ಕಳವು ಪ್ರಕರಣ:
ಕೋಣಾಜೆ ಠಾಣೆ;
- ದಿನಾಂಕ 17/18-04-2013 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಬಂಟ್ವಾಳ ತಾಲೂಕು ಕುನರ್ಾಡು ಗ್ರಾಮದ ಮುಡಿಪು ಪೇಟೆಯ ಶೇನವ ಆಕರ್ೇಡ್ನಲ್ಲಿರುವ ಫಿಯರ್ಾದಿದಾರರ ಬಾಬ್ತು ಭಾರತ್ ಸುಪಾರಿ ಟ್ರೇಡಸರ್್ ಎಂಬ ಅಡಿಕೆ ಅಂಗಡಿಗೆ ಶಟರ್ಗೆ ಹಾಕಿದ್ದ ಬೀಗವನ್ನು ಮುರಿದು ಶಟರನ್ನು ಎತ್ತಿ ಒಳನುಗ್ಗಿ, ಅಂಗಡಿಯೊಳಗಿದ್ದ ತಲಾ 65 ಕೆಜಿ ತೂಕದ 15 ಮೂಟೆ ಅಡಿಕೆಯನ್ನು ಹಗೂ ನಗದು ಹಣ ರೂ 4000/-ವನ್ನು ಒಟ್ಟು ರೂ 1,40,000/-ದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಹಂಝ ಎಸ್. ಎಂ. ತಂದೆ: ದಿ: ಮೂಸ, ವಾಸ: ಸುಂದರ್ಬಾಗ್, ಉಳ್ಳಾಲ, ಮಂಗಳೂರು ರವರು ನೀಡಿದ ದೂರಿನಂತೆ ಕೋಣಾಜೆ ಠಾಣೆ ಅಪರಾದ ಕ್ರಮಾಂಕ 95/13 ಕಲಂ 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸುಲಿಗೆ ಪ್ರಕರಣ:
ಬಜಪೆ ಠಾಣೆ;
- ದಿನಾಂಕ 17-18/04/2013 ರಂದು ರಾತ್ರಿ ಸುಮಾರು 2 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಬಜಪೆ ಗ್ರಾಮದ ಶಾಂತಿಗುಡ್ಡೆ ಎಸ್.ಇ.ಝಡ್. ಕಾಲನಿಯಲ್ಲಿ ಪಿರ್ಯಾದಿಒದಾರರು ಅವರ ಬಾಬ್ತು ಹಿಟಾಚಿ ಹಾಗೂ ಟಿಪ್ಪರ್ ಗಳನ್ನು ನಿಲ್ಲಿಸಿದ್ದು ಟಿಪ್ಪರ್ ನಲ್ಲಿ ಹಿಟಾಚಿ ಅಪರೇಟರ್ ಅನಂದ ಎಂಬವರಿದ್ದು ಅಲ್ಲಿಗೆ ಸುಮಾರು 4-5 ಮಂದಿ ಯುವಕರು ಹೋಗಿ ಆನಂದನನ್ನು ಹೆದರಿಸಿ ಟಿಪ್ಪರ್ ಮತ್ತು ಹಿಟಾಚಿಯಲ್ಲಿ ಇಟ್ಟಿದ್ದಂತ ಕ್ಯಾನ್ ಗಳಲ್ಲಿ ತುಂಬಿದ ಸುಮಾರು 300 ಲೀಟರ್ ಡಿಸೀಲ್ ಕಳವು ಮಾಡಿಕೊಂಡು ಹೋಗಿರುವುದಲ್ಲದೇ ಆನಂದರವರಲ್ಲಿದ್ದ 2 ಮೊಬೈಲ್ ಸೆಟ್ ಗಳನ್ನು ಕಸಿದು ದರೋಡೆ ಮಾಡಿ ಕೊಂಡುಹೋಗಿರುವುದು ಎಂಬುದಾಗಿ ಯಾದವ ಬೆಳ್ಚಡ (39), ತಂದೆ: ಶಿವ ಬೆಳ್ಚಡ, ಗೌರಿಮಾರ್ ಮನೆ, ಬಜಪೆ ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 117/2013 ಕಲಂ:395 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೇ ಕೈಗೊಳ್ಳಲಾಗಿದೆ.
ಮಂ.ಗ್ರಾಮಾಂತರ ಠಾಣೆ;
- ದಿನಾಂಕ 18-04-2013 ರಂದು ಪಿಯರ್ಾದಿದಾರರು ತಮ್ಮ ಬಾಬ್ತು ಕಾರು ನಂಬ್ರ ಕೆಎ 19 ಸಿ 3858ರಲ್ಲಿ ಅಡ್ಯಾರ್ ಎಂಬಲ್ಲಿಗೆ ಮೆಹಂದಿ ಕಾರ್ಯಕ್ರಮಕ್ಕೆಂದು ಬಂದವರು ಕಾರನ್ನು ಅಡ್ಯಾರ್ ಎಂಬಲ್ಲಿ ರಾ.ಹೆ 75 ರ ದಕ್ಷಿಣ ದಿಕ್ಕಿನಲ್ಲಿ ಇಬ್ರಾಹಿಂ ಎಂಬವರ ಮನೆಯ ಸಮೀಪ ನಿಲ್ಲಿಸಿದ್ದು, ಮದ್ಯಾಹ್ನ ಸುಮಾರು 3-15 ಗಂಟೆ ವೇಳಗೆ ಪಿಯರ್ಾದಿದಾರರು ಮತ್ತು ಇತರ ಕೆಲವರು ರಾ.ಹೆ ಬದಿಯಲ್ಲಿ ನಿಂತುಕೊಂಡು ಮಾತನಾಡುತ್ತಿದ್ದಾಗ ಬಿಸಿರೋಡ್ ಕಡೆಯಿಂದ ಮಂಗಳೂರು ಕಡೆಗೆ ಕೆಎ 19 ಜಿ 355ನೇ ಪೊಲೀಸ್ ಜೀಪೊಂದನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು, ಅದರ ಪಕ್ಕದಲ್ಲಿಯೇ ಇದ್ದ ಮಾರುತಿ 800 ಕಾರು ಕೆಎ 01 ಜೆಡ್ 5839ನೇದಕ್ಕೂ ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರ ಕಾರು, ಮಾರುತಿ 800 ಕಾರು ಮತ್ತು ಪೊಲೀಸ್ ಜೀಪು ಜಖಂ ಗೊಂಡಿದ್ದು, ಪೊಲೀಸ್ ಜೀಪಿನಲ್ಲಿದ್ದ ಪೊಲೀಸ್ ಅಧಿಕಾರಿ ಎಸ್ ವಣರ್ೇಕರ್ ಎಂಬವರಿಗೆ ತಲೆಗೆ ಮತ್ತು ಇತರ ಕಡೆಗಳಿಗೆ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಪೊಲೀಸ್ ಜೀಪಿನ ಚಾಲಕರು ತನ್ನ ಬಾಬ್ತು ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ ಎಂಬುದಾಗಿ ಅಬ್ದುಲ್ ಹಮೀದ್ ತಂದೆ ಯು ಎಂ ಇಸ್ಮಾಯಿಲ್ ಮಾಸ್ಟರ್ ಉಳ್ಳಾಲ ಮಂಗಳೂರು ರವರು ನಿಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 144/2013 ಕಲಂ 279 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 17.04.2013 ರಂದು ಬೆಳಿಗ್ಗೆ 08:45 ಗಂಟೆ ಸಮಯಕ್ಕೆ ಪಿಯರ್ಾದಿದಾರರು ಕುಲಶೇಖರ ಕೊಗ್ಗರ ಹೊಟೇಲ್ನ ಸ್ವಲ್ಪ ಮುಂದೆ ರಸ್ತೆ ದಾಟುವರೇ ರಸ್ತೆಯ ಅಂಚಿನಲ್ಲಿ ನಿಂತುಕೊಂಡಿದ್ದಾಗ ಮಂಗಳೂರು ಕಡೆಯಿಂದ ಕೆ.ಎ 47 ಕೆ 2770 ನೇ ಬೈಕ್ ಸವಾರನು ಅವರ ಬಾಬ್ತು ಬೈಕ್ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟಲು ರಸ್ತೆ ಬದಿ ನಿಂತುಕೊಂಡಿದ್ದ ಪಿಯರ್ಾದಿದಾರರಿಗೆ ಡಿಕ್ಕಿ ಹೊಡೆದಿದ್ದು ಆ ಪರಿಣಾಮ ಪಿಯರ್ಾದಿದಾರರು ರಸ್ತೆಗೆ ಮಗುಚಿ ಬಿದ್ದು ಪಿಯರ್ಾದಿದಾರರ ತಲೆಯ ಹಿಂಬಾಗಕ್ಕೆ ರಕ್ತ ಗಾಯ, ಕುತ್ತಿಗೆ ಹಿಂಭಾಗಕ್ಕೆ ಗುದ್ದಿದ ನೋವು, ಹಾಗೂ ಬಲಕಾಲಿನ ಮೀನಖಂಡಕ್ಕೆ ಗುದ್ದಿದ ಗಾಯ ಆಗಿದ್ದು, ಸದ್ರಿಯವರು ಮಂಗಳೂರು ವಿಜಯ ಕ್ಲಿನಿಕ್ನಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ನಳಿನಾಕ್ಷಿ ಗಂಡ : ವಿಠಲ ಗೌಡ, ಗಂಜಿಮಠ, ಮೂಡುಪೆರಾರು , ಮಂಗಳೂರು ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 145/2013 ಕಲಂ 279 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾವೂರು ಠಾಣೆ;
- ದಿನಾಂಕ: 17-04-2013 ರಂದು ಬಸ್ಸು ನಂ: ಕೆಎ 19 ಬಿ 5226 ರಲ್ಲಿ ಕೆ.ಎಸ್.ಆರ್.ಟಿ.ಸಿ. ಕಡೆಯಿಂದ ಬಂದು ಸಂಜೆ 4-30 ಗಂಟೆಗೆ ಕುಂಟಿಕಾನಾ ಜಂಕ್ಷನ್ ನಲ್ಲಿ ಹಿಂಬಾಗಿಲಿನ ಬಳಿ ಬಸ್ಸಿನಿಂದ ಇಳಿಯಲು ನಿಂತಿದ್ದಾಗ, ಬಸ್ಸನ್ನು ಅದರ ಚಾಲಕರು ಅತೀವೇಗವಾಗಿ ಚಲಾಯಿಸಿಕೊಂಡು ಮುಂದೆ ಹೋಗಿ ನಿರ್ಲಕ್ಷ್ಯತನದಿಂದ ಒಮ್ಮೆಲೊಏ ಬ್ರೇಕ್ ಹಾಕಿದ ಪರಿಣಾಮ ಫಿರ್ಯಾದಿದಾರರು ಹಿಡಿತ ತಪ್ಪಿ ಕಾಂಕ್ರೀಟ್ ರಸ್ತೆಗೆ ಬಿದು, ಎಡಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಎಡ ಮೊಣ ಕಾಲಿಗೆ ಗುದ್ದಿದ ಗಾಯವಾಗಿ ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಡಿರೈನ್ ಮ್ಯಾಥ್ಯೂ ಲೋಬೋ, 14 ವರ್ಷ, ತಂದೆ: ಅಲೈನ್ ಎ. ಲೋಬೋ. ವಾಸ: 101, ತುಂಬೆ ಅಪಾಟರ್್ ಮೆಂಟ್, ಕೊಯಿಲೋ ಲೇನ್, ಫಳ್ನೀರ್, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 92/2013 ಕಲಂ: 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 18-04-2013 ರಂದು ಸಂಜೆ ಸುಮಾರು 4-00 ಗಂಟೆಗೆ ಫಿಯರ್ಾದುದಾರರಾದ ಶ್ರೀ ಸುಧರ್ಶನ್ ರವರು ನಗರದ ನಿರೇಶ್ವಾಲ್ಯ ರಸ್ತೆಯ ಸಿ ಪ್ಯಾಲೇಸ್ ಹೋಟೇಲ್ ಬಳಿ ಕೆಲಸ ಮಾಡಿಕೊಂಡಿದ್ದು, ಫಿಯರ್ಾದುದಾರರ ಅಂಗಡಿಯ ಬಳಿ ಸವರ್ೀಸ್ ಸ್ಟೇಷನ್ ಗೇಟ್ನ ಎದುರುಗಡೆ ಒರ್ವ ಅಪರಿಚಿತ ವ್ಯಕ್ತಿ ಮಲಗಿದ್ದಲ್ಲಿಯೇ ಇದ್ದು, ಫಿಯರ್ಾದುದಾರರು ಹೋಗಿ ನೋಡಿದಾಗ, ಸದ್ರಿ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಬಳಿ ಅಸ್ಪತ್ರೆಯ ಚೀಟಿ ಇದ್ದು, ಸದ್ರಿ ಚೀಟಿಯಲ್ಲಿ ಅಜೀಜ್ ಪ್ರಾಯ 38 ವರ್ಷ, ತಂದೆ: ಸುಜಿತ್, ವಾಸ: ತಲಶ್ಯೇರಿ, ರಕ್ಕಯ್ಯ ಅಂಚೆ, ಕಣ್ಣೂರು ಜಿಲ್ಲೆ, ಕೇರಳ ಎಂಬುದಾಗಿ ಬರೆದಿದ್ದು, ಸದ್ರಿ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಅಥವಾ ವಿಪರೀತ ಅಮಲು ಪದಾರ್ಥ ಸೇವಿಸಿ ಮಲಗಿದ್ದಲ್ಲಿಯೇ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಸುಧರ್ಶನ್ ಪ್ರಾಯ 36 ವರ್ಷ ತಂದೆ: ಪಿ. ಕೆ ಮಾಧವ, ವಾಸ: ಎಮ್.ವಿ.ಎಸ್ ಕಂಪೌಂಡು, ಆರ್.ಎಸ್. ಮಿಲ್ ಬಳಿ, ದಂಬೆಲ್ ರಸ್ತೆ, ಅಶೋಕ ನಗರ ಅಂಚೆ, ಶೆಡಿಗುರಿ, ಮಂಗಳೂರು ರವರು ನಿಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 35/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 16-04-2013 ರಂದು ಮಧ್ಯಾಹ್ನ 1-30 ಗಂಟೆಗೆ ಈ ಪ್ರಕರಣದ ಫಿರ್ಯಾದುದಾರರಾದ ಶ್ರೀಮತಿ ಆಯಿಷಾ ರವರ ಮಗಳಾದ ಕುಮಾರಿ ಅನಿಷಾ (18) ಎಂಬವಳು ತನ್ನ ಪಾಂಡೇಶ್ವರ ಶಿವನಗರದಲ್ಲಿರುವ ಫ್ಲಾಟ್ನಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಗೋ ಹೋದವಳು ವಾಪಾಸು ಮನೆಗೆ ಬಾರದೆ ಇದ್ದು, ಕುಮಾರಿ ಅನಿಷಾಳ ಬಗ್ಗೆ ನೆರೆಕರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿಯೂ ವಿಚಾರಿಸಿದರೂ ಪತ್ತೆಯಾಗದೆ ಇದ್ದು, ಕಾಣೆಯಾಗಿರುವ ಈ ವಿಷಯವನ್ನು ಫಿಯರ್ಾದುದಾರರು ತನ್ನ ಮನೆಯಲ್ಲಿರುವ ಅತ್ತೆಯವರಿಂದ ತಿಳಿದುಕೊಂಡಿರುವುದಾಗಿದೆ. ಎಂಬುದಾಗಿ ಆಯಿಶಾ (40), ಗಂಡ: ನೌಶದ್, ವಾಸ: ವಿಶ್ವಾಸ್ ಜುಪಿಟರ್, ರೂಮ್ ನಂಬ್ರ 103, 3ನೇ ಮಹಡಿ, ಶಿವನಗರ, ಪಾಂಡೇಶ್ವರ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 116/13 ಕಲಂ ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾವೂರು ಠಾಣೆ;
- ದಿನಾಂಕ 14-04-213 ರಂದು ಬೆಳಿ8ಗಗೆ 09-00 ಗಂಟೆಗೆ ಫಿರ್ಯಾದಿದಾರರ ಮಗಳು ಕು: ಗೀತಾ ಎಂಬವರು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ಸುತ್ತಮುತ್ತಲಿನಲ್ಲಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಕಾಣೆಯಾಗಿರುತ್ತಾಳೆ ಎಂಬುದಾಗಿ ರತ್ನ, 35 ವರ್ಷ, ಗಂಡ: ತುಳಸಿಗೇರಿಕೇರ್ ಆಪ್ ಃ ಪಕೀರಮ್ಮ, ಜ್ಯೋತಿ ನಗರ ಶಾಲೆಯ ಬಳಿ,ಕಾವೂರು , ಮಂಗಳೂರು ರವರು ನಿಡದ ದೂರಿನಂತೆ ಕಾವೂರು ಠಾಣೆ93/2013 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment