ಹಲ್ಲೆ ಪ್ರಕರಣ
ಕಾವೂರ್ ಪೊಲೀಸ್ ಠಾಣೆ
- ಆರೋಪಿಗಳಾದ ಫಿರ್ಯಾದಿದಾರರ ಮಾ, ಅತ್ತೆ, ನಾದಿನಿಯವರು ಬೆಂಗಳೂರಿನಿಂದ ದಿನಾಂಕ: 30-03-2013 ರಂದು ಬಂದು ಫಿರ್ಯಾದಿದಾರರಾದ ಶ್ರೀಮತಿ ಮೆಲಿಟಾ, ಗಂಡ: ಮನೋಜ್ ಅಂತೋನಿ ಸಂಸ್ಥಿಕ್, ವಾಸ: ದೇರೆ ಬೈಲ್ ಚಚರ್್ ಬಳಿ, ದೇರೆಬೈಲ್ ಗ್ರಾಮ, ಮಂಗಳೂರು ತಾಲೂಕು ರವರ ಮನೆಯಲ್ಲಿದ್ದು, ಅವರೊಳಗೆ ಫಿರ್ಯಾದಿದಾರರು ಈ ಮೊದಲು ಆರೋಪಿತರ ವಿರುದ್ಧ ನೀಡಿದ ವರದಕ್ಷಿಣೆ ಹಿಂಸೆ ಪ್ರಕರಣದ ಬಗ್ಗೆ ಮಾತಿಗೆ ಮಾತಾಗುತಿದ್ದು, ದಿನಾಂಕ: 02-04-2013 ರಂದು ಬೆಳಿಗ್ಗೆ 06-00 ಗಂಟೆಗೆ ಪಿರ್ಯಾದಿದಾರರು ಟಾಯ್ಲೆಟ್ಗೆ ಹೋಗುವಾಗ, ಅರೋಪಿಗಳು ಫಿರ್ಯಾದಿದಾರರನ್ನು ತಡೆದು ನಿಲ್ಲಿಸ, ಅವಾಚ್ಯವಾಗಿ ಬೈದು, ನೀನು ನಮ್ಮ ಮೇಲೆ ಸುಳ್ಳು ಕೇಸು ಕೊಟ್ಟಿದ್ದಿ, ಮನೆಯಿಂದ ಹೋಗು ಎಂದು ದೂಡಿ ಹಾಕಿದ್ದಲ್ಲದೇ , ತಡೆಯಲು ಬಂದ ಫಿರ್ಯಾದಿದಾರರ ತಾಯಿಯವರನ್ನು ದೂಡಿ ಹಾಕಿರುವುದಾಗಿದೆ. ಈ ಬಗ್ಗೆ ಗಾಯಾಳುಗಳು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಶ್ರೀಮತಿ ಮೆಲಿಟಾ ರವರು ನೀಡಿದ ದೂರಿನಂತೆ ಕಾವೂರ್ ಪೊಲೀಸ್ ಠಾಣಾ ಅ.ಕ್ರ: 13 ಕಲಂ: 341, 323, 504 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ
- ದಿನಾಂಕ : 29.03.2013 ರಂದು ರಾತ್ರಿ 8:30 ಗಂಟೆಗೆ ಆರೋಪಿಗಳಾದ ಸೈಫ್, ರಫೀಕ್, ನಜೀರ್, ತೌಸೀನ್, ಜುನೈದ್, ಮತತು ಕರೀಂರವರು ಪೂರ್ವ ದ್ವೇಷದಿಂದ ತಕ್ಷೀರು ಮಾಡುವ ಸಮಾನ ಉದ್ದೇಶ ಇಟ್ಟುಕೊಂಡು ಮಂಗಳೂರು ತಾಲೂಕು ಮಲ್ಲೂರು ಗ್ರಾಮದ ಮಲ್ಲೂರು ಎಂಬಲ್ಲಿ ಅಕ್ರಮ ಕೂಟ ಸೇರಿ ನಡೆದುಕೊಂಡು ಹೋಗುತ್ತಿದ್ದ ಪಿಯರ್ಾದಿ ಆಸೀಪ್ ಎಂಬಾತನನ್ನು ತಡೆದು ನಿಲ್ಲಿಸಿ ಈ ಪೈಕಿ ಆರೋಪಿ ಸೈಫ್ ಎಂಬಾತನು ಮರದ ಸೊಂಟೆಯಿಂದ ಪಿಯರ್ಾದಿಯ ತಲೆಗೆ ಹೊಡೆದಾಗ ಉಳಿದ ಆರೋಪಿಗಳು ಕೈಗಳಿಂದ ಹೊಡೆದು ಕಾಲುಗಳಿಂದ ತುಳಿದು ಪಿಯರ್ಾದಿಯ ತಲೆಗೆ ರಕ್ತಗಾಯ ಹಾಗೂ ಗುದ್ದಿದ ಗಾಯ ಮಾಡಿದ್ದಲ್ಲದೆ ತಪ್ಪಿಸಿಕೊಂಡು ಓಡಿ ಹೋದ ಪಿಯರ್ಾದಿಗೆ ಈ ದಿನ ಬದುಕಿದೆ ಮಗನೇ ನಾಳೆಯಾದರೂ ನಿನ್ನನ್ನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದು, ಗಾಯಗೊಂಡ ಪಿಯರ್ಾದಿ ತುಂಬೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಆಸೀಪ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ. 121/2013 ಕಲಂ 143, 147, 148, 341, 323, 506, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಬಜಪೆ ಪೊಲೀಸ್ ಠಾಣೆ
- ದಿನಾಂಕ 01/04/2013 ರಂದು ಪಿಯರ್ಾದಿದಾರರಾದ ಧನಂಜಯ 29 ವರ್ಷ ತಂದೆ: ಸದಾನಂದ, ವಾಸ: ಮಾತಾಮೃತ ನಿಲಯ, ಮಿಜಾರು ಅಂಚೆ, ಪುತ್ತಿಗೆ ಗ್ರಾಮ, ಮೂಡಬಿದ್ರೆ, ಮಂಗಳೂರು ತಾಲೂಕು ರವರು ಮನೆಗೆ ಪೂಜಾ ಕಾರ್ಯಕ್ರಮಕ್ಕೆ ಬಂದ ಅವರ ಸ್ನೇಹಿತರಾದ ಲತೀಶ್ ಮತ್ತು ಅಶೋಕ್ ಕುಮಾರ್ ರವರು ಪೂಜೆ ಮುಗಿಸಿ ಅವರ ಮೋ. ಸೈಕಲ್ ನಂ. ಏಂ 19 ಗ 4092 ರಲ್ಲಿ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಹೊರಟು ಬರುತ್ತಾ ಮೋ. ಸೈಕಲನ್ನು ಅಶೋಕ್ ರವರು ಚಲಾಯಿಸಿಕೊಂಡು 14.30 ಗಂಟೆಗೆ ಮಂಗಳೂರು ತಾಲೂಕು ಬಡುಗುಳಿಪಾಡಿ ಗ್ರಾಮದ ಸೂರಲ್ಪಾಡಿ ಮಸೀದಿಯ ಎದುರು ರಾ. ಹೆದ್ದಾರಿಯಲ್ಲಿ ತಲುಪುವಾಗ ಹಿಂದಿನಿಂದ ಬಂದ 407 ಟೆಂಪೋ ನಂಬ್ರ ಏಂ 19 6988 ನೇದ್ದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮೇಲಿನ ಮೋ. ಸೈಕಲನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಮೋ. ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋ. ಸೈಕಲ್ ಸವಾರ ಅಶೋಕ್ ಕುಮಾರ್ ಮತ್ತು ಸಹ ಸವಾರ ಲತೀಶ್ ಎಂಬವರು ರಸ್ತೆಗೆ ಬಿದ್ದು, ತೀವೃ ರೀತಿಯಲ್ಲಿ ಗಾಯಗೊಂಡಿರುತ್ತಾರೆ ಎಂಬುದಾಗಿ ಧನಂಜಯ ರವರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾ ಅ.ಕ್ರ. 108/2013 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸುಳಿಗೆ ಪ್ರಕರಣ
ಉಳ್ಳಾಲ ಪೊಲೀಸ್ ಠಾಣೆ
- ದಿನಾಂಕ 02-04-2013 ರಂದು ಮ. 1.15 ಗಂಟೆಗೆ ಪಿರ್ಯಾದಿದಾರರಾದ ಲಿಲ್ಲಿ. ಎ ರವರು ತಾನು ಕೆಲಸ ಮಾಡುತಿದ್ದ ಶಾಲೆಯಿಂದ ಮನೆಗೆ ಹೋಗುವರೇ ಮುನ್ನೂರು ಗ್ರಾಮದ ರಾಣಿಪುರ ಪೀಟರ್ ಅಫೋಸ್ ಎಂಬವರ ಅಂಗಡಿಯ ಬಳಿ ಬಂದು ಬಸ್ಸಿಗಾಗಿ ಕಾಯುತ್ತಿದ್ದಾಗ ಅ ಸಮಯ ಇಬ್ಬರು ಯುವಕರು ಮೋಟಾರು ಸೈಕಲಿನಲ್ಲಿ ಅಂಬ್ಲಮೊಗರು ಕಡೆಯಿಂದ ಬಂದವರು ಪೀಟರ್ ಅಪೋಸ್ ರವರ ಅಂಗಡಿಯ ಬಳಿ ಬೈಕ್ ನಿಲ್ಲಿಸಿ ಅದರಿಂದ ಇಬ್ಬರು ಯುವಕರು ಇಳಿದು ಪೀಟರ್ ಅಪೋಸ್ ರವರ ಅಂಗಡಿಗೆ ಹೋಗಿ ಆ ಪೈಕಿ ಒಬ್ಬನು ತನ್ನ ಮೊಬೈಲ್ ಪೋನ್ನಲ್ಲಿ ಮಾತಾಡುತ್ತಿದ್ದು ಬಳಿಕ ಆ ಇಬ್ಬರು ಯುವಕರು ಪಿರ್ಯಾದಿಯ ಸಮೀಪಕ್ಕೆ ಬಂದಾಗ ಪಿರ್ಯಾದಿಗೆ ಮನೆಯಿಂದ ಮೊಬೈಲ್ ಪೋನ್ಗೆ ಕರೆ ಬಂದಿದ್ದು ಪಿರ್ಯಾದಿಯು ತನ್ನ ಬ್ಯಾಗ್ನಲ್ಲಿ ಇಟ್ಟಿದ್ದ ಮೊಬೈಲ್ ಪೋನನ್ನು ತೆಗೆಯುವ ಸಮಯ ಆ ಇಬ್ಬರು ಯುವಕರ ಪೈಕಿ ಒಬ್ಬಾತನು ಪಿರ್ಯಾದಿಯ ಹಿಂದುಗಡೆಯಿಂದ ಕುತ್ತಿಗೆಗೆ ಕೈ ಹಾಕಿ ಪಿರ್ಯಾದಿಯು ಧರಿಸಿದ್ದ ಸುಮಾರು ಒಂದು ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಎಳೆದುಕೊಂಡು ಅವರು ಬಂದಿರುವ ಮೋಟಾರು ಸೈಕಲನ್ನು ಅಲ್ಲಿಯೇ ಬಿಟ್ಟು ಓಡಿ ಹೋಗುವಾಗ ಪಿರ್ಯಾದಿಯು ಜೋರಾಗಿ ಬೊಬ್ಬೆ ಹಾಕುತ್ತಾ ಅವರನ್ನು ಬೆನ್ನಟ್ಟಿದಾಗ ಆ ಇಬ್ಬರು ಯುವಕರು ಓಡಿಕೊಂಡು ಅಂಬ್ಲಮೊಗರುವಿನಿಂದ ಕಲ್ಲಾಪು ಕಡೆಗೆ ಹೋಗುವ ರಸ್ತೆಯಲ್ಲಿ ಓಡಿ ಪರಾರಿಯಾಗಿರುತ್ತಾರೆ. ಪಿರ್ಯಾದಿಯ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಹೋದ ಯುವಕರಿಬ್ಬರು ಅಂದಾಜು ಸುಮಾರು 23 ರಿಂದ 25 ವರ್ಷ ಪ್ರಾಯದವರಾಗಿದ್ದು, ಪ್ಯಾಂಟ್ ಶಟರ್್ ಧರಿಸಿದ್ದು, ಇಬ್ಬರೂ ಸಪೂರ ಶರೀರದವರಾಗಿರುತ್ತಾರೆ. ಕರಿಮಣಿ ಸರದ ಅಂದಾಜು ಮೌಲ್ಯ ರೂಪಾಯಿ 25,000/- ಆಗಬಹುದು. ಪಿರ್ಯಾದಿಯ ಚಿನ್ನದ ಕರಿಮಣಿ ಸರ ಎಳೆದುಕೊಂಡು ಹೋದ ಆರೋಪಿಗಳು ಉಪಯೋಗಿಸಿ ಬಿಟ್ಟು ಹೋದ ಮೋಟಾರು ಸೈಕಲಿನ ನಂಬ್ರ ಕೆಎ-19-ಆರ್-8415 ಆಗಿರುತ್ತದೆ ಎಂಬುದಾಗಿ ಶ್ರೀಮತಿ. ಲಿಲ್ಲಿ. ಎ ಪ್ರಾಯ 44 ವರ್ಷಗಂಡ. ಪಿಲಿಫ್ ಡಿ ಸೋಜ ವಾಸ. ಅಡು ಹೌಸ್, ಅಂಬ್ಲಮೊಗರು, ಅಂಬ್ಲಮೊಗರು ಗ್ರಾಮ ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸು ಠಾಣಾ ಅ.ಕ್ರ. 137/2013 ಕಲಂ 392 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ಮಂಗಳೂರು ಗ್ರಾಮಾಂತರ ಠಾಣೆ
- ಪಿಯರ್ಾದಿದಾರರಾದ ನೀಲ್ ರೋಡ್ರಿಗಸ್ (19) ತಂದೆ: ವಲೇರಿಯನ್ ರೋಡ್ರಿಗಸ್, ಚಚರ್ಿನ ಹಿಂಬದಿ ಮನೆ. ಜಯಶ್ರೀ ಗೇಟ್, ಕುಲಶೇಕರ, ಮಂಗಳೂರು ರವರ ತಂದೆ ವಲೇರಿಯನ್ ರೋಡ್ರಿಗಸ್ ಎಂಬವರು ಕಾರು ಚಾಲಕರಾಗಿದ್ದು ಇತ್ತಿಚೆಗೆಾವರು ಚಲಾಯಿಸುತ್ತಿದ್ದ ಕಾರು ಅಪಘಾತದಿಂದ ಓರ್ವ ಬಾಲಕಿ ಮೃತಪಟ್ಟಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ದಿನಾಂಕ 01.04.2013 ರಂದು ರಾತ್ರಿ ಸಮಯ ತಮ್ಮ ಮನೆ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ್ಡಿದಾಗಿರುತ್ತದೆ ಎಂಬುದಾಗಿ ನೀಲ್ ರೋಡ್ರಿಗಸ್ (19) ತಂದೆ: ವಲೇರಿಯನ್ ರೋಡ್ರಿಗಸ್, ಚಚರ್ಿನ ಹಿಂಬದಿ ಮನೆ. ಜಯಶ್ರೀ ಗೇಟ್, ಕುಲಶೇಕರ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಯುಡಿಆರ್ ನಂಬ್ರ 21 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment