ಮನೆ ಕಳವು ಪ್ರಕರಣ:
ಮಂ.ಪೂರ್ವ ಠಾಣೆ;
- ಪಿರ್ಯಾದಿದಾರರ ಅಕ್ಕ ಶಭಾನ ಅಯ್ಯೂಬ್ರವರು ಮಂಗಳೂರು ನಗರದ ಪಂಪುವೆಲ್ ಬಳಿಯಲ್ಲಿರುವ ವಿಶ್ವಾಸ್ ವೀವ್ ಅಪಾಟರ್್ಮೆಂಟ್ನ ಪ್ಲಾಟ್ ನಂ. 301ರಲ್ಲಿ ವಾಸ್ತವ್ಯವಿದ್ದು ಅವರು ಮನೆಗೆ ಬೀಗ ಹಾಕಿ ಸಂಸಾರ ಸಹಿತ 17-04-2013ರಂದು ಟೂರ್ ಬಗ್ಗೆ ಹೋಗಿದ್ದು ಹೋಗುವ ಸಮಯ ಮನೆಯ ಕಡೆಗೆ ನಿಗಾ ಇರಿಸುವಂತೆ ಪಿರ್ಯಾದಿದಾರರಲ್ಲಿ ತಿಳಿಸಿ ಹೋಗಿರುತ್ತಾರೆ. ಎಂದಿನಂತೆ ಪಿರ್ಯಾದಿದಾರರು ಅಕ್ಕನ ಪ್ಲಾಟ್ಗೆ ನಿನ್ನೆ ದಿನ ದಿನಾಂಕ 22-04-2013ರಂದು ಸಂಜೆ ಹೋಗಿ ವಾಪಾಸು 18-30 ಗಂಟೆಗೆ ಬೀಗ ಹಾಕಿ ಹೋಗಿರುತ್ತಾರೆ. ಈ ದಿನ ದಿನಾಂಕ 23-04-2013 ರಂದು 12-30 ಗಂಟೆಗೆ ಟೂರ್ಗೆ ಹೋಗಿದ್ದ ಪಿರ್ಯಾದಿದಾರರ ಅಕ್ಕ ಫೋನ್ ಮಾಡಿ ಮನೆಯ ಬಾಗಿಲು ತೆರೆದಿರುವ ವಿಚಾರ ನೆರೆಮನೆಯ ಆಯುಷಾ ಎಂಬವಳು ತಿಳಿಸಿದ್ದು ಅದರಂತೆ ನೀನು ಹೋಗಿ ನಮ್ಮ ಪ್ಲಾಟ್ ಪರಿಶೀಲಿಸಿ ನೋಡುವಂತೆ ತಿಳಿಸಿದ ಪ್ರಕಾರ ಪಿರ್ಯಾದಿದಾರರು ಪಂಪುವೆಲ್ ಬಳಿಯಲ್ಲಿರುವ ಅಕ್ಕನ ಬಾಬ್ತು ವಿಶ್ವಾಸ್ ವೀವ್ ಅಪಾಟರ್್ಮೆಂಟ್ನ ಪ್ಲಾಟ್ ನಂ. 301ಕ್ಕೆ ಹೋಗಿ ಪರಿಶೀಲಿಸಿ ನೋಡಿದಾಗ ಪ್ಲಾಟ್ನ ಬಾಗಿಲು ತೆರೆದುಕೊಂಡಿದ್ದು ಒಳಗಡೆ ಹೋಗಿ ನೋಡಿದಾಗ ಸೊತ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದನ್ನು ನೋಡಿ ಪಿರ್ಯಾದಿದಾರರು ಟೂರ್ಗೆ ಹೋಗಿದ್ದ ಅಕ್ಕನಿಗೆ ಪೋನ್ ಮಾಡಿ ವಿಚಾರ ತಿಳಿದಾಗ ಮನೆಯೊಳಗಡೆ ಗೆಸ್ಟ್ ಬೆಡ್ ರೂಮ್ನಲ್ಲಿ 45 ಪವನ್ ಚಿನ್ನಾಭರಣ ಹಾಗೂ ಮಾಸ್ಟರ್ ಬೆಡ್ ರೂಮ್ನಲ್ಲಿ ನಗದು ಹಣ ಮೂರು ಲಕ್ಷ ಇರಿಸಿರುವ ಬಗ್ಗೆ ತಿಳಿಸಿದ್ದು ಅವುಗಳನ್ನು ಚೆಕ್ ಮಾಡುವಂತೆ ಪೋನ್ನಲ್ಲಿ ತಿಳಿಸಿದಂತೆ ಪಿರ್ಯಾದಿದಾರರು ಚೆಕ್ ಮಾಡಿ ನೋಡಿದಾಗ ಅವುಗಳು ಇಲ್ಲದೇ ಇದ್ದು ಈ ಬಗ್ಗೆ ಅಕ್ಕನಲ್ಲಿ ಪೋನ್ನಲ್ಲಿ ಚಚರ್ಿಸಿ ಈ ದೂರು ನೀಡಿದ್ದು ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಈ ಕಳ್ಳತನ ಮಾಡಿರುತ್ತಾರೆ. ಎಂಬುದಾಗಿ .ಸಫಿನಾ ಸಬಾಹ (29) ಗಂಡ: ಸಬಾಹ ಅನಪ್ಪಡಿಕಳ್, ವಾಸ: ಫ್ಲಾಟ್.ನಂ.ಜಿ-2, ಗೋಲ್ಡನ್ ಕ್ಯಾಸ್ಟಲ್ ಅಪಾಟರ್್ಮೆಂಟ್, ಕಾಸಾ ಗ್ರಾಂಡಾದ ಬಳಿ, ಅತ್ತಾವರ, ಮಂಗಳೂರು ರವರು ನಿಡಿದ ದೂರಿನಂತೆ ಮಂ.ಪೂರ್ವ ಠಾಣೆ ಅಪರಾದ ಕ್ರಮಾಂಕ 59/2013 ಕಲಂ: 454,457,380 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ;
- ದಿನಾಂಕ: 21-04-2013 ರಂದು ಸಮಯ ಸುಮಾರು 16.00 ಗಂಟೆಗೆೆ ಪಿರ್ಯಾದುದಾರರು ಆಟೋರಿಕ್ಷಾ ನಂಬ್ರ ಏಂ-19-ಂ-7738 ರಲ್ಲಿ ಪ್ರಯಾಣಿಕರಾಗಿ ಶಿವಭಾಗ್ 15ನೇ ಕ್ರಾಸ್ ಕಡೆಯಿಂದ ಪಂಪ್ವೆಲ್ ಕಡೆಗೆ ಪ್ರಯಾಣಿಸುತ್ತಾ ರಾ. ಹೆದ್ದಾರಿ 66ರಲ್ಲಿನ ಕೋರ್ದಬ್ಬು ದೈವಸ್ಥಾನ ಕಾಸ್ ಬಳಿ ತಲುಪುವಾಗ ಪಂಪ್ವೆಲ್ ಕಡೆಯಿಂದ ಕಾರು ನಂಬ್ರ ಏಂ-19-ಒಃ-4044 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಭಾಗದಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಪ್ರಯಾಣಿಸುತ್ತಿದ್ದ ಅಟೋರಿಕ್ಷಾದ ಎಡಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಿಕ್ಷಾದಲ್ಲಿ ಮುಗ್ಗರಿಸಿ ಬಿದ್ದು ಕುತ್ತಿಗೆಗೆ ಗುದ್ದಿ ಗಾಯವಾಗಿರುತ್ತದೆ. ಅಪಘಾತ ಸಂಭವಿಸಿದ ಬಳಿಕ ಅರೋಪಿತರು ಅಪಘಾತ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿರುತ್ತಾರೆ ಎಂಬುದಾಗಿ ಸೌಮ್ಯ ವಿನೋದ್ (28) ಗಂಡ: ವಿನೋದ್, ವಾಸ: ಕುಮೇರು ಹೌಸ್, ಕಾಂತನಬೆಟ್ಟು, ಕಂಕನಾಡಿ ಅಂಚೆ ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 81/13 ಕಲಂ- 279, 337 ಐಪಿಸಿ & 134 (ಎ)(ಬಿ) ಮೋ.ವಾ. ಕಾಯ್ದೆ ರಮತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮನುಷ್ಯ ಕಾಣೆ:
ಬಕರ್ೆ ಠಾಣೆ;
- ದಿನಾಂಕ 07-04-2013 ರಂದು ಬೆಳಿಗ್ಗೆ 11-30ಗಂಟೆಗೆ ಪಿರ್ಯಾಧಿದಾರರ ಗಂಡ ಜಯರಾಜ್(39)ರವರು ಈ ಹಿಂದೆ ರಿಕ್ಷಾ ಚಾಲಕರಾಗಿದ್ದು ಎರಡು ತಿಂಗಳ ಹಿಂದೆ ಇನ್ನು ರಿಕ್ಷಾ ಓಡಿಸುವುದಿಲ್ಲವೆಂದು ಹಾಗೂ ಬಿಸ್ನೆಸ್ ಮಾಡುತ್ತೇನೆಂದು ರಿಕ್ಷಾ ಮಾರಿ ಬಿಸ್ನೆಸ್ ಮಾಡುವರೇ ಹೊನ್ನಾವರಕ್ಕೆ ಹೋಗಿದ್ದು ನಂತರ ವಾಪಾಸು ಮನೆಗೆ ಬಂದವರು ಬಿಸ್ನೆಸ್ ಮಾಡುವರೇ ಪಿರ್ಯಾದಿದಾರರಿಂದ ಸುಮಾರು 9ಪವನ್ ಚಿನ್ನ ಹಾಗೂ 2ಲಕ್ಷ ರೂಪಾಯಿ ನಗದನ್ನು ಪಡೆದು ಮನೆಯಿಂದ ಹೊರಟವರು ಕೆಲಸಕ್ಕೂ ಹೋಗದೇ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಸುಜಾತಾ, ಗಂಡಳ ಜಯರಾಜ್, ವಾಸ: ಶಾಂತಿ ನಿಲಯ, ವಿನಾಯಕ ಸಾ ಮಿಲ್, ಬೋಳೂರು ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 63/2013 ಕಲಂ. ಮನುಷ್ಯ ಕಾಣೆ ರಮತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment