Monday, April 8, 2013

Daily Crime Incidents for April 08, 2013


ಕೊಲೆ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 07-04-2013 ರಂದು ರಾತ್ರಿ ಸುಮಾರು 11-25 ಗಂಟೆ ಸಮಯಕ್ಕೆ ಮಂಗಳೂರು ನಗರದ ವೆಲೆನ್ಸಿಯಾ ಮಂಗಳಾ ಬಾರ್ನ ಸಮೀಪ ಯಾರೋ ದುಷ್ಕಮರ್ಿಗಳು ಸಮಾನ ಉದ್ದೇಶದಿಂದ ಕುಂಜತ್ತಬೈಲ್ನ ಪ್ರಶಾಂತ್ ಎಂಬವರನ್ನು ಯಾವುದೋ ದ್ವೇಷದಿಂದ ಯಾವುದೋ ಹರಿತವಾದ ಆಯುಧದಿಂದ ತಲೆಗೆ, ಮುಖಕ್ಕೆ, ಕೈಗಳಿಗೆ ಕಡಿದು ತೀವ್ರ ಗಾಯಗೊಳಿಸಿದವರನ್ನು ಕೂಡಲೇ ಅಂಬುಲೇನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಅಸ್ಪತೆಗೆ ದಾಖಲಿಸಿದ್ದು, ಅಲ್ಲಿ ಅವರು ಮೃತಪಟ್ಟಿರುತ್ತಾರೆ. ಅಲ್ಲದೆ ಕೆ.ಎ 19 ಎಮ್.ಜೆ 909 ನೇ ಕಾರನ್ನು ಕೂಡಾ ಜಖಂಗೊಳಿಸಿರುತ್ತಾರೆ. ಈ ಬಗ್ಗೆ ಮಂಗಳಾ ಬಾರ್ನ ಮೆನೇಜರ್ರವರು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಫಿಯರ್ಾದು ಆಗಿರುತ್ತದೆ ಎಂಬುದಾಗಿ ಆಲರ್್ ಡಿ'ಮೆಲ್ಲೋ (33), ತಂದೆ: ದಿ: ಜೋಸೆಫ್ ಡಿ'ಮೆಲ್ಲೋ, ವಾಸ: ಜಾಕ್ಸ್ಕೋಟ್, ಎಮ್.ಆರ್ ಭಟ್ ಲೇನ್, ಮಾರ್ನಮಿಕಟ್ಟೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಕ್ರ 115/13 ಕಲಂ 302 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ


  • ದಿನಾಂಕ 07.04.2013 ರಂದು ಬೆಳಿಗ್ಗೆ 7-00 ಗಂಟೆ ವೇಳೆಗೆ ಆರೋಪಿ ಚಾಲಕ ಮಹೇಶ್ ಎಂಬವರು ಮಾರುತಿ ಶಿಪ್ಟ್ ಕಾರು ನಂಬ್ರ ಕೆಎ 21 ಎನ್ 2685ನ್ನು ಮಂಗಳೂರು - ಬಿ.ಸಿ ರೋಡ್ ರಾ.ಹೆ 75 ರಲ್ಲಿ ಮಂಗಳೂರು ಕಡೆಯಿಂದ ಬಿ.ಸಿ ರೋಡ್ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಅಡ್ಯಾರ್ ಕಟ್ಟೆ ಎಂಬಲ್ಲಿ ರಸ್ತೆ ಎಡಬದಿಯ ಅಡ್ಯಾರುಪದವು ಕಡೆಯಿಂದ ಬರುವ ರಸ್ತೆಯ ಮೂಲಕ ಆನಂದರವರು ತಮ್ಮ ಬಾಬ್ತು ಅಟೋ ರಿಕ್ಷಾ ಕೆಎ 19 ಸಿ 0775 ನೇದನ್ನು ಚಲಾಯಿಸಿಕೊಂಡು ಮುಖ್ಯ ರಸ್ತೆಗೆ ತಲುಪಿದಾಗ ಸದ್ರಿ ಶಿಪ್ಟ್ ಕಾರು ಡಿಕ್ಕಿ ಹೊಡೆದಿದ್ದು, ಈ ಪರಿಣಾಮ ರಿಕ್ಷಾವು ಮಗುಚಿಬಿದ್ದು ಸದ್ರಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಾಗೇಶ್ ಎಂಬವರ ಬಲ ಪಕ್ಕೆಲುಬಿಗೆ ಗುದ್ದಿದ ಹಾಗೂ ಬಲ ಮುಂಗೈಗೆ ಮುಖಕ್ಕೆ ರಕ್ತ ಗಾಯವಾಗಿ ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಾಹನಗಳು ಜಖಂಗೊಂಡಿರುತ್ತದೆ ಎಂಬುದಾಗಿ ಕೆ ರಾಕೇಶ್ ತಂದೆ ಬಾಬು ಬಿಜೈ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 130/2013 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


  • ದಿನಾಂಕ 07.04.2013 ರಂದು ಬೆಳಿಗ್ಗೆ 10-20 ಗಂಟೆ ವೇಳೆಗೆ ರಾಜಲಕ್ಷ್ಮೀ ಎಂಬವರು ಕೆಎ 19 ಎಂ.ಎ 2410ನೇ ಆಲ್ಟೋ ಕಾರನ್ನು ಪಚ್ಚನಾಡಿ-ಮಂಗಳಾಜ್ಯೋತಿ ಸಾರ್ವಜನಿಕ ರಸ್ತೆಯಲ್ಲಿ ಪಚ್ಚನಾಡಿಯಿಂದ ಮಂಗಳಾಜ್ಯೋತಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ನಗರದ ಪಚ್ಚನಾಡಿ ಡಂಪಿಂಗ್ ಯಾಡರ್್ ಬಳಿ ಮಂಗಳಾಜ್ಯೋತಿಯಿಂದ ಪಚ್ಚನಾಡಿ ಕಡೆಗೆ ಪಿಯರ್ಾದಿದಾರರ ಮಗ ದೀಪಕ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ 09 ಬಿ 1322 ನೇ ಮಾರುತಿ ಒಮಿನಿಗೆ ಡಿಕ್ಕಿ ಹೊಡೆದಿದ್ದು, ಈ ಪರಿಣಾಮ ವಾಹನಗಳು ಜಖಂಗೊಂಡು ಮಾರುತಿ ಒಮಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿಯರ್ಾದಿದಾರರಿಗೆ ರಾಜಲಕ್ಷ್ಮೀ ಹಾಗೂ ಅವರ ಕಾರಲ್ಲಿದ್ದ ವಿಶಾಲಾಕ್ಷಿ ರವರಿಗೆ ಸಣ್ಣಪುಟ್ಟ ಗಾಯಗಳಾಗಿ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಜಯಂತಿ ಕೊಟ್ಟಾರಿ ಗಂಡ ಸುಬ್ರಾಯ ಮಣ್ಣಗುಡ್ಡ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 131/2013 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ಶ್ರೀಷಾ, ಪ್ರಾಯ 24 ವರ್ಷ, ತಂದೆ: ವೇದ ವ್ಯಾಸ ರಾವ್, ವಾಸ: ಮಹಾದೇವ ಕೃಪಾ ಪೆರ್ಮುದೆ ಅಂಚೆ, ಬಜ್ಪೆ, ಮಂಗಳೂರು ತಾಲೂಕು ರವರು ದಿನಾಂಕ 06-04-2013 ರಂದು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 19 ಇ ಸಿ 1198 ನೇದರಲ್ಲಿ ಕೋಡಿಕೆರೆ ಶಾಲೆಯ ವಾರ್ಷಿಕೋತ್ಸವದ ಕಾರ್ಯಕ್ರಮ ಮುಗಿಸಿ ವಾಪಾಸು ಅವರ ಮನೆಯಾದ ಪೆರ್ಮುದೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಾತ್ರಿ ಸಮಯ 22-40 ಗಂಟೆಗೆ  ಕುಳಾಯಿ ಗ್ರಾಮದ ಕೋಡಿಕೆರೆ ಪೆಟ್ರೋಲ್ ಪಂಪ್ ಎದುರುಗಡೆ ರಸ್ತೆಯಲ್ಲಿ  ಪೆಟ್ರೋಲ್ ಪಂಪ್ ಕಡೆಯಿಂದ ಕಾನಾ-ಕೋಡಿಕೆರೆ ರಸ್ತೆ ಕಡೆಗೆ ಅಪರಿಚಿತ ವ್ಯಕ್ತಿಯು ನೋಂದಣಿ ಸಂಖ್ಯೆ ತಿಳಿಯದ ಮೋಟಾರು ಸೈಕಲ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೇಲ್ಕಂಡ ಮೋಟಾರು ಸೈಕಲ್ ಗೆ  ಡಿಕ್ಕಿ  ಹೊಡೆದಿದ್ದು ಇದರಿಂದ ಗಾಯಗೊಂಡ ಪಿರ್ಯಾದಿದಾರರು ಕಾನಾದ ಮಿಸ್ಕಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತ ನಡೆಸಿದ ಮೋಟಾರು ಸೈಕಲ್ ಸಿಗದ ಕಾರಣ ಸ್ನೇಹಿತರಲ್ಲಿ ಹುಡುಕಿಸಿ ತಡವಾಗಿ  ಈ ದಿನ ದೂರು ನೀಡಿದಾಗಿದೆ. ಆಪಾದಿತ ನೋಂದಣಿ ಸಂಖ್ಯೆ ತಿಳಿಯದ ಮೋಟಾರು ಸೈಕಲಿನ ಸವಾರನ ಮೇಲೆ ಕಾನೂನು ಕ್ರಮ ಜರುಗಿಸ ಬೇಕಾಗಿ ಶ್ರೀಷಾ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಮೊ.ನಂ. ಕಲಂ. 279, 337 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಭಾವಿಕ ಮರಣ ಪ್ರಕರಣ

ಪಣಂಬೂರು ಠಾಣೆ


  • ದಿನಾಂಕಃ 7-4-13 ರಂದು ಎನ್ಐಟಿಕೆ, ಸುರತ್ಕಲ್ಗೆ ಜೆ.ಇ.ಇ ಪರೀಕ್ಷೆಗೆ ಹಾಜರಾದ ನವೋದಯ ಶಾಲೆಯ ಚಿಕ್ಕಮಗಳೂರಿನ ವಿದ್ಯಾಥರ್ಿ ಆಕಾಶ್ ಎಂಬಾತನು ಪರೀಕ್ಷೆ ಮುಗಿದ ನಂತರ ತನ್ನ ಗೆಳೆಯರೊಂದಿಗೆ ವಿ  ವಿಹಾರಕ್ಕಾಗಿ ಪಣಂಬೂರು ಬೀಚ್ಗೆ ಬಂದಿದ್ದು, ನೀರಿಗೆ ಇಳಿದು ಆಟ ಆಡುತ್ತಿದ್ದ ಸಮಯ ತೆರೆಯೊಂದು ಅಪ್ಪಳಿಸಿ, ನೀರಿಗೆ ಸೆಳೆಯಲ್ಪಟ್ಟವನನ್ನು ಪಣಂಬೂರು ಬೀಚ್ನ ಲೈಫ್ ಗಾಡರ್್ ನವರು ಮೇಲಕ್ಕೆ ತಂದು, ಚಿಕಿತ್ಸೆ ಬಗ್ಗೆ, ಪಣಂಬೂರು ಎನ್ಎಂಪಿಟಿ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿ ಮಧ್ಯೆ, ಮೃತಪಟ್ಟಿರುವುದಾಗಿದೆ ಎಂಬುದಾಗಿ ಸುನಿಲ್ (17), ತಂದೆಃ ರಾಜ್ ಕುಮಾರ್, ವಾಸಃ ಮನೆ ನಂಬ್ರ -3, ತುಂಗಾ ಬ್ಲಾಕ್, ಪೊಲೀಸ್ ಕಾಲೊನಿ, ಶೃಂಗೇರಿ, ಚಿಕ್ಕಮಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಯು.ಡಿ.ಆರ್ ನಂಬ್ರ ಃ 06/2013, ಕಲಂ ಃ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment