ಹಲ್ಲೆ ಪ್ರಕರಣ
ಪಣಂಬೂರು ಠಾಣೆ
- ದಿನಾಂಕ 12-04-13 ರಂದು ಸಂಜೆ 16-30 ಗಂಟೆಗೆ ಫಿಯರ್ಾದಿದಾರರಾದ ಮಿಥುನ್ ಶೆಟ್ಟಿ (24) ತಂದೆಃ ಪ್ರಕಾಶ್ ಶೆಟ್ಟಿ, ಮಹಾದೇವ್ ಮಾರ್ಬಲ್ ಬಳಿ, ಕುಳಾಯಿ, ಮಂಗಳೂರು ರವರು ತನ್ನ ಮಿತ್ರ ಪವನ್ ಎಂಬಾತನೊಂದಿಗೆ ಬೈಕಂಪಾಡಿಯಲ್ಲಿದ್ದಾಗ ಆರೋಪಿತರು ಸಮಾನ ಉದ್ದೇಶದಿಂದ ಕಾರೊಂದರಲ್ಲಿ ಬಂದು ಆರೋಪಿಗಳ ಪೈಕಿ ಸಂದೀಪ್ ಎಂಬಾತನು ಫಿರ್ಯಾಧಿದಾರರನ್ನು ಉದ್ದೇಶಿಸಿ ರಂಡೆ ಮಗನೇ ನೀನು ಸುರತ್ಕಲ್ ಸಂದೀಪನ ಮರ್ಡರ್ ಕೇಸಿನಲ್ಲಿದ್ದೀಯಲ್ಲ ಎಂದು ಅವ್ಯಾಚ್ಯಶಬ್ದದಿಂದ ಬೈದು ಫಿರ್ಯಾದಿದರರನ್ನು ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿ ಮುಂದಕ್ಕೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿದೆ ಎಂಬುದಾಗಿ ಮಿಥುನ್ ಶೆಟ್ಟಿ ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಮೊ.ನಂ. 59/13 ಕಲಂ 504,341,323,506 ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ಬಜಪೆ ಠಾಣೆ
- ದಿನಾಂಕ: 11-04-2013 ರಂದು ರಾತ್ರಿಯಿಂದ 12-4-2013 ರಂದು ಬೆಳಿಗ್ಗೆ 8-00 ಗಂಟೆ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂಭಾಗದಲ್ಲಿ ಕೆ. ಆನಂದ @ ನಾಗರಾಜ @ ಸ್ವಾಮಿನಾಥ 67 ವರ್ಷ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಅಮಲು ಪದಾರ್ಥ ಸೇವಿಸುವ ಚಟವುಳ್ಳವರಾಗಿದ್ದು, ಮಂಡಿ ನೋವಿನಿಂದ ಬಳಲುತ್ತಿದ್ದುದಲ್ಲದೇ ಹಾಗೂ ಆಥರ್ಿಕ ಅಡಚಣೆಯಿಂದ ಇದ್ದವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಕೆ. ಶಿವರಾಮ ಕಾರಂತ, 52 ವರ್ಷ, ತಂದೆ: ಕೆ. ಪರಮೇಶ್ವರ ಕಾರಂತ, ಚಚರ್್ ಬಳಿ, ಕುಪ್ಪೆಪದವು, ಕೆಲಿಂಜಾರು ಗ್ರಾಮ, ಮಂಗಳುರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾ ಯುಡಿಆರ್ ನಂ: 15/2013 ಕಲಂ: 174 ಸಿಆರ್ಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
- ದಿನಾಂಕ: 12-04-2013 ರಂದು 08-45 ಗಂಟೆ ಸಮಯಕ್ಕೆ ಮೋಟಾರು ಸೈಕಲ್ ನಂ: ಕೆಎ 19 ಡಬ್ಲ್ಯೂ 6073 ನ್ನು ಅದರ ಸವಾರ ಕೆಂಜಾರು ಗ್ರಾಮದ ಕರಂಬಾರು ಗ್ಯಾರೇಜಿನ ಬಳಿ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತ್ತಿದ್ದ ಟಾಟಾ ಸುಮೋ ನಂ: ಕೆಎ 18 ಎಂ 6176 ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಮೋಟರು ಸೈಕಲ್ ಸವಾರರ ಬಲಕಾಲಿಗೆ ತೀವ್ರ ರೀತಿಯ ಜಖಂ ಆಗಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಬಿ. ಮೊಯಿದಿನ್ ಬಾವಾ, 62 ವರ್ಷ, ತಂದೆ: ದಿ: ಬಾವಾ ಬ್ಯಾರಿ, ವಾಸ: ಬಾವು ಬ್ಯಾರಿ ಹೌಸ್, ಹೊರನಾಡು ರಸ್ತೆ, ಕಳಸ, ಚಿಕ್ಕಮಗಳೂರು ಜಿಲ್ಲೆ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 113/2013 ಕಲಂ: 279-338 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕೊಣಾಜೆ ಠಾಣೆ
- ದಿನಾಂಕ 13.04.2013 ರಂದು ಫಿರ್ಯಾದಿದಾರರಾದ ಸ್ಟಾನಿ ಡಿಸೋಜಾ (22) ತಂದೆ: ಲಿಯೋ ಡಿಸೋಜಾ ವಾಸ: ಹರಮನೆ, ಕೊಕ್ಕಡ ಗ್ರಾಮ ಬೆಳ್ತಂಗಡಿ ಗ್ರಾಮ ರವರು ತನ್ನ ಅಕ್ಕನ ಮನೆಯಾದ ಕಂಬ್ಲಪದವುನಿಂದ ಇನ್ಫೋಸಿಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 07:15 ಗಂಟೆಗೆ ಬಂಟ್ವಾಳ ತಾಲೂಕು ಫಜೀರು ಗ್ರಾಮದ ಇನ್ಸೋಸಿಸ್ ಸಣ್ಣ ಗೇಟಿನ ಬಳಿ ತಲುಪುತ್ತಿದ್ದಂತಯೇ ಕಂಬ್ಲಪದವುನಿಂದ ಇನ್ಫೋಸಿಸ್ ಕಡೆಗೆ ಬರುತ್ತಿರುವ ನೀರಿನ ಟ್ಯಾಂಕರ್‌ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಫಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲಕಾಲಿನ ಕೋಲು ಕಾಲಿಗೆ ಕೀಲು ಮುರಿತದ ಗಾಯವಾಗಿರುತ್ತದೆ. ಅಫಘಾತ ಉಂಟು ಮಾಡಿದ ಟ್ಯಾಂಕರ್‌ನ ಚಾಲಕನು ಟ್ಯಾಂಕರನ್ನು ನಿಲ್ಲಿಸದೇ ವಾಹನ ಸಮೇತ ಪರಾರಿಯಾಗಿರುತ್ತಾನೆ. ಗಾಯಾಳು ಫಿರ್ಯಾದಿದಾರರನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಒಳರೋಗಿಯನ್ನಾಗಿ ದಾಖಲಿಸಿರುತ್ತಾರೆ ಎಂಬುದಾಗಿ ಸ್ಟಾನಿ ಡಿಸೋಜಾ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 94/2013 ಕಲಂ: 279, 338 ಐ.ಪಿ.ಸಿ. ಮತ್ತು ಕಲಂ: 134 (ಎ) (ಬಿ) ಐ.ಎಂ.ವಿ.ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮುಲ್ಕಿ ಠಾಣೆ
- ದಿನಾಂಕ 12/04/2013 ರಂದು ಸಂಜೆ 7-15 ಗಂಟೆ ಸಮಯಕ್ಕೆ ಕೆಎ-19-ಇಡಿ-1398ನೇ ಮೋಟಾರು ಸೈಕಲನ್ನು ಅದರ ಸವಾರ ಮಂಜು ಎಂಬಾತನು ಮುಲ್ಕಿಯಿಂದ ಲಿಂಗಪ್ಪಯ್ಯಕಾಡು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಗಾಂಧಿಮೈದಾನದ ಬಳಿ ಮುಲ್ಕಿಯಿಂದ ತನ್ನ ಮನೆ ಕಡೆಗೆ ಸೈಕಲಿನಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರಾದ ಹರಿಶ್ಚಂದ್ರ ರವರ ತಂದೆ: ಸೂರು ಬಂಗೇರ (80) ರವರ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಸೂರು ಬಂಗೇರರವರ ಎಡಬದಿ ಕೆನ್ನೆಗೆ , ಎಡಬದಿ ಹುಬ್ಬಿನ ಬಳಿ ಗುದ್ದಿದ ಗಾಯವಾಗಿದ್ದು ಎರಡೂ ಕಾಲುಗಳಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಹರಿಶ್ಚಂದ್ರ ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ.60/13 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು
ಪ್ರಕರಣ
ಮೂಡಬಿದ್ರೆ
ಠಾಣೆ
- ದಿನಾಂಕ : 12/04/2013 ರಂದು ಪಿರ್ಯಾದಿದಾರರಾದ ಶ್ರೀಮತಿ ಶ್ಯಾಮಾಲ ಗಂಡ : ವಿಜಯ ಶೆಟ್ಟಿ, ವಾಸ : ಬೊಳ ಬೊಳಗುತ್ತು, ಬೊಳ ಕೋಡಿ ಅಂಚೆ, ಕಾರ್ಕಳ ತಾಲೂಕು ರವರು ಅವರ ಬಾಬ್ತು ಚಿನ್ನದ ಬಳೆ - 4, ಹವಳದ ಸರ - 1, ಚಿನ್ನದ ಬ್ರಾಸ್‌ಲೈಟ್ -1 ಕೆಸರುಗದ್ದೆ ಸಹಕಾರಿ ಸೇವಾ ಬ್ಯಾಂಕ್ ಗೆ ಅಡಮಾನ ಇರಿಸುವ ಬಗ್ಗೆ ತನ್ನ ಮನೆಯಾದ ಮನೆಯಾದ ಬೊಳ ಮನೆಯಿಂದ ಚಿನ್ನದ ಸೊತ್ತುಗಳನ್ನು ವ್ಯಾನಿಟಿ ಬ್ಯಾಗಿನಲ್ಲಿ ಇರಿಸಿಕೊಂಡು ಬಸ್ಸಿನಲ್ಲಿ ಅಲಂಗಾರಿಗೆ ಬಂದು ಇಳಿದು ನಂತರ ಅಲಂಗಾರಿನಿಂದ ಕೆಸರುಗದ್ದೆ ಸಹಕಾರಿ ಸೇವಾ ಬ್ಯಾಂಕ್‌ಗೆ ತೆರಳುವರೇ ಸದ್ರಿ ಚಿನ್ನದ ಸೊತ್ತುಗಳನ್ನು ಇರಿಸಿದ ವ್ಯಾನಿಟಿ ಬ್ಯಾಗ್‌ನ್ನು ಇಟ್ಟುಕೊಂಡು ಬಸ್ಸಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ಸುಮಾರು 10-30 ಗಂಟೆ ಸಮಯಕ್ಕೆ ತನ್ನ ಪಕ್ಕದಲ್ಲಿ ಸುಮಾರು 22 ವರ್ಷದ ಎಣ್ಣಿಕಪ್ಪು ಮೈಬಣ್ಣದ ಗುಂಗುರು ಕೂದಲು ಹೊಂದಿದ ಹುಡುಗಿ ಪಿರ್ಯಾದಿಗೆ ತಾಗಿಕೊಂಡು ಕುಳಿತ್ತಿದ್ದರು ನಂತರ ಪಿರ್ಯಾದಿದಾರರು ಕೆಸರುಗದ್ದೆಯಲ್ಲಿ ಇಳಿದು ನೋಡಲಾಗಿ ಬ್ಯಾಗಿನಲ್ಲಿ ಇರಿಸಿದ ಚಿನ್ನಾಭರಣಗಳು ಕಳ್ಳತನವಾಗಿರುವುದಾಗಿದೆ ಅಂದಾಜು ಮೊತ್ತ 2,15,000/- ಆಗಬಹುದು ಎಂಬುದಾಗಿ ಶ್ರೀಮತಿ ಶ್ಯಾಮಾಲ ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 77/2013, ಕಲಂ : 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment