: ಕೊಗ್ಗು ಬೆಲ್ಚಡ ವಾಸ: ಜಯನಗರ, ಉಪ್ಪಳ, ಕಾಸರಗೋಡ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 97/2013 ಕಲಂ 143,147,148,323,324,341, 504,506 ಖ/ತಿ 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ:
ಕಾವೂರು ಠಾಣೆ ;
- ಪಿರ್ಯಾದಿದಾರರ ಮಗಳು 17 ವರ್ಷ ಪ್ರಾಯದ ಕುಮಾರಿ ಕಾವ್ಯ ಎಂಬವರು ದನಾಂಕ 23-04-2013 ರಂದು ಬೆಳಿಗ್ಗೆ 10-15 ಗಂಟೆಯಿಂದ 10-30 ಗಂಟೆ ಮಧ್ಯೆ ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ಸುತ್ತಮುತ್ತಲಿನಲ್ಲಿ, ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗದೇ ಇದ್ದು, ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ ವೀರಯ್ಯ ಸ್ವಾಮಿ, ಪ್ರಾಯ 39 ವರ್ಷ. ವಾಸ: C/O ಜಯಮ್ಮ,, ಉರುಂದಾಡಿಗುಡ್ಡೆ, ಪಂಜಿಮೊಗರು, ಮಂಗಳೂರು
ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ಫಿಯರ್ಾದುದಾರರು ಕೋಡಿಕಲ್ ಪಲರ್್ ಎಂಬ ಬೋಟಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಇದೇ ಬೋಟಿನಲ್ಲಿ ಸುಮಾರು ಒಂದು ವಾರದ ಹಿಂದೆ ಇಳನ್ ಚೆಲಿಯನ್ ಎಂಬವರು ಕೆಲಸಕ್ಕೆ ಬಂದಿದ್ದು, ದಿನಾಂಕ 25-04-13 ರಂದು ಬೆಳಿಗ್ಗೆ ಅಮಲು ಪದಾರ್ಥ ಸೇವಿಸಿಕೊಂಡು, ಬೋಟ್ನಲ್ಲಿನ ಕ್ಯಾಬೀನ್ನ ಹಿಂದುಗಡೆ ಮರದ ದಂಡೆಯ ಮೇಲೆ ಮಲಗಿದ್ದ ಇಳನ್ ಚೆಲಿಯನ್ ರವರು ಕುಡಿತದ ಅಮಲಿನಲ್ಲಿ ಮಲಗಿದಲ್ಲಿಂದ ಕೆಳಗಡೆ ಇದ್ದ ಡಾಂಬರ್ ತಟ್ಟೆಗೆ ಹೊರಳಿ ಬಿದ್ದು, ಮುಖಕ್ಕೆ ಡಾಂಬರು ಮೆತ್ತಿಕೊಂಡವರನ್ನು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಡಪಡಿಸಿದ್ದು, ಈ ಬಗ್ಗೆ ಮುಂದಿನ ಕ್ರಮದ ಬಗ್ಗೆ ಕೋರಿ ನೀಡಿದ ದೂರಿನಂತೆ ಪಳನಿ ಸ್ವಾಮಿ, ಪ್ರಾಯ: 44 ವರ್ಷ, ತಂದೆ: ದಿ: ವೇಲು, ವಾಸ: ಸನ್ಸ್ವಿಟ್, ತೋಟ ಬೆಂಗ್ರೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 36/2013 ಕಲಂ 174 ಸಿ.ಆರ್.ಪಿ.ಸಿ ರಣತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಿಶೇಷ ಹಾಗೂ ಸ್ಶಳೀಯ ಕಾನೂನು:
ದಕ್ಷಿಣ ಠಾಣೆ;
- ದಿನಾಂಕ 25-04-2013 ರಂದು 10-00 ಗಂಟೆಗೆ ಫಿಯರ್ಾದುದಾರರಿಗೆ ಬಂದ ಖಚಿತ ಮಾಹಿತಿಯಂತೆ ತಮಿಳುನಾಡಿನ ಬೇರೆ ಬೇರೆ ಕಡೆಗಳಲ್ಲಿರುವ ಶ್ರೀಲಂಕಾ ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ತಮಿಳರಿಗೆ ಆಸ್ಟ್ರೇಲಿಯಾ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹೆಂಗಸರು, ಗಂಡಸರು ಮತ್ತು ಮಕ್ಕಳನ್ನು ಯಾವುದೇ ದಾಖಲಾತಿಗಳಿಲ್ಲದೇ ಅಕ್ರಮವಾಗಿ ಆಸ್ಟ್ರೇಲಿಯಾಕ್ಕೆ ಮಾನವ ಕಳ್ಳ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಫಿಯರ್ಾದುದಾರರ ತನ್ನ ಸಿಬ್ಬಂಧಿಯವರೊಂದಿಗೆ ಮಂಗಳೂರು ದಕ್ಷಿಣ ದಕ್ಕೆಗೆ ಹೋದಾಗ, ಮತ್ಸ್ಯಗಂಗ ಎಂಬ ಹೆಸರಿನ ಬೋಟಿನಲ್ಲಿ ಆರೋಪಿತರುಗಳಾದ ಡೊರಿಂಗ್ಟನ್, ತಿರುವಲ್ಲೂರು, ತಮಿಳುನಾಡು ಎಸ್.ಎಲ್.ಆರ್ ಕ್ಯಾಂಪ್ ನಿಕ್ಸನ್ ಡಾರ್ವಿನ್, ತಿರುವಲ್ಲೂರು, ತಮಿಳುನಾಡು ತವರಸ, ಕಣ್ಣನ್, ರಾಮನಾಥಪುರಂ ತಮಿಳುನಾಡು, ಕಾತರ್ಿಕೇಯನ್, ರಾಮನಾಥಪುರಂ ತಮಿಳುನಾಡು ಮಂಡಪಂ ಕ್ಯಾಂಪ್ ತಮಿಳುನಾಡಿನಲ್ಲಿರುವ ಶ್ರೀಲಂಕಾ ತಮಿಳು ನಿರಾಶ್ರಿತರಿಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗವನ್ನು ಕೊಡಿಸುತ್ತೇನೆಂದು ನಂಬಿಸಿ, ಅಲ್ಲಿಗೆ ಹೊಗಲು ಬೇಕಾದ ವೀಸಾ, ಪಾಸ್ಪೋಟರ್್, ಐಡಿ ಮೊದಲಾದ ದಾಖಲಾತಿಗಳನ್ನು ಮಾಡಿ ಕ್ರಮಬದ್ಧವಾಗಿ ಕರೆದಕೊಂಡು ಹೋಗುವುದಾಗಿ ನಂಬಿಸಿ, ಅವರಿಂದ ಹಣ ಪಡೆದು ಅಪರಾಧಿಕ ಒಳಸಂಚನ್ನು ನಡೆಸಿ ಶ್ರೀಲಂಕಾ ತಮಿಳು ನಿರಾಶ್ರಿತರುಗಳನ್ನು ಯಾವುದೇ ದಾಖಲಾತಿ ಇಲ್ಲದೇ ಬೋಟ್ ಮುಖಾಂತರ ಆಸ್ಟ್ರೇಲಿಯಾ ದೇಶಕ್ಕೆ ಅಕ್ರಮವಾಗಿ ಮಾನವ ಕಳ್ಳ ಸಾಗಾಟ ಮಾಡುವ ಉದ್ದೇಶದಿಂದ ಶ್ರೀಲಂಕಾ ತಮಿಳು ನಿರಾಶ್ರಿತರನ್ನು ಮಂಗಳೂರಿಗೆ ಕರೆತಂದಿದ್ದಲ್ಲದೇ, ಪಾಸ್ಪೋಟರ್್ ಕಾಯ್ದೆ ರೀತಿಯ ಅಪರಾಧವನ್ನು ಕೂಡಾ ಎಸಗಿ ಮೋಸ ಮಾಡಿರುವುದಾಗಿದೆ ಎಂಬುದಾಗಿ ಹೆಚ್.ಎನ್ ವೆಂಕಟೇಶ್ ಪ್ರಸನ್ನ, ಪೊಲೀಸ್ ನಿರೀಕ್ಷಕರು, ಸಿ.ಸಿ.ಬಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 121/2013 ಕಲಂ: 120(ಬಿ), 420 ಐಪಿಸಿ ಮತ್ತು ಕಲಂ: 14, 14(ಸಿ) ಫಾರಿನರ್ಸ್ ಕಾಯ್ದೆ ಮತ್ತು ಪ್ಯಾರಾ(5) ಫಾರಿನರ್ಸ್ ಆರ್ಡರ್ 1948 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment