ಮನೆ ಕಳವು ಪ್ರಕರಣ:
ಸುರತ್ಕಲ್ ಠಾಣೆ;
- ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಇಕ್ಬಾಲ್ರವರು ದಿನಾಂಕ 20/04/2013 ರಂದು 23-00 ಗಂಟೆಗೆ ಮನೆಗೆ ಬೀಗ ಹಾಕಿ ತನ್ನ ತಾಯಿಯವರನ್ನು ಕರೆದುಕೊಂಡು ಮಾವನ ಮನೆಗೆ ಹೋಗಿದ್ದು ಈ ದಿನ ದಿನಾಂಕ 21/04/2013 ರಂದು ಬೆಳಿಗ್ಗೆ 11-30 ಗಂಟೆ ಸಮಯಕ್ಕೆ ಪಿರ್ಯದಿದಾರರು ತನ್ನ ಮಾವನ ಮನೆಯಲ್ಲಿ ಇರುವಾಗ ಪಿರ್ಯಾದಿಯ ಸ್ನೇಹಿತ ಫೋನು ಮಾಡಿ ಇವರ ಮನೆಯ ಮುಂದಿನ ಬಾಗಿಲು ಚಿಲಕ ಮುರಿದಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದಿ ತನ್ನ ತಾಯಿಯವರನ್ನು ಕರೆದುಕೊಂಡು ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದಿದ್ದು ಒಳಗೆ ಹೋಗಿ ನೋಡಿದಾಗ ಬೆಡ್ ರೂಮ್ನಲ್ಲಿದ್ದ ಕಬ್ಬಿಣದ ಕಪಾಟು ತೆರೆದಿದ್ದು ಅದರೊಳಗಿದ್ದ 1], ಸುಮಾರು 8.30 ಗ್ರಾಂ ತೂಕದ ನೆಕ್ಲೇಸ್-1, 2]. ಸುಮಾರು 5 ಪವನು ತೂಕದ ಬಿಳಿ ಕಲ್ಲು ಅಳವಡಿಸಿದ ಬಂಗಾರದ ಬಳೆಗಳು-3, 3]. ಸುಮಾರು ಅರ್ಧ ಪವನು ತೂಕದ ಬಂಗಾರದ ಉಂಗುರ-2 4.] ನಗದು ಹಣ 6,000/- ರೂಪಾಯಿಯನ್ನು ಯರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಹಾಗೂ ಕಳ್ಳತನ ಮಾಡಿದ ಸ್ವತ್ತುಗಳ ಅಂದಾಜು ಮೌಲ್ಯ 2.50 ಲಕ್ಷ ರೂಪಾಯಿ ಆಗಬಹುದಾಗಿ ಎಂಬುದಾಗಿ ಮಹಮ್ಮದ್ ಇಕ್ಬಾಲ್ (23)ತಂದೆ ದಿ: ಎಂ. ಅಬುಬಕ್ಕರ್, ವಾಸ ಮನೆ ನಂಬ್ರ 8-48, ಸೈಟ್ ನಂಬ್ರ 43, ಫೌಸಿಯ ಮಂಜಿಲ್, ಸರಕಾರಿ ಶಾಲೆಯ ಹತ್ತಿರ, ಚೊಕ್ಕಬೆಟ್ಟು, ಕಾಟಿಪಳ್ಳ ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 114/2013 ಕಲಂ: 457, 454, 380 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ 20-04-2013 ರಂದು ಪಿರ್ಯಾದಿದಾರರ ತಮ್ಮ ಹರೀಶ ಎಂಬವರು ಅವರ ಬಾಬ್ತು ಹೊಂಡಾ ಆ್ಯಕ್ಟಿವಾ ಸ್ಕೂಟರ್ ನಂಬ್ರ ಕೆಎ-19-ವೈ-3764 ನೇಯದ್ದನ್ನು ಸವಾರಿ ಮಾಡಿಕೊಂಡು ಮನೆಯಿಂದ ಕಟೀಲ್ ಜಾತ್ರೆಗೆ ಹೊರಟು ರಸ್ತೆಯಲ್ಲಿ ಹೋಗುತ್ತಾ ಸೂರಿಂಜೆ ಎಂಬಲ್ಲಿ ಸ್ಕೂಟರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಅಪರಾಹ್ನ 13-45 ಗಂಟೆಗೆ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಪರಿಣಾಮ ಹರೀಶರವರಿಗೆ ಮೂಗು ಹಲ್ಲು ಬಲಕೆನ್ನೆಗೆ ರಕ್ತಗಾಯ ಹಾಗೂ ಎದೆಗೆ ಗುದ್ದಿದ ನೋವು ಆಗಿದ್ದು ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಲೋಕೇಶ ಪ್ರಾಯಃ 35 ವರ್ಷ ತಂದೆಃ ಬಾಬು ದೇವಾಡಿಗ ವಾಸಃ ಎಂ.ಎಸ್ಇ.ಝೆಡ್ ಕಾಲೋನಿ ಮೂಡುಬೆಟ್ಟು ಕುಳಾಯಿ ಮಂಗಳೂರು ರವರು ನೀಡಿದ ದೂರಿನಂತೆ ಸರತ್ಕಲ್ ಠಾಣೆ ಅಪರಾದ ಕ್ರಮಾಂಕ 113/2013 ಕಲಂ: 279-337???ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ:
- ದಿನಾಂಕ 21-04-2013 ರಂದು ಪಿಯರ್ಾದಿದಾರರು ವಾಮಂಜೂರು ಕಡೆಯಿಂದ ಕುಡುಪು ಕಡೆಗೆ ತನ್ನಬಾಬ್ತು ಬೈಕಿನಲ್ಲಿ ಬರುತ್ತಿರುವಾಗ ಮಂಗಳಾಜ್ಯೋತಿ ಜಂಕ್ಷನ್ನಿಂದ ಸ್ವಲ್ಪ ಕೆಳಗೆ ರಸ್ತೆಯ ತಿರುವಿನಲ್ಲಿ ಎಡ ಬದಿಯಲ್ಲಿ ಜನರು ನಿಂತಿರುವುದನ್ನು ನೋಡಿ ವಿಚಾರಿಸಿದಾಗ ಒಂದು ಮೋಟಾರು ಸೈಕಲ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅದರ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ಕಂಡು ಪಿಯರ್ಾದಿದಾರರು ಮತ್ತು ಅಲ್ಲಿದ್ದವರು ಸೇರಿ ಆತನನ್ನು ಮೇಲಕ್ಕೆ ಎತ್ತಿ ರಸ್ತೆ ಬದಿಯಲ್ಲಿ ಮಲಗಿಸಿ, ಪೊಲೀಸ್ ಠಾಣೆಗೆ ವಿಷಯ ತಿಳಿಸದ್ದು, ಬಳಿಕ ಬಂದ 108 ಅಂಬ್ಯುಲೆನ್ಸ್ನವರು ವ್ಯಕ್ತಿಯನ್ನು ಪರೀಕ್ಷಿಸಿ ನೋಡಿದಾಗ ಆತನು ಮೃತಪಟ್ಟಿರುವುದಾಗಿ ತಿಳಿಯಿತು, ಆತನ ಜೇಬಿನಲ್ಲಿ ಚುನಾವಣಾ ಗುರುತು ಚೀಟಿ ಇದ್ದು ಅದರಲ್ಲಿ ಆತನ ಹೆಸರು ರೋಹಿತ್ ಎನ್, ಪ್ರಾಯ 29 ವರ್ಷ, ತಂದೆ ನಾಮ್ದೇವ್ ಬಿ, ವಾಸ: 3-3-123 ಕದ್ರಿ ಎಂಬದಾಗಿದ್ದು, ಸದ್ರಿ ಅಪಘಾತಕ್ಕೆ ಮೃತ ರೋಹಿತ್ ಎನ್ ರವರು ರಸ್ತೆಯ ತಿರುವಿನಲ್ಲಿ ಕೆಎ 20 ಎಚ್ 5174 ನೇ ಮೋಟಾರ್ ಸೈಕಲನ್ನು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಇಳಿಜಾರಿಗೆ ಬಿದ್ದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟದ್ದಾಗಿರುತ್ತದೆ ಎಂಬುದಾಗಿ ಸುಜನ್ದಾಸ್ ಕುಡುಪು (39 ವರ್ಷ) ತಂದೆ: ದಿ.ಕೆ ಕೇಶವ ವಾಸ: ಕುಡುಪು ದೇವಸ್ಥಾನದ ಹತ್ತಿರ, ಕುಡುಪು, ಮಂಗಳೂರು ರವರು ನಿಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 147/2013 ಕಲಂ 279 304 (ಎ) ಐಪಿಸಿ ರಂತೆ ಪ್ರಕರಣ ದಾಖಲಿಇ ತನಿಖೆ ಕೈಗೊಳ್ಳಲಾಗಿದೆ.
ಹುಡುಗಿ ಕಾಣೆ:
ಬಜಪೆ ಠಾಣೆ;
- ದಿನಾಂಕ: 20-04-2013 ರಂದು ರಾತ್ರಿ 21-00 ಗಂಟೆಯಿಂದ 21-04-2013 ರಂದು 06-00 ಗಂಟೆಯ ಫಿರ್ಯಾದಿದಾರರ ಮಗಳು ಪ್ರಥಮ ಪಿ.ಯು.ಸಿ. ವಿದ್ಯಾಥರ್ಿನಿಯಾಗಿದ್ದು, ಈಕೆಯು ಮಧ್ಯಾವಧಿಯಲ್ಲಿ ತನ್ನ ವಾಸದ ಮನೆಯಾದ ಬಜಪೆ ಗ್ರಾಮದ ಕೊಂಚಾರು ಎಂಬಲ್ಲಿಂದ ಕಾಣೆಯಾಗಿರುವುದಾಗಿದೆ. ಈಕೆಯು ನಿತಿನ್ ಎಂಬ ಹುಡುಗನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು ಎಂಬುದಾಗಿ ಶೃತಿ, 19 ವರ್ಷ, ಕೊಂಚಾರು ಸೈಟ್ ಮನೆ, ಬಜಪೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 121/2013 ಕಲಂ: ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment