ಕಳವು ಪ್ರಕರಣ:
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ 13/14-04-2013 ರಂದು ರಾತ್ರಿ 1-00 ಗಂಟೆ ಸಮಯಕ್ಕೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿಯರ್ಾದುದಾರರ ಕೆಲಸದವರು ಮಲಗುವ ಜೋಪಡಿಯ ಒಳಗೆ ಹೋಗಿ ಅಲ್ಲಿ ಮಲಗಿದ್ದ ಗೋಪಾಲ್ ಎಂಬವನ ದಿಂಬಿನ ಕೆಳಭಾಗದಲ್ಲಿ ಇರಿಸಿದ್ದ 18,000/- ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಅವರನ್ನು ಪಿಯರ್ಾದಿದಾರರ ಕೆಲಸದವರು ಹಿಡಿಯಲು ಪಯತ್ನ ಪಟ್ಟರೂ ಸದ್ರಿ ಆರೋಪಿಗಳು ಓಡಿ ಪರಾರಿಯಾಗಿರುವುದಾಗಿದೆ. ಹಾಗೆ ಓಡುವಾಗ ಆರೋಪಿಗಳಲ್ಲಿ ಇದ್ದ ನೋಕಿಯಾ ಎನ್72 ಮಾದರಿಯ ಮೊಬೈಲ್ ಸ್ಥಳದ ಸಮೀಪ ಬಿದ್ದು ಹೋದದನ್ನು ಪಿಯರ್ಾದಿದಾರರು ತೆಗೆದಿರಿಸಿ ಈ ದಿನ ಠಾಣೆಗೆ ತಂದು ಹಾಜರು ಪಡಿಸಿಕೊಟ್ಟಿರುವುದಾಗಿದೆ ಎಂಬುದಾಗಿ ಜೆ ಮಹಮ್ಮದ್ ತಂದೆ ಹುಸೇನಬ್ಬ, ಜೈನರ ಪೇಟೆ ಪಾಣೆ ಮಂಗಳೂರು ಬಂಟ್ವಾಳ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 143/2013 ಕಲಂ 323 324 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣ:ೆ
- ದಿನಾಂಕ: 16-04-2013 ರಂದು ಸಮಯ ಸುಮಾರು ರಾತ್ರಿ 22-50 ಗಂಟೆಗೆೆ ಫಿರ್ಯಾದುದಾರರ ಭಾವ ಶಂಕರ ಎಂಬವರು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಏಂ-19-ಘ-5629 ನ್ನು ಸಕರ್ೂಟರ್್ ಹೌಸ್ ಕಡೆಯಿಂದ ಯೆಯ್ಯಾಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಾ ರಾಹೆದ್ದಾರಿ 66 ರಲ್ಲಿನ ಕೆಪಿಟಿ ವೃತ್ತದ ಬಳಿ ತಲುಪಿದಾಗ ನಂತೂರು ಕಡೆಯಿಂದ ಕುಂಟಿಕಾನ ಕಡೆಗೆ ಲಾರಿ ನಂಬ್ರ ಒಊ-12-ಈಚ-3523 ನ್ನು ಅದರ ಚಾಲಕ ಅತಿವೇಗ ಮತ್ತು ನಿರ್ಲಕ್ಷತೆೆಯಿಂದ ಚಲಾಯಿಸಿಕೊಂಡು ಬಂದು ಶಂಕರರವರ ಮೋಟಾರು ಸೈಕಲಿಗೆ ಡಿಕ್ಕಿ ಮಾಡಿದ ಪರಿಣಾಮ ಶಂಕರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗುದ್ದಿದ ಗಾಯ ಹಾಗೂ ಕಾಲುಗಳಿಗೆ ತರಚಿದ ಗಾಯವಾಗಿ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸಚಿನ್ (42) ತಂದೆ: ನಾಗೇಶ್ ಕೆರೆಬೈಲ್ ವಾಸ: ನೆಹರು ನಗರ, ಸೊಮೇಶ್ವರ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ 78/13 ಕಲಂ 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ 16.04.2013 ರಂದು ರಾತ್ರಿ ಸುಮಾರು 09:30 ಗಂಟೆಗ ಪಿಯರ್ಾದಿದಾರರು ಅವರ ಸ್ನೇಹಿತ ಉಮೇಶ್ ಅಂಚನ್ ಎಂಬವರೊಂದಿಗೆ ನಾಗುರಿಯಲ್ಲಿರುವ ಬ್ಲೂಪಾಕರ್್ ಎಂಬ ಬಾರ್ಗೆ ಹೋಗಿ ಅಮಲು ಪದಾರ್ಥ ಸೇವಿಸುತ್ತಿದ್ದ ಸಮಯ ಉಮೇಶ್ ಅಂಚನ್ರವರ ಅಕ್ಕನ ಮಗ ರಾಜೇಶ್ ಕುಂದರ್ ಎಂಬಾತನು ಎರಡು ಜನರೊಂದಿಗೆ ಅಲ್ಲಿಗೆ ಬಂದಿದ್ದು ಅಮಲು ಪದಾರ್ಥ ಸೇವಿಸತೊಡಗಿದ್ದು, ಅಮಲು ಪದಾರ್ಥ ಸೇವಿಸಿದ ನಂತರ ರಾಜೇಶ್ ಕುಂದರ್ ಮಾವ ಉಮೇಶ್ನನ್ನು ಕುರಿತು ದಾನೆಂಬೆ ಉಮೇಶ್ ಎಂಬುದಾಗಿ ಏಕವಚನದಲ್ಲಿ ಮಾತನಾಡಿದಾಗ ಅದಕ್ಕೆ ಆಕ್ಷೇಪಿಸಿ ಉಮೇಶ್ ಅಂಚನ್ರವರು ಎದ್ದುಕೊಂಡು ಹೋಗುವ ಸಮಯದಲ್ಲಿ ರಾಜೇಶ್ ಕುಂದರ್ ಅಲ್ಲಿಯೇ ಪಕ್ಕದಲ್ಲಿದ್ದ ಬಿಯರ್ ಬಾಟಲಿಯಲ್ಲಿ ಉಮೆಶ್ ಅಂಚನ್ರವರ ತಲೆಗೆ ಬಲವಾಗಿ ಹೊಡೆದಿದ್ದಲ್ಲದೆ ಆತನ ಜೊತೆಯಲ್ಲಿದ್ದವರು ಕಾಲಿನಿಂದ ತುಳಿದು ಕೈಯಿಂದ ತಲೆಗೆ, ಮುಖಕ್ಕೆ ಹೊಡೆದ ಪರಿಣಾಮವಾಗಿ ಉಮೇಶ್ ಅಂಚನ್ ಗಾಯಗೊಂಡಿದ್ದು ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಎಂಬುದಾಗಿ ಗಣೇಶ್ ಶೆಟ್ಟಿ ತಂದೆ ವಿಶ್ವನಾಥ ಶೆಟ್ಟಿ ಕಣ್ಣೂರು ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 142/2013 ಕಲಂ 323 324 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ .
No comments:
Post a Comment