ಅಪಘಾತ
ಪ್ರಕರಣ
ಮೂಡಬಿದ್ರೆ
ಠಾಣೆ
- ದಿನಾಂಕ :08-04-2013 ರಂದು 07.45 ಗಂಟೆಗೆ ಪಿರ್ಯಾದಿದಾರರು ಪಡುಮಾರ್ನಾಡ್ ಗ್ರಾಮದ ಮುರಗೋಲಿ ಎಂಬಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಮನೆ ಕಡೆಗೆ ಹೋಗುತ್ತಿರುವ ಸಮಯ KA 19 0251 ನೇ ಅಕ್ಟಿವ್ ಹೊಂಡಾದ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗೆ ಬಿದ್ದು, ಅವರ ಬಲಕಾಲಿನ ಮಣಿಗಂಟಿಗೆ ಎಡಕಾಲಿನ ಮಣಿಗಂಟಿಗೆ ಮತ್ತು ಎಡಕೋಲು ಕಾಲಿಗೆ ತರಚಿದ ರಕ್ತಗಾಯವಾಗಿದೆ ಎಂಬುದಾಗಿ ಆಶಾ ರೋಡ್ರಿಗಸ್ (42), ಗಂಡ : ಆಗಸ್ಟಿನ್ ರೋಡ್ರಿಗಸ್, ವಾಸ : ಮುರಗೋಳ್, ಪಡುಮಾರ್ನಾಡು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 72/2013 ಕಲಂ : 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
ದಕ್ಷಿಣ
ಠಾಣೆ
- ದಿನಾಂಕ 08-04-2013 ರಂದು ಫಿಯರ್ಾಧಿದಾರರಾದ ಸ್ಟೀಫನ್ ರಾಜೆಶ್ ಬಂಗೇರಾರವರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ತನ್ನ ಭಾವಾ ಓಸ್ಮಾಂಡ್ ರವರು ಸಂಜೆ 4-30 ಗಂಟೆಗೆ ಫೋನ್ ಮಾಡಿ ಫಿರ್ಯಾದುದಾರರ ತಂದೆ ಗಾಬ್ರಿಯಲ್ ರವರು ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವ ವಿಷಯವನ್ನು ತಿಳಿಸಿರುತ್ತಾರೆ. ಗಾಬ್ರಿಯಲ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು, ಅಸ್ವಸ್ಥದಲ್ಲಿ ಇದ್ದರು. ಈ ಬಗ್ಗೆ ಅವರಿಗೆ ಚಿಕಿತ್ಸೆ ನೀಡಿದರೂ ಸರಿಯಾಗಿ ಚೇತರಿಸದೇ ಇದ್ದುದರಿಂದ ಮನೆಯಲ್ಲಿ ತೆವಳಿಕೊಂಡು ಆಚೆ ಈಚೆ ಹೋಗುತ್ತಿದ್ದರು. ಇದರಿಂದ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದು ಎಂಬುದಾಗಿ ಸ್ಟೀಫನ್ ರಾಜೇಶ್ ಬಂಗೇರಾ, ಪ್ರಾಯ: 44 ವರ್ಷ, ತಂದೆ: ಗಾಬ್ರಿಯಲ್ ಬಂಗೇರಾ, ವಾಸ: ಶಾಂತಾಳ್ವ ಕಂಪೌಂಡ್, ಮಂಕಿಸ್ಟ್ಯಾಂಡ್, ಮಂಗಳಾದೇವಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿನ ಠಾಣೆ ಯು.ಡಿ.ಆರ್ ನಂ: 33/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉಳ್ಳಾಲ
ಠಾಣೆ
- ದಿನಾಂಕ 08.04.2013 ರಂದು ಪಿರ್ಯಾದಿದಾರರು ಜಯನ್ ಬಂಗೇರ ಎಂಬವರ ಮೀನುಗರಿಕ ಬೋಟಿನಲ್ಲಿ ಕೆಲಸ ಮಡಿಕೊಂಡ್ಡಿದ್ದು ಈ ದಿನ ಜಯನ್ ಬಂಗೇರ, ರಜೇಶ್ ಬಂಗೇರ ಮತ್ತು ನವೀನ್ ಕುಮರ್ ಎಂಬವರ ಜೊತೆಯಲ್ಲಿ ಮೀನು ಹಿಡಿಯಲು ಹೋಗಿ ವಪಸ್ಸು ಅದೇ ಬೋಟಿನಲ್ಲಿ ಮ. 14.30 ಗಂಟೆಗೆ ದಕ್ಕೆಯಲ್ಲಿ ಮೀನು ಕೊಟ್ಟು ವಪಸ್ಸು ಕೋಟೆಪುರ ಅಳಿವೆ ಬಾಗಿಲು ಬಳಿ ಬಂದು ವಡಿಕೆಯಂತೆ ಮೀನು ಗರಿಕೆ ಮಾಡಿದ ಬಳಿಕಬೋಟಿಗೆ ಅಂಟಿಕೊಂಡಿದ್ದ ಕೆಸರನ್ನು ತೊಳೆಯುತ್ತಿದ್ದ ಸಮಯ ನವೀನ್ ಕುಮರ್ @ ಶ್ರೀಕುಮರ್ ಬೋಟಿಗೆ ಅಳವಡಿಸಿದ ಹ್ಯಡ್ ಪಂಪ್ನಿಂದ ನೀರು ತೆಗೆಯುತ್ತಿದ್ದು ಪಂಪು ಮಾಡುತ್ತಿದ್ದ ಸಮಯ ಸದ್ರಿ ನವೀನ್ ಕುಮರ್ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದವರ್ನು ಎತ್ತಿ ನೋಡಿ ಆರೈಕೆ ಮಡಿ ಆತನ ಉಸಿರಾಟದಲಲಿ ಏರುಪೇರು ಆಗುವುದನ್ನು ಗಮ,ನಿಸಿ ಚಿಕಿತ್ಸೆ ಬಗ್ಗೆ ಅಥೇನಾ ಅಸ್ಪತ್ರೆ ಮಂಗಳೂರು ಇಲ್ಲಿ ದಾಖಲಿಸಿದ್ದು ಸದ್ರಿ ವೈದ್ಯಾಧಿಕಾರಿಯವರು ಹೃದಾಯಘಾತದಿಂದ ಮೃತ ಪಟ್ಟಿರುವುದಾಗಿ ತಿಳಿಸಿರುವುದು ಎಂಬುದಾಗಿ ಶಿವಾನ್ ವಾಸ: ಮೋಗವೀರ ಪಟ್ನ ಉಳ್ಳಾಲ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಳ್ಳಾಲ ಠಾಣಾ ಯು.ಡಿ.ಅರ್ ನಂಬ್ರ 9/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment