ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 14-04-2013 ರಂದು ಸಮಯ ಬೆಳಿಗ್ಗೆ ಸುಮಾರು 08.15 ಗಂಟೆಗೆೆ ಪಿರ್ಯಾದುದಾರರಾದ ಜೆ. ವಿಶ್ವನಾಥ (63)ಗಂಡ: ಕೆ. ಸೋಮನಾಥ ವಾಸ- ರಕ್ಷಿತ್ ನಿಲಯ, ಕುಳಾಯಿ ಗ್ರಾಮ ಸಂಘದ ಹಿಂದುಗಡೆ, ಹೊನ್ನಕಟ್ಟೆ, ಕುಳಾಯಿ, ಮಂಗಳೂರು ರವರು ತನ್ನ ಅಣ್ಣನ ಮಗನಾದ ಧರ್ಮಪ್ರಕಾಶ್ ಜೊತೆ ಸ್ಕೂಟರ್ ನಂಬ್ರ ಏಂ-19 ಘ- 9212 ರಲ್ಲಿ ಸಹಸವಾರರಾಗಿದ್ದುಕೊಂಡು, ಧರ್ಮಪ್ರಕಾಶನು ಸವಾರರಾಗಿದ್ದುಕೊಂಡು ಕೊಡಿಯಾಲ್ಬೈಲ್ ಕಡೆಯಿಂದ ಕೆ.ಪಿ.ಟಿ. ಕಡೆಗೆ ಹೋಗುತ್ತಾ ಬಿಜೈ ಸರ್ಕಲ್ ಬಳಿ ತಲುಪುವಾಗ, ಕೆ.ಪಿ.ಟಿ. ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಕಡೆಗೆ ಸ್ಕೂಟರ್ ನಂಬ್ರ ಏಂ-19 ಖ - 8704 ನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಿಜೈ ಸರ್ಕಲ್ ಬಳಸದೆ ಸರ್ಕಲ್ನ ಒಳಬದಿಯಿಂದ ಏಕಾಏಕಿ ಚಲಾಯಿಸಿ ಪಿರ್ಯಾದುದಾರರ ಸ್ಕೂಟರ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಧರ್ಮಪ್ರಕಾಶ್ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಧರ್ಮಪ್ರಕಾಶ್ರವರ ಬಲ ಕೈಗೆ ಮೂಳೆಮುರಿತದ ಗಂಭೀರ ಸ್ವರೂಪದ ಗಾಯ, ಬಲ ಕೈಗೆ ಗುದ್ದಿದ ಗಾಯ ಉಂಟಾಗಿ ಡಾ|| ಅಂಬೇಡ್ಕರ್ ವೃತ್ತದ ಕೆ.ಎಮ್.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತದಿಂದ ಪಿರ್ಯಾದುದಾರರಿಗೆ ತರಚಿದ ಗಾಯವಾದ್ದರಿಂದ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಹಾಗೂ ಅರೋಪಿತರಿಗೂ ಕೂಡ ಸಾಮಾನ್ಯ ಸ್ವರೂಪದ ಗಾಯಗಳಾಗಿರುತ್ತವೆ ಎಂಬುದಾಗಿ ಜೆ. ವಿಶ್ವನಾಥ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 74/13 ಕಲಂ-279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪಣಂಬೂರು ಠಾಣೆ;
- ದಿನಾಂಕ: 14-04-13 ಸಂಜೆ 07-00 ಗಂಟೆ ಸುಮಾರಿಗೆ ಪಿರ್ಯಾದಿ ತನ್ನ ಬಾಬ್ತು ಕೆಎ19/ಎಮ್ಸಿ-8272 ಐಕಾನ್ ಕಾರಿನಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಎನ್ಹೆಚ್ 66 ರಲ್ಲಿ ಚಲಾಹಿಸಿಕೊಡು ಹೋಗುತ್ತಿರುವಾಗ, ಪಣಂಬೂರು ಜಂಕ್ಷನ್ ನಲ್ಲಿ ಇಂದಿನಿಂದ ಬಂದ ಟೆಂಪೋ ಟ್ರಾವೆಲ್ ಕೆಎ 02/ಎಬಿ-9182 ವನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಹಿಸಿಕೊಂಡು ಬಂದು ಪಿರ್ಯಾದಿ ಕಾರಿನ ಬಲ ಬದಿಡಿಕ್ಕಿ ಉಂಟು ಮಾಡಿ ಅಪಘಾತಗೋಳಿಸಿದ ಬಳಿಕ ವಾಹನವನ್ನು ನಿಲ್ಲಿಸದೆ ಸರ್ಕಲ್ನಲ್ಲಿ ಮಂಗಳೂರು ಕಡೆಗೆ ಚಲಾಹಿಸಿ ಪರಾರಿಯಾಗಿರುವುದಾಗಿಯು, ಅಫಘಾತದಿಂದ ಪಿರ್ಯಾದಿ ಕಾರಿಗೆ 50,000 ರೂ ಜಖಂ ಉಂಟಾಗಿರುವುದಾಗಿ ಪಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಇಕ್ಬಾಲ್ ಕೆ.ಯು (37) 37ಙಇಂಖಖ ತಂದೆಃ ಉಮರಬ್ಬ.ಕೆಶೌಕತ್ ಮಂಜಿಲ್ ಕೆಂಚನಕೆರೆ ಪೋಸ್ಟ್ ಮುಲ್ಕಿ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 61/2013 279 ಕಅ ಖ/ಘ 134 (ಂ&ಃ) ಒಗಿ ಂಅಖಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment